Friday, October 5, 2012

ನನಗೂ ನಿನಗೂ

ಇಂದಿಗೂ ನಾಳೆಗೂ ಎಂದೆಂದಿಗೂ
ನನಗೂ ನಿನಗೂ
ಕೇವಲ ಒಂದೇ ಕೊರಗು
ನಾವಿಬ್ಬರು ಒಂದಾಗಲಿಲ್ಲವೆಂದು

ಏಕಾಂತದಲಿ ಇಲ್ಲಿ ನಾನು
ಏಕಾಂತದಲಿ ಅಲ್ಲಿ ನೀನು
ಆದರೆ ನನ್ನ ಮನಸ್ಸಲಿ ನೀನು
ನಿನ್ನ ಮನಸ್ಸಲಿ ನಾನು

ಕನಸು ಮುನಿಸಿದೆ
ಜೀವನ ಸೊರಗಿದೆ
ಆದರೆ ನನ್ನ ಜೀವದಲಿ ನೀನು
ನಿನ್ನ ಜೀವದಲಿ ನಾನು

ಯಾಕೆ ಈ ಪ್ರಪಂಚದ ಭಯ
ಪ್ರೀತಿ ಅಲ್ಲ ರೋಗ ಕ್ಷಯ
ಆದರೆ ರೋಗಿ ಇಲ್ಲಿ ನಾನು
ರೋಗಿ ಅಲ್ಲಿ ನೀನು

ಕೈದಿ ಇಲ್ಲಿ ನಾನು
ಕೈದಿ ಅಲ್ಲಿ ನೀನು
ಆದರೆ ನಿನ್ನ ವಶದಲ್ಲಿ ನಾನು
ನನ್ನ ವಶದಲ್ಲಿ ನೀನು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...