Saturday, September 8, 2012

ಮನೆ ಪಾಲಾಯಿತು ಜನ ಪಾಲಾಯಿತು


ಮನೆ ಪಾಲಾಯಿತು ಜನ ಪಾಲಾಯಿತು
ಮಮತೆಯ ಮಡಿಲು ಕಣ್ಣೀರಾಯಿತು
ಸುಖ ಸಂತೋಷವೆಂಬ ಸರೋವರ
ದುಃಖದ ಸಾಗರವಾಯಿತು !

ಅಂಗಳದ ಮಧ್ಯೆ
ವಿಶಾಲ ಗೋಡೆ ನಿರ್ಮಾಣವಾಯಿತು
ತಂದೆ ಅಣ್ಣನ  ಪಾಲಿಗೆ ಬಂದ
ತಾಯಿಯ ಭಾಗ್ಯ ತಮ್ಮನ ವಶ ಆಯಿತು !

ತಂದೆ ಸಾಕಿದ
ಆ ಮಾವಿನ ಮರದ ಸಿಹಿ ಸಿಹಿ ಹಣ್ಣು
ಆ ಹಣ್ಣ ಮೇಲೆ ಇಂದು ಮಕ್ಕಳ ಸಹಿ ಆಯಿತು
ಸಿಹಿ ಮಧುರ ಸ್ನೇಹ ಇಂದು ಕಹಿ ಆಯಿತು!

ಬಾಲ್ಯದ ಸುಂದರ ಆಟ
ಇಂದು ಸಮರವಾಯಿತು
ಅಣ್ಣ ತಮ್ಮ ಎಂಬ ಸಂಬಂಧಕ್ಕೆ
ವೈರಿ ಎಂಬ ಹೊಸ ನಾಮಕರಣ ಆಯಿತು!

ಮನ ಪಾಲಾಯಿತು
ಧನ ಪಾಲಾಯಿತು
ಹೃದಯದಲ್ಲಿ ದ್ವೇಷ ಮಂಥನ ಶುರುವಾಯಿತು
ಪ್ರೇಮ ಅಮೃತ ವಿಷವಾಯಿತು!
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಮನೆಯ ರೂಪದಲ್ಲಿ ಮನಸ್ಸುಗಳು ಪಾಲಾಗ್ತಿರೋದು ವಿಷಾದದ ಸಂಗತಿ..

    ತಂದೆ ಅಣ್ಣನ ಪಾಲಿಗೆ ಬಂದ
    ತಾಯಿಯ ಭಾಗ್ಯ ತಮ್ಮನ ವಶ ಆಯಿತು..!

    ಅಬ್ಬಾ.. ಹೆತ್ತವರನ್ನೂ ಪಾಲು ಮಾಡಿಕೊಳ್ಳೋ ದುರ್ಬುದ್ದಿ ಸಮಾಜದಲ್ಲಿ ಬೆಳೀತಿರೋದು ದುರಂತ...

    ReplyDelete
  2. ಹೌದು ಸರ್....ತುಂಬಾ ವಿಷಾದದ ಸಂಗತಿ.......

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...