Saturday, May 31, 2014

ಇನಿಯನಿಲ್ಲದೆ ಮನೆ ಖಾಲಿ ಖಾಲಿ

ಇನಿಯನಿಲ್ಲದೆ ಮನೆ ಖಾಲಿ ಖಾಲಿ 
ಪಥಿಕನಿಲ್ಲದೆ ಖಾಲಿ ಪಥಗಳ ಹಾಗೆ 
ಸುಗಂಧವಿಲ್ಲದೆ ಹೂಗಳ ಹಾಗೆ 
ಇನಿಯನಿಲ್ಲದೆ....

ಖಾಲಿ ಹಗಲು ಕತ್ತಲ ಇರುಳು
ಕಣ್ಣೀರಿಂದ ತೇವಗೊಂಡಿದೆ ಕಣ್ರೆಪ್ಪೆಗಳು 
ಪ್ರತಿಯೊಂದು ಶಬ್ದ ಕೇಳಿ ಹೆದರುವೆ 
ನಿನ್ನನ್ನು ಕಾಯುತ್ತಿದೆ ನನ್ನ ಕಂಗಳು 
ಚಂದ್ರನಿಲ್ಲದೆ ಖಾಲಿ ರಾತ್ರಿಯ ಹಾಗೆ 
ಹೂವಿಲ್ಲದೆ ಖಾಲಿ ಉದ್ಯಾನದ ಹಾಗೆ
ಇನಿಯನಿಲ್ಲದೆ....

ಹಬ್ಬುತ್ತಿದೆ ಮೇಘ ಕತ್ತಲ
ಏನೂ ಮನಸ್ಸಿಗೆ ಇಷ್ಟವಾಗುವುದಿಲ್ಲ
ಏಕಾಂಗಿ ಎಂದು ತಿಳಿದು
ನನ್ನ ಸೆರೆಹಿಡಿಯುತ್ತದೆ ನೆನಪ ನೆರಳೆಲ್ಲ
ಚಂದ್ರನಿಲ್ಲದೆ ಖಾಲಿ ರಾತ್ರಿಯ ಹಾಗೆ
ಹೂವಿಲ್ಲದೆ ಖಾಲಿ ಉದ್ಯಾನದ ಹಾಗೆ
ಇನಿಯನಿಲ್ಲದೆ..

ಕಣ್ಣೀರನ್ನು ಹೀಗೆ ಹರಿಯದಿರು
ಈ ಮುತ್ತನ್ನು ತೊರೆಯದಿರು
ಸಮಯದ ಧಾರೆ ನಿಲ್ಲುವುದಿಲ್ಲ
ಕ್ಷಣ ಕ್ಷಣ ಬದಲಾಗುತ್ತದೆ ಈ ಜಗವೆಲ್ಲ
ಚಂದ್ರನಿಲ್ಲದೆ ಖಾಲಿ ರಾತ್ರಿಯ ಹಾಗೆ
ಹೂವಿಲ್ಲದೆ ಖಾಲಿ ಉದ್ಯಾನದ ಹಾಗೆ
ಇನಿಯನಿಲ್ಲದೆ..

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್/ ಭುಪಿಂದರ್ ಸಿಂಗ್
ಸಂಗೀತ : ಬಪ್ಪಿ ಲಹರಿ
ಚಿತ್ರ: ಆಂಗನ್ ಕಿ ಕಲಿ
saiya bina ghar suna, suna, saiya bina ghar suna
rahi bina jaise suni galiya, bin khushabu jaise suni kaliya
sainyan bina ghar suna

suna din kali ratiya, asuvan se bhigi patiya
har aahat pe dari dari, rah take meri ankhiyan
chand bina jaise suni ratiya, phul bina jaise suni bagiya
saina bina ghar suna

andhiyare badal chhaye, kuchh bhi na man ko bhaye
dekh akeli ghere mujhe yadon ke saye saye
chand bina jaise suni ratiya, phul bina jaise suni bagiya
saiya bina ghar suna

aansu yu na bahao, ye moti na lutao
rukati nahi hain waqt ki dhara, pala pala badale jaga ye sara
chand bina jaise suni ratiya, phul bina jaise suni bagiya
saiya bina ghar suna

http://www.youtube.com/watch?v=XhRUGJ2AqRU

Thursday, May 29, 2014

ಅಂತರ ಯಾವುದೇ ಇರದಿರಲಿ

ಅಂತರ ಯಾವುದೇ ಇರದಿರಲಿ
ಇಂದು ಇಷ್ಟು ಸನಿಹ ಬಾ ನೀನು
ನಾ ನಿನ್ನಲ್ಲಿ ವಿಲೀನವಾಗುವೆ
ನನ್ನಲ್ಲಿ ವಿಲೀನವಾಗು ನೀನು

ಉಸಿರ ಬೆಚ್ಚನೆಯಿಂದ
ಏಕಾಂತ ಕರಗಲಿ
ಜ್ವಲಿಸುವ ಅಧರದ
ಬಯಕೆ ಈಡೇರಲಿ
ಪ್ರೀತಿಯ ಮುಗಿಲಾಗಿ
ನನ್ನ ಮೇಲೆ ಸುರಿ ನೀನು
ನಾ ನಿನ್ನಲ್ಲಿ ವಿಲೀನವಾಗುವೆ
ನನ್ನಲ್ಲಿ ವಿಲೀನವಾಗು ನೀನು

ಇಂತಹ ಅವಸ್ಥೆ
ಮೊದಲಿರಲಿಲ್ಲ ಬದುಕಲಿ
ಹೃದಯ ಆಗಿ ಮಿಡಿಯುವೆ
ನೀನು ನನ್ನ ಎದೆಯಲಿ
ಎಂದೂ ನನ್ನನ್ನು ಬಿಡಲಾರೆ
ನನಗೆ ಭಾಷೆ ಕೊಡು ನೀನು
ನಾ ನಿನ್ನಲ್ಲಿ ವಿಲೀನವಾಗುವೆ
ನನ್ನಲ್ಲಿ ವಿಲೀನವಾಗು ನೀನು

ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಕರ್ತವ್ಯ

ho ho ho
doori
doori na rahe koi
aaj itne kareeb aaoo
doori na rahe koi
aaj itne kareeb aaoo
main tum mein samaa jaaun
tum mujh mein samaa jaao
main tum mein sama jaaun
tum mujh mein samaa jaao
doori na rahe koi
aaj itne kareeb aaoo
main tum mein sama jaaun
tum mujh mein samaa jaao

saanson ki haraarat se
tanhaai pighal jaaye
jalte hue hoothon ka
armaan nikal jaaye
saason ki hararat se
tanhaai pighal jaaye
jalte hue hoothon ka
armaan nikal jaaye
armaan nikal jaaye
chaahat ki ghaata ban kar
yoon mujhpe baras jaao
main tum mein samaa jaaun
tum mujhe mein samaa jaao
main tum mein samaa jaaun
tum mujhe mein samaa jaao

yeh baat na thi ab se pahle
kabhi jeene mein
yeh baat na thi ab se pahle
kabhi jeene mein
dil ban ke dhadkte ho
tumhi mere seene mein
kabhi saath na chodoge
tum meri kasam khaao
main tumein sama jaaun
tum mujhe mein sama jaao
doori na rahe koi
aaj itne kareeb aaoo
main tumein sama jaaun
tum mujhe mein sama jaao
main tumein samaa jaun
tum mujhe mein samaa jaao
http://www.youtube.com/watch?v=ebJ2l8EgguU&feature=kp

Wednesday, May 28, 2014

ರಾಗ ನೌಕೆ

ಸುಮಧುರ ಎನಿಸುತ್ತಿದೆ 
ಜಲತರಂಗದಲಿ ತೇಲುತ್ತಿದೆ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಅಪರಿಚಿತ ರಾಗ ನೌಕೆ

ಹೊಸ ಧ್ವನಿ
ನವೀನ ಸಂಗೀತ 
ಮನಸ್ಸು ತಲ್ಲೀನ 
ಹೃದಯ ನಲಿಯುತ್ತಿದೆ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಅದ್ಭುತ ರಾಗ ನೌಕೆ 

ಧ್ಯಾನ 
ಮೌನ 
ಇಂಪಾದ ವಾತಾವರಣ 
ಎಲ್ಲೊ ಅಸ್ತಿತ್ವ 
ಹಗುರ ಹಗುರ ಅನುಭವ 
ಅದೆಲ್ಲಿಗೆ ಕೊಂಡೊಯ್ಯುತ್ತಿದೆ ಎನಗೆ 
ಈ ಸುಸ್ವರದ ರಾಗ ನೌಕೆ 

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

Monday, May 26, 2014

ಹೇಗಿದ್ದಾರೋ ಆ ಜನರು

ಹೇಗಿದ್ದಾರೋ ಆ ಜನರು
ಪ್ರೀತಿಯ ಬದಲು ಅವರಿಗೆ ಪ್ರೀತಿ ಸಿಕ್ಕಿತು
ನನಗಂತೂ ಹೂವನ್ನು ಬಯಸಿದಾಗ
ಮುಳ್ಳುಗಳ ಹಾರ ಸಿಕ್ಕಿತು
ಹೇಗಿದ್ದಾರೋ ಆ ಜನರು....

ಸಂತೋಷದ ಗಮ್ಯ ಹುಡುಕಿದಾಗ
ಕಷ್ಟಗಳ ಧೂಳು ಸಿಕ್ಕಿತು
ಒಲವಿನ ಹಾಡನ್ನು ಬಯಸಿದಾಗ
ನೋವಿನ ಜಡತೆ ಸಿಕ್ಕಿತು
ಹೃದಯದ ಭಾರ ಎರಡು ಪಟ್ಟಾಯಿತು
ದುಃಖದ ಪಾಡು ಸಿಕ್ಕಿತು
ಹೇಗಿದ್ದಾರೋ ಆ ಜನರು....

ಅಗಲಿದರು ಪ್ರತಿಯೊಂದು ಗೆಳೆಯರು
ನೀಡಿ ಕ್ಷಣ ಎರಡು ಕ್ಷಣದ ಜೊತೆಯನ್ನು
ಯಾರಿಗೆ ಅಷ್ಟು ಬಿಡುವಿದೆ
ಹಿಡಿಯಲು ಮರುಳರ ಕೈಯನ್ನು
ನನಗೆ ನನ್ನ ನೆರಳು ಕೂಡ
ಅನೇಕವೇಳೆ ಬೇಸರದಲಿ ಸಿಕ್ಕಿತು
ಹೇಗಿದ್ದಾರೋ ಆ ಜನರು....

ಇದನ್ನೇ ಬದುಕೆಂದು ಹೇಳುತ್ತಾರೆಂದರೆ
ಹೀಗೆಯೇ ಬದುಕಿಕೊಳ್ಳುವೆ
ಬಾಯನ್ನು ಮುಚ್ಚಿಕೊಂಡು
ತುಟಿಯನ್ನು ಹೊಲಿದು
ಕಣ್ಣೀರು ಕುಡಿಯುವೆ
ದುಃಖದಿಂದ ಈಗ ಎಂತಹ ಹೆದರಿಕೆ
ದುಃಖ ನೂರು ಸಲ ಸಿಕ್ಕಿತು
ಹೇಗಿದ್ದಾರೋ ಆ ಜನರು....

ಮೂಲ : ಸಾಹೀರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಹೇಮಂತ್ ಕುಮಾರ್
ಸಂಗೀತ :  ಎಸ್ . ಡೀ. ಬರ್ಮನ್
ಚಿತ್ರ : ಪ್ಯಾಸಾ

जाने वो कैसे लोग थे जिनके प्यार को प्यार मिला
हमने तो जब कलियाँ माँगी काँटों का हार मिला

खुशियों की मंज़िल ढूँढी तो ग़म की गर्द मिली
चाहत के नग़मे चाहे तो आहें सर्द मिली
दिल के बोझ को दूना कर गया जो ग़मखार मिला
हमने तो जब...

बिछड़ गया हर साथी देकर पल दो पल का साथ
किसको फ़ुरसत है जो थामे दीवानों का हाथ
हमको अपना साया तक अक्सर बेज़ार मिला
हमने तो जब...

इसको ही जीना कहते हैं तो यूँ ही जी लेंगे
उफ़ न करेंगे लब सी लेंगे आँसू पी लेंगे
ग़म से अब घबराना कैसा, ग़म सौ बार मिला
हमने तो जब...
http://www.youtube.com/watch?v=BGu5vBX4qyc

Sunday, May 25, 2014

ಅಪರಿಚಿತ ಯಾರು ನೀನು

ಅಪರಿಚಿತ ಯಾರು ನೀನು
ನಿನ್ನನ್ನು ನೋಡಿದ ಕ್ಷಣದಿಂದ
ಜಗವೆಲ್ಲ ನನ್ನ ಕಂಗಳಲ್ಲಿ ಹರಿದು ಬಂದಿದೆ
ಅಪರಿಚಿತ ಯಾರು ನೀನು....

ಪ್ರತಿ ಗೀತೆಯಲಿ ನಿನ್ನ ಉಪಸ್ಥಿತಿ
ರಾಗದ ಹಾಗೆ
ನೀನು ನನಗೆ ಸಿಕ್ಕಿದೆ ಸುಮಗಳ
ನಗುವಿನ ಹಾಗೆ
ಹೀಗೆ ಅನಿಸುತ್ತದೆ ಎಷ್ಟೋ ವರ್ಷದಿಂದ
ಬೆಳಕಾಗಿದೆ ಇಂದು
ಅಪರಿಚಿತ ಯಾರು ನೀನು....

ಕನಸುಗಳ ರಂಗು ವಾಸ್ತವದಲ್ಲಿ
ಕಂಡು ಬಂದಿದೆ
ಹೃದಯದಲಿ ಮಿಡಿತದ ಹಾಗೆ
ಯಾರೋ ಇಳಿದಾಗಿದೆ
ಇಂದು ಪ್ರತಿ ಉಸಿರಲ್ಲಿ
ಶಹನಾಯಿಯ ಧ್ವನಿ ತರಂಗಿಸುತ್ತಿದೆ
ಅಪರಿಚಿತ ಯಾರು ನೀನು....

ಯಾವುದೇ ಶಬ್ದದ ಹಾಗೆ
ಕತ್ತಲಲ್ಲಿ ಮಿನುಗುತ್ತದೆ
ರಾತ್ರಿ ಬಂದಾಗ ಏಕಾಂತ
ಸುವಾಸನೆ ಬೀರುತ್ತದೆ
ನಿನ್ನ ಸಾಕ್ಷತ್ಕಾರವೆ ಅಥವಾ
ಇದು ಪ್ರೀತಿಯ ಹೊಸ ರಾಗವೆ
ಅಪರಿಚಿತ ಯಾರು ನೀನು....

ಮೂಲ :ವಿಟ್ಟಲ್ ಬಾಯಿ ಪಟೇಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಉಷಾ ಖನ್ನ
ಚಿತ್ರ : ಸ್ವೀಕಾರ್ ಕಿಯಾ ಮೈನೆ

(ajnabi kaun ho tum, jabse tumhe dekha hai
saari duniya meri aankhon mein simat aayi hai) -2

tum to har geet mein shaamil the, tarannum ki tarah
tum mile ho mujhe phoolon ka tabassum banke
aaisa lagta hai ke barso se, shama aaj aayi hai
ajnabi kaun ho tum ...

khwaab ka rang haqeeqat mein nazar aaya hai
dil mein dhadkan ki tarah koi utar aaya hai
aaj har saans mein shehanaaiyo si leharaayi hai
ajnabi kaun ho tum ...

koi aahat see, andheron mein chamak jaati hai
raat aati hai, to tanhaai mehak jaati hai
tum mile ho ya mohabbat ne gazal gaai hai
ajnabi kaun ho tum ..
http://www.youtube.com/watch?v=6xYEWEhv8og

ಬಂಧಿಸಿಟ್ಟ ಭಾವನೆಗಳು

ಗೆಳತಿ, 
ಹರಿಯ ಬಿಡು 
ಈ ಸಾಗರದಲಿ 
ನಿನ್ನ ಮನಸ್ಸಲ್ಲಿದ ಕಲ್ಮಷಗಳನ್ನು 
ಶುದ್ಧವಾಗಲಿ ಅಂತರಂಗ 
ಪುನಃ ಸ್ಥಾಪಿಸು 
ಮುರಿದ ನಂಟನ್ನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ಮನವೊಲಿಸುವುದು ಕಷ್ಟ 
ಅರಿವಿದೆ ನನಗೆ 
ಆದರೆ 
ಇದರ ಅಗತ್ಯವಿದೆ 
ಇದರ ಸಹ 
ಅರಿವಿದೆ ನನಗೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಬಿಟ್ಟು ಬಿಡುವೆ 
ಈ ಪ್ರಯತ್ನಗಳನ್ನೆಲ್ಲ
ಇನ್ನು ಹೆಚ್ಚು ಸಮಯ
ಈ 
ಹಗೆಯ ಜ್ವಾಲೆಯನ್ನು 
ಸಹಿಸಲಾರೆ ನಾನು 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 

ಈ ಶರಧಿಯೂ 
ಈಗ ಶಾಂತತೆ ನೀಡುವುದಿಲ್ಲ 
ನನ್ನ ಮನಸ್ಸ ತಳಮಳದಿಂದ 
ಅದಕ್ಕೂ 
ನೆಮ್ಮದಿ ಇಲ್ಲದಾಗಿದೆ 

by ಹರೀಶ್ ಶೆಟ್ಟಿ,ಶಿರ್ವ
---
ಗೆಳತಿ, 
ನೀ ನನಗೆ ನೀಡುವ 
ಪ್ರತಿಯೊಂದು ನೋವಿನ
ಮದ್ದು ನಿನ್ನ ಹತ್ತಿರವೇ ಇದೆ 
ನನ್ನ ಬಳಿ
ಪಶ್ಚಾತಾಪದ 
ಹೊರತು ಬೇರೇನಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

ಚಿತ್ರ ಕೃಪೆ : ಗೂಗಲ್ 

Saturday, May 24, 2014

ಏನು ಮಾಡಲಿ ಸಖಿ

ಏನು ಮಾಡಲಿ ಸಖಿ
ಬರಲಿಲ್ಲ ಇನಿಯ
ಹುಡುಕುತ್ತಿದೆ ನಲ್ಲನನ್ನು
ವ್ಯಥಿತ ಕಂಗಳು-೨
ಬರಲಿಲ್ಲ ಇನಿಯ

ಯಾವುದೇ ಶಬ್ದ ಕೇಳಿದಾಗ
ಓಡುತ್ತದೆ ಈ ಮನಸ್ಸು
ನೋಡು ಎಂದೂ ಮುರಿಯದಿರಲಿ
ಪ್ರೀತಿಯ ಈ ನಂಟು
ಈ ಚಂಚಲ ಪ್ರೀತಿ ನಮ್ಮ
ಬಚ್ಚಿಡಲಾಗದು-೨
ನೀನು ವರ್ಷ
ನಾನು ನಿನ್ನ ಮುಗಿಲಯ್ಯ
ಬರಲಿಲ್ಲ ಇನಿಯ
ಏನು ಮಾಡಲಿ ಸಖಿ
ಬರಲಿಲ್ಲ ಇನಿಯ

ಮುಂಜಾನೆ ಆಯಿತು
ಸಂಜೆಯೂ ಕವಿಯಿತು
ಸಮಯ ತನ್ನ ವೇಗದಲಿ
ಈ ಜಗವೆಲ್ಲ
ಸೋತರು ನಿದ್ರೆಯಿಂದ
ನನಗೆ ನಿದ್ರೆ ಬರಲಿಲ್ಲ
ನಾನು ಹೆದರುವೆ
ಭಯ ಭಯ ಪಡುವೆ
ಆದರೆ ಅವರು ಬರಲಿಲ್ಲ-೨
ರಾಧೆ ಕರೆಯುವಳು
ಎಲ್ಲಿ ಕಳೆದು ಹೋಗಿರುವೆ ನೀನು ಕೃಷ್ಣಯ್ಯ
ಬರಲಿಲ್ಲ ಇನಿಯ
ಏನು ಮಾಡಲಿ ಸಖಿ
ಬರಲಿಲ್ಲ ಇನಿಯ

ಮೂಲ : ಅಮಿತ್ ಖನ್ನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ರಾಜೇಶ್ ರೋಶನ್
ಚಿತ್ರ :ಸ್ವಾಮಿ

Kaa Karu Sajanee
Aaye Naa Baalam
khoj Rahee Hain Piyaa,
Paradesee Aakhiyaan
Aaye Naa Baalam

jab Bhee Koee Aahat Howe
Manawaa Moraa Bhaage
dekho Kaee Toote Nahee
Pareet Ke Ye Dhaage
hai Matawaaree, Pareet Humaaree
Chhupe Naa Chhupaaye
saawan Ho Tum
Main Hoo Toree Badareeyaa
Aaye Naa Baalam
Kaa Karu Sajanee
Aaye Naa Baalam

bhor Bhayee
Saanz Dhalee
Samay Ne Lee Angadaee
ye Jag Saaraa Neend Se Haaraa
Mohe Neend Naa Aayee
mai Ghabaraoo, Dar Dar Jaaoo,
Aaye Wo Naa Aaye
raadhaa Bulaaye Kahaa,
Khoye Ho Kanhaiyaa
Aaye Naa Baalam
Kaa Karu Sajanee
Aaye Naa Baalam
http://www.youtube.com/watch?v=x5AantVDn4E

Thursday, May 22, 2014

ಈಗ ಯಾವುದೇ


ಈಗ ಯಾವುದೇ ಉದ್ಯಾನ ನಾಶವಾಗದಿರಲಿ
ಈಗ ದೇಶ ಸ್ವತಂತ್ರವಾಗಿದೆ-೩
ಆತ್ಮ ಗಂಗೆಯ ಹಿಮಾಲಯದ ದೇಹ
ಸ್ವತಂತ್ರವಾಗಿದೆ

ಕೃಷಿ ಭೂಮಿ ಚಿನ್ನ ಉದ್ಭವಿಸುತ್ತಿದೆ
ಕಣಿವೆಗಳು ಮುತ್ತು ಉದುರಿಸುತ್ತಿದೆ
ಇಂದು ಗೌತಮನ ಭೂಮಿ
ತುಳಸಿಯ ವನ ಸ್ವತಂತ್ರವಾಗಿದೆ

ದೇವಾಲಯದಲ್ಲಿ ಶಂಖನಾದ ಕೇಳಲಿ
ಮಸಿದಿಯಲಿ ಅಜಾನ್ ಆಗಲಿ
ವಿವಿಧ ಧರ್ಮಗಳು
ಬ್ರಾಹ್ಮಣ ಸಂಸ್ಕೃತಿ ಸ್ವತಂತ್ರವಾಗಿದೆ

ಯಾವುದೇ ಭ್ರಷ್ಟಾಚಾರ
ಈಗ ಈ ದೇಶದಲಿ ಇರಬಾರದು
ಇಂದು ಎಲ್ಲರಗೋಸ್ಕರ-೨
ಧರತಿಯ ಸಂಪತ್ತು ಸ್ವತಂತ್ರವಾಗಿದೆ

ಈಗ ಯಾವುದೇ ಹೂದೋಟ ನಾಶವಾಗದಿರಲಿ-೨
ಈಗ ದೇಶ ಸ್ವತಂತ್ರವಾಗಿದೆ

ಮೂಲ : ಸಾಹೀರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಜೈದೇವ್
ಚಿತ್ರ : ಮುಝೆ ಜೀನೇ ದೋ

Ab koi gulshan na ujade
Ab koi gulshan na ujade, ab watan aazaad hai
Ab koi gulshan na ujade, ab watan aazaad hai
Ab koi gulshan na ujade, ab watan aazaad hai
Rooh gangaa ki, himaala ka badan aazaad hai
Rooh ganga ki, himaala ka badan aazaad hai
Rooh gangaaaaaaaaaaaaaa
Aaaaa aaaaaaa
Khetiyaan sonaa ugaayen
Vaadiyaan moti lutaayen
Khetiyaan sonaa ugaayen
Vaadiyaan moti lutaayen
Aaj Gautam ki zameen, Tulsi ka ban aazaad hai
Aaj Gautam ki zameen, Tulsi ka ban aazaad hai
Ab koi gulshan na ujade, ab watan aazaad hai
Ooooooooo Ooooooooo
Mandiron mein shankh baaje
Masjidon mein ho azaan
Aaaaaaaa
Mandiron mein shankh baaje
Masjidon mein ho azaan
Sheikh ka dharam
Sheikh ka dharam aur deen-e-burhaman aazaad hai
Sheikh ka dharam aur deen-e-burhaman aazaad hai
Ab koi gulshan na ujade, ab watan aazaad hai
Aaaaaaaaaaaaaa
Loot jaisi bhi ho ab is des mein rehne na paaye
Loot jaisi bhi ho ab is des mein rehne na paaye
Aaj sab ke waastey dharti ka dhan aazaad hai
Aaj sab ke waastey dharti ka dhan aazaad hai
Ab koi gulshan na ujade, ab watan aazaad hai
Ab koi gulshan na ujade, ab watan aazaad hai
Ab koi gulshan na ujade
Gulshan na ujade
Ab koi gulshan na ujade, ab watan aazaad hai
Ab koi gulshan na ujade, ab watan aazaad hai
Ab koi gulshan na ujade, ab watan aazaad hai
http://www.youtube.com/watch?v=IzPXSuYuc_4

Wednesday, May 21, 2014

ಸತ್ಯಂ ಶಿವಂ ಸುಂದರಂ

ಈಶ್ವರ ಸತ್ಯ
ಸತ್ಯವೇ ಶಿವ
ಶಿವನೆ ಸುಂದರ

ಎದ್ದೇಳಿ ನೋಡಿ-೨
ಜೀವನ ಜ್ಯೋತಿ ಬೆಳಗುತ್ತಿದೆ

ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ
ಸುಂದರಂ
ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ

ರಾಮ ಅವಧದಲಿ
ಕಾಶಿಯಲಿ ಶಿವ
ಕೃಷ್ಣ ಮೋಹನ ವೃಂದಾವನದಲಿ
ಕೃಪೆ ಮಾಡಿ ದೇವರೇ
ಇವರನ್ನು ನೋಡಿ
ಪ್ರತಿ ಮನೆಯ ಅಂಗಳದಲಿ
ರಾಧೇ ಮೋಹನ ಶರಣಂ

ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ

ಒಂದೇ ಸೂರ್ಯ
ಒಂದೇ ಗಗನ
ಒಂದೇ ಧರತಿ ಮಾತೆ
ಕೃಪೆ ಮಾಡಿ ದೇವರೇ
ಒಂದಾಗಲಿ ಎಲ್ಲರೂ
ಒಂದೇ ಬಂಧದಲಿ ಹೊಂದಿಕೊಳ್ಳಲಿ ಎಲ್ಲರೂ
ರಾಧೇ ಮೋಹನ ಶರಣಂ

ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ

ಎದ್ದೇಳಿ ನೋಡಿ-೪
ಜೀವನ ಜ್ಯೋತಿ ಬೆಳಗುತ್ತಿದೆ

ಸತ್ಯಂ ಶಿವಂ ಸುಂದರಂ
ಸತ್ಯಂ ಶಿವಂ ಸುಂದರಂ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಸತ್ಯಂ ಶಿವಂ ಸುಂದರಂ

--Female--
ishwar Satya Hai
satya Hi Shiv Hai
shiv Hi Sundar Hai
jaago Uth Kar Dekho
jeet Jyot Ujaagar Hai
satyam Shivam Sundaram, Satyam Shivam Sundaram
satyam Shivam Sundaram, Sundaram, Aah, Aah Aah
satyam Shivam Sundaram, Satyam Shivam Sundaram

--Chorus--
(Ishwar Satya Hai)

--Female--
sundaram

--Chorus--
(Satya Hi Shiv Hai)

--Female--
sundaram

--Chorus--
(Shiv Hi Sundar Hai)

--Female--
aah Aah Aah Aah

--Chorus--
(Satyam Shivam Sundaram)

--Female--
satyam Shivam Sundaram, Satyam Shivam Sundaram


raam Avadh Mein
raam Avadh Mein, Kaashi Mein Shiv Kanhaa Vrindaavan Mein
dayaa Karo Prabhu, Dekho Inko - 2
har Ghar Ke Aangan Mein
radha Mohan Sharanam
satyam Shivam Sundaram, Aah

--Chorus--
satyam Shivam Sundaram

--Female--
aah Aah, Aah Aah Aah Aah, Aah Aah Aah, Oh Oh Oh, Aah Aah Aah

ek Soorya Hai
ek Soorya Hai, Ek Gagan Hai, Ek Hi Dharti Mata
dayaa Karo Prabhu, Ek Bane Sab - 2
sab Ka Ek Se Naata
radha Mohan Sharanam
satyam Shivam Sundaram, Aah

--Chorus--
(Satyam Shivam Sundaram)

--Female--
ishwar Satya Hai

--Chorus--
(Satyam Shivam Sundaram)

--Female--
satya Hi Shiv Hai, Shiv Hi Sundar Hai, Aah Aah
satyam Shivam Sundaram, Aah Satyam Shivam Sundaram

--Chorus--
(Satyam Shivam Sundaram - 4)

--Female--
aah Aah, Aah Aah, Aah Aah Aah Aah, Aah, Aah, Aah Aah Aah
oh Oh Oh Oh, Aah Aah Aah Aah, Oh Oh Oh Oh, Aah Aah Aah, Oh Oh Oh Oh
 http://www.youtube.com/watch?v=BdU3qP5EYoY

Monday, May 19, 2014

ನಲ್ಲ ಇಲ್ಲದೆ

ನಲ್ಲ ಇಲ್ಲದೆ-೩
ಕೊಳಲು
ನುಡಿಯುವುದಿಲ್ಲ-೩
ನಲ್ಲ ಇಲ್ಲದೆ.....

ನಲ್ಲ ಹೀಗೆ ಮುನಿಸಿದರಂದರೆ
ನನ್ನ ತುಟಿಯಿಂದ ಸಂಗೀತ ಮುನಿಸಿದೆ ಇಂದು-೨
ಹಾಡಿದಾಗ ನನಗೆ ಬಾಸವಾಗುತ್ತದೆ
ನನ್ನ ಮನಸ್ಸಿನ ಪ್ರತಿಯೊಂದು ಗೀತೆ ಸುಳ್ಳೆಂದು
ಹೀಗೆ ಅಗಲುತ್ತಾರೆ, ಹೀಗೆ ಅಗಲುತ್ತಾರೆ ನನ್ನಿಂದ ಚೆಲುವ
ನಲ್ಲ ಇಲ್ಲದೆ.....

ನೀನಿಲ್ಲದೆ ಬೇಸರ ಎಲ್ಲೆಡೆ ನನ್ನ ನಗರದಲಿ ಪ್ರೀತಿಯ -೨
ಅಂದರೆ ಕೋಗಿಲೆ ಮೌನವಾಗಿದೆ
ಮಯೂರ ನೃತ್ಯ ಮರೆತು ಹೋಗಿದೆ ವನದಲಿ ಇನಿಯ
ಹಗಲಲ್ಲೂ ಬೇಸರ, ಬೇಸರ ರಾತ್ರಿಯಲ್ಲೂ
ನಲ್ಲ ಇಲ್ಲದೆ.....

ಮೂಲ :ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಎಸ್. ಡೀ. ಬರ್ಮನ್
ಚಿತ್ರ : ಅಭಿಮಾನ್

Piya Bina ... Piya Bina Piya Bina, Basiya
Baaje Na Baaje Na Baaje Na, Piya Bina ...

Piya Aise Ruthe, Ke Honthon Se Mere, Sangeet Ruutha
Kabhi Jab Main Gaaun, Lage Mere Man Kaa, Har Git Jhootha
Aise Bichhade, Ho ... Aise Bichhade Mose Rasiya
Piya Bina ... Piya Bina Piya Bina, Basiya
Baaje Na Baaje Na Baaje Na, Piya Bina ...

Tumhaari Sada Bin, Nahin Ek Suni, Mori Nagariya
Ke Chup Hai Papiha, Mayur Bol Bhule, Ban Me Saanvariya
Din Hai Suuna, Aa ... Din Hai Suuna Suni Ratiya
Piya Bina ... Piya Bina Piya Bina, Basiya
Baje Na Baje Na Baje Na, Piya Bina ...
http://www.youtube.com/watch?v=pt2tZNAe10Y

Thursday, May 15, 2014

ತಂಗಾಳಿ ಇಂದು


ತಂಗಾಳಿ ಇಂದು
ಪರಿಸರದೊಂದಿಗೆ ಬೇಸರಿಸಿದೆ
ಸುಮಗಳ ಮಕರಂದ
ಭ್ರಮರಗಳು ಬಂದು ಕದ್ದೋಗಿದೆ
ಬದಲಾಗುತ್ತಿದೆ ಇಂದು ಜೀವನದ ನಡೆ ಸ್ವಲ್ಪವೇ
ಇದೇ ನೆಪದಲಿ ನಾನೂ ಹೃದಯದ ಸ್ಥಿತಿಯನ್ನು ಸ್ವಲ್ಪವೇ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ

ಅಂಗಳ ಹಳೆದಾಗಿದೆ
ಹೊಸ ಬಿಸಿಲಿದೆ
ಕಣ್ರೆಪ್ಪೆ ತನ್ನ ಕದ ಬಡಿಯುತ್ತಿದೆ
ಯಾರ ರೂಪವಾಗಿದೆ
ಕೀಟಲೆ ಹೀಗೆ ಮಾಡುವರು
ಮರೆತು ಲಜ್ಜೆ
ಹೇಗೆ ಹೆಸರಿಂದ
ನಾನು ಕರೆಯಲಿ ಅವನಿಗೆ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ

ಈ ಎಲ್ಲ ಕೋಗಿಲೆ
ಇಂದು ಕಾರ್ಯ ನಿರ್ವಹಿಸುತ್ತಿದೆ ಪತ್ರವಾಹಕನ
ಕುಹೂ ಕುಹೂ ಎಂದು ಓದುತ್ತಿದೆ ಪತ್ರ ಮೋಜಿನ
ಇವುಗಳಿಗೆ ಹೇಳಿ ಅಡಗಿಸದಿರಿ ಎಂದು
ಹೇಳಲಿ ಇದನ್ನು ಯಾರು ಬರೆದರೆಂದು
ಅವನದ್ದೇ ನಾನು ಇಂದು ದೃಷ್ಟಿ ತೆಗೆಯುವೆ
ಅಂದಗೊಳಿಸುವೆ, ಅಂದಗೊಳಿಸುವೆ
ಅಂದಗೊಳಿಸುವೆ, ಅಂದಗೊಳಿಸುವೆ  

ಮೂಲ : ಅಮಿತಾಭ್ ಭಟ್ಟಾಚಾರ್ಯ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಮೊನಾಲಿ ಠಾಕುರ್
ಸಂಗೀತ : ಅಮಿತ್ ತ್ರಿವೇದಿ
ಚಿತ್ರ :ಲೂಟೆರ

hawaa ke jhonke aaj mausamon se rooth gaye
gulon ki shokhiyaan jo bhanwre aa ke loot gaye
badal rahi hai aaj Zindagi ki chaal Zaraa
isee bahaane main bhi kyoon naa dil ka haal Zaraa
sanwaar loon haye sanwaar loon

baraamade puraane hain, nayi si dhoop hai
Jo palkein khatkhata raha hai kis kaa roop hai
sharaaratein kare jo aise
bhool ke hizaab
kaise us ko naam se main pukaar loon

Ye saaree koyalein baneeN hain aaj daakiyaa
Kuhu-kuhu mein chitthiyaan padhein mazaakiyaa
Inhe kaho ki naa chhupaayen
Kis ne hai likhaa bataayein,
Us ki aaj main nazar utaar loon
Sanwaar loon haye sanwaar loon
Sanwaar loon, sanwaar loon..
http://www.youtube.com/watch?v=8OP0vODVkMc

ಅವಶ್ಯಕತೆ ಇದೆ

ಅವಶ್ಯಕತೆ ಇದೆ 
ಆ ಏಕಾಗ್ರತೆಯ
ಆ ಮೌನತೆಯ
ಆ ಶಾಂತತೆಯ 
ಆ ತ್ಯಾಗದ 
ಆ ಶಕ್ತಿಯ 
ಆ ದಯೆ, ಕರುಣೆ, ಭಕ್ತಿಯ 
ಅವಶ್ಯಕತೆ ಇದೆ, ಅವಶ್ಯಕತೆ ಇದೆ, ಅವಶ್ಯಕತೆ ಇದೆ.

by ಹರೀಶ್ ಶೆಟ್ಟಿ,ಶಿರ್ವ

ಗೌತಮ್ ಬುದ್ಧ (೩)

ಗೌತಮ್ ಬುದ್ಧ ()

ನಂತರ ಇನ್ನೊಂದು ದಿನ ಸಿದ್ಧಾರ್ಥ ಉಧ್ಯಾನದಲ್ಲಿ ವಿಹರಿಸಲು ಹೊರಟ,  ಬಾರಿ ಅವನು ಅಲ್ಲಿಂದ ಒಂದು  ಶವ ಯಾತ್ರೆ ಸಾಗುತ್ತಿದ್ದುದ್ದನ್ನು ಕಂಡ, ನಾಲ್ಕು ಜನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದರು, ಹಿಂದೆ ಹಿಂದೆ ತುಂಬಾ ಜನರು ನಡೆಯುತ್ತಿದ್ದರು, ಅದರಲ್ಲಿ ಕೆಲವರು ಅಳುತ್ತಿದ್ದರು, ಕೆಲವರು ಎದೆ ಬಡಿದು, ಬಡಿದು ರೋಧಿಸುತ್ತಿದ್ದರು.

ಇದನ್ನೆಲ್ಲಾ ನೋಡಿ ಸಿದ್ಧಾರ್ಥ ಸೌಮ್ಯನಿಗೆ "ಇದು ಯಾರು ಹೀಗೆ ಬಿದಿರಿನ ಮೇಲೆ ಹೂವುಗಳನ್ನೆಲ್ಲ ಹಾಸಿ ಅದರ ಮೇಲೆ ಮಲಗಿ ಹೋಗುತ್ತಿದ್ದಾರೆ?"

ಸೌಮ್ಯ ಹೇಳಿದ "ಇವನು ಮಲಗಿದ್ದು ಅಲ್ಲ ಕುಮಾರ, ಇವನು ಸತ್ತಿದ್ದಾನೆ, ಇವನು ಜಡ ಮೃತ ಈಗ, ಇವನು ತನ್ನ ಸಂಬಂಧಿಕರಿಂದ ದೂರ ಹೋಗಿದ್ದಾನೆ, ಅಲ್ಲಿಂದ ಎಂದೂ ಇವನು ಹಿಂತಿರುಗಿ ಬರುವುದಿಲ್ಲ, ಇವನಲ್ಲಿ ಈಗ ಜೀವ ಇಲ್ಲ, ಮನೆಯವರು ಬಯಸುವುದಿಲ್ಲ ಆದರೂ ಶಾಶ್ವತವಾಗಿ ಅವನನ್ನು ಬಿಟ್ಟು ಕೊಡಲು ಹೋಗುತ್ತಿದ್ದಾರೆ."

ಸಿದ್ಧಾರ್ಥ "ಸೌಮ್ಯ, ಯಾವುದೇ ಒಂದು ದಿವಸ ನನ್ನ ಸಹ ಇದೇ ಅವಸ್ಥೆ ಆಗುತ್ತದೆ ಏನು? "

ಸೌಮ್ಯ "ಹೌದು ಕುಮಾರ, ಜನ್ಮ ಪಡೆದವನು ಒಂದು ದಿನ ಸಾಯುವುದು ನಿಶ್ಚಿತ."

ಸಿದ್ಧಾರ್ಥ " ಯಾಕೆ ಬೇಕು ಜೀವನವನ್ನು ನುಂಗುವ ಹಾಳು ಯೌವನ, ಯಾಕೆ ಬೇಕು ಶರೀರವನ್ನು ನಷ್ಟ ಮಾಡುವ ಆರೋಗ್ಯ, ಯಾಕೆ ಬೇಕು ತನ್ನ ಅಧ್ಯಾಯವನ್ನು ಬೇಗನೆ ಮುಗಿಸುವ ಜೀವನ, ಮುಪ್ಪು, ರೋಗ, ಮರಣ ಹೀಗೆಯೇ ಆಗುತ್ತಿರುತ್ತದೆ ಏನು ಸೌಮ್ಯ?"

ಸೌಮ್ಯ "ಹೌದು ಕುಮಾರ."

ಸಿದ್ಧಾರ್ಥನಿಗೆ ಪುನಃ ಆಘಾತವಾಯಿತು, ಅವನು ಬೇಸರದಿಂದ ಅರಮನೆಗೆ ಮರಳಿದ.

ರಾಜ ಶುದ್ಧೋದನ ಕುಮಾರನ ಅನಾಸಕ್ತಿ ಅರಿತು ಅವನ ಸುತ್ತ ಮುತ್ತ ಅನೇಕ ಸುಂದರಿಯರನ್ನು ನಿಯುಕ್ತಿಸಿದ,  ಅವರು ಕುಮಾರನನ್ನು ಪ್ರಲೋಭಿಸುವ, ಪ್ರಚೋಧಿಸುವ ತುಂಬಾ ಪ್ರಯತ್ನ ಮಾಡಿದರು, ಆದರೆ ಸಿದ್ಧಾರ್ಥನ ಮೇಲೆ ಇದರ ಯಾವುದೇ ಮರಿಣಾಮ ಬೀಳಲಿಲ್ಲ, ಅವನು ತನ್ನ ಮಿತ್ರ ಉದಯಿಗೆ ಹೇಳಿದ "ಸ್ತ್ರೀಯರ ರೂಪ ಯೌವನ ಶಾಶ್ವತವೇನಲ್ಲ, ಏನಿದೆ ಇದರಲ್ಲಿ".

ನಾಲ್ಕನೆ ಸಲ ಕುಮಾರ ಹೊರ ವಿಹರಿಸಲು ಹೊರಟಾಗ ಅವನಿಗೆ ಒಂದು ಸನ್ಯಾಸಿ ಕಂಡು ಬಂದ.

ಸಿದ್ಧಾರ್ಥ ತನ್ನ ಸಾರಥಿ ಸೌಮ್ಯನಿಗೆ "ಸೌಮ್ಯ, ಯಾರಿವರು ?"

ಸೌಮ್ಯ"ಇವರು ಸನ್ಯಾಸಿ, ಕುಮಾರ."

ಸಿದ್ಧಾರ್ಥ "ಇವರು ಶಾಂತ, ಗಂಭೀರವಾಗಿದ್ದರೆ, ಇವರ ತಲೆಯ ಮುಂಡನೆ ಸಹ ಆಗಿದೆ, ಇವರ ಕೈಯಲ್ಲಿ ಭಿಕ್ಷಾ ಪಾತ್ರೆ ಸಹ ಇದೆ, ಬಟ್ಟೆ ಸಹ ಇವರ ವಿಚಿತ್ರವಾಗಿದೆ, ಏನು ಮಾಡುತ್ತಿದ್ದಾರೆ ಇವರು ಸೌಮ್ಯ?"


ಸೌಮ್ಯ "ಕುಮಾರ ಇವರು ಸಂಸಾರ ತ್ಯಜಿಸಿದ್ದಾರೆ, ಕಡುಬಯಕೆಗಳ ತ್ಯಾಗ ಮಾಡಿದ್ದಾರೆ, ಕಾಮನೆಗಳ ತ್ಯಾಗ ಮಾಡಿದ್ದಾರೆ, ದ್ವೇಷದ ತ್ಯಾಗ ಮಾಡಿದ್ದಾರೆ, ಇವರು ಭಿಕ್ಷೆ ಬೇಡಿ ತಿನ್ನುತ್ತಾರೆ, ಸಂಸಾರದಿಂದ ಇವರಿಗೆ ಏನೂ ಸಂಬಂಧ ಇಲ್ಲ."

ಸಿದ್ಧಾರ್ಥನಿಗೆ ತುಂಬಾ ಸಂತೋಷವಾಯಿತು, ಅವನ ಮುಖ ಅರಳಿತು.

ಆಗ ಅಲ್ಲಿಗೆ ರಾಜಭಟ ಬಂದು " ಕುಮಾರ, ನಿಮಗೆ ಪುತ್ರ ರತ್ನ ಪ್ರಾಪ್ತಿಯಾಗಿದೆ."

ಅನಾಯಾಸವಾಗಿ ಸಿದ್ಧಾರ್ಥನ ಮುಖದಿಂದ ಉದ್ಗಾರವೊಂದು ಹೊರಟಿತು "ರಾಹುಲ್ ಜನ್ಮಿಸಿದ." ಅವನು ಯೋಚಿಸಿದ ಇನ್ನೊಂದು ಬಂಧನ ಹೆಚ್ಚಾಯಿತು ಎಂದು.

ತಂದೆಗೆ ವಿಷಯ ತಿಳಿದ ನಂತರ ಅವರು ತನ್ನ ಮೊಮ್ಮಗನ ಹೆಸರು "ರಾಹುಲ್" ಎಂದಿಟ್ಟರು.

(ಮುಂದುವರಿಯುವುದು)

ಆಧಾರ : ಕೇಳಿದ್ದು/ಓದಿದ್ದು

by ಹರೀಶ್ ಶೆಟ್ಟಿ ,ಶಿರ್ವ  

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...