Monday, September 10, 2012

ಗೇಣಿ


ಅವನು ಅವನಲ್ಲ
ಅವನ ಜೀವನ ಅವನದಲ್ಲ
ಅವನ ಭೂಮಿಯಲ್ಲಿಲ್ಲ ಅವನ ಹಕ್ಕು
ಅಡವು ಇಟ್ಟ ಬದುಕು!

ಅವನು ಸೂರ್ಯನಂತೆ
ಮುಂಜಾನೆ ಅವನ ಉಗಮ
ಆದರೆ ಅವನಲ್ಲಿ ಪ್ರಕಾಶ ಇಲ್ಲ
ಅವನ ಜೀವನದಲ್ಲಿ ಕತ್ತಲ ಸಾಮ್ರಾಜ್ಯ!

ಅವನು ಬಾವಿಯಂತೆ
ಸಂತೃಪ್ತ ಅವನಿಂದ ಎಲ್ಲರು
ಆದರೆ ಪಾಳು ಬಿದ್ದ ಜೀವನ
ಹಸಿವೆಯಿಂದ ನರಳುವುದು ಅವನ ಗ್ರಹಚಾರ!

ಅವನು ಎತ್ತಿನಂತೆ
ದಿನ ರಾತ್ರಿ ಉಳುವನು ಗದ್ದೆಯಲ್ಲಿ
ಆದರೆ ತನಗಾಗಿ ಒಂದು ಧಾನ್ಯ ಸಹ ಇಲ್ಲ
ಭೂಮಿಯಿಂದ ಬೆಳೆಸಲಾರ ತನ್ನ ಭವಿಷ್ಯ!

ಅವನು ದುಡಿಯುವ ಹೊಲ ಅವನದ್ದು
ಅವನು ಅದರ ಮಾಲಕ
ಆದರೆ ಅವನದಲ್ಲ
ಗೇಣಿ ತೀರಿಸುವುದೇ ಅವನ ಭಾಗ್ಯ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...