Photo: google
ಹಾಡಿನ ಕೊಂಡಿ: https://youtu.be/ap9UZoeUHW8
ಈ ಹೃದಯ ಮರುಳು,
ಹೃದಯ ಮರುಳು ಈ,
ಮರುಳು ಹೃದಯ ಈ,
ಹೃದಯ ಮರುಳು,
-
ಎಷ್ಟು ನಿಷ್ಠುರ, ಆಶಯ ಅದರ,
ಯೌವನ ಇರೋ ತನಕ, ಸಮಯ ಇರುತ್ತದೆ ಮೋಹಕ,
ಕಂಗಳು ಪ್ರತ್ಯೇಕವಾಗದಿರಲಿ, ಬಯಕೆ ಮುನಿಸದಿರಲಿ,
ಮಧುರ ವಸಂತದಲ್ಲಿ, ಗುಟ್ಟಾಗಿ ವನದಲ್ಲಿ,
ಹೀಗೆಯೇ ನಾನು ನೀನು, ಕುಳಿತುಕೊಂಡು ಮೌನದಲಿ,
ನಿಷ್ಠಾವಂತರಲ್ಲ ಅವರು ಹೋಗುವೆಯೆಂದು ಹೇಳುವವರು,
ಈ ಹೃದಯ
ಈ ಹೃದಯ.....
-
ಕಳವಳದಲ್ಲಿರುವುದು, ಮೆಲ್ಲನೆ ನುಡಿಯುವುದು,
ನನಗೆ ಮಿಡಿಯಲು ಕೊಡಿಯೆಂದು, ಜ್ವಾಲೆ ಧಗಧಗಿಸಲಿ ಎಂದು,
ಮುಳ್ಳಳ್ಳಿ ಹೂಗಳಲ್ಲಿ, ಪ್ರೇಮಿಯ ಗಲ್ಲಿಯಲ್ಲಿ,
ಸುತ್ತಾಡಲು ಬಿಡು, ಹೋಗಲಿ ಬಿಟ್ಟು ಬಿಡು,
ಮರೆಯಾಗುವೆನೋ ಏನು, ಹಿಂತಿರುಗಿ ಬರುವೆ ನಾನು,
ನೋಡಿದೆ, ಕೇಳಿದೆ, ಅರ್ಥಿಸಿದೆ, ಒಳ್ಳೆ ನೆಪ ಇದು, ಈ ಹೃದಯ
ಈ ಹೃದಯ.....
-
ಮಳೆಗಾಲ ಬಂದಾಗ, ಮೋಡ ಹಬ್ಬಿದಾಗ,
ಹೂವಿನ ಋತುವಿನಲ್ಲಿ, ಹೂವಿನ ಋತುವಿನಲ್ಲಿ,
ಹೂಗಾಳಿ ಬೀಸಿದಾಗ, ಏಕಾಂತ ಸಿಕ್ಕಿದಾಗ,
ಸಿಲುಕಿಸಿ ಮಾತಲ್ಲಿ, ಹೇಳುತ್ತದೆ ರಾತ್ರಿಯಲ್ಲಿ,
ನೆನಪಲ್ಲಿ ಮರೆಯಾಗುವೆ, ಬೇಗನೆ ಮಲಗುವೆ,
ಏಕೆಂದರೆ ಕನಸಲ್ಲಿ ಇನಿಯನಿಗೆ ಬರಲಿದೆ ಇಂದು, ಈ ಹೃದಯ
ಈ ಹೃದಯ...
-
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಮೂಲ: ಆನಂದ್ ಬಕ್ಷಿ
ಸಂಗೀತ: ಎಸ್. ಡಿ. ಬರ್ಮನ್
ಹಾಡಿದವರು: ಲತಾ ಮಂಗೇಶ್ಕರ್, ಮುಹಮ್ಮದ್ ರಫಿ
ಚಿತ್ರ: ಇಷ್ಕ್ ಪರ್ ಜೋರ್ ನಹೀ
-
ये दिल दीवाना है, दिल तो दीवाना है
दीवाना दिल है ये दिल दीवाना
-
कैसा बेदर्दी है, इसकी तो मर्ज़ी है
जब तक जवानी है, ये रुत सुहानी है
नज़रें जुदा ना हों, अरमां खफ़ा ना हों
दिलकश बहारों में, छुपके चनारों में
यूं ही सदा हम तुम, बैठे रहें गुमसुम
वो बेवफ़ा जो कहे हमको जाना है ये दिल,
ये दिल दिवाना है ...
-
बेचैन रहता है, चुपके से कहता है
मुझको धड़कने दो, शोला भड़कने दो
काँटों में कलियों में, साजन की गलियों में
फ़ेरा लगाने दो, छोड़ो भी जाने दो
खो तो न जाऊंगा, मैं लौट आऊंगा
देखा सुने समझे अच्छा बहाना है ये दिल,
ये दिल दिवाना है ...
-
सावन के आते ही, बादल के छाते ही
फूलों के मौसम में, फूलों के मौसम में
चलते ही पुरवाई, मिलते ही तन्हाई
उलझाके बातों में, कहता है रातों में
यादों में खो जाऊं, जल्दी से सो जाऊं
क्योंके साँवरिया को सपनों में आना है ये दिल,
ये दिल दिवाना है ...
No comments:
Post a Comment