Thursday, May 8, 2014

ಚಂದ್ರ ನಿಟ್ಟುಸಿರು ಬಿಡಬಹುದು

!!ಚಂದ್ರ ನಿಟ್ಟುಸಿರು ಬಿಡಬಹುದು
ಹೂವಿನ ಹೃದಯ ಮಿಡಿಯಬಹುದು
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು!!

!!ಹೀಗಿದೆ ನಿನ್ನಯ ರೂಪು
ಮುಂಜಾನೆಯ ಬೆಳಕಿನ ಹೊಳಪು
ಯಾವ ಸ್ಥಳದಲಿ ನೀನಿಲ್ಲವೋ
ಆ ಸ್ಥಳದಲಿ ಕತ್ತಲು ಕಪ್ಪು
ಹೇಗೆ ನೆಮ್ಮದಿ ನಿನ್ನ ವಿನಾಃ
ನಿನ್ನನ್ನು ಇಷ್ಟಪಡುವವರು ಪಡೆಯಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

!!ಕಂಗಳು ನಾಜೂಕು ಮೊಗ್ಗಿನಂತೆ
ಮಾತು ಸಿಹಿ ಸಕ್ಕರೆಯಂತೆ
ಅಧರ ಗಂಗೆಯ ತಟದಂತೆ
ಕೇಶ ಸ್ವರ್ಗದ ಹಾದಿಯಂತೆ
ನಿನಗಾಗಿ ದೇವಲೋಕದವರೂ
ತನ್ನ ಮೇಲೆ ಆಪಾದನೆ ಹೊರಿಸಿಕೊಳ್ಳಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

!!ಸುಮ್ಮನಿರಲಿಕ್ಕಿಲ್ಲ ಈ ಪವನ
ಏನಾದರೂ ಹೇಳಬಹುದು ಈ ಮುಗಿಲ
ಇದರ ಸಾಧ್ಯತೆಯೂ ಇದೆ
ದೇವರೂ ನಿನ್ನ ಉಲ್ಲೇಖ ಮಾಡಬಹುದು
ಇದರ ನಂತರ ಕಲ್ಲೇ ಬಹುಶಃ
ತನ್ನಲ್ಲಿ ಸಂಯಮ ಇಡಬಹುದು!!
ಸೌಂದರ್ಯದ ಮಾತುಕತೆ ನಡೆದರೆ
ಎಲ್ಲರೂ ನಿನ್ನೆಸರು ಹೇಳಬಹುದು

ಮೂಲ : ಆನಂದ್ ಬಕ್ಷಿ
ಮೂಲ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ :ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಫೂಲ್ ಬನೇ ಅಂಗಾರೆ

chand aahen bharega
phool dil thaam lenge
chand aahen bharega
phool dil thaam lenge
husn ki baat chali to
sab tera naam lenge
chand aahen bharega

aisa chehra hai tera jaisa roshan sawera
jis jagah tu nahin hai us jagah hai andhera
aisa chehra hai tera jaisa roshan sawera
jis jagah tu nahin hai us jagah hai andhera
kaise phir chain tujh bin tere badnaam lenge
kaise phir chain tujh bin tere badnaam lenge
husn ki baat chali to
sab tera naam lenge
chand aahen bharega

aankh naazuk si kaliyan
baat misri ki daliyan
honth ganga ke saahil
zulfen jannat ki galiyan
aankh naazuk si kaliyan
baat misri ki daliyan
honth ganga ke saahil
zulfen jannat ki galiyan
teri khatir farishte sar pe ilzaam lenge
teri khatir farishte sar pe ilzaam lenge
husn ki baat chali to sab tera naam lenge
chand aahen bharega

chup na hogi hawa bhi
kuch kahegi ghata bhi
aur mumkin hai tera
jikr kar de khuda bhi
chup na hogi hawa bhi
kuch kahegi ghata bhi
aur mumkin hai tera
jikr kar de khuda bhi
phir to patthar hi shaayad jabt se kaam lenge
phir to patthar hi shaayad jabt se kaam lenge
husn ki baat chali to sab tera naam lenge
chand aahen bharega
phool dil thaam lenge
husn ki baat chali to sab tera naam lenge
chand aahen bharega
http://www.youtube.com/watch?v=ZdGsYnl4fL8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...