Thursday, May 15, 2014

ಗೌತಮ್ ಬುದ್ಧ (೩)

ಗೌತಮ್ ಬುದ್ಧ ()

ನಂತರ ಇನ್ನೊಂದು ದಿನ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೊರಟ,  ಬಾರಿ ಅವನು ಅಲ್ಲಿಂದ ಒಂದು  ಶವ ಯಾತ್ರೆ ಸಾಗುತ್ತಿದ್ದುದ್ದನ್ನು ಕಂಡ, ನಾಲ್ಕು ಜನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದರು, ಹಿಂದೆ ಹಿಂದೆ ತುಂಬಾ ಜನರು ನಡೆಯುತ್ತಿದ್ದರು, ಅದರಲ್ಲಿ ಕೆಲವರು ಅಳುತ್ತಿದ್ದರು, ಕೆಲವರು ಎದೆ ಬಡಿದು, ಬಡಿದು ರೋಧಿಸುತ್ತಿದ್ದರು.

ಇದನ್ನೆಲ್ಲಾ ನೋಡಿ ಸಿದ್ಧಾರ್ಥ ಸೌಮ್ಯನಿಗೆ "ಇದು ಯಾರು ಹೀಗೆ ಬಿದಿರಿನ ಮೇಲೆ ಹೂವುಗಳನ್ನೆಲ್ಲ ಹಾಸಿ ಅದರ ಮೇಲೆ ಮಲಗಿ ಹೋಗುತ್ತಿದ್ದಾರೆ?"

ಸೌಮ್ಯ ಹೇಳಿದ "ಇವನು ಮಲಗಿದ್ದು ಅಲ್ಲ ಕುಮಾರ, ಇವನು ಸತ್ತಿದ್ದಾನೆ, ಇವನು ಜಡ ಮೃತ ಈಗ, ಇವನು ತನ್ನ ಸಂಬಂಧಿಕರಿಂದ ದೂರ ಹೋಗಿದ್ದಾನೆ, ಅಲ್ಲಿಂದ ಎಂದೂ ಇವನು ಹಿಂತಿರುಗಿ ಬರುವುದಿಲ್ಲ, ಇವನಲ್ಲಿ ಈಗ ಜೀವ ಇಲ್ಲ, ಮನೆಯವರು ಬಯಸುವುದಿಲ್ಲ ಆದರೂ ಶಾಶ್ವತವಾಗಿ ಅವನನ್ನು ಬಿಟ್ಟು ಕೊಡಲು ಹೋಗುತ್ತಿದ್ದಾರೆ."

ಸಿದ್ಧಾರ್ಥ "ಸೌಮ್ಯ, ಯಾವುದೇ ಒಂದು ದಿವಸ ನನ್ನ ಸಹ ಇದೇ ಅವಸ್ಥೆ ಆಗುತ್ತದೆ ಏನು? "

ಸೌಮ್ಯ "ಹೌದು ಕುಮಾರ, ಜನ್ಮ ಪಡೆದವನು ಒಂದು ದಿನ ಸಾಯುವುದು ನಿಶ್ಚಿತ."

ಸಿದ್ಧಾರ್ಥ " ಯಾಕೆ ಬೇಕು ಜೀವನವನ್ನು ನುಂಗುವ ಹಾಳು ಯೌವನ, ಯಾಕೆ ಬೇಕು ಶರೀರವನ್ನು ನಷ್ಟ ಮಾಡುವ ಆರೋಗ್ಯ, ಯಾಕೆ ಬೇಕು ತನ್ನ ಅಧ್ಯಾಯವನ್ನು ಬೇಗನೆ ಮುಗಿಸುವ ಜೀವನ, ಮುಪ್ಪು, ರೋಗ, ಮರಣ ಹೀಗೆಯೇ ಆಗುತ್ತಿರುತ್ತದೆ ಏನು ಸೌಮ್ಯ?"

ಸೌಮ್ಯ "ಹೌದು ಕುಮಾರ."

ಸಿದ್ಧಾರ್ಥನಿಗೆ ಪುನಃ ಆಘಾತವಾಯಿತು, ಅವನು ಬೇಸರದಿಂದ ಅರಮನೆಗೆ ಮರಳಿದ.

ರಾಜ ಶುದ್ಧೋದನ ಕುಮಾರನ ಅನಾಸಕ್ತಿ ಅರಿತು ಅವನ ಸುತ್ತ ಮುತ್ತ ಅನೇಕ ಸುಂದರಿಯರನ್ನು ನಿಯುಕ್ತಿಸಿದ,  ಅವರು ಕುಮಾರನನ್ನು ಪ್ರಲೋಭಿಸುವ, ಪ್ರಚೋಧಿಸುವ ತುಂಬಾ ಪ್ರಯತ್ನ ಮಾಡಿದರು, ಆದರೆ ಸಿದ್ಧಾರ್ಥನ ಮೇಲೆ ಇದರ ಯಾವುದೇ ಮರಿಣಾಮ ಬೀಳಲಿಲ್ಲ, ಅವನು ತನ್ನ ಮಿತ್ರ ಉದಯಿಗೆ ಹೇಳಿದ "ಸ್ತ್ರೀಯರ ರೂಪ ಯೌವನ ಶಾಶ್ವತವೇನಲ್ಲ, ಏನಿದೆ ಇದರಲ್ಲಿ".

ನಾಲ್ಕನೆ ಸಲ ಕುಮಾರ ಹೊರ ವಿಹರಿಸಲು ಹೊರಟಾಗ ಅವನಿಗೆ ಒಂದು ಸನ್ಯಾಸಿ ಕಂಡು ಬಂದ.

ಸಿದ್ಧಾರ್ಥ ತನ್ನ ಸಾರಥಿ ಸೌಮ್ಯನಿಗೆ "ಸೌಮ್ಯ, ಯಾರಿವರು ?"

ಸೌಮ್ಯ"ಇವರು ಸನ್ಯಾಸಿ, ಕುಮಾರ."

ಸಿದ್ಧಾರ್ಥ "ಇವರು ಶಾಂತ, ಗಂಭೀರವಾಗಿದ್ದರೆ, ಇವರ ತಲೆಯ ಮುಂಡನೆ ಸಹ ಆಗಿದೆ, ಇವರ ಕೈಯಲ್ಲಿ ಭಿಕ್ಷಾ ಪಾತ್ರೆ ಸಹ ಇದೆ, ಬಟ್ಟೆ ಸಹ ಇವರ ವಿಚಿತ್ರವಾಗಿದೆ, ಏನು ಮಾಡುತ್ತಿದ್ದಾರೆ ಇವರು ಸೌಮ್ಯ?"


ಸೌಮ್ಯ "ಕುಮಾರ ಇವರು ಸಂಸಾರ ತ್ಯಜಿಸಿದ್ದಾರೆ, ಕಡುಬಯಕೆಗಳ ತ್ಯಾಗ ಮಾಡಿದ್ದಾರೆ, ಕಾಮನೆಗಳ ತ್ಯಾಗ ಮಾಡಿದ್ದಾರೆ, ದ್ವೇಷದ ತ್ಯಾಗ ಮಾಡಿದ್ದಾರೆ, ಇವರು ಭಿಕ್ಷೆ ಬೇಡಿ ತಿನ್ನುತ್ತಾರೆ, ಸಂಸಾರದಿಂದ ಇವರಿಗೆ ಏನೂ ಸಂಬಂಧ ಇಲ್ಲ."

ಸಿದ್ಧಾರ್ಥನಿಗೆ ತುಂಬಾ ಸಂತೋಷವಾಯಿತು, ಅವನ ಮುಖ ಅರಳಿತು.

ಆಗ ಅಲ್ಲಿಗೆ ರಾಜಭಟ ಬಂದು " ಕುಮಾರ, ನಿಮಗೆ ಪುತ್ರ ರತ್ನ ಪ್ರಾಪ್ತಿಯಾಗಿದೆ."

ಅನಾಯಾಸವಾಗಿ ಸಿದ್ಧಾರ್ಥನ ಮುಖದಿಂದ ಉದ್ಗಾರವೊಂದು ಹೊರಟಿತು "ರಾಹುಲ್ ಜನ್ಮಿಸಿದ." ಅವನು ಯೋಚಿಸಿದ ಇನ್ನೊಂದು ಬಂಧನ ಹೆಚ್ಚಾಯಿತು ಎಂದು.

ತಂದೆಗೆ ವಿಷಯ ತಿಳಿದ ನಂತರ ಅವರು ತನ್ನ ಮೊಮ್ಮಗನ ಹೆಸರು "ರಾಹುಲ್" ಎಂದಿಟ್ಟರು.

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು

by ಹರೀಶ್ ಶೆಟ್ಟಿ ,ಶಿರ್ವ  

4 comments:

  1. ಸೌಮ್ಯ ಮತ್ತು ಸಿದ್ಧಾರ್ಥರ ನಡುವಿನ ಆ ಸಂಭಾಷಣೆಗಳೇ ಪರಿವರ್ತನೆಯ ಮೊದಲ ಹೆಜ್ಜೆಗಳಲ್ಲವೇ!

    ReplyDelete
  2. ನಿಜವಾಗಿ ಬದರಿ ಸರ್,ತುಂಬಾ ತುಂಬಾ ಧನ್ಯವಾದಗಳು.

    ReplyDelete
  3. ತುಂಬಾ ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...