Sunday, May 25, 2014

ಅಪರಿಚಿತ ಯಾರು ನೀನು

ಅಪರಿಚಿತ ಯಾರು ನೀನು
ನಿನ್ನನ್ನು ನೋಡಿದ ಕ್ಷಣದಿಂದ
ಜಗವೆಲ್ಲ ನನ್ನ ಕಂಗಳಲ್ಲಿ ಹರಿದು ಬಂದಿದೆ
ಅಪರಿಚಿತ ಯಾರು ನೀನು....

ಪ್ರತಿ ಗೀತೆಯಲಿ ನಿನ್ನ ಉಪಸ್ಥಿತಿ
ರಾಗದ ಹಾಗೆ
ನೀನು ನನಗೆ ಸಿಕ್ಕಿದೆ ಸುಮಗಳ
ನಗುವಿನ ಹಾಗೆ
ಹೀಗೆ ಅನಿಸುತ್ತದೆ ಎಷ್ಟೋ ವರ್ಷದಿಂದ
ಬೆಳಕಾಗಿದೆ ಇಂದು
ಅಪರಿಚಿತ ಯಾರು ನೀನು....

ಕನಸುಗಳ ರಂಗು ವಾಸ್ತವದಲ್ಲಿ
ಕಂಡು ಬಂದಿದೆ
ಹೃದಯದಲಿ ಮಿಡಿತದ ಹಾಗೆ
ಯಾರೋ ಇಳಿದಾಗಿದೆ
ಇಂದು ಪ್ರತಿ ಉಸಿರಲ್ಲಿ
ಶಹನಾಯಿಯ ಧ್ವನಿ ತರಂಗಿಸುತ್ತಿದೆ
ಅಪರಿಚಿತ ಯಾರು ನೀನು....

ಯಾವುದೇ ಶಬ್ದದ ಹಾಗೆ
ಕತ್ತಲಲ್ಲಿ ಮಿನುಗುತ್ತದೆ
ರಾತ್ರಿ ಬಂದಾಗ ಏಕಾಂತ
ಸುವಾಸನೆ ಬೀರುತ್ತದೆ
ನಿನ್ನ ಸಾಕ್ಷತ್ಕಾರವೆ ಅಥವಾ
ಇದು ಪ್ರೀತಿಯ ಹೊಸ ರಾಗವೆ
ಅಪರಿಚಿತ ಯಾರು ನೀನು....

ಮೂಲ :ವಿಟ್ಟಲ್ ಬಾಯಿ ಪಟೇಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಉಷಾ ಖನ್ನ
ಚಿತ್ರ : ಸ್ವೀಕಾರ್ ಕಿಯಾ ಮೈನೆ

(ajnabi kaun ho tum, jabse tumhe dekha hai
saari duniya meri aankhon mein simat aayi hai) -2

tum to har geet mein shaamil the, tarannum ki tarah
tum mile ho mujhe phoolon ka tabassum banke
aaisa lagta hai ke barso se, shama aaj aayi hai
ajnabi kaun ho tum ...

khwaab ka rang haqeeqat mein nazar aaya hai
dil mein dhadkan ki tarah koi utar aaya hai
aaj har saans mein shehanaaiyo si leharaayi hai
ajnabi kaun ho tum ...

koi aahat see, andheron mein chamak jaati hai
raat aati hai, to tanhaai mehak jaati hai
tum mile ho ya mohabbat ne gazal gaai hai
ajnabi kaun ho tum ..
http://www.youtube.com/watch?v=6xYEWEhv8og

1 comment:

  1. ಉಷಾ ಖನ್ನಾ ಅವರ ಸಂಗೀತ ಚೆನ್ನಾಗಿದೆ. ತಮ್ಮ ಭಾಷಾಂತರವೂ ಸಹ.
    ಛಾಯಾಗ್ರಹಣ: ಎಫ್. ಆರ್. ಖಾನ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...