Wednesday, September 5, 2012

ಹಕ್ಕಿ ನದಿಗಳು ಈ ಹೊಯ್ಗಾಳಿ


ಹಕ್ಕಿ ನದಿಗಳು ಈ ಹೊಯ್ಗಾಳಿ
ತಡೆಯಲಾರದು ಇದನ್ನು
ಯಾವುದೇ ಗಡಿಗಳು-೨
ಗಡಿ ಕೇವಲ ಮನುಷ್ಯರಿಗಾಗಿ
ಯೋಚಿಸಿ ಗಳಿಸಿದದ್ದೇನು
ನಾವು ಮನುಷ್ಯರಾಗಿ
ಹಕ್ಕಿ ನದಿಗಳು.....

ನಾವಿಬ್ಬರು ಹಕ್ಕಿಗಳಾಗಿದ್ದರೆ
ತೇಲಿಕೊಂಡು ಇರುತ್ತಿದ್ದೆವು
ಈ ನೀಲ ಆಕಾಶದಲಿ
ನಾವಿಬ್ಬರು ಜೊತೆಯಲಿ
ರೆಕ್ಕೆಗಳನ್ನು ವಿಸ್ತರಿಸಿಕೊಂಡು
ಪೂರ್ಣ ಭೂಮಿ ನಮ್ಮದಾಗಿರುತ್ತಿತ್ತು
ನಮ್ಮದೇ ಎಲ್ಲ ನೋಟಗಳಾಗಿರುತಿತ್ತು
ಸ್ವಚ್ಚಂದ ಪರಿಸರದಲಿ ಹಾರುತ್ತಾ ಇರುತ್ತಿದೆವು-೨
ತುಂಬಿಸಿ ಪ್ರೀತಿ ನಮ್ಮ ಹೃದಯದಲಿ
ಹಕ್ಕಿ, ನದಿಗಳು.....

ನಾನು ನದಿ ಆಗಿದ್ದರೆ
ನೀನು ತಂಗಾಳಿ ಆಗಿದ್ದರೆ ಏನಾಗುತ್ತಿತ್ತು
ಓ .....ನಾನು ನದಿ ಆಗಿದ್ದರೆ
ನೀ ತಂಗಾಳಿ ಆಗಿದ್ದರೆ ಏನಾಗುತ್ತಿತ್ತು
ತಂಗಾಳಿಯ ಅಲೆಗಳು
ನದಿಯ ದೇಹ ಸ್ಪರ್ಷಿಸುವಾಗ -೨
ಅಲೆಗಳೇ ಅಲೆಗಳು ನಿರ್ಮಾಣಗೊಳ್ಳುವುದು
ನಾವಿಬ್ಬರು ಸಿಕ್ಕಿದಾಗ ಹೀಗಾಗುವುದು
ಎಲ್ಲ ಹೇಳುವರು ಈ ಅಲೆಗಳು ಎಲ್ಲಿಯೂ ಹೋಗಲಿ
ಯಾರೂ ಇದನ್ನು ತಡೆಯದಿರಲಿ
ಹಕ್ಕಿ,ನದಿಗಳು.....

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸೋನು ನಿಗಮ್, ಅಲ್ಕಾ ಯಾಗ್ನಿಕ್
ಸಂಗೀತ : ಅನು ಮಲಿಕ್


Panchhi Nadiyan Pawan Ke Jhoken, Koi Sarhad Na Inhe Roke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain
Socho Tumne Aur Maine Kya Paya Insaan Hoke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain,
Socho Tumne Aur Maine Kya Paya Insaan Hoke...

Jo Hum Dono Panhi Hote, Tairtey Hum Is Neel Gagan Mein
Pankh Pasarey
Saari Dharti Apni Hoti, Apne Hote Saare Nazarey
Khuli Fizaoon Mein Udte, Khuli Fizaoon Mein Udte
Apne Dilon Mein Hum Saara, Pyar Samaa Ke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain, Socho Tumne Aur Maine Kya Paya Insaan Hoke...

Jo Main Hoti Nadiyan Aur Tum Pawan Ke Jhoken, To Kya Hota
O, Jo Main Hoti Nadiyan Aur Tum Pawan Ke Jhoken
To Kya Hota
Pawan Ke Jhoken Nadi Ke Tan Ko Jab Chu Te Hain
Pawan Ke Jhoken Nadi Ke Tan Ko Jab Chu Te Hain
Laiharein Hi Laiharein Banti Hain
Hum Dono Jo Milte To Kuch Aisa Hota
Sabh Kehte Ye Laihar Laihar Jahan Bhi Jayein
Inko Na Koi Toke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain
Socho Tumne Aur Maine Kya Paya Insaan Hoke...

Panchhi Nadiyan Pawan Ke Jhoken, Koi Sarhad Na Inhe Roke...


www.youtube.com/watch?v=6nvTzT5hhD0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...