Tuesday, 27 May, 2014

ರಾಗ ನೌಕೆ

ಸುಮಧುರ ಎನಿಸುತ್ತಿದೆ 
ಜಲತರಂಗದಲಿ ತೇಲುತ್ತಿದೆ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಅಪರಿಚಿತ ರಾಗ ನೌಕೆ

ಹೊಸ ಧ್ವನಿ
ನವೀನ ಸಂಗೀತ 
ಮನಸ್ಸು ತಲ್ಲೀನ 
ಹೃದಯ ನಲಿಯುತ್ತಿದೆ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಅದ್ಭುತ ರಾಗ ನೌಕೆ 

ಧ್ಯಾನ 
ಮೌನ 
ಇಂಪಾದ ವಾತಾವರಣ 
ಎಲ್ಲೊ ಅಸ್ತಿತ್ವ 
ಹಗುರ ಹಗುರ ಅನುಭವ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಸುಸ್ವರದ ರಾಗ ನೌಕೆ 

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

2 comments:

  1. ಅಪರಿಚಿತ ಅದ್ಭುತ ಸುಸ್ವರದ ರಾಗ ನೌಕೆಯ ವಿಶೇಷವೇ ಹಾಗೆ ಅದು, ನಮ್ಮನ್ನು ಎಲ್ಲಿಗೇ ತೇಲಿಸಿಬಿಡುತ್ತದೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್ :

    ReplyDelete