ಶಾಂತತೆಯಿಲ್ಲ ಈಗ
ಸ್ಮಶಾನದಲ್ಲೂ
ಸಭೆ,ಸಮಾರಂಭ
ಜರುಗುತ್ತಿದೆ
ಈಗ ಇಲ್ಲೂ
ಮೌನದಿ ಮಲಗಿದ
ಕವಿಯೊಬ್ಬನ
ಕೆಡವಿ ಶಾಶ್ವತ ನಿದ್ರೆಯನು
ಕೂತರು ಅವನ ಮೇಲೆ
ಯೋಚಿಸಿರಬಹುದು
ಅವನೆಲ್ಲಿ ಜೀವಂತ ಭಾರವಾಗಲು
ಗೌಜಿ ಗಲಾಟೆ
ಮಾತುಕತೆ ಸುದ್ಧಿ ಗಮ್ಮತ್ತು
ಆಹಾರ ತಿಂಡಿ
ಉಪಹಾರ ಸಹ
ನಡೆಯಿತು ಇಲ್ಲಿಯೇ
ಅವನಿಗೆಲ್ಲಿ ಗೋಚರ ಹಸಿವೆಯಾಗಲು
ಕವನ ಪಠಣ
ಪದಗಳ ತೋರಣ
ಮಿಡಿಯ ಬಹುದೇ
ಪುನಃ ಆತನ ಕವಿ ಹೃದಯ
ಒಂದು ಕವಿತೆ
ಹೊಳೆ ಬಹುದೆ
ಈ ಶಾಂತ ಚಿತ್ತ ನಿದ್ರೆಯಲ್ಲೂ
by ಹರೀಶ್ ಶೆಟ್ಟಿ,ಶಿರ್ವ
ಸ್ಮಶಾನದಲ್ಲೂ
ಸಭೆ,ಸಮಾರಂಭ
ಜರುಗುತ್ತಿದೆ
ಈಗ ಇಲ್ಲೂ
ಮೌನದಿ ಮಲಗಿದ
ಕವಿಯೊಬ್ಬನ
ಕೆಡವಿ ಶಾಶ್ವತ ನಿದ್ರೆಯನು
ಕೂತರು ಅವನ ಮೇಲೆ
ಯೋಚಿಸಿರಬಹುದು
ಅವನೆಲ್ಲಿ ಜೀವಂತ ಭಾರವಾಗಲು
ಗೌಜಿ ಗಲಾಟೆ
ಮಾತುಕತೆ ಸುದ್ಧಿ ಗಮ್ಮತ್ತು
ಆಹಾರ ತಿಂಡಿ
ಉಪಹಾರ ಸಹ
ನಡೆಯಿತು ಇಲ್ಲಿಯೇ
ಅವನಿಗೆಲ್ಲಿ ಗೋಚರ ಹಸಿವೆಯಾಗಲು
ಕವನ ಪಠಣ
ಪದಗಳ ತೋರಣ
ಮಿಡಿಯ ಬಹುದೇ
ಪುನಃ ಆತನ ಕವಿ ಹೃದಯ
ಒಂದು ಕವಿತೆ
ಹೊಳೆ ಬಹುದೆ
ಈ ಶಾಂತ ಚಿತ್ತ ನಿದ್ರೆಯಲ್ಲೂ
by ಹರೀಶ್ ಶೆಟ್ಟಿ,ಶಿರ್ವ
ನನ್ನ ಸ್ವಂತ ಅಳಲನ್ನು ತಾವು ಕವಿತೆಯಾಗಿಸಿಕೊಟ್ಟಿದ್ದೀರ.
ReplyDeleteಅಕ್ಷಯ ತೃತಿಯದ ಈ ಶುಭದಿನ ನನಗೂ ನಾಲ್ಕು ಅಕ್ಷರ ಹೊಳೆಯಲಿ!!
ಆಶ್ಚರ್ಯ ಅಳಲು ಸಹಿಸಲಾರದೆ ಈ ಕವನ ಮನಸ್ಸಲ್ಲಿ ಹುಟ್ಟಿತು.ತುಂಬಾ ಧನ್ಯವಾದಗಳು ಬದರಿ ಸರ್.
ReplyDelete