ಸಾವಿರಾರು ಕನಸುಗಳ
ಭಾರ ಹೊತ್ತು
ನಡೆದೆ ಪ್ರಯಾಣಕ್ಕೆ !
ತಾಣದ ಅರಿವಿಲ್ಲ
ಗುರಿಯ ಗೋಚರವಿಲ್ಲ
ಚಿಂತೆ ಏಕೆ ಒಣಗಿದ ಮರಕ್ಕೆ !
ಹಗಲು ರಾತ್ರಿ ಪ್ರವಾಸ
ಎಲ್ಲೆಲ್ಲೋ ನಿವಾಸ
ತಡೆ ಇಲ್ಲ ಗಾಳಿಯ ವೇಗಕ್ಕೆ !
ಜೀವನದಲಿ ಋತು ವಸಂತ ಬರುವುದು
ಸುಖದ ಪುಷ್ಪ ಅರಳುವುದು
ಅರ್ಹತೆ ಸಿಗುವುದು ಮಾಡಿದ ಶ್ರಮಕ್ಕೆ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment