Monday, May 12, 2014

ಹೊಸ ದಾರಿ (೩ ಅಂತಿಮ )

ಹೊಸ ದಾರಿ (೩ ಅಂತಿಮ  )

ಸುಮೇಶ್ "ಆ ದಾರಿ ಏನು ಎಂದು ತಿಳಿಸುವ ಮುಂಚೆ ನನಗೆ ಒಂದು ಗ್ಲಾಸ್ ನೀರು ಸಿಗಬಹುದೇ"?

ಅಜ್ಜ "ಸುಮಾ, ಇವನಿಗೆ ಒಂದು ಗ್ಲಾಸ್ ನೀರು ತಂದು ಕೊಡು."

ಸುಮೇಶ್ ನೀರು ಕುಡಿದ ನಂತರ "ನನ್ನ ಜಾತಿ ಬೇರೆ, ನಿಮ್ಮ ಜಾತಿ ಬೇರೆ , ಅದಕ್ಕಾಗಿ ನಮ್ಮ ಮದುವೆಗೆ ನಿಮ್ಮ ಒಪ್ಪಿಗೆಯಿಲ್ಲ, ನಾನು ಈ ಜಾತಿಯನ್ನೆಲ್ಲ ನಂಬುವುದಿಲ್ಲ ಅದಕ್ಕೆ ನಾನು ನಿಮ್ಮ ಜಾತಿಗೆ ಸೇರುವೆ ಎಂದರು ನಿಮಗೆ ಒಪ್ಪಿಗೆ ಇಲ್ಲ, ಇರಲಿ ಇದೆಲ್ಲ ಹಳೆ ವಿಷಯ, ಇದನ್ನು ಪುನಃ ಹೇಳಿ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥ ಇಲ್ಲ".

ಸುಮಾಳ ತಂದೆ ಕೋಪದಿಂದ "ನೇರ ವಿಷಯಕ್ಕೆ ಬಾ ,ಆ ಹೊಸ ದಾರಿ ಏನು?"

ಸುಮೇಶ "ತುಂಬಾ ಯೋಚಿಸಿದ ನಂತರ  ನಾವಿಬ್ಬರು ಈ ನಿರ್ಧಾರಕ್ಕೆ ಬಂದಿದ್ದೇವೆ ಅಂದರೆ ನಾವಿಬ್ಬರು  ಅಗಲಿ ಬದುಕಲಾರೆವು ಹಾಗು ವಿನಃ ಕಾರಣ ಸಾಯುವ ಇಚ್ಛೆ ನಮಗಿಲ್ಲ ಆದುದರಿಂದ ನಾವಿಬ್ಬರು ಈ ಹೊಸ ದಾರಿಯಲ್ಲಿ ನಡೆಯಲು ನಿಶ್ಚಯಿಸಿದ್ದೇವೆ".

ಸುಮಾಳ ತಂದೆ "ಇದು ಸಾಧ್ಯವಿಲ್ಲ".

ಸುಮೇಶ್ "ಗೊತ್ತು, ನಮಗೆ ಗೊತ್ತು ನೀವು ಒಪ್ಪುವುದಿಲ್ಲವೆಂದು, ಅದಕ್ಕೆ ತಾನೇ ನಿಮಗೆ ಈ ಹೊಸ ದಾರಿ ಸೂಚಿಸಲು ಬಂದಿದ್ದೇನೆ".

ಸುಮಾಳ ಅಣ್ಣ "ಬೇಗ ಬೊಗುಳು ಆ ದಾರಿ ಏನೆಂದು".

ಸುಮೇಶ್ ಕೈಯಲ್ಲಿದ್ದ ಕಾಗದದ ಬಂಡಲ್ ತೆಗೆದು ಅಲ್ಲಿದ್ದ ಮೇಜಲ್ಲಿ ಇಟ್ಟು "ಇಲ್ಲಿ ಎರಡು ದಸ್ತಾವೇಜುಗಳ ಜೆರಾಕ್ಸ್ ಕಾಪಿ ಇದೆ, ಇದರಲ್ಲಿ ನಾವು ಒಂದು ಪೋಲಿಸ್ ಸ್ಟೇಷನಲ್ಲಿ  ಕೊಟ್ಟು ಬಂದಿದ್ದೇವೆ ಹಾಗು ಇನ್ನೊಂದನ್ನು ಕೋರ್ಟಲ್ಲಿ ಮದುವೆಯ ಅರ್ಜಿ ಸಲ್ಲಿಸಿ ಬಂದಿದ್ದೇವೆ, ಆರು ತಿಂಗಳ ನಂತರ ನಮ್ಮ ಮದುವೆ ಜರುಗಲಿದೆ ನಿಮ್ಮೆಲ್ಲರ ಆಶಿರ್ವಾದದಿಂದ".

ಸುಮಾಳ ತಂದೆ ಗರ್ಜಿಸಿದ "ಇದು ಎಂದಿಗೂ ಸಾಧ್ಯವಿಲ್ಲ".

ಸುಮೇಶ "ಹೀಗೆ ಹೇಳಬೇಡಿ ಮಾವಯ್ಯ, ಪೋಲಿಸ್ ಸ್ಟೇಷನ್ ಕೊಟ್ಟ ಪತ್ರದಲ್ಲಿ ನಾವು ಸ್ಪಷ್ಟವಾಗಿ ಬರೆದಿದ್ದೇವೆ ನಾವು ವಯಸ್ಕರು ಹಾಗು ವಿವಾಹಯೋಗ್ಯ ಆಗಿದ್ದೇವೆ, ನಾವಿಬ್ಬರು ಮದುವೆಯಾಗಲು ಬಯಸಿದ್ದೇವೆ, ಪರಿವಾರದ ವಿರೋಧದ ಕಾರಣ ಇದರಲ್ಲಿ ಅಡಚಣೆ ನಿರ್ಮಾಣವಾಗುತ್ತಿದೆ ಮತ್ತು ಓಡಿ ಹೋಗಿ ಮದುವೆಯಾಗಲು ನಾವು ಬಯಸುದಿಲ್ಲ, ನಾವು ಕೋರ್ಟಲ್ಲಿ  ಮದುವೆ ಅರ್ಜಿ ಸಲ್ಲಿಸಿದ್ದೇವೆ, ಅದರ ಜೆರಾಕ್ಸ್ ಕಾಪಿ ಈ ಪತ್ರದ ಜೊತೆಯಲ್ಲೂ ಇದೆ, ನಮ್ಮ ಈ ಮದುವೆ ಪರಿವಾರದ ಒಪ್ಪಿಗೆಯೊಂದಿಗೆ ಗುರುಹಿರಿಯರ ಆಶಿರ್ವಾದದೊಂದಿಗೆ ಜರುಗುತ್ತದೆ ಎಂದು ಆಶಿಸುತ್ತೇವೆ, ಈ ಮಧ್ಯೆ ಏನೋ ಕಾರಣದಿಂದ ನಮ್ಮ ಜೀವಕ್ಕೆ ಹಾನಿಯಾದರೆ ನಮ್ಮ ಶರೀರದ ಪ್ರತಿಯೊಂದು ಅಂಗವನ್ನು ದಾನ ಮಾಡಬೇಕೆಂದು ಹಾಗು ನಮ್ಮ ಪ್ರೀತಿಯನ್ನು ಅಮರ ಮಾಡಬೇಕೆಂದು ನಾವು ಈ ದೇಶದ ಕಾನೂನಿನಿಂದ ಬೇಡುತ್ತೇವೆ". 

ಅಲ್ಲಿದ್ದ ಸುಮಾಳ ಪರಿವಾರದವರು ಸ್ತಬ್ಧರಾದರು, ಅವರ ಬಾಯಿಂದ ಮಾತೆ ಹೊರಡಲಿಲ್ಲ. 

ಸುಮೇಶ್ " ಆರು ತಿಂಗಳ ಸಮಯ ಇದೆ ಸರ್, ನಾನು ನಿಮ್ಮ ಉತ್ತರಕ್ಕಾಗಿ ಕಾಯುವೆ" ಎಂದು ಹೇಳಿ ಸುಮೇಶ್ ಆ  ಎರಡು ದಸ್ತಾವೇಜುಗಳನ್ನು ಮೇಜಲ್ಲಿ ಬಿಟ್ಟು ಮನೆಯಿಂದ ಹೊರ ನಡೆದ.


by ಹರೀಶ್ ಶೆಟ್ಟಿ, ಶಿರ್ವ 
(ಮುಗಿಯಿತು )

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...