Saturday, October 6, 2012

ನಾನೊಂದು ಕೈಗೊಂಬೆ

ನಾನೊಂದು ಕೈಗೊಂಬೆ
ಆಡಿಸುವರು ನನ್ನನ್ನು ನನ್ನವರೆ
ಮನಸ್ಸು ಬಂದಂತೆ!

ನನ್ನದ್ದು ಅಸ್ತಿತ್ವ ಇದ್ದು
ಅಸ್ತಿತ್ವ ಇಲ್ಲ
ಜೀವ ಇದ್ದು ನಿರ್ಜೀವ!

ನನಗೂ ಇದೆ ಆಸೆ ಆಕಾಂಕ್ಷೆ
ಆದರೆ ನನ್ನ ಬಯಕೆಗೆ ಬೆಲೆ ಇಲ್ಲ
ನನ್ನ ಉಸಿರು ನನ್ನದಲ್ಲ!

ಅವರು ಹೇಳಿದಂತೆ ನಡೆಯಬೇಕು
ಅವರು ಹೇಳಿದಂತೆ ನುಡಿಯಬೇಕು
ನನ್ನ ನಡೆ ನುಡಿಗೆ ಮಾನ್ಯತೆ ಇಲ್ಲ!

ನನ್ನದ್ದು ಇದೆ ಹಲವು ಬೇಡಿಕೆ
ಆದರೆ ಆ ಬೇಡಿಕೆ ಈಡೇರುವುದು ಹೇಗೆ
ಮರುಭೂಮಿಯಲ್ಲಿ ಹೂವು ಅರಳಿಸುವುದು ಹೇಗೆ!

ಕೆಲವೊಮ್ಮೆ ಮನಸ್ಸು ನೋವಾಗಿ
ಮುಷ್ಕರ ಮಾಡಬೇಕೆಂದು ಆಗುತ್ತದೆ
ಆದರೆ ರಕ್ತ ಸಂಬಧದ ಬೇಡಿ ಮುರಿಯುವುದು ಹೇಗೆ!

ನಾನೊಂದು ಕೈಗೊಂಬೆ
ನನ್ನವರು  ಸ್ವಾರ್ಥಿಯೆಂದು ಗೊತ್ತಿದ್ದೂ
ನನ್ನವರ ಪ್ರೀತಿಗೆ ಬಲಿಯಾಗುತ್ತಿದ್ದೇನೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ