ಕೇಳಬೇಡ ಯಾಕೆ ಅವಳನ್ನು ಇನ್ನೂ ಸ್ಮೃತಿಯಲ್ಲಿ ಇರುಸುವೆ ಎಂದು,
ಕೇಳಬೇಡ ಅವಳನ್ನು ನೆನೆದು ಯಾಕೆ ಮೌನದಲಿ ಅಳುವೆಯೆಂದು,
ಕೇಳಬೇಡ ಬಂಜರು ಭೂಮಿಯಂತಹ ಈ ಹೃದಯ ಉದ್ಯಾನದಲ್ಲಿ ಯಾಕೆ ಬಯಕೆಯ ಹೂ ಅರಳಿಸಲು ಪ್ರಯತ್ನಿಸುವೆ ಎಂದು!!!
-
ಕೇಳಬೇಡ ಯಾಕೆ ಹಾಗು ಹೇಗೆ ನಾನು ಕವಿಯಾದೆ ಎಂದು,
ಕೇಳಬೇಡ ಅಪ್ಪಳಿಸಿ ಮುರಿದ ಈ ಎದೆಯಿಂದ ರಕ್ತದ ಬದಲು ಹೇಗೆ ಪದಗಳು ಹುಟ್ಟಿತೆಂದು,
ಕೇಳಬೇಡ ಈ ಪದಗಳು ಹೇಗೆ ಕವಿತೆಯಾಗಿ ಮೂಡಿತೆಂದು!!!
-
ಕೇಳಬೇಡ ಯಾಕೆ ನಾನು ಸಂಧ್ಯಾ ಸೂರ್ಯನನ್ನು ನೋಡುತ್ತಿರುತ್ತೇನೆ ಎಂದು,
ಕೇಳಬೇಡ ಯಾಕೆ ನಾನು ಸಾಗರದ ಬಂಡೆಯ ಮೇಲೆ ಅವಳ ಹೆಸರು ಕೆತ್ತುತ್ತಿರುತ್ತೇನೆ ಎಂದು,
ಕೇಳಬೇಡ ಯಾಕೆ ಮರಳ ಮನೆ ಮಾಡಿ ಅದನ್ನು ಸಾಗರದ ಅಲೆಗಳು ಕೊಚ್ಚಿ ಹೋಗುವುದನ್ನು ನೋಡಿ ಕಣ್ಣೀರು ಹಾಕುತ್ತೇನೆ ಎಂದು!!!
-
ಕೇಳಬೇಡ ಇರುಳಲ್ಲಿ ಏಕಾಂತ ಕೂತು ಯಾಕೆ ಆ ಚಂದ್ರ ತಾರೆಗಳನ್ನು ನೋಡುತ್ತಿರುತ್ತೇನೆ ಎಂದು,
ಕೇಳಬೇಡ ನಿದ್ದೆ ಇಲ್ಲದೆ ಯಾಕೆ ಹಾಸಿಗೆಯಲಿ ಹೊರಳಾಡುತ್ತಿರುತ್ತೇನೆ ಎಂದು,
ಕೇಳಬೇಡ ಮುಂಜಾನೆ ಒದ್ದೆ ಒದ್ದೆ ತಲೆದಿಂಬು ಹೇಗೆ ನನ್ನ ಕಥೆ ನುಡಿಯುತ್ತದೆ ಎಂದು!!!
-
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment