"ಇಲ್ಲ, ಇದು ಸಾಧ್ಯವಿಲ್ಲ" ಅವನ ಸ್ವರದಲ್ಲಿ ದೃಡ ನಿರ್ಧಾರವಿತ್ತು.
"ಯಾಕೆ ಸಾಧ್ಯವಿಲ್ಲ, ನನ್ನ ಒಪ್ಪಿಗೆ ಇದ್ದ ಮೇಲೆ ನೀನೇಕೆ ಹೆದರುವೆ?" ಅವಳು ಪ್ರಶ್ನಿಸಿದಳು.
"ಇಲ್ಲಿ ಹೆದರುವ ಪ್ರಶ್ನೆ ಇಲ್ಲ ಸುಮಾ, ಪಾಲಕರು ಅದೆಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕುತ್ತಾರೆ, ನಿನ್ನ ಅಪ್ಪ, ಅಮ್ಮ ನಿನ್ನನ್ನು ಎಷ್ಟು ಪ್ರೀತಿಯಿಂದ ಮುದ್ದಿನಿಂದ ಸಾಕಿದ್ದಾರೆ, ನೀನು ಹೀಗೆ ಮನೆಯಿಂದ ಓಡಿ ಬಂದು ನಾವು ಮದುವೆಯಾದರೆ ಅವರ ಕನಸುಗಳೆಲ್ಲ ಚೂರು ಚೂರಾಗುತ್ತದೆ ಹಾಗು ಇದನ್ನು ಸಹಿಸಲಾರದೆ ಅವರು ಹೆಚ್ಚು ಸಮಯ ಬದುಕಲಾರರು, ಅವರ ಆಸೆ ಆಕಾಂಕ್ಷೆಯ ಗೋರಿಯ ಮೇಲೆ ನಾವು ನಮ್ಮ ಪ್ರೀತಿಯ ಅರಮನೆ ಕಟ್ಟುವುದು ತಪ್ಪು, ನನ್ನಿಂದ ಇದು ಸಾಧ್ಯವಿಲ್ಲ ಸುಮಾ."
"ನಿನ್ನ ವಿಚಾರಕ್ಕೆ ನನ್ನ ಸಹಮತ ಇದೆ, ಆದರೆ ಅವರು ಒಪ್ಪುವುದಿಲ್ಲ ಎಂದ ಮೇಲೆ ನಮ್ಮ ಹತ್ತಿರ ಬೇರೇನೂ ದಾರಿ ಇಲ್ಲ ಈಗ ಇದೊಂದೇ ದಾರಿ ಉಳಿದಿದೆ."
"ಆದರೆ ಈ ದಾರಿ ನನಗೆ ಮಾನ್ಯವಿಲ್ಲ ಸುಮಾ, ನಮ್ಮ ಪ್ರೀತಿಯ ಸುಮಗಳು ನಮ್ಮ ಪಾಲಕರ ಧ್ವಂಸ ಉದ್ಯಾನದಲ್ಲಿ ಹೇಗೆ ತಾನೇ ಅರಳುವುದು".
"ಹಾಗಾದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ ಎಂದು ಅರ್ಥ" ಎಂದು ಸುಮಾ ಕೋಪದಿಂದ ಕಿರುಚಿದಳು.
"ಹಾಗೆ ಹೇಳಬೇಡ ಸುಮಾ, ನಿನ್ನ ಪ್ರೀತಿ ಪಡೆಯಲು ನಾನೆಷ್ಟು ಕಷ್ಟ ಪಟ್ಟಿದೆ ಎಂದು ನಿನಗೆ ತಿಳಿದಿದೆ, ಆದರೆ ನಿನ್ನ ಅಮ್ಮ, ಅಪ್ಪನ ಬಯಕೆಗಳ ಶವ ಸಂಸ್ಕಾರ ಮಾಡಲು ನನ್ನಿಂದ ಸಾಧ್ಯವಿಲ್ಲ" ಎಂದು ಅವನು ಹೇಳಿದ, ಅವನ ಸ್ವರದಲ್ಲಿ ವೇದನೆ ಇತ್ತು.
"ಹಾಗಾದರೆ ನೀನೆ ಹೇಳು, ಏನು ಮಾಡುವುದೆಂದು" ಅವನ ಮಾತಿನಲ್ಲಿದ್ದ ನೋವನ್ನು ಅರಿತು ಸುಮಾ ಮೆಲ್ಲನೆ ಕೇಳಿದಳು.
"ನನ್ನನ್ನು ಮರೆತು ಬಿಡು ಸುಮಾ, ನೀನು ಅವರ ಇಷ್ಟದ ಪ್ರಕಾರ ಮದುವೆಯಾಗು." ಅವನು ಮೆಲ್ಲನೆ ಹೇಳಿದ, ಕಣ್ಣೀರು ಹರಿಯಿತು ಅವನ ಕಣ್ಣಿಂದ.
"ಇದು ಸಾಧ್ಯವಿಲ್ಲ" ಎಂದು ಕಿರುಚಿ ಸುಮಾ ಅಳಲಾರಂಭಿಸಿದಳು.
ಸ್ವಲ್ಪ ಹೊತ್ತು ಹೀಗೆಯೇ ಮೌನದಲ್ಲಿ ಕಳೆಯಿತು.
"ಒಂದು ದಾರಿ ಇದೆ." ಇದ್ದಕ್ಕಿದಂತೆ ಅವನು ಹೇಳಿದ.
(ಊಹಿಸಬಲ್ಲಿರಾ ಆ ದಾರಿ ಏನೆಂದು ? )
(ಮುಂದುವರಿಯುತ್ತದೆ)
(ಮುಂದುವರಿಯುತ್ತದೆ)
by ಹರೀಶ್ ಶೆಟ್ಟಿ,ಶಿರ್ವ
ಒಳ್ಳೆಯ ನಿರೂಪಣೆ.
ReplyDeleteತುಂಬಾ ಧನ್ಯವಾದಗಳು ಬದರಿ ಸರ್.
ReplyDelete