Saturday 7 June 2014

ಸರ್ಕಸ್

ಸರ್ಕಸ್
-----
ಕೊನೆ ಉಸಿರೆಳೆಯುವ ಸರ್ಕಸ್
ಮೌನ ವಿಧೂಷಕ

----
ಹಾಸ್ಯಗಾರನ ಮೇಲೆ ವ್ಯಂಗ
ಮುಗಿದ ಹಾಸ್ಯಗಾರ
ಅಹಂ ಜನ್ಮ

----
ಸರ್ಕಸ್ ಪ್ರಾಣಿಗಳಿಗೆ
ಆಹಾರದ ಕೊರತೆ
ದುಃಖಿತ ರಿಂಗ್ ಮಾಸ್ಟರ್

---
ಸರ್ಕಸ್'ಲ್ಲಿ
ಹಾರುವ ರಾಣಿಗೆ
ವೀಲ್ ಚೇರ್ ಆಸರೆ

---
ಸರ್ಕಸ್'ಲ್ಲಿ ಇದ್ದ
ಸೈಕಲ್ ಮಾರಾಟ
ಕರಡಿ ಈಗ ಪಾದಚಾರಿ

---

ಮಗು : ಸರ್ಕಸ್ ಅಂದರೆ ಏನು ಅಪ್ಪ ?
ಅಪ್ಪ : ನಿಜ ಬಡ ಕಲಾವಿದರ ಕಲೆಯ ಪ್ರದರ್ಶನ.
ಮಗು : ಈಗ ಎಲ್ಲಿದೆ ಆ ಸರ್ಕಸ್ ಹಾಗು ಕಲಾವಿದರು?
ಅಪ್ಪ : ಸಮಯದ ಚಕ್ರದಲ್ಲಿ ಮರೆಯಾದರು.

by ಹರೀಶ್ ಶೆಟ್ಟಿ, ಶಿರ್ವ  

2 comments:

  1. ಆಧುನಿಕ ಮನರಂಜನಾ ಮಾಧ್ಯಮಗಳ ಭರಾಟೆಗೆ ಸೊರಗಿದ ಕಲಾ ಪ್ರಕಾರಗಳನೇಕ.
    ಸರ್ಕಸ್ ಬಹು ಶ್ರಮದ ಮತ್ತು ಖರ್ಚಿನಿಂದ ಕೂಡಿದ ಉದ್ಯಮ. ಅದರ ನಶಿಸುವಿಕೆಯು ದುಃಖದ ಸಂಗತಿಯೇ ಸರಿ.

    ತುತ್ತು ಅನ್ನಕಾಗಿ
    ರಿಂಗಿನಲಿ ಪಲ್ಟಿ ಹೊಡೆದ
    ವಿಧೂಷಕ ನಕ್ಕ,
    ಖಾಲಿ ಚೇರುಗಳ ನೆನೆದು
    ಡೇರೆ ಕತ್ತಲಲಿ ಒಬ್ಬಂಟಿ
    ಮಾಲಿಕನು ಬಿಕ್ಕಳಿಸಿ ಅತ್ತ

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್

    ReplyDelete