Thursday, October 4, 2012

ಪ್ರೊ.ಡಾ. ಬಿ .ಎ.ವಿವೇಕ ರೈಯವರೊಂದಿಗೆ ಭೇಟಿ



(ಮೇಲಿನ ಚಿತ್ರದಲ್ಲಿ : ನಂದೀಶ್ ಶೇರೆಗಾರ್ ,ಪದ್ಯಾಣ ರಾಮಚಂದ್ರ, ಪ್ರೊ.ಡಾ. ಬಿ. ಎ. ವಿವೇಕ ರೈ, ಹರೀಶ್ ಶೆಟ್ಟಿ ಶಿರ್ವ,ಬಿ.ಕೆ. ಗಣೇಶ ರೈ ಮತ್ತು ಬಿ. ಜಿ. ಮೋಹನದಾಸ್ )                                                        
                                                           ( ಚಿತ್ರ ಕೃಪೆ : ಗಲ್ಫ್ ಕನ್ನಡಿಗ )
ತುಳುನಾಡಿನ ಪ್ರಖ್ಯಾತ ಸಾಹಿತಿ ಸಂಶೋಧಕರಾದ ಪ್ರೊ.ಡಾ. ಬಿ .ಎ.ವಿವೇಕ ರೈಯವರಂತ ಮಹಾನ ವ್ಯಕ್ತಿ ದುಬೈಗೆ ಬಂದದ್ದು ನಮ್ಮ ಭಾಗ್ಯ. ಪ್ರೊ.ಡಾ. ಬಿ .ಎ.ವಿವೇಕ ರೈಯವರನ್ನು ಭೇಟಿ ಆಗುವ ಸುಯೋಗ ನನ್ನ ಮಿತ್ರರಾದ ಶ್ರೀ ಪದ್ಯಾಣ ರಾಮಚಂದ್ರ ಅವರ ಮೂಲಕ ಆಯಿತು.  ಮಾನ್ಯ ಶ್ರೀ.ಪದ್ಯಾಣ ರಾಮಚಂದ್ರರವರು ಇಟ್ಟಿದ ಸಣ್ಣ ಪರಿಚಯ ಕೂಟದಲ್ಲಿ ಅವರನ್ನು ಭೇಟಿ ಆದ ನಂತರ ಕೆಲವೇ ಕ್ಷಣದಲ್ಲಿ ಅವರು ನಮ್ಮಲ್ಲಿ ಬೆರೆತು ಹೋದರು. ಒಂದು ಕ್ಷಣಕ್ಕೂ ನನಗೆ ಅವರನ್ನು ನಾನು ಮೊದಲ ಸರಿ ಭೇಟಿ ಆಗುತ್ತಿದ್ದೇನೆ ಎಂದು ಎನಿಸಲಿಲ್ಲ. ಅತ್ಯಂತ ಸರಳ, ನಮ್ರ  ವ್ಯಕ್ತಿತ್ವ  ಪ್ರೊ.ಡಾ. ಬಿ. ಎ.ವಿವೇಕ ರೈಯವರು ನನ್ನ ಆಹ್ವಾನಕ್ಕೆ ಗಲ್ಫ್ ಕನ್ನಡಿಗ ಸ್ಥಾಪಕ ಮತ್ತು ಮುಖ್ಯಸ್ಥ  ಮಾನ್ಯ ಶ್ರೀ .ಬಿ. ಜಿ. ಮೋಹನದಾಸ್ ಅವರೊಟ್ಟಿಗೆ ನನ್ನ ಮನೆಗೆ ಔತಣಕ್ಕೆ ಬಂದು ನಮ್ಮೊಟ್ಟಿಗೆ ಕೆಲವು ಗಂಟೆಯ ಕಾಲ ಇದ್ದು ನನಗೆ ಹಾಗು ನನ್ನ ಪರಿವಾರದವರಿಗೆ ಆಶಿರ್ವಾದ ನೀಡಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣ. ಮನೆಯಲ್ಲಿ ಮಾಡಿದ ಪಾರಂಪರಿಕ ಅಡುಗೆಯನ್ನು ಕಂಡು ಅವರಿಗೆ ಅತ್ಯಂತ ಸಂತೋಷವಾಯಿತು. ಸ್ವಲ್ಪ ಸಮಯದ ಅವಧಿಯಲ್ಲಿಯೇ ಅವರು ನಮಗೆ ನಮ್ಮ ತುಂಬಾ ಹತ್ತಿರದವರಂತೆ ಕಂಡರು. ಹೋಗುವಾಗ ಅವರು ನನ್ನ ಪರಿವಾರದವರಿಗೆ ಅತಿ ನಮ್ರತೆಯಿಂದ ಧನ್ಯವಾದ ನೀಡಿ, ಮನೆಯಲ್ಲಿದ್ದ ಮಕ್ಕಳನ್ನು ಪ್ರೋತ್ಸಾಹಿಸಿ ಕೊನೆಗೆ ನನ್ನನ್ನು ಅಪ್ಪಿ ನನ್ನನ್ನು ಆಶಿರ್ವಾದಿಸಿದ್ದರು. ಆದರೆ ಈ ಸಂತೋಷದ ಮಧ್ಯೆದಲ್ಲಿ ನನ್ನಿಂದ ಆದ ಒಂದು ದೊಡ್ಡ ಪ್ರಮಾದ ಏನೆಂದರೆ ನಾನು ಫೋಟೋ ತೆಗೆಯುವುದನ್ನು ಮರೆತದ್ದು, ಫೋಟೋಕ್ಕಾಗಿ ತೆಗೆದಿಟ್ಟ ಕ್ಯಾಮೆರಾ ಅವರು ಹೋದ ನಂತರ ನನಗೆ ಚುಡಾಯಿಸುತಿತ್ತು.  ಅವರೊಟ್ಟಿಗೆ ಕಳೆದ ಸಮಯ ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದು.
ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...