Photo: google
ಹಾಡಿನ ಕೊಂಡಿ:
https://youtu.be/UbrJ0QmAxiQ
ಲತಾ :
ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ,
ನಾನೇನು ಮಾಡಲಿ,
ಕಲ್ಪನೆಯಲ್ಲಿ ಯಾರೂ ನೆಲೆಸುವುದಿಲ್ಲ,
ನಾನೇನು ಮಾಡಲಿ,
ನೀನೆ ಹೇಳು, ಈಗ ಓ ನನ್ನ ಇನಿಯ, ನಾನೇನು ಮಾಡಲಿ,
ರಫಿ:
ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ,
ನಾನೇನು ಮಾಡಲಿ,
ನೀನೆ ಹೇಳು, ಓ ನನ್ನ ಪ್ರೀಯೆ, ನಾನೇನು ಮಾಡಲಿ,
ಲತಾ :
ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ,
-
ಲತಾ:
ಯಾರದ್ದೋ ಹೃದಯದಲಿ ನೆಲೆಸಿ ಹೃದಯವನ್ನು ಪೀಡಿಸುವುದು ಒಳ್ಳೆಯದಲ್ಲ,
ಪದೇಪದೇ ಕಣ್ಣಿಂದ ಕಣ್ಣು ಸೇರಿಸಿ ಅಡಗುವುದು ಒಳ್ಳೆಯದಲ್ಲ,
ಬಯಕೆಯ ಅರಳಿದ ಭಾಗೀಚೆಯನ್ನು ಸುಡುವುದು ಒಳ್ಳೆಯದಲ್ಲ,
ನನಗೆ ನಿನ್ನ ಹೊರತು ಯಾರೂ ಇಷ್ಟವಾಗುವುದಿಲ್ಲ, ನಾನೇನು ಮಾಡಲಿ,
ನೀನೆ ಹೇಳು, ಓ ನನ್ನ ಇನಿಯ, ನಾನೇನು ಮಾಡಲಿ,
ರಫಿ:
ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ,
ನಾನೇನು ಮಾಡಲಿ,
-
ರಫಿ:
ಪ್ರೀತಿ ಮಾಡಬಹುದು ಆದರೆ ರುಚಿಸಬೇಕಲ್ಲವೇ ಅದು,
ಹೃದಯಕ್ಕೇ ಭಾರವಾಗುವುದು ನೆರಳೂ ಕೇಶರಾಶಿಯದ್ದು,
ಸಾವಿರಾರೂ ದುಃಖಗಳಿವೆ ಪ್ರಪಂಚದಲ್ಲಿ, ನಮ್ಮದ್ದು ಅನ್ಯರದ್ದು,
ಪ್ರೀತಿಯ ದುಃಖವೇ ಕೇವಲ ಒಂದಲ್ಲ,, ನಾನೇನು ಮಾಡಲಿ,
ನೀನೆ ಹೇಳು, ಈಗ , ಓ ನನ್ನ ಪ್ರೀಯೆ, ನಾನೇನು ಮಾಡಲಿ,
ಲತಾ :
ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ,
-
ಲತಾ:
ತಣಿಸು ಹೃದಯದ ಜ್ವಾಲೆಯನು,
ಅಲ್ಲದೆ ಇದಕ್ಕೆ ನಿರಾಳವಾಗಿ ಗಾಳಿ ನೀಡು,
ಯಾರು ಇದರ ಮೌಲ್ಯ ಅರಿಯುವರೋ, ಅವರಿಗೆ ತನ್ನ ನಿಷ್ಠೆ ನೀಡು,
ನಿನ್ನ ಮನಸ್ಸಲ್ಲೇನಿದೆ ಕೇವಲ ಇಷ್ಟೇ ಹೇಳಿ ಬಿಡು,
ಈ ಬದುಕಿನ್ನು ಏಕಾಂಗಿ ಸಾಗುವುದಿಲ್ಲ, ನಾನೇನು ಮಾಡಲಿ,
ರಫಿ:
ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ,
ನಾನೇನು ಮಾಡಲಿ,
ಲತಾ :
ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ,
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಮೂಲ: ಸಾಹಿರ್ ಲುಧಿಯಾನ್ವಿ,
ಸಂಗೀತ: ಲಕ್ಷ್ಮಿಕಾಂತ್ ಪ್ಯಾರೇಲಾಲ್
ಹಾಡಿದವರು : ಲತಾ ಮಂಗೇಶ್ಕರ್, ಮುಹಮ್ಮದ್ ರಫಿ
ಚಿತ್ರ: ಈಜ್ಜತ್
लता:: ये दिल तुम बिन, कहीं लगता नहीं, हम क्या करें
ये दिल तुम बिन, कहीं लगता नहीं, हम क्या करें
तसव्वुर में कोई बसता नहीं, हम क्या करें
तुम्ही कह दो, अब ऐ जानेवफ़ा, हम क्या क
रफ़ी: लुटे दिल में दिया जलता नहीं, हम क्या करें
तुम्ही कह दो, अब ऐ जाने-अदा, हम क्या क
लता: ये दिल तुम बिन, कहीं लगता नहीं, हम क्या करें
किसी के दिल में बस के दिल को, तड़पाना नहीं अच्छा
निगाहों को छलकते देख के छुप जाना नहीं अच्छा
उम्मीदों के खिले गुलशन को, झुलसाना नहीं अच्छा
हमें तुम बिन, कोई जंचता नहीं, हम क्या करें
तुम्ही कह दो, अब ऐ जानेवफ़ा, हम क्या करें
रफ़ी: लुटे दिल में दिया जलता नहीं, हम क्या
मुहब्बत कर तो लें लेकिन, मुहब्बत रास आये भी -
दिलों को बोझ लगते हैं, कभी ज़ुल्फ़ों के साये भी
हज़ारों ग़म हैं इस दुनिया में, अपने भी पराये
मुहब्बत ही का ग़म तन्हा नहीं, हम क्या करें
तुम्ही कह दो, अब ऐ जाने-अदा, हम क्या करें
लता: ये दिल तुम बिन, कहीं लगता नहीं, हम क्या
बुझा दो आग दिल की, या इसे खुल कर हवा दे दो -
रफ़ी: जो इसका मोल दे पाये, उसे अपनी वफ़ा दे दो
लता: तुम्हारे दिल में क्या है बस, हमें इतना पता दे दो
के अब तन्हा सफ़र कटता नहीं, हम क्या करें
रफ़ी: लुटे दिल में दिया जलता नहीं, हम क्या क
लता: ये दिल तुम बिन, कहीं लगता नहीं, हम क्या करेंरें, २करेंभी २करें,, - २रेंरें