ಹೊಸ ದಾರಿ (೨)
"ಬಾ ನನ್ನೊಟ್ಟಿಗೆ" ಅವನು ಅವಳ ಕೈ ಹಿಡಿದು ಎದ್ದ.
ಅವನು ತನ್ನ ಮೊಬೈಲಿಂದ ಯಾವುದೇ ನಂಬರ್ ಡಾಯಲ್ ಮಾಡಿದ, ಅಲ್ಲಿಂದ ಯಾರೋ,
"ಹಲೋ"
" ಹಲೋ ಅಂಕಲ್, ನಾನು ಸುಮೇಶ್, ನಿಮ್ಮನ್ನು ಭೇಟಿ ಮಾಡಬೇಕಾಗಿದೆ"
ಆ ಬದಿಯಲ್ಲಿ ಸುಮಾಳ ಅಪ್ಪ ಇದ್ದರು, ಅವರು "ಆದರೆ ನಮಗೆ ನಿನ್ನಿಂದ ಯಾವ ಸಂಬಂಧವೂ ಇಡಲಿಕ್ಕಿಲ್ಲ, ಭೇಟಿ ಮಾಡಿ ಏನು ಮಾಡುವುದು."
"ಈಗ ಹನ್ನೊಂದು ಗಂಟೆ ಆಗಿದೆ, ನಾನು ಸ್ವಲ್ಪ ಕೆಲಸ ಮುಗಿಸಿ ಸರಿಯಾಗಿ ನಾಲ್ಕು ಗಂಟೆಗೆ ನಿಮ್ಮ ಮನೆಗೆ ಬರುತ್ತಿದ್ದೇನೆ" ಎಂದು ಹೇಳಿ ಸುಮೇಶ್ ಮೊಬೈಲ್ ಕಟ್ ಮಾಡಿದ.
ಸರಿಯಾಗಿ ನಾಲ್ಕು ಗಂಟೆಗೆ ಇಬ್ಬರು ಸುಮಾಳ ಮನೆಗೆ ಬಂದರು. ಸುಮೇಶನ ಕೈಯಲ್ಲಿ ಒಂದು ಕಾಗದದ ಬಂಡಲ್ ಇತ್ತು, ಸುಮಾಳ ದೊಡ್ಡ ಕುಟುಂಬ, ಮನೆಯಲ್ಲಿ ಸುಮಾಳ ಅಪ್ಪ, ಅಮ್ಮ, ಅಣ್ಣ ಸುಮಾಳ ಚಿಕ್ಕಪ್ಪ, ಚಿಕ್ಕಮ್ಮ ಹಾಗು ಸುಮಾಳ ಅಜ್ಜ,ಅಜ್ಜಿ ಎಲ್ಲರೂ ಇದ್ದರು, ಬಹುಶಃ ಇವರನ್ನೇ ಅವರೆಲ್ಲ ಕಾಯುತ್ತಿದ್ದಿರಬೇಕು.
ಸುಮಾಳ ತಂದೆ ಕೋಪದಿಂದ "ಇದೆಲ್ಲ ಏನು ನಾಟಕ ನಿನ್ನ, ಏಕೆ ಬಂದೆ ಇಲ್ಲಿ" ಹಾಗು ಸುಮಾಳನ್ನು ಅವನೊಟ್ಟಿಗೆ ನೋಡಿ "ಏನೇ ನಿನಗೆ ನಾಚಿಗೆ ಮರ್ಯಾದೆ ಏನೂ ಇಲ್ಲವೇ ?" ಎಂದು ಕಿರುಚಿದರು.
ಸುಮಾ "ಅಪ್ಪ, ಒಮ್ಮೆ ಅವನ ಮಾತಾದರೂ ಕೇಳಿ".
"ನಮಗೆ ಏನು ಕೇಳಲಿಕ್ಕೆ ಇಲ್ಲ, ಇಲ್ಲಿಂದ ತೊಲಗಲಿಕ್ಕೆ ಹೇಳು ಇವನಿಗೆ"
ಸುಮೇಶ್ "ನಾನು ಹೋಗುತ್ತೇನೆ, ಆದರೆ ಒಂದೆರಡು ನಿಮಿಷ ನನ್ನ ಮಾತು ಕೇಳಿ, ನಾವಿಬ್ಬರು ಪ್ರೀತಿಸುತ್ತೇವೆ ಎಂದು ನಿಮಗೆ ಗೊತ್ತಿದ ವಿಷಯ ಹಾಗು ಈ ವಿಷಯವನ್ನು ಇನ್ನು ಹೆಚ್ಚು ಎಳೆಯುವುದು ಒಳ್ಳೆಯದಲ್ಲ ಹಾಗು ಒಂದು ನಿರ್ಧಾರಕ್ಕೆ ಬರಬೇಕೆಂದು ತಿಳಿದು, ನಾನು ಕೊನೆಯ ಬಾರಿ ನಿಮ್ಮಲ್ಲಿಗೆ ಬಂದಿದ್ದೇನೆ, ಇವತ್ತು ಸುಮಾ ಒಂದು ದೊಡ್ಡ ನಿರ್ಣಯಕ್ಕೆ ಬಂದಿದ್ದಳು ಹಾಗು ಅವಳು ಮನೆಯಿಂದ ಓಡಿ ಹೋಗಿ ನನ್ನಿಂದ ಮದುವೆಯಾಗಲು ಬಯಸಿದ್ದಳು, ಆದರೆ ಈ ದಾರಿಗೆ ನನ್ನ ಒಪ್ಪಿಗೆ ಇರಲಿಲ್ಲ ...
ಅವನ ಮಾತಿನ ಮಧ್ಯದಲ್ಲಿ ಸುಮಾಳ ಅಣ್ಣ ಸುಮಾಳಿಗೆ "ಹೇ ,ನಾಚಿಗೆಗೇಡಿ, ನಿನಗೆ ಇಷ್ಟು ಧೈರ್ಯನೇ ?"
ಸುಮೇಶ್" ಒಂದು ನಿಮಿಷ, ಸ್ವಲ್ಪ ತಾಳಿ, ಇದೆಲ್ಲ ನಡೆಯಬಹುದು ಎಂದು ನಮಗೆ ತಿಳಿದಿದ್ದ ವಿಷಯ, ಇದನ್ನೆಲ್ಲಾ ಮಾಡಿ ಪ್ರಯೋಜನವಿಲ್ಲ".
ಸುಮಾಳ ಅಣ್ಣ "ಹೇ ನೀನು ಸುಮ್ನಿರೋ."
ಆಗ ಮೌನ ಕೂತಿದ ಸುಮಾಳ ಅಜ್ಜ "ನಿಲ್ಲಿಸಿ ನಿಮ್ಮೆಲ್ಲರ ಗಲಾಟೆ , ಮೊದಲು ಅವನು ಏನು ಹೇಳುತ್ತಾನೆ ಕೇಳಿ" ಎಂದು ಎಲ್ಲರಿಗೆ ಬೈದು ನಂತರ ಸುಮೇಶನಿಗೆ "ನೀನು ಮುಂದುವರಿಸು."
ಸುಮೇಶ "ಹೀಗೆ ಓಡಿ ಹೋಗಿ ಮದುವೆಯಾಗುವುದು ಹಾಗು ಸುಮಾಳ ಪರಿವಾರದವರ ತಲೆ ತಗ್ಗುವಂತೆ ಮಾಡುವುದು ನನಗೆ ಇಷ್ಟವಿಲ್ಲ, ಆದರೆ ಹೀಗೆ ಸುಮ್ಮನೆ ಪ್ರೀತಿಯನ್ನು ತೊರೆಯುವುದು ಸಹ ನನಗೆ ಇಷ್ಟವಿಲ್ಲ, ಅದಕ್ಕೆ ಈ ಸಮಸ್ಯೆಯನ್ನು ಬಗೆಹರಿಸಲು ನಾನೊಂದು ಹೊಸ ದಾರಿ ಹುಡುಕಿದ್ದೇನೆ"
ಅಜ್ಜ " ಏನು ಹೊಸ ದಾರಿ?"
(ಮುಂದುವರಿಯುವುದು)
ಆ ಹೊಸ ದಾರ ಏನು ಸಾರ? ಮುಂದುವರೆಸಿರಿ.
ReplyDeleteಓಡಿ ಹೋಗಿ ಮದುವೆಯಾಗಲೊಲ್ಲೆ ನೆಚ್ಚಿಗೆಯಾದದ್ದು ಈ ನಡೆ.
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete