Photo: Google
ಹಾಡಿನ ಕೊಂಡಿ: https://youtu.be/pZox7N7uCAc
ಈ ಜಗತ್ತಲ್ಲಿ ಬದುಕಬೇಕೆಂದರೆ ಕೇಳಿ ನನ್ನ ಮಾತನ್ನು,
ದುಃಖ ಮರೆತು ಮಾಡಿ ಮೋಜನ್ನು,
ಮತ್ತೆ ಒಪ್ಪಿಕೊಳ್ಳಿ ನಾನೇಳಿದನ್ನು,
ಈ ಜಗತ್ತಲ್ಲಿ
-
ಬದುಕು ಸುಂದರ ಅವರ ನಕ್ಕು ನಲಿದು ಬದುಕುವವರು,
ಕೇಶರಾಶಿಯ ಮುಗಿಲ ಮಧ್ಯೆ ಕಂಗಳ ರಸ ಹೀರಿದವರು,
ಮೋಜಿನ ಜನರೇ ಮೋಜು ಮಾಡಿ,
ತೊರೆಯಿರಿ ಈ ಮೌನವನ್ನು,
ಬಂದಿದೆ ವರ್ಣಮಯ ವಸಂತ, ತಂದಿದೆ ವರ್ಣರಂಜಿತ ದಿವಸವನ್ನು,
ಈ ಜಗತ್ತಲ್ಲಿ....
-
ನಾನು ಸುಂದರ ಅಪ್ಸರೆಯೊಂದು ನಲಿಯುವೆ ತರಂಗುತ್ತಿರುವೆ,
ಎಲ್ಲೆಡೆ ಹೂವು ಅರಳಿಸುವೆ ಹಾಗು ಹರ್ಷ ಸುರಿಸುತ್ತಿರುವೆ,
ಲೋಕದವರೇ ನಿಮಗೇನು ಗೊತ್ತು ಬದುಕುವ ಈ ಮಾತು,
ಬನ್ನಿ ನನ್ನ ದ್ವಾರಕ್ಕೆ, ತಿಳಿಸುವೆ ಈ ಎರಡು ಮಾತನ್ನು,
ಈ ಜಗತ್ತಲ್ಲಿ....
-
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಮೂಲ: ಹಸ್ರತ್ ಜೈಪುರಿ ಸಂಗೀತ: ಶಂಕರ್ ಜೈ ಕಿಷನ್ ಹಾಡಿದವರು: ಲತಾ ಮಂಗೇಶ್ಕರ್
ಚಿತ್ರ: ಗುಂನಾಮ್
-
इस दुनिया में जीना हो तो सुन लो मेरी बात
ग़म छोड़ के मना लो रंग रेली
और मान लो जो कहे किट्टी केली
-
जीना उसक जीना है जो हँसते गाते जीले
ज़ुल्फ़ों की घनघोर घटा में नैन के बादल पीले
ऐश के बंदों ऐश करों तुम छोड़ो ये ख़ामोशी
आई हैं रंगीन बहारें लेकर दिन रंगीले
-
मैं अलबेली चिंगारी हूँ नाचूँ और लहराऊँ
दामन दामन फूल खिलाऊँ और ख़ुशियाँ बरसाऊँ
दुनिया वालों तुम क्या जानो जीने की ये बातें
आओ मेरी महफ़िल में मैं ये दो बातें समझाऊँ
-
No comments:
Post a Comment