Saturday, May 10, 2014

ತೆರೆದ ಪುಸ್ತಕ ನಾನು

ತೆರೆದ ಪುಸ್ತಕ ನಾನು
ಕವಿಯತ್ರಿ ಆಗಿ ಬಾ ನೀನು
ಬರೆ ಒಂದೆರಡು ಸುಖ ಕವಿತೆ
ನನ್ನ ಹೃದಯವನ್ನು ರಮಿಸು ನೀನು

ತೆರೆದ ಪುಸ್ತಕ ನಾನು
ಚೆಲ್ಲು ನಿನ್ನ ಲೇಖನಿಯ ಮಸಿಯನ್ನು
ಅಲಂಕರಿಸು ನನ್ನ ಜೀವನವನ್ನು
ಸ್ವರ್ಗವನ್ನಾಗಿ ಮಾಡು ನನ್ನ ಬಾಳನ್ನು

ತೆರೆದ ಪುಸ್ತಕ ನಾನು
ಹರಿಯ ಬಿಡು ನಿನ್ನ ಭಾವಗಳ ಲಹರಿಯನ್ನು
ವಿಹರಿಸುವೆ ಅದರ ತರಂಗದಲಿ ನಾನು
ತೇಲಿಸು ಆನಂದ ಲೋಕದಲಿ ನನ್ನನ್ನು

ತೆರೆದ ಪುಸ್ತಕ ನಾನು
ಚಿತ್ರಿಸು ಒಂದು ಬೆಳುಗುವ ದೀಪವನ್ನ
ತೇಜಸ್ಸು ಹೊಮ್ಮಲಿ ನನ್ನ ಬದುಕಲಿ
ನನ್ನ ಭಾಗ್ಯ ಬೆಳಗಿಸು ನೀನು

ತೆರೆದ ಪುಸ್ತಕ ನಾನು
ಅದರಲಿ ಇಡು ಒಂದು ಗುಲಾಬಿ ಹೂವನ್ನು
ನೆನಪ ಪರಿಮಳ ಸದಾ ಹರಡುತ್ತಿರಲಿ
ನನ್ನ ಬಾಳ್ಮೆಯನ್ನು ಸುಗಂಧಿಸು ನೀನು

by ಹರೀಶ್ ಶೆಟ್ಟಿ, ಶಿರ್ವ 

2 comments:

  1. ಬದುಕನು ತೆರೆದ ಪುಸ್ತಕವಾಗಿಟ್ಟಾಗಲೇ ಲಲನೆ, ಪ್ರಣಯ ರಾಗಾಲಾಪಗಳನ್ನು ಒಲವ ಶಾಯಿಯಲಿ ಬರೆದಾಳು.
    ಪ್ರೇಮೋತ್ಕಟ ಕವನ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...