ಕೈ ತುಂಬಾ ಸಂಪಾದನೆ
ಸುಂದರ ಮನೆ
ಎಲ್ಲ ಸುಖ ಸೌಕರ್ಯ
ಒಳ್ಳೆ ಸಿರಿವಂತ
ಅವನೊಬ್ಬ ಬಡ ಶ್ರೀಮಂತ !
ಹಣಕ್ಕೆ ಇಲ್ಲ ಕೊರತೆ
ಇಲ್ಲ ಏನೂ ವ್ಯಥೆ
ಸಂಪತ್ತು ಪರಿಪೂರ್ಣ
ದೊಡ್ಡ ಆಸ್ತಿವಂತ
ಅವನೊಬ್ಬ ಬಡ ಶ್ರೀಮಂತ !
ಬೇಡ ಫೈವ್ ಸ್ಟರೂ ಊಟ
ಬೇಡ ಪಿಜ್ಜಾ ಬುರ್ಗರೂ
ವಡ ಪಾವ್ ಅಂದರೆ ಪಂಚ ಪ್ರಾಣ
ಮನೆಯ ಗಂಜಿ ಊಟ ಇಷ್ಟ ಅತ್ಯಂತ
ಅವನೊಬ್ಬ ಬಡ ಶ್ರೀಮಂತ !
ಬೇಡ ಸೂಟ್ ಬೂಟು
ಬೇಡ ಕಾರು ಮೋಟರೂ
ಕೊಲ್ಹಾಪುರಿ ಚಪ್ಪಲ್ ಅತಿ ಪ್ರಿಯ
ಬಿಳಿ ಅಂಗಿ ಪಂಚೆ ಧರಿಸುವುದು ಅವನಿಗಿಷ್ಟ
ಅವನೊಬ್ಬ ಬಡ ಶ್ರೀಮಂತ !
ತುಂಬು ಸಂಪತ್ತು
ಸಾಧಾರಣ ಬದುಕು
ಸಿಕ್ಕಿದವರಿಗೆ ನಮಸ್ಕಾರ ಮಾಡುವುದು ಇಷ್ಟ
ಹಾಯ್ ಹಲ್ಲೋ ಮಾಡುವುದಕ್ಕಿಂತ
ಅವನೊಬ್ಬ ಬಡ ಶ್ರೀಮಂತ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment