Thursday, January 14, 2021

ಹಾರಿದೆ ಹಾರಿದೆ ಪತಂಗ


Photo: Google

ಹಾಡಿನ ಕೊಂಡಿ: https://youtu.be/q5N0OctY9HE


ಹಾರಿದೆ ಹಾರಿದೆ ಪತಂಗ ನನ್ನ ಹಾರಿದೆ-2, 

ಹಾರಿದೆ ಮೋಡದ ಹತ್ತಿರ, 

ದಾರದ ದ್ವಾರಾ, 

ಇದನ್ನು ನೋಡಿ ಎಲ್ಲಾ ಜಗತ್ತು ಅಸೂಯೆಪಟ್ಟಿದೆ, 

ಹಾರಿದೆ....

-

ಹೀಗೆ ತರಂಗಿಸಿತು ಅದು ಪವನದಲಿ, 

ಗಾಳಿತೇರ ಹಾರುವಂತೆ ಆಕಾಶದಲ್ಲಿ, 

ಕೊಂಡು ಬಯಕೆ ಮನಸಲಿ, 

ವಧು ದಿಬ್ಬಣದಲಿ ಹೊರಡುವಂತೆ ವರನ ಮನೆಗೆ, 

ಹಾರಿದೆ...

-

ಬಣ್ಣ ನನ್ನ ಪತಂಗದ ಹಚ್ಚನೆಯ, 

ಇದರ ಗತ್ತು ನೀಲ ಅಂಬರದ ರಾಣಿಯ, 

ಹೊಸ ಹೊಸ ಉತ್ಥಾನ, 

ತುಂಬು ತುಂಬು ಯೌವನ, 

ತೆಳ್ಳನೆಯ ಸೊಂಟ ಕಾಣುತ್ತಿದೆ ತುಂಬಾ ಸುಂದರವೇ,

ಹಾರಿದೆ...

-

ಮುಟ್ಟಬೇಡ ನೋಡು ನೀನು ದೂರದಿ, 

ಒಟ್ಟಿಗೆ ಇದೆ ದಾರ ಓ ನನ್ನ ಗೆಳತಿ, 

ಇದು ವಿದ್ಯುತ್ತಿನ ಸರಿಗೆ, 

ಬರಬೇಡ ನೀನು ಬಳಿಗೆ, 

ಹುಡುಗಿ, ತುಂಬಾ ತುಂಬಾ ಇದು ಹರಿತಾಗಿದೆ,

ಹಾರಿದೆ...

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ರಾಜೇಂದ್ರ ಕೃಷಣ್ 

ಸಂಗೀತ: ಚಿತ್ರಗುಪ್ತ್ 

ಹಾಡಿದವರು : ಮುಹಮ್ಮದ್ ರಫಿ, ಲತಾ ಮಂಗೇಶ್ಕರ್

ಚಿತ್ರ:ಭಾಬಿ

-

चली-चली रे पतंग मेरी चली रे

चली बादलों के पार, हो के डोर पे सवार

सारी दुनिया ये देख-देख जली रे

चली-चली रे पतंग...


यूँ मस्त हवा में लहराए

जैसे उड़न खटोला उड़ा जाए

ले के मन में लगन, जैसे कोई दुल्हन

चली जाए रे सांवरिया की गली रे

चली-चली रे पतंग...


रंग मेरी पतंग का धानी

है ये नील गगन की रानी

बांकी-बांकी है उठान, है उमर भी जवान

लागे पतली कमर बड़ी भली रे

चली-चली रे पतंग...


छूना मत देख अकेली

है साथ में डोर सहेली

है ये बिजली की तार, बड़ी तेज़ है कतार

देगी काट के रख, दिलजली रे

चली-चली रे पतंग...



No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...