Monday, October 31, 2011

ಕನ್ನಡ ಭಾಷೆ

ಕನ್ನಡ ಭಾಷೆ ಬಿಟ್ಟು ಎಲ್ಲಿಗೆ ಹೋಗುವಿ
ಕರ್ನಾಟಕ ಮಲ್ಲಿಗೆಯ ಪರಿಮಳ ಹೇಗೆ ಮರೆಯುವಿ

ಇತರ ರಾಜ್ಯ ಇತರ ದೇಶಗಳಲ್ಲಿ ಇರುವುದರಲ್ಲಿಲ್ಲ ಏನೂ ತೊಂದರೆ
ಅಲ್ಲಿಯ ಭಾಷೆ ನುಡಿಯುವ ಆಸೆಯಲ್ಲಿಲ್ಲ ಏನೂ ತೊಂದರೆ
ಆದರೆ ಇತರ ಭಾಷೆಯನ್ನು ಎಲ್ಲಿಯ ತನಕ ನುಡಿಯುವಿ
ಕಡೆಗೆ ಮರಳಿ ಬಂದು ಕನ್ನಡ ಭಾಷೆಯನ್ನೇ ನುಡಿಯುವಿ

ಬೇರೆ ದೇಶದಿಂದ ಹಿಂತಿರುಗಿ ಬರುವಾಗ
ಕನ್ನಡ ಭಾಷೆ ನಿನಗೆ ಬರದಿದ್ದರೆ
ಹೇಗೆ ನೀ ಇಲ್ಲಿ ಜೀವನ ಕಳೆಯುವಿ
ಕಡೆಗೆ ಕನ್ನಡ ಭಾಷೆಯನ್ನೇ ನೀ ಕಲಿಯುವಿ

ಬನ್ನಿ ಕನ್ನಡದಲ್ಲಿ ಮಾತನಾಡೋಣ
ಕನ್ನಡ ಅಕ್ಷರ ಕಲಿಯೋಣ
ಕನ್ನಡದಲ್ಲಿ ಬರೆಯೋಣ
ಕನ್ನಡ ಬೆಳೆಸಲು ಒಟ್ಟಾಗಿ ಹೆಜ್ಜೆ ಇಡೋಣ
by ಹರೀಶ್ ಶೆಟ್ಟಿ, ಶಿರ್ವ

ಮಾರ್ಗದರ್ಶಿ

ಇವನು ದಾರಿ ತೋರಿಸಿ
ಕತ್ತಲೆಯಲ್ಲಿಯೇ ಉಳಿದ
ಅವನು ತನ್ನ ಮಾರ್ಗವನ್ನು ಪಡೆದ

ತನ್ನ ಗಮ್ಯಸ್ಥಾನ ಸಿಗುತ್ತಲೇ
ಅವನು ಇವನನ್ನು ಮರೆತ
ತನ್ನದೇ ಪ್ರಪಂಚದಲಿ ಅವನು ಬೆರೆತ

ಇವನು ತಾಯಿಯಂತೆ ಮಾರ್ಗದರ್ಶಿ
ಆ ಮಾರ್ಗದಲಿ ನಡೆದು ಆದ ಅವನು ಯಶಶ್ವಿ
ಸಹಬಾಳ್ವೆ ದೂರವಾದವು ಹುಟ್ಟಿತು ದ್ವೇಷ

ಇವನ ಪರವಾಗಿ ಇಲ್ಲ ಸೃಷ್ಟಿ
ಗಟ್ಟಿಯಾಗಿದೆ  ಅವನ ಮುಷ್ಠಿ
ಇನ್ನು ಬೇಕಿಲ್ಲ ಅವನಿಗೆ ಇವನ ದೃಷ್ಟಿ
by ಹರೀಶ್ ಶೆಟ್ಟಿ, ಶಿರ್ವ

ಹೊಸ ಬೆಳಕು

ಬೆಳದಿಂಗಳ ರಾತ್ರಿಯಲಿ
ಮುಗಿಲಿನ ಮರೆಯಿಂದ
ಚಂದ್ರ ಹೊರ ಬಂದು 
ನನ್ನನ್ನು ನೋಡುತ್ತಲೇ 
ಏಕೆ ನೀನಿಷ್ಟು ಹತಾಶವಾಗಿದಿ ?
ಏಕೆ ನಿರಾಸೆಯಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದಿ ?
ಅವಳು ನಿನ್ನನ್ನು ಬಿಟ್ಟು ಹೋದಳೆಂದು ಏಕೆ ಇಷ್ಟು ಚಿಂತೆ?
ನಿನ್ನ ಜೀವನದಲ್ಲೂ ಹೊಸ ಬೆಳಕು ಆಗಲಿದೆ
ಎಂದು ಹೇಳಿ ನಕ್ಕ ಚಂದ್ರ
ನಾನು ಅವಳ ನೆನಪಿನಲಿ
ಅವಳ ಅಗಲಿಕೆಯ ವ್ಯಥೆಯಲಿ 
ಕಲ್ಲಾದ ನನ್ನ ಹೃದಯ
ಚಂದ್ರನ ನಗು ಶೀತಲತೆ ನೀಡಿದಂತಾಗಿ
ನನ್ನ ಕಲ್ಲು ಹೃದಯ ಮಂಜು ಕರಗಿದಂತೆ ಕರಗಿ 
ಹನಿ ಹನಿಯಾಗಿ ಬೀಳ ತೊಡಗಿತು
by ಹರೀಶ್ ಶೆಟ್ಟಿ, ಶಿರ್ವ

Sunday, October 30, 2011

ಕಳೆದ ದಿನಗಳು

ಕೂಡಿಸಿ ಕೂಡಿಸಿ ಇಟ್ಟ
ಅವನ ಹಣಗಳು ಹೆಣವಾಗಿ
ಹಾಳಾಗಿ ಹೋಯಿತು

ಕಳೆದ ಕಳೆದ ಸುಂದರ 
ಆ ದಿನಗಳು ದೀನವಾಗಿ
ಅವನನ್ನು ನೋಡಿತು

ನೊಂದು ನೊಂದು ತನ್ನ
ತಪ್ಪಿಗೆ ಅವನ ಉಳಿದ ಜೀವನವು 
ನರಕ ಸಮನವಾಯಿತು 
by ಹರೀಶ್ ಶೆಟ್ಟಿ, ಶಿರ್ವ

ಮನೆ ಖಾಲಿ ಇದೆ

ನೀನಿಲ್ಲ
ಮನಸಿಲ್ಲ
ಮುಂಜಾನೆಯ ಬೆಳಕಿನ ಸೊಗಸಿಲ್ಲ
ನಿದ್ದೆ ಬರದ್ದಿದ್ದರು ಏಳುವ ಶಕ್ತಿಯಿಲ್ಲ
ಮನೆ ಖಾಲಿ ಇದೆ

ಬಾಳಿಗೆ 
ಯಾವುದೇ ಅರ್ಥವಿಲ್ಲ
ಜೀವನದ ಸುಖ ಬಳಿಯಿಲ್ಲ
ಬದುಕು ಬಂಡಿಗೆ ಚಕ್ರವಿಲ್ಲ
ಮನೆ ಖಾಲಿ ಇದೆ

ನಿನ್ನ
ಗೈರುಹಾಜರಿಯಿಂದ
ನನ್ನ ನನ್ನಲ್ಲಿ ಉಪಸ್ಥಿತಿಯಿಲ್ಲ
ಸ್ವಂತ ಜೀವದ ಗೋಚರವಿಲ್ಲ
ಮನೆ ಖಾಲಿ ಇದೆ

ಅಡುಗೆ ಮನೆಯಲಿ
ಮೌನ ವಾಸ
ಒಲೆಗೂ ಏಕಾಂತದ ಆಭಾಸ
ಏನೂ ತಿನ್ನುವ ಆಸೆ ಇಲ್ಲ
ಮನೆ ಖಾಲಿ ಇದೆ

ಹೊರಗೆ
ನಿನ್ನದೇ ಸ್ಮೃತಿ
ಮನ ಮಂದಿರದಲಿ ನಿನ್ನದೇ ಮೂರ್ತಿ
ಕೆಲಸದಲ್ಲೂ ರುಚಿಯಿಲ್ಲ
ಮನೆ ಖಾಲಿ ಇದೆ
by ಹರೀಶ್ ಶೆಟ್ಟಿ, ಶಿರ್ವ


Saturday, October 29, 2011

ಹೂವಿನ ಭಾಗ್ಯ

ತೋಟದಲಿ ಅನೇಕ ಹೂಗಳು
ಅರಳಿದ ಹೂಗಳನ್ನು ಕಂಡು
ಕೊಯ್ದು ಹೋಗುವವರು ಹಲವರು
ಸಂತಸ ಪಡುವವರು ಕೆಲವರು

ಹೂಗಳನ್ನು ಕಿತ್ತು 
ಹೂಮಾಲೆಯ ಕಟ್ಟಿ
ಮಾರುವವರು ಹಲವರು
ಖರೀದಿ ಮಾಡುವವರು ಕೆಲವರು

ಹೂವಿನ ಭಾಗ್ಯ
ಕೊಂಡು ಹೋಗುವುದು ಎಲ್ಲಿಗೆ
ತಲೆಗೆ ಮುಡಿಯುವವರು ಹಲವರು
ದೇವರ ಚರಣಗಳಲ್ಲಿ ಅರ್ಪಿಸುವವರು ಕೆಲವರು 

ಹೂವ ಗತಿ
ಎಲ್ಲಿ ಅದರ ಸದ್ಗತಿ
ರಸ್ತೆಯಲ್ಲಿ ಬಿಸಾಕಿ ಪ್ರಾಣ ಬಿಡಲು ಬಿಡುವವರು ಹಲವರು
ಪುಸ್ತಕದ ಮಧ್ಯೆ ಇಟ್ಟು ಒಣಗಿದ ಎಸಳನ್ನು ಸಂಗ್ರಹಿಸುವವರು ಕೆಲವರು
by ಹರೀಶ್ ಶೆಟ್ಟಿ, ಶಿರ್ವ

ಗೆಳತಿ ನಿನ್ನ ನೆನಪಿನಲ್ಲಿ

ಅಂದು....
ಗೆಳತಿ ನಾವೆಷ್ಟು ಸಂತಸದಲ್ಲಿದ್ದೆವು
ನಮ್ಮ ಪ್ರೀತಿಗೆ
ಮನೆಯವರ ಒಪ್ಪಿಗೆ ಸಿಕ್ಕಿತೆಂದು
ಕನಸು ನನಸಾಗುವಂತೆ ಕಂಡಿತೆಂದು

ಆದರೆ...
ಜೀವನ ಅಷ್ಟು ಸುಲಭವೇ
ಅಪಘಾತದಲಿ ಸಿಲುಕಿ
ನಾನು ನನ್ನ ಎರಡೂ ಕಾಲುಗಳನ್ನು ಕಳೆದುಕೊಳ್ಳುವುದು
ನಿನ್ನ ವಿಲಾಪ
ನಿನ್ನನ್ನು ನಿನ್ನ ಪರಿವಾರದವರು 
ನನ್ನಿಂದ ದೂರ ಮಾಡುವುದು

ನಂತರ....
ಅಂಗ ವಿಕಲನಾದ ನನ್ನಲ್ಲಿ
ನೀನು ಓಡಿ ಬಂದದ್ದು
ನಾನು ನಿನ್ನ ಪ್ರೀತಿಯಲಿ
ಸೋತು ಹೋಗುವೆ ಎಂದು ಹೆದರಿ
ನಿನ್ನಿಂದ ಕೋಪದಿಂದ ವರ್ತಿಸಿ
ನಿನ್ನನ್ನು ನನ್ನಿಂದ ದೂರಗೊಳಿಸುವುದು

ಇಂದು .....
ನೀನು ಮದುವೆಯಾಗಿ 
ಸುಖವಾಗಿ ತನ್ನ ಗಂಡ ಮಕ್ಕಳೊಂದಿಗೆ
ತನ್ನ ಜೀವನ ಸಾಗಿಸುವಿ
ನಾನು ನಿನ್ನನ್ನು ಸುಖದಲ್ಲಿರುವದನ್ನು ಕಂಡು
ತೃಪ್ತಿಯಿಂದ ನನ್ನ ಏಕಾಂತ ಜೀವನದಲಿ
ಕೇವಲ ನಿನ್ನ ನೆನಪಿನ ಸಹಾಯದಿಂದಲೇ
ಕಾಲ ಕಳೆಯುತ್ತಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

ಜೀವನದ ರಹಸ್ಯ

ಹೂವ ತೋಟದಲಿ
ಅರಳಿ ನಗುವ ಹೂವಲಿ
ಹಸಿರು ಹುಲ್ಲಲಿ
ಮಂಜು ಹನಿಯಲಿ
ದುಂಬಿಯ ಶ್ರಮದಲಿ
ಚಿಟ್ಟೆಯ ಉತ್ಸಾಹದಲಿ
ಹಕ್ಕಿಯ ಚಿಲಿಪಿಲಿಯಲಿ
ಅಡಗಿದೆ ಜೀವನದ ರಹಸ್ಯ
ಎಲ್ಲರಿಗೂ ಮುಂಜಾನೆಯ ಶುಭಾಶಯಗಳು
by ಹರೀಶ್ ಶೆಟ್ಟಿ, ಶಿರ್ವ

Tuesday, October 25, 2011

ಒಂದು ವೇಳೆಯ ಊಟ

ಕಾಯುತ್ತಿದ್ದೇನೆ
ಎಲ್ಲಿದ್ದಾರೆ ಇವರು ?
ಏನಾದರೂ ಅನಾಹುತ ಆಗಲಿಲ್ಲವಲ್ಲ ?

ಮನೆಯ ಪರಿಸ್ಥಿತಿಯಲಿ ನೆನೆದು
ಮಕ್ಕಳ ದಯನೀಯ ಸ್ಥಿತಿ ಕಂಡು
ತನ್ನ ಅಸಹಾಯಕತೆಗೆ ನೊಂದು
ಚಿಂತೆಯಿಂದ ಖಾಲಿ ಕಿಸೆ
ಹೀಗೆಯೇ ಹೊರಗೆ ಹೋಗಿದವರು ಬರಲಿಲ್ಲವಲ್ಲ 

ಮನೆ ಹೊರಗೆ ಹಬ್ಬದ ಸಡಗರ
ಮನೆ ಒಳಗೆ ದುಃಖದ ಭಾರ 
ಒಲೆ ಮೇಲೆ ಇಲ್ಲ ಏನೂ ಆಹಾರ
ಹಸಿವೆಯಿಂದ ಬಳಲುತ್ತಿದ್ದ ಮಕ್ಕಳ
ಖಾಲಿ ಹೊಟ್ಟೆಗೆ ಏನೋ ತರಲು ಹೋದವರು ಬರಲಿಲ್ಲವಲ್ಲ

ಬಂದರು ಅವರು
ಹತಾಷೆಯಿಂದ ಕೂಡಿದ ಅವರ ಮುಖವ
ಕೈಯಲ್ಲಿ ಎರಡು ತೊಟ್ಟೆಯಲಿ ಏನೋ ತಿನ್ನುವ
ಅವರ ಮೌನ ಮುಖದಲಿ ಕಿರು ಸಂತೋಷ
ಒಂದು ವೇಳೆಯ ಊಟದ ವ್ಯವಸ್ತೆ ಆಯಿತಲ್ಲ
by ಹರೀಶ್ ಶೆಟ್ಟಿ, ಶಿರ್ವ

Monday, October 24, 2011

ಈ ದೀಪಾವಳಿಯಲಿ

ಹೇ ದೀಪ,
ಈ ದೀಪಾವಳಿಯಲಿ
ನೀ ಮೊದಲು ಹೋಗು
ಕತ್ತಲೆಯಲ್ಲಿದ್ದವರ ಜೀವನದಲಿ
ಸ್ವಲ್ಪ ಪ್ರಕಾಶಿಸು
ಅವರ ಮನೆಯಲಿ
ಬೆಳಕು ಹರಿಸು ಅವರ ಬಾಳಲ್ಲಿ
ಸಂತೋಷದಿಂದ ಅವರೂ ಈ ದೀಪಾವಳಿ ಆಚರಿಸಲಿ
by ಹರೀಶ್ ಶೆಟ್ಟಿ, ಶಿರ್ವ

ತುಂಡು ಗುಲಾಬಿ

ತುಂಡು ಗುಲಾಬಿ ಒಂದು ಬಿದ್ದಿತ್ತು
ನಿಸ್ಸಹಾಯ ಏಕಾಂತದಲಿ
ಮಳೆಯ ಹನಿಗಳ
ಹೊಡೆತ ಸಹಿಸುತ

ರಾತ್ರಿಯ ನಿಶ್ಯಬ್ದ ಕತ್ತಲೆ ಕವಿದಿತ್ತು
ಬೀದಿಯ ಪ್ರಕಾಶ ಕಂಬ ಕಿರು ಬೆಳಕು ಬೀರುತ್ತಿತ್ತು
ಗುಲಾಬಿ ಹೂವು ಅಲ್ಲೇ ಬಿದ್ದಿತ್ತು
ಆ ಪ್ರಕಾಶದಲಿ ಜೀವನದ ಅಂಶ ಹುಡುಕುತ

ಇದು ಯಾವುದೋ ಭಗ್ನ ಪ್ರೇಮಿ ಎಸೆದ ಹೂವೇ
ಅಲ್ಲದೆ ಯಾವುದೋ ಶವ ಯಾತ್ರೆಯಿಂದ ಬಿದ್ದು ಹೋದ ಹೂವೇ
ಗುಲಾಬಿ ಹೂವು ಅಲ್ಲೇ ಬಿದ್ದಿತ್ತು
ಕೊನೆ ಉಸಿರು ಎಳೆಯುತ

ಚಂದ್ರ ನಕ್ಷತ್ರಗಳ ಸವಾರಿ ಮುಗಿಯಲು ಇನ್ನೂ ಹೊತ್ತು ಇತ್ತು
ಮುಂಜಾನೆಯ ಸೂರ್ಯ ಉದಯವಾಗಳು ಇನ್ನೂ ತುಂಬಾ ಸಮಯವಿತ್ತು
ಗುಲಾಬಿ ಹೂವು ಈಗಲೂ ಅಲ್ಲೇ ಬಿದ್ದಿತ್ತು
ತನ್ನ ಪ್ರಾಣ ತೊರೆಯಲು ಸೂರ್ಯ ಬಿಸಿಲನ್ನು ಕಾಯುತ
by ಹರೀಶ್ ಶೆಟ್ಟಿ, ಶಿರ್ವ

ಚಿನ್ನದ ದೀಪಾವಳಿ ....ಗಂಡ ದಿವಾಳಿ :):):)

ಇಂದು ಧನ ತ್ರಯೋದಶಿ ಅಂತೆ
ನನ್ನ ಚಿನ್ನಳಿಗೆ ಚಿನ್ನ ಬೇಕಂತೆ
ಇಂದು ಚಿನ್ನ ಖರೀದಿ ಮಾಡಿದರೆ ಒಳ್ಳೆಯಂತೆ

ಸಂತೆಯಲ್ಲಿ ಚಿನ್ನದ ಅಂಗಡಿ ಇದೆಯಂತೆ
ಅವಳು ನೆಕ್ಲಿಸ್ ನೋಡಿ ಬಂದಿದಳಂತೆ
ಅವಳಿಗೆ ಅದೇ ಬೇಕಂತೆ

ನನ್ನ ಪರಿಸ್ಥಿತಿ ಗಂಭೀರ ಆದಂತೆ
ಇನ್ನೇನೂ ಉಪಾಯವಿಲ್ಲವಂತೆ
ನೆಕ್ಲೆಸ್ ಕೊಡದಿದ್ದರೆ ಹೆಂಡತಿಯ ಮೇಲೆ ಪ್ರೀತಿ ಇಲ್ಲವೆಂದು ಅರ್ಥವಂತೆ

ದೀಪಾವಳಿಯಲ್ಲಿ ಎಲ್ಲರ ಆಗುವುದು ಇದೆ ಗತಿಯಂತೆ
ಕಿಸೆಯಲ್ಲಿ ಯಾರದು ಹಣ ಉಳಿಯುದಿಲ್ಲವಂತೆ
ದೀಪಾವಳಿಯಲ್ಲಿ ಗಂಡ ಎಂಬ ಪ್ರಾಣಿಯ ದಿವಾಳಿ ಆಗುವುದ ಗ್ಯಾರಂಟೀ ಅಂತೆ :):):)
by ಹರೀಶ್ ಶೆಟ್ಟಿ, ಶಿರ್ವ

Sunday, October 23, 2011

ದೀಪಾವಳಿ

ಬಂತು ದೀಪಾವಳಿ
ಉತ್ಸವ ಆನಂದ ಉಲ್ಲಾಸದ
ಹಬ್ಬ ಕುಟುಂಬ ಬಂಧದ 

ಮನೆಯಲ್ಲೆಲ್ಲ ಸಂಭ್ರಮ
ಸಿಹಿ ತಿನಿಸುಗಳ ಪರಿಮಳ ಘಮಘಮ
ಗರಿಗರಿ ಚಕ್ಕುಲಿಯ ಪೊಟ್ಟಣ

ಮಕ್ಕಳಲ್ಲಿ ಮೋಜು ಉತ್ತೇಕನ
ಎಣ್ಣೆನೀರಿನ ಅಭ್ಯಂಜನ
ಹೊಸ ಬಟ್ಟೆಗಳನ್ನು ಧರಿಸುವ ಯೋಜನ

ಕಂದೀಲದ ಬೆಳಕಿನ ಹೊಳಪು
ರಂಗೋಲಿಯ ಚಿತ್ತಾರ ಮೆರುಗು
ಹಣತೆಯ ಸಾಲುಗಳ ಸೊಬಗು

ಹೂವು-ಎಲೆಗಳ ತೋರಣ
ವಿದ್ಯುತ್ ಪ್ರಕಾಶದ ಅಲಂಕಾರ ಸಂಯೋಜನ
ಪಟಾಕಿಗಳ ಸಿಡಿತದ ಸದ್ದು ಡಮ ಡಮ 
by ಹರೀಶ್ ಶೆಟ್ಟಿ, ಶಿರ್ವ

Saturday, October 22, 2011

ಸರ್ವಾಧಿಕಾರ

ಸರ್ವಾಧಿಕಾರದ ಮಾಡಬೇಡ ದುರುಪಯೋಗ
ಈ ಪಟ್ಟ ಸಿಕ್ಕಿದೆ ನಿನ್ನ ಯೋಗ

ನಡೆಯದು ಬಹಳ ದಿವಸ ಈ ಮಹಾಯೋಗ
ನಿನ್ನ ಕಿರೀಟದ ವಜ್ರ ಬೀಳಲಿದೆ ಬಹು ಬೇಗ

ರಾಜನ ಕರ್ತವ್ಯವನ್ನು ಮರೆಯಬೇಡ
ಪ್ರಜೆಯ ಮಹತ್ವವನ್ನು ಅಲಕ್ಷ್ಯ ಮಾಡಬೇಡ

ಹಿಟ್ಲರ್ ನಂತ ಹಲವು ಪ್ರಮುಖರು ಸರ್ವಾಧಿಕಾರದ ಮೋಹಕ್ಕೆ ಬಲಿಯಾದರು
ವಿಲಾಸಿತ ಜೀವನ ಜೀವಿಸಿದ ಕರ್ನಲ್ ಗದ್ದಾಫಿಯು ಇಂದು ಗುಂಡಿನ ಗುರಿಯಾದರು

ಬದಲಾಯಿಸಿಕೋ ತನ್ನನ್ನು ಯೋಗ್ಯ ಶಾಷಕನಾಗು ನೀನಾದರೂ
ರಾಜನಾಗಿ ಬೇಡ ಪ್ರಜೆಯ ಸೇವಕನಾಗಿರು ಇನ್ನಾದರೂ
by ಹರೀಶ್ ಶೆಟ್ಟಿ, ಶಿರ್ವ

ಒಂದು ಕವಿತೆ ಬರೆ ಪ್ರಿಯೆ

ಸ್ವಪ್ನದಲಿ ನಾ ಬರುವೆ
ಒಂದು ಕವಿತೆ ಬರೆ ಪ್ರಿಯೆ
ನಿನಗಾಗಿ ನಾ ಹೂವು ಆಗುವೆ
ಒಂದು ಕವಿತೆ ಬರೆ ಪ್ರಿಯೆ

ನಿಸರ್ಗದಲಿ ನಾ ಬೆರೆಯುವೆ
ಒಂದು ಕವಿತೆ ಬರೆ ಪ್ರಿಯೆ
ಬಾನಲ್ಲಿ ಸೂರ್ಯ ಚಂದ್ರನಂತೆ ನಾ ಕಾಣುವೆ
ಒಂದು ಕವಿತೆ ಬರೆ ಪ್ರಿಯೆ

ಏಕಾಂತದಲಿ ನಾ ಹೋಗುವೆ
ಒಂದು ಕವಿತೆ ಬರೆ ಪ್ರಿಯೆ
ನಿನ್ನ ಹಾಡಿನ ಸಂಗೀತವಾಗುವೆ
ಒಂದು ಕವಿತೆ ಬರೆ ಪ್ರಿಯೆ

ಕಲ್ಲಿನ ಪ್ರತಿಮೆಯಾಗುವೆ
ಒಂದು ಕವಿತೆ ಬರೆ ಪ್ರಿಯೆ
ನದಿ ಕೆರೆ ಕಡಲಾಗುವೆ
ಒಂದು ಕವಿತೆ ಬರೆ ಪ್ರಿಯೆ

ನಿನ್ನ ಭಾವನೆಯಲಿ ನಾ ಅಲೆಯುವೆ
ಒಂದು ಕವಿತೆ ಬರೆ ಪ್ರಿಯೆ
ನಿನ್ನ ಹೃದಯದಲಿ ನಾ ವಾಸವಾಗುವೆ
ಒಂದು ಕವಿತೆ ಬರೆ ಪ್ರಿಯೆ
by ಹರೀಶ್ ಶೆಟ್ಟಿ, ಶಿರ್ವ

Thursday, October 20, 2011

ಗುರು ವಿನಾ

ಗುರು ವಿನಾ ಜ್ಞಾನ ಎಲ್ಲಿಂದ ತರಲಿ
ಇನ್ನೂ ಜೀವ ಬರಲಿಲ್ಲ ಈ ಕಲ್ಲಲಿ
ಹೇಗೆ ಶಿಕ್ಷಣೆ ಪಡೆಯಲಿ
ಎಲ್ಲಿ ಗುರುವನ್ನು ಹುಡುಕಲಿ

ಜೀವನ ಒಂದು ಗುರುವೇ ಹೌದು
ಬದುಕಿನ ಅನೇಕ ಪಾಠ ಕಲಿಸುವುದು
ಆದರೆ ಬದುಕಿನ ಅರ್ಥ ಹೇಗೆ ತಿಳಿಯಲಿ
ಎಲ್ಲಿ ಗುರುವನ್ನು ಹುಡುಕಲಿ

ಲೋಪ ದೋಷಗಳಿಂದ ಕೂಡಿದ ನನ್ನ ಜೀವನ
ಹೀಗೆಯೇ ವ್ಯರ್ಥ ಕಳೆಯಲಾರೆ ಈ ಯೌವನ
ನನ್ನ ತಪ್ಪುಗಳನ್ನು ಹೇಗೆ ಅಳಿಸಲಿ
ಎಲ್ಲಿ ಗುರುವನ್ನು ಹುಡುಕಲಿ

ಸೂರ್ಯನ ಕಿರಣದಲ್ಲೂ ಕತ್ತಲೆಯ ಆಭಾಸ
ಮನಸ್ಸಲಿ ಅಂಧಕಾರದ  ವಾಸ
ಹೇಗೆ ಬೆಳಕಿನ ಪ್ರಕಾಶದಲಿ ಹೋಗಲಿ
ಎಲ್ಲಿ ಗುರುವನ್ನು ಹುಡುಕಲಿ
by ಹರೀಶ್ ಶೆಟ್ಟಿ, ಶಿರ್ವ

Wednesday, October 19, 2011

ಬದುಕು

ಸಿಗದ ಬದುಕು ನಿರೀಕ್ಷಿಸಲಾರೆ
ಸಿಕ್ಕಿದ ಬದುಕು ತ್ಯಜಿಸಲಾರೆ
ಕಪ್ಪು ಕಲ್ಲು ವಜ್ರ ಮಾಡಲಾರೆ
ನನ್ನತನವನ್ನು ಅಳಿಸಲಾರೆ
ನಾನು ನಾನೇ ಆಗಿ ಉಳಿಯುವೆ
ನನ್ನನ್ನು ನಾನು ಬದಲಾಯಿಸಲಾರೆ
ಭಜಿಸಿ ಪಾಂಡುರಂಗನನ್ನು
ಜೀವನ ಸಾರ್ಥಕ ಮಾಡುವೆ
ನನ್ನನ್ನು ಸೃಷ್ಟಿಸಿದ ಭಗವಂತನನ್ನು ದೂರಲಾರೆ
by  ಹರೀಶ್ ಶೆಟ್ಟಿ, ಶಿರ್ವ

ಮಮತೆಯ ವೇದನೆ

ನೀ ಹುಟ್ಟಿದಾಗ
ತೃಪ್ತಿಯಿಂದ ನಕ್ಕೆ
ನನ್ನದೇ ಜೀವದ
ರಕ್ತ ಸೋರಿ ನಿನ್ನನ್ನು ಪಡೆದೆ
ನಿನ್ನ ಆಗಮನದಿಂದ
ಮನೆ ತುಂಬಾ ನಲಿದೆ

ನಿನ್ನ ಬೆಳೆವಣಿಗೆಯನ್ನು
ಮನ ಮೀರಿ ನಿರೀಕ್ಷಿಸಿದೆ
ನಿನ್ನ ಬಾಲ್ಯ ಆಟ ನೋಡಲು
ಆಸೆಯಿಂದ ಕಾದೆ
ನಿನ್ನ ನಡಿಕೆ ನೋಡಿ ನಗಲು
ಹೃದಯದಿಂದ ದೇವರಲ್ಲಿ ಬೇಡಿದೆ

ಆದರೆ ನೀನೇಕೆ ಹೀಗೆ ಕಂದಾ ?
ಏಕೆ ನಿನ್ನ ಶರೀರದಲ್ಲಿ ಬೆಳೆವಣಿಗೆ ಇಲ್ಲ ?
ಇದೇನು ಡಾಕ್ಟರ ಹೇಳುತ್ತಿರುವುದು
ನಿನ್ನ ಶರೀರ ಬುದ್ದಿ ಬೆಳೆಯಲಿಕ್ಕೆ ಇಲ್ಲ ಅಂತ
ನೀನು ಯಾವುದೋ ರೋಗದಿಂದ ಬಳಲುತ್ತಿದ್ದಿ ಅಂತ
ಡಾಕ್ಟರ ಗೆ  ಏನು ಹುಚ್ಚಾ

ಏಕೆ.. ಏಕೆ ದೇವರೇ ಈ ಪುಟ್ಟ ಜೀವಗೆ ಈ ಶಿಕ್ಷೆ ?
ಏಕೆ ತಾಯಿ ಮನಸ್ಸಿಗೆ ಈ ವೇದನೆ?
ನಾನು ಮಾಡಿದ ತಪ್ಪಾದರೂ ಏನು ?
ನನ್ನ ಕಂದನಿಗೆ ಎಲ್ಲ ಮಕ್ಕಳಂತೆ ಬದುಕುವ ಹಕ್ಕು ಇಲ್ಲವೇ ಇನ್ನು ?
ಅವನೇಕೆ ಮಾತನಾಡುದಿಲ್ಲ ಇನ್ನು ?
ನನ್ನನ್ನು ಅಮ್ಮ ಎಂದು ಕರೆಯುವುದಿಲ್ಲವೇ ಅವನು?
by ಹರೀಶ್ ಶೆಟ್ಟಿ, ಶಿರ್ವ

Tuesday, October 18, 2011

ನಿನ್ನ ನೋಡಿ

ದಿವಂಗತ ಘಜಲ್ ಸಾಮ್ರಾಟ್ ಜಗಜಿತ್ ಸಿಂಗ್ ಅವರಿಗೆ ಕನ್ನಡದಲಿ ನನ್ನ ಒಂದು ಅರ್ಪಣೆ .......ತುಮಕೋ  ದೇಖಾ  ತೋ   ಯೇ  ಖಯಾಲ್  ಆಯಾ ...ಇದರ ಕನ್ನಡ ಅನುವಾದ ......

ನಿನ್ನ ನೋಡಿ
ಬಂತೊಂದು ಅಭಿಪ್ರಾಯ
ಜೀವನ ಬಿಸಿಲಾದರೆ
ನೀನು ದಟ್ಟ ಛಾಯೆಯಾಗಿದೆ 
ನಿನ್ನ ನೋಡಿ....

ಇಂದು ಮನಸ್ಸಲ್ಲಿ
ಒಂದು ಬಯಕೆವಿದೆ  (೨)
ಇಂದು ಹೃದಯವನ್ನು
ನಾನು ಸಾವರಿಸಿದೆ
ಜೀವನ ಬಿಸಿಲಾದರೆ
ನೀನು ದಟ್ಟ ಛಾಯೆಯಾಗಿದೆ 
ನಿನ್ನ ನೋಡಿ....

ನೀನು ಹೋದರೆ
ನಾನು ಭಾವಿಸುವೆ (೨)
ನಾನೇನು ಕಳೆದುಕೊಂಡೆ
ನಾನೇನು ಗಳಿಸಿದೆ
ಜೀವನ ಬಿಸಿಲಾದರೆ
ನೀನು ದಟ್ಟ ಛಾಯೆಯಾಗಿದೆ 
ನಿನ್ನ ನೋಡಿ....

ನಾನು ಯಾವುದನ್ನು
ಹಾಡಲಾರೆ (೨)
ಸಮಯ ಯಾಕೆ
ಆ ಗೀತೆಯನ್ನು ಹಾಡಿದೆ
ಜೀವನ ಬಿಸಿಲಾದರೆ
ನೀನು ದಟ್ಟ ಛಾಯೆಯಾಗಿದೆ 
ನಿನ್ನ ನೋಡಿ....

ಅನುವಾದ : ಹರೀಶ್ ಶೆಟ್ಟಿ , ಶಿರ್ವ

Tumko dekhaa to ye khayaal aayaa
zindagii dhuup tum ghanaa saayaa
tumako...

aaj phir dil ne ek tamannaa kii - (2)
aaj phir dil ko hamane samajhaayaa
zindagii dhuup tum ghanaa saayaa...

tum chale jaaoge to sochenge - (2)
hamane kyaa khoyaa- hamane kyaa paayaa
zindagii dhuup tum ghanaa saayaa...

ham jise gunagunaa nahiin sakate - (2)
vaqt ne aisaa geet kyuun gaayaa
zindagii dhuup tum ghanaa saayaa.


ಪ್ರೀತಿಯ ಪರಿಣಾಮ

ಕಾಲ ಕಳೆದಂತೆ
ಪ್ರೀತಿ ಮರೆಯಾಯಿತು
ಮಾಯವಾಯಿತು
ಹೃದಯದ ಬಡಿತ  
ಉಳಿದದ್ದು ಕೇವಲ
ಸಂಬಂಧದಲ್ಲಿ ವ್ಯತ್ಯಾಸಗಳು
ವ್ಯರ್ಥದ ಅಭಿಮಾನ
ಮುಗಿಯದ ಅಹಂ 
ಹೆಚ್ಚುತ್ತಿರುವ ಹಗೆಗಳು
ನಿಲ್ಲದ ಕಚ್ಚಾಟ
ಉಳಿಯಿತು ಪ್ರೀತಿ ಬರಿ ನಾಮ
ಹೆಚ್ಚಾಗಿ ಇದೇ ಆಗುವುದು ಪ್ರೀತಿಯ ಪರಿಣಾಮ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಪಾವನ ಪರಿ

ನೀರ ಮೇಲೆ ಆವರಿಸಿದ ಪಾಚಿಯನ್ನು ನೋಡಿ
ಅಂದು ಅದೇನೆಂದು ನೀ ಕೇಳಿದಿ ಅಲ್ಲವೇ ನನಗೆ
ಅದು ನೀ ನನ್ನೊಟ್ಟಿಗೆ ಮಾತನಾಡಿದ
ಮೊದಲ ಪದಗಲಾಗಿತ್ತು ಅಲ್ಲವೇ
ನಾ ಎಲ್ಲವನ್ನೂ ಮರೆತು ಮೂಕನಂತೆ
ನಿನ್ನನ್ನೇ ನೋಡುತ ನಿಂತಿದೆ ಅಲ್ಲವೇ

ಸಮಯ ಕಳೆದಂತೆ ನಮ್ಮ
ಹಾದಿಯು ಬದಲಾಯಿತ್ತಲ್ಲವೇ
ಆರಂಭವಾಗದೆ ಮುಗಿದ ನಮ್ಮ
ಆ ಅಲ್ಪ ಸಮಯದ ಪ್ರೇಮ
ಎಷ್ಟು ಸುಖದಾಯಕ ಹಾಗು
ಅನಂದದಾಯಕವಾಗಿತ್ತು ಅಲ್ಲವೇ

ಇಂದೂ ಎಲ್ಲಿಯೂ ಮಳೆಗಾಲದಲ್ಲಿ
ಪಾಚಿಯನ್ನು ಕಂಡರೆ
ಆ ಅದ್ಭುತ ಘಳಿಗೆ ನೆನಪಾದಂತೆ
ಹೃದಯದಲ್ಲೊಂದು ಕಂಪನ ಶುರುವಾಗುತ್ತದೆ ಅಲ್ಲವೇ
ದೂರ ದೂರ ಇದ್ದರೂ ಪ್ರೀತಿಯ ಈ ಪಾವನ ಪರಿ
ಎರಡು ಹೃದಯವನ್ನು ಹತ್ತಿರ ತಂದು ಬಂದಿಸಿದೆ ಅಲ್ಲವೇ
by ಹರೀಶ್ ಶೆಟ್ಟಿ, ಶಿರ್ವ



Monday, October 17, 2011

ಮುಂಜಾನೆಯ ಮಸುಕು

ಮುಂಜಾನೆಯ ಮಸುಕು
ಅಡಗಿದೆ ಬದುಕು
ಕಾಣದ ಹಾದಿಯಲಿ
ಮುಚ್ಚಿದೆ ಮನಸ್ಸು

ಬೆಟ್ಟದ ಮರೆಯಲಿ
ಸೂರ್ಯ ಕಾಯುತ್ತಿದ್ದಾನೆ
ತನ್ನ ಕಿರಣ ಹರಡಲು
ಭೂಮಿಯನ್ನು ನೋಡಲು

ಹೂದೋಟದಲಿ
ಮೊಗ್ಗು ಉತ್ಸಾಹಿತವಾಗಿದೆ
ಹೂವಾಗಿ ಅರಳಲು
ತನ್ನ ಯೌವನ ತೋರಲು

ತವಕದಿಂದ ಕಾಯುವ
ದುಂಬಿಗಳು ಹಂಬಲಿಸುತ್ತಿವೆ
ಹೂವ ರಸವನ್ನು ಹೀರಲು
ಜೇನು ಸಂಗ್ರಹಿಸಲು
by ಹರೀಶ್ ಶೆಟ್ಟಿ, ಶಿರ್ವ

Sunday, October 16, 2011

ಸಂಜೆ

ಸಂಜೆಯ ಸವಾರಿ ಹೊರಟಿತು ರಾತ್ರಿಯನ್ನು ಭೇಟಿ ಆಗಲು
ತನ್ನ ಮನದ ವ್ಯಥೆಯನ್ನು ಚಂದ್ರನಿಗೆ ಹೇಳಲು
ಹೃದಯದಲಿ ಆವರಿಸಿದೆ  ದುಃಖದ ಕತ್ತಲು
ಇನ್ನೂ ದೂರ ಇದೆ ಮುಂಜಾನೆಯ ಬೆಳಕ ಬಾಗಿಲು

ಈ ದಿನದಲಿ ಕಳೆದಿವೆ ಆಗು ಹೋಗುಗಳು
ಮನಸಲಿ ತುಂಬಿವೆ ಬಹು ತೊಡಕುಗಳು
ಹಿಂದೆ ಮುಂದೆ ಎಲ್ಲ ಕಡೆ ಮೌನ ವಾತಾವರಣಗಳು
ತಂಗಾಳಿ ಬೀಸುತ್ತಿದೆ ಶಾಂತವಾಗಿದೆ ಮರಗಳು

ರಾತ್ರಿ ನಿರತವಾಗಿತ್ತು ತನ್ನ ಪ್ರವಾಸ ಸಾಗಲು
ಕತ್ತಲು ಆರಂಭಿಸಿತು ರವಿಯ ಕಿರಣವನ್ನು ನುಂಗಲು
ತನ್ನ ರೂಪ ಹರಡಿತು ಸಂಜೆಯ ಸುತ್ತಲು
ಸಂಜೆಯ ಪ್ರತಾಪ ಆಯಿತು ಕ್ಷೀಣವಾಗಲು
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ನೆನಪಿನಲ್ಲಿ

ನಿನ್ನಿಂದ ಆಡಿದ ಮಾತು
ಇಂದೂ ಇದೆ ನನ್ನ ಸ್ಮರಣೆಯಲಿ
ಎಷ್ಟು ಸಂತಸ ತುಂಬಿತು
ಆ ಪ್ರೀತಿಯ ಪರಿಯಲಿ

ಇಂದೂ ನಾನು ಅಲೆಯುತ್ತೇನೆ
ಆ ಕಲ್ಪನೆಯ ಲೋಕದಲಿ
ಹಾಡಿದ ಪ್ರೀತಿಯ ಹಾಡು
ಇಂದೂ ನುಡಿಯುತ್ತದೆ ಕಿವಿಯಲಿ

ಇಂದೂ ಮರೆಯಲಾರೆ ನೆನೆದು ಕುಣಿದ
ಆ ದಿವಸ ಪ್ರೀತಿಯ ಮಳೆಯಲಿ
ನೆನಪಾಗುತ್ತದೆ ಕಟ್ಟಿದ ಕನಸು ಮಾಡಿ
ಆ ಸುಂದರ ಮರಳ ಮನೆ ಕಡಲ ತೀರದಲಿ

ಅನೇಕ ಸುಮಗಳು ಬಂದವು
ಈ ಅತೃಪ್ತ ಜೀವನದಲಿ
ಆದರೆ ನಿನ್ನ ನೆನಪಿನ ಒಂದೇ ಆಧಾರದಿಂದ
ಇಂದೂ ಬದುಕುತ್ತಿದ್ದೇನೆ ಅಂದಿನ ಪ್ರೀತಿಯ ಸುಗಂಧದಲಿ
by ಹರೀಶ್ ಶೆಟ್ಟಿ, ಶಿರ್ವ

Saturday, October 15, 2011

ಮನಸ್ಸು

ಸುತ್ತ ಮುತ್ತ ಯಾರೂ ಇಲ್ಲ
ಮುನಿದಿದೆ ನನ್ನ ಕನಸು
ಭಾವನೆಗಳ ಸಂಚಾರವಿಲ್ಲ
ಅಳುತ್ತಿದೆ ಮನಸ್ಸು

ಜೀವಗಳು ಓಡಾಡುತ್ತಿವೆ
ಕಣ್ಣ ಮುಂದೆ ನಲಿದಾಡುತ್ತಿವೆ
ಅವರ ಸ್ಪರ್ಷದಲಿ ಸೆಳೆತನವಿಲ್ಲ
ಸುಪ್ತವಾಗಿದೆ ಮನಸ್ಸು

ನಿಸರ್ಗ ತನ್ನ ಗತಿಯಲ್ಲಿದೆ
ಸೂರ್ಯ ಚಂದ್ರ ನಿಯಮಿತವಾಗಿದೆ
ನನ್ನ ಭಾವಗಳು ಎಲ್ಲಿ ಅಡಗಿದೆ
ಹುಡುಕುತ್ತಿದೆ ಮನಸ್ಸು
by  ಹರೀಶ್ ಶೆಟ್ಟಿ, ಶಿರ್ವ

Friday, October 14, 2011

ನಾನೆಲ್ಲಿ ?

ನಾನೆಲ್ಲಿ ?
ಜಗದ ಓಟದಲಿ
ಜೀವನದ ಪಥದಲಿ
ಬದುಕಿನ ಹೋರಾಟದಲಿ

ನಾನೆಲ್ಲಿ ?
ಆಕಾಶದ ವಿಶಾಲತೆಯಲಿ
ನಿಸರ್ಗದ ಸೌಂದರ್ಯದಲಿ
ಭೂಮಿಯ ಗರ್ಭದಲಿ

ನಾನೆಲ್ಲಿ ?
ಪ್ರೀತಿಯ ಪರೀಕ್ಷೆಯಲಿ
ದಾಂಪತ್ಯದ ಜವಾಬ್ದಾರಿಯಲಿ
ಸಂಬಂಧದ ಘನತೆಯಲಿ

ನಾನೆಲ್ಲಿ ?
ಮೂಕ ಸಮಾಜದಲಿ
ಅಂಧ ಪರಂಪರೆಯಲಿ
ರೂಡಿವಾದಿ ನಂಬಿಕೆಯಲಿ

ನಾನೆಲ್ಲಿ ?
ಓಡುವ ವಿಶ್ವದಲಿ   
ವಿಜ್ಞಾನದ ಕ್ಷೇತ್ರದಲಿ
ಆಧುನಿಕ ಯುಗದಲಿ
by ಹರೀಶ್ ಶೆಟ್ಟಿ, ಶಿರ್ವ   

Thursday, October 13, 2011

ಜೀವನ ಸಮಯ

ಜೀವನ....
ನೀ ಸ್ವಲ್ಪ ತಾಳು
ನನ್ನ
ಪ್ರೀತಿ
ಇನ್ನೂ
ಇದೆ
ಬಾಕಿ
ಸಮಯ...
ನೀ ಸ್ವಲ್ಪ ಮೆಲ್ಲ ನಡೆ
ನನ್ನ
ಪ್ರೀತಿಗೆ
ಅವಳ 
ಒಪ್ಪಿಗೆ
ಇನ್ನೂ
ಇದೆ
ಬಾಕಿ 
by ಹರೀಶ್ ಶೆಟ್ಟಿ, ಶಿರ್ವ

ಮೌನ

ಮೌನ ಈಶ್ವರ 
ಮೌನ ಆತ್ಮ

ಮೌನ ಸುಖ
ಮೌನ ಶಾಂತಿ

ಮೌನ ವೇದನೆ
ಮೌನ ಸಂವೇದನೆ

ಮೌನ ಉತ್ತಮ ಭಾಷೆ 
ಮೌನ ಮಧುರ ಸಂಗೀತ

ಮೌನ ಚಟಪಟ
ಮೌನ ಸಂಕಟ

ಮೌನ ಪ್ರಯತ್ನ
ಮೌನ ಸವಾಲು

ಮೌನ ಧ್ಯಾನ
ಮೌನ ಸಮಾಧಿ

ಮೌನ ತಾಯಿ ಮಮತೆ
ಮೌನ ಮಗುವ ನಗು 

ಮೌನ ವರದಾನ
ಮೌನ ಜ್ಞಾನ

ಮೌನ ಶೃಂಗಾರ
ಮೌನ ಬಂಗಾರ
by ಹರೀಶ್ ಶೆಟ್ಟಿ, ಶಿರ್ವ

ಫಾದರ್ಸ್ ಡೇ

ಮಗ ಆಫೀಸ್'ಗೆ ಫೋನ್ ಮಾಡಿದ "ಹಲೋ ಪಪ್ಪಾ ,ಹ್ಯಾಪಿ ಫಾದರ್ಸ್ ಡೇ, ನಾನೇನ್ ಹೇಳ್ತೇನೆ,  ಇವತ್ತು ನಾವು ಹೊರಗೆ ಊಟ ಮಾಡಲು ಹೋಗುವ,  ಓಕೆ ಪಪ್ಪಾ."

ನಾನು ಇವನಿನ್ನೂ ನನ್ನನ್ನು ಬಿಡಲಿಕ್ಕೆ ಇಲ್ಲ ಎಂದು ಅವಸರವಾಗಿ "ಬೇಡ ಬೇಡ ಯಾಕೆ ಸುಮ್ಮನೆ ಹೊರಗೆ, ನನ್ನ ಹತ್ತಿರ ಟೈಮ್ ಇಲ್ಲ , ನನಗೆ ತುಂಬಾ ಕೆಲಸ ಇದೆ."

ಅದಕ್ಕೆ ಅವನು " ಏನು ನೀವು,ಇವತ್ತು ನಿಮ್ಮ ಇಷ್ಟು ದೊಡ್ಡ ದಿನ "ಫಾದರ್ಸ್ ಡೇ", ಇಷ್ಟು ಕಂಜೂಸಿ ಮಾಡಿ ಏನು ಮಾಡುತ್ತಿರಿ, ನಾನೂ ನಿಮಗೆ ಗಿಫ್ಟ್ ತಂದಿದ್ದೇನೆ (ಅವನ ಗಿಫ್ಟ್ ನನಗೆ ಗೊತ್ತಿದ್ದ ವಿಷಯ, ಕಾಗದದ ಹಾಳೆಯಲಿ ನನ್ನ ಕಾರ್ಟೂನ್ ಬಿಡಿಸಿ  "ಯೂ ಆರ್ ದ ಗ್ರೇಟೆಸ್ಟ್ ಡ್ಯಾಡ್ ಇನ್ ದ ವರ್ಲ್ಡ್, ಹ್ಯಾಪಿ ಫಾದರ್ಸ್ ಡೇ" ಎಂದು ಬರೆದು ಕೊಡುವುದು ), ಚಿಂತೆ ಮಾಡ ಬೇಡಿ . ಓಕೆ ಚಲೋ ನಿಮಗೆ ಟೈಮ್ ಇಲ್ಲ ಅಲ್ಲ, ಚಲೋ ಹೊರಗೆ ಬೇಡ, ಆದರೆ ನೀವು ಒಂದು ಕೆಲಸ ಮಾಡಿ ನೀವು ಫೋನ್ ಮಾಡಿ ಕೆ.ಎಫ್,ಸಿ'ಗೆ ಆರ್ಡರ್ ಮಾಡಿ, ನನಗಾಗಿ ಮತ್ತೆ ಮಮ್ಮಿಗಾಗಿ,  ನಾವು ಇಲ್ಲಿ ವೇಟ್  ಮಾಡುತ್ತೇವೆ, ಓಕೆ ದಿಸ್ ಇಸ್ ಫೈನಲ್, ಬೈ ಟಾಟಾ." ಎಂದು ಹೇಳಿ ಫೋನ್ ಇಟ್ಟು ಬಿಟ್ಟ.

ನನಗೆ ಫೋನ್ ನನ್ನನ್ನು ಚುಡಾಯಿಸುತ್ತಿದೆ ಎಂದು ಬಾಸವಾಯಿತು. ನಾನು ಕೆ.ಎಫ್.ಸಿ'ಗೆ ಆರ್ಡರ್ ಮಾಡಲಿಕ್ಕೆ ಫೋನ್ ತಿರುಗಿಸಿದೆ.

ಮಗ ಪ್ರೀತಿಯಿಂದ ಕೊಡುವ ಆ ಕಾಗದದ ಹಾಳೆ ನನಗೆ ಪ್ರೀಯವಾಗಿತ್ತು, ಅವನ ಸಂತೋಷವೇ ನನಗೆ ಖುಷಿ ಕೊಡುತ್ತಿತ್ತು.

by ಹರೀಶ್ ಶೆಟ್ಟಿ, ಶಿರ್ವ

Wednesday, October 12, 2011

ಮಣ್ಣಿನ ಮೂರ್ತಿ

ಒಂದು ಮಣ್ಣಿನ ಮೂರ್ತಿ
ಮೂರ್ತಿಯಲಿ ಒಂದು ಅಕ್ಷರ
ಪರಿಸೀಲನೆ ನಡೆಯಿತು
ಬಂದರು ಜ್ಞಾನಿ ವಿಧ್ವಾಂಸರು

ಒಬ್ಬರು ಇದು ಶಿವನ ಮೂರ್ತಿ
ಬರೆದ ಅಕ್ಷರ ಓಂ
ಇನ್ನೊಬ್ಬರು ಇದು ಅಲ್ಲಾನ ಚಿನ್ಹೆ
ಬರೆದ ಅಕ್ಷರ ಅಲ್ಲಾ 
ಮತ್ತೊಬ್ಬರು ಇದು ಜೆಸಸ್ ಅವರ ಮೂರ್ತಿ
ಬರೆದ ಅಕ್ಷರ ಕ್ರಾಸ್
ಹೀಗೆಯ ಹಲವು ಧರ್ಮ ಗುರುಗಳು ಬಂದರು
ತನ್ನ ಧರ್ಮ ಅನುಸಾರ ಮತ ಇಟ್ಟರು

ಒಂದು ಚೆಂಡು ಹಾರುತಾ ಬಂತು
ಮೂರ್ತಿಗೆ ತಾಗಿ ಮೂರ್ತಿ ಒಡೆದು ಹೋಯಿತು
ಮಣ್ಣ ಮೂರ್ತಿ ಮಣ್ಣು ಪಾಲಾಯಿತು
ಎಲ್ಲರು ಸ್ತಬ್ದರಾದರು
ಮಗು ಒಂದು ಬಂದು ಕೇಳಿದ
"ನನ್ನ ಚೆಂಡು ನೋಡಿದಿರಾ"
by ಹರೀಶ್ ಶೆಟ್ಟಿ, ಶಿರ್ವ

ಚಂದ್ರನ ಮೇಲೆ ಮೊಲ

ನನ್ನ ಮಗ ಬಂದು "ಪಪ್ಪಾ ನಿಮಗೆ ಚಂದ್ರನ ಮೇಲೆ ಅದೇನೆಂದು ಗೊತ್ತಿದೆಯೇ ? 

"ಚಂದ್ರನ ಮೇಲೆ ಅದು ಮೊಲ" ಎಂದು ಹೇಳಿದ ನನ್ನ ಅಪ್ಪನಂತೆ , ನಾನೂ ನನ್ನ ಮಗನಿಗೆ "ಅದು ಮೊಲ" ಎಂದು ಹೇಳಿದೆ.

ಆ ಸಮಯದಲ್ಲಿ  ನಾನು ತಂದೆಯವರು ಹೇಳಿದು ಸತ್ಯವೆಂದು ನಂಬಿದೆ. 

ಆದರೆ ನನ್ನ ಮಗ ಒಳಗೆ ಹೋಗಿ ತನ್ನ ಭೂಗೋಳ ಪುಸ್ತಕ ತಂದು "ಸುಮ್ಮನೆ ಏನಾದರೂ ಹೇಳಬೇಡಿ "ಮೊಲ" ಅಂತೆ, ಮೊಲವು ಅಲ್ಲ ಹುಲಿಯು ಅಲ್ಲ, ನೋಡಿ ಇಲ್ಲಿ ಎಲ್ಲ ವಿವರವಾಗಿ ಬರೆದ್ದಿದ್ದಾರೆ, ನೀವೇನು ಸ್ಕೂಲಿಗೆ ಹೋಗಲೇ ಇಲ್ಲವ..." ಎಂದು ಕೋಪದಿಂದ ಹೇಳಿ ನನ್ನ ಎದುರು ತನ್ನ ಭೂಗೋಳ ಪುಸ್ತಕ ಇಟ್ಟು ಹೋದ . 

ನನಗೆ ಪುಸ್ತಕದಲ್ಲಿದ್ದ ಚಂದ್ರ ನನ್ನನ್ನು ನೋಡಿ ನಗುತ "ಈಗ ನಾನು ಚಂದ ಮಾಮನಲ್ಲ, ಈಗ ನಾನು ಸೂಪರ್ ಮೂನ್, ಇಂದಿನ ಮಕ್ಕಳು ನಿನ್ನಂತೆ ಮೂರ್ಖ ಶಿರೋಮಣಿಯರಲ್ಲ, ಅವರು ತುಂಬಾ ಬುದ್ದಿವಂತರು " ಎಂದು ಹೇಳುತ್ತಿದ್ದಂತೆ ಬಾಸವಾಯಿತು.

By ಹರೀಶ್ ಶೆಟ್ಟಿ, ಶಿರ್ವ

Tuesday, October 11, 2011

ಕನಸಲಿ

ಕನಸಲಿ.....
ನಿದ್ದೆ ಬಂದಂತೆ
ಕನಸಲಿ ನೀ ಬಂದೆ
ನನ್ನನ್ನು ಎಚ್ಚರಿಸಿ ತೊಂದರೆಯ ಕೊಟ್ಟು
ನಗು ನಗುತ ನೀ ಓಡಿ ಹೋದೆ

ಕನಸಲಿ.....
ಹುಣ್ಣಿಮೆಯ ಚಂದ್ರನನು ನೋಡುತಲೇ
ನಿದ್ರೆ ಆವರಿಸಿತು
ಕನಸಲಿ ಚಂದ್ರನಂತ ಸುಂದರ
ನಿನ್ನ ಮುಖವ ಕಂಡೆ
ಅಮಾವಾಸ್ಯೆಯ ಚಂದ್ರನಂತೆ ನೀ ಕಾಳಕತ್ತಲೆಯಲ್ಲಿ ಕಣ್ಮರೆಯಾದೆ

ಕನಸಲಿ.....
ನಕ್ಷತ್ರ ಲೆಕ್ಕ ಮಾಡುತ
ನಿದ್ದೆಗೆ ಹೋದೆ
ದೇವಲೋಕದ ಅಪ್ಸರೆಯಂತೆ
ನೀ ಪ್ರತ್ಯಕ್ಷವಾದೆ
ಸೌಂದರ್ಯ ನೋಡುತಲೇ ನೀ ಮಾಯವಾದೆ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಮತ್ತು ವಂಚನೆ

ಅಂದು ನೀ ಹೇಳಿದಿ ಅಲ್ಲವೇ ನಿನ್ನನ್ನು ಬಿಟ್ಟು ಹೋಗುದಿಲ್ಲವೆಂದು
ನನ್ನಲ್ಲಿರುವ ಹೃದಯ ನಿನ್ನದಲ್ಲ ನನ್ನದೆಂದು

ಇಂದು ನೀ ಏಕೆ ಹೀಗೆ ಮಾಡಿದೆ ?
ನನ್ನ ಹೃದಯ ಚೂರು ಚೂರು ಮಾಡಿ ಏಕೆ ನನಗೆ ನೀಡಿದೆ ?

ಅಂದು ನೀ ಕೊಟ್ಟ ಹೂವನ್ನು ಜೋಪಾನವಾಗಿ ಪುಸ್ತಕದಲಿ ಇಟ್ಟಿದೆ
ಇಂದು ಆ ಒಣಗಿದ ಹೂವು ನನಗೆ ರಕ್ತದ ಕಣದಂತೆ ಕಾಣುತ್ತಿದೆ

ನಿನ್ನನ್ನು ಪ್ರೀತಿಸಿ ನಾ ಎಲ್ಲವನ್ನೂ ಕಳೆದೆ
ನಿನ್ನಿಂದ ಏಕಾಂತ ಜೀವನದ  ಕೊಡುಗೆಯ ಪಡೆದೆ

ನನ್ನನ್ನು ವಿರಹದ ಬೆಂಕಿಯ ಹಾದಿಯಲಿ ಬಿಟ್ಟು ನೀ ಏಕೆ ಓಡಿ ಹೋದೆ ?
ಪ್ರೀತಿಯಲಿ ನನ್ನನ್ನು ವಂಚಿಸಿ ನೀ ಎನನ್ನು ಪಡೆದೆ ?

ಇಂದು ನನ್ನ ಅಸ್ತಿತ್ವ ಮರಣ ಹೊಂದಿದೆ
ಜೀವ ಇದ್ದು ನಾ ಮೌನ ಶವ ರೂಪ ಪಡೆದೆ
by ಹರೀಶ್ ಶೆಟ್ಟಿ, ಶಿರ್ವ

Monday, October 10, 2011

ಪ್ರಪಂಚ ಏಕೆ ಹೀಗೆ ?

ಪ್ರಪಂಚ ಏಕೆ ಹೀಗೆ ?
ನಾವೊಂದು ಮಾಡುವುದು
ಅವರೊಂದು ಬಯಸುವುದು
ಆವರಿಗೆ ನಮ್ಮ ಉಪಕಾರ
ನಮಗೆ ಅವರ ಅಪಕಾರ

ಬಂದ ಬಡವನಿಗೆ
ಅನ್ನ ದಾನ ಕೊಟ್ಟು
ಆಶ್ರಯ ನೀಡಿ ಕೆಲಸಕ್ಕೆ ಇಟ್ಟು
ಮನೆಯವನಾಗಿ ಇದ್ದು ಉಂಡು ತಿಂದು
ದ್ರೋಹ ಮಾಡಿ ಓಡಿ ಹೋದನಲ್ಲವೇ

ಗೆಳೆಯನೆಂದು ಕರೆದು
ಅವನ ಒಟ್ಟಿಗೆ ಬೆರೆತು
ತನ್ನ ಹೃದಯದ ಎಲ್ಲ ಮಾತನ್ನು ಹೇಳಿ ಕೇಳಿ
ಜೀವಕ್ಕೆ ಜೀವ ಕೊಡಲು ಸಿದ್ಧನಿದ್ದವ
ಸಾಲವ ಪಡೆದು ತೊರೆದು ಹೋದನಲ್ಲವೇ

ಅನಾಥ ಮಗುವನ್ನು
ಮನೆಗೆ ತಂದು ಮುದ್ದಾಗಿ ಬೆಳೆಸಿ
ವಿದ್ಯೆ ನೀಡಿ ಪಾಠ ಕಲಿಸಿ
ಜೀವನದ ಅರ್ಥ ಕಲಿಸಿದವನಿಗೆ
ಕಡೆಗೆ ಅನಾಥ ಮಾಡಿ ಬಿಟ್ಟು ಹೋದನಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

ನೀನಿಲ್ಲದೆ

ನೀನಿಲ್ಲದೆ .....
ಮನಸ್ಸಿಲ್ಲ
ಕನಸಿಲ್ಲ
ಜೀವನದಲಿ ಆಸಕ್ತಿ ಇಲ್ಲ
ನೀನಿಲ್ಲದೆ.....
ಆಸೆ ಇಲ್ಲ
ನಿರಾಸೆ ಇಲ್ಲ
ಬೇಕು ಬೇಡ ಎಂಬ ಛಲ ಇಲ್ಲ
ನೀನಿಲ್ಲದೆ.....
ಭಾವ ಇಲ್ಲ
ದುರ್ಭಾವ ಇಲ್ಲ
ಹಾಗು ಹೋಗುಗಳ ಚಿಂತೆ ಇಲ್ಲ
ನೀನಿಲ್ಲದೆ.....
ನಗು ಇಲ್ಲ
ಅಳು ಇಲ್ಲ
ಕಣ್ಣಲ್ಲಿ ಒಂದು ಹನಿ ಕಣ್ಣಿರು ಇಲ್ಲ
ನೀನಿಲ್ಲದೆ.....
ಬಾಳು ಇಲ್ಲ
ಬದುಕಿಲ್ಲ
ಹುಟ್ಟು ಸಾವಿನ ಜ್ಞಾಪಕ ಇಲ್ಲ
by ಹರೀಶ್ ಶೆಟ್ಟಿ, ಶಿರ್ವ

Sunday, October 9, 2011

ಅಭಿವ್ಯಕ್ತಿಗಳು

ಆತ್ಮಿಯರ ಕಣ್ಣಿರ ಹನಿ
ವಿವರಿಸುತ್ತದೆ ಅನೇಕ ವಿಷಯಗಳು

ಗೆಳೆಯರ ಮೌನ
ಮಾತನಾಡುತ್ತದೆ ಅನೇಕ ಮಾತುಗಳು 

ಪುಸ್ತಕದ ಹಾಳೆ
ಹೇಳುತ್ತದೆ ಅನೇಕ ಕಥೆಗಳು

ಸಣ್ಣ ಅಜ್ಞಾನ
ಉಂಟಾಗುತ್ತದೆ ಹಲವು ಹಾನಿಗಳು

ಕೋಪದ ನಿರ್ಣಯ
ಮುರಿಯುತ್ತದೆ ಅನೇಕ ಸಂಬಂಧಗಳು

ಹೃದಯದಿಂದ ನಕ್ಕ ನಗು
ಪ್ರದರ್ಶಿಸುತ್ತದೆ ಸಂತೋಷಗಳು

ಮನಸ್ಸಿನ ವೇದನೆ
ತೋರಿಸುತ್ತದೆ  ನೋವುಗಳು

ಕವಿಯ ಬರಹ 
ಹೊರ ಚಿಮ್ಮುತ್ತದೆ ಮನಸ್ಸಿನ ಭಾವನೆಗಳು
by ಹರೀಶ್ ಶೆಟ್ಟಿ, ಶಿರ್ವ

ಸಂತಸದ ಹಾದಿ

ಯಾವ ಹಾದಿಯಲಿ ಹೋಗಲಿ
ಯಾವ ಹಾದಿಯಲಿ ನಡೆಯಲಿ

ಬಾಲ್ಯವೆಲ್ಲ ಕಳೆದೆ ಆಡಿ ಓಡಿ ನಿದ್ರೆಯಲಿ 
ಯೌವನ ಕಳೆಯಿತು ತಿರುಗಾಟದಲಿ

ಮದುವೆ ಆಗಿ ಸಿಲುಕಿದೆ ದಾಂಪತ್ಯದ ಚಕ್ರವ್ಯೂಹದಲಿ
ಇನ್ನೂ ಬರಲಿಲ್ಲ ಬುದ್ದಿ ಅಲೆಯುತ್ತಿದ್ದೇನೆ ಪಶ್ಚಾತ್ತಾಪದಲಿ

ಹೇಗೋ ಸಾಗಿಸುತ್ತಿದ್ದೇನೆ ಜೀವನ ಕಷ್ಟದಲಿ
ಜೀವನದ ಅಭಾವ ಕಾಣುತ್ತಿದ್ದೇನೆ ನನ್ನ ಮಕ್ಕಳಲಿ

ಸಂತಸದ ಹಾದಿಯ ಹುಡುಕಿ ಹುಡುಕಿ ಬಿದ್ದಿದ್ದೇನೆ ದುಃಖದಲಿ
ಗೃಹಸ್ಥ ಜೀವನದಿಂದ ಸನ್ಯಾಸ ಒಳ್ಳೆಯದೆಂಬ ಭಾವ ಹುಟ್ಟಿತು ಮನದಲಿ

ಜೀವನದಲಿ ಜಿಗುಪ್ಸೆ ಉಂಟಾಗಿ ಹುಟ್ಟಿತು ವೈರಾಗ್ಯ ಮನದಲಿ
ಹೋದೆ ಸನ್ಯಾಸಿಯಾಗಲು ಪ್ರಖ್ಯಾತ ಗುರುಗಳಲ್ಲಿ

ಏಕೆ ನಿನಗೆ ಸನ್ಯಾಸ ದೀಕ್ಷೆ ಎಂದು ಕೇಳಿದರವರು ನನ್ನಲ್ಲಿ
ಇದೆ ಎಲ್ಲಕಿಂತ ದೊಡ್ಡ ವೈರಾಗ್ಯ ಈ ಗೃಹಸ್ಥ ಧರ್ಮದಲಿ

ತನ್ನ ಕುಟುಂಬಕ್ಕೆ ಸುಖ ನೀಡದವನು ಹೇಗೆ ಸಂತೋಷ ತರುವನು ಸಮಾಜದಲಿ
ವೈರಾಗ್ಯ ಜೀವನ ಆನಂದಿಸಬಹುದು ನೀನು ಒಟ್ಟಿಗೆ ಇದ್ದು ಪರಿವಾರದಲಿ

ಅವರ ಮಾತು ಕೇಳಿ ಬದಲಾವಣೆ ಆಯಿತು ನನ್ನ ವಿಚಾರದಲಿ
ಜೀವನದ ಸತ್ಯ ತಿಳಿದು ನಂಬಿಕೆ ಮೂಡಿತು ಗೃಹಸ್ಥ ಧರ್ಮದಲಿ
by ಹರೀಶ್ ಶೆಟ್ಟಿ, ಶಿರ್ವ

Saturday, October 8, 2011

ಮರಳಿ ಬಾ

ಏಕೆ ನಾನಿಷ್ಟು ಕೊರಗುವೆ ?
ನಿನ್ನದೇ ಯೋಚನೆಯಲಿ ಏಕೆ ಮುಳುಗುವೆ ?
ನನ್ನ ಹೃದಯ ಏಕೆ ನಿನ್ನ ದಾಸ  ?
ಏಕೆ ಅಲ್ಲಿ ನಿನ್ನದೇ ವಾಸ ?

ನಿನ್ನ ಕೋಪಕ್ಕೆ ನಾ ಏಕೆ ಹೆದರುವೆ ?
ನಿನ್ನ ಅಗಲಿಕೆಯಿಂದ ನಾ ಏಕೆ ಕಷ್ಟ ಪಡುವೆ ?
ನನ್ನ ಚಿಂತೆ ನಿನಗಿಲ್ಲವೇ ?
ಸ್ವಲ್ಪವು ವ್ಯಥೆ ನಿನಗಾಗುದಿಲ್ಲವೇ ?

ಈ ಸಂಬಂಧಕ್ಕೆ ಯಾವ ಹೆಸರು ಕೊಡಲಿ
ಮನಸ್ಸಿನ ನೆಮ್ಮದಿ ಹೇಗೆ ಪುನಃ ಪಡೆಯಲಿ
ಈ  ಮೋಹದ ಕಾರಣ ಎಲ್ಲಿ ಹುಡುಕಲಿ
ಇದರ ಉತ್ತರವಿಲ್ಲ ನಿನ್ನಲ್ಲಿ ನನ್ನಲ್ಲಿ

ದುಂಬಿ ಹೂವನ್ನು ಬಿಟ್ಟು ಇರಬಹುದೇ ?
ಸಸಿ ನೀರಿಲ್ಲದೆ ಬದುಕಬಹುದೇ ?
ನನ್ನ ಕಣ್ಣಿರು ಹೇಳದೆ ಕೇಳದೆ ಬರುತಿದೆ
ನನ್ನ ಹೃದಯ ನಿನ್ನನ್ನೇ "ಮರಳಿ ಬಾ" ಎಂದು ಕರೆಯುತಿದೆ
by ಹರೀಶ್ ಶೆಟ್ಟಿ, ಶಿರ್ವ

ಪ್ರಾಮುಖ್ಯತೆ

ಮುಗ್ಧ ಜೀವಿ ನಾನು
ಬಡಿತದೆ ಹೃದಯ ನನ್ನದೂ
ನಗುವ ಆಸೆ ನನ್ನದೂ

ಮೊಗ್ಗು ಹೂವು ನಾನು
ಸುವಾಸನೆ ತುಂಬಿದ ಜೀವ ನನ್ನದೂ
ಅರಳುವ ಬಯಕೆ ನನ್ನದೂ

ಗೂಡು ಹಕ್ಕಿ ನಾನು
ರೆಕ್ಕೆ ಕಾಯುತ್ತಿದೆ ನನ್ನದೂ
ಹಾರುವ ಇಚ್ಛೆ ನನ್ನದೂ

ಸೂರ್ಯ ಚಂದ್ರ ಅಲ್ಲ ನಾನು
ಪ್ರಪಂಚದಲಿ ಪುಟ್ಟ ಸ್ಥಾನ ನನ್ನದೂ
ತೋರಿಸುವೆ ಪ್ರಾಮುಖ್ಯತೆ ನನ್ನದೂ
by ಹರೀಶ್ ಶೆಟ್ಟಿ, ಶಿರ್ವ

ಬೆಳಗುವ ದೀಪ

ಬೆಳಗುವ ದೀಪಕ್ಕೆ
ಕತ್ತಲೆಯ ಹೆದರಿಕೆ ಯಾಕೆ ?
ಅರಳುವ ಹೂವಿಗೆ
ಸೂರ್ಯಾಸ್ತದ ಚಿಂತೆ ಯಾಕೆ ?
ಜೇನು ಒಟ್ಟು ಮಾಡುವ ದುಂಬಿಗೆ
ಜೇನು ಕಳ್ಳರ ಭಯ ಯಾಕೆ ?
ಸತ್ಯದ ಮಾತಿಗೆ
ಸುಳ್ಳು ನುಡಿಗಳ ಅರ್ಥ ಯಾಕೆ ?
ಹರಿಯುವ ನದಿಗೆ
ಸಮುದ್ರದ ಅಲೆಗಳ ಲೆಕ್ಕ ಯಾಕೆ?
by ಹರೀಶ್ ಶೆಟ್ಟಿ, ಶಿರ್ವ

Thursday, October 6, 2011

ರಾವಣ ದಹನ

ಒಂದು ಕಿಡಿ ಸಾಕು
ರಾವಣನ ಅಹಂಕಾರ ಮುರಿಯಲು
ದುಷ್ಟ ಶಕ್ತಿಯನ್ನು ಮುಗಿಸಲು
ಅಸತ್ಯ ಅಳಿಸಲು

ಪ್ರತಿ ವರುಷ ರಾವಣನ ದಹನ
ನೀಡುತ್ತದೆ ನಮಗೆ ಜ್ಞಾನ
ಸತ್ಯವೇ ಮಹಾನ
ಅಹಂಕಾರಕ್ಕೆ ಇಲ್ಲ ಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

ರಾಮ ರಾವಣ

ರಾಮ ರಾವಣ ಇಬ್ಬರು ತುಲಾ ರಾಶಿಯವರಂತೆ
ಇಬ್ಬರಲ್ಲಿ ಒಂದೇ ರಾಶಿಯ ಗುಣವಂತೆ 
ರಾಮ ಸತ್ಯ ಬ್ರಹ್ಮ,ನಂತೆ
ರಾವಣ ಮಾಯಾವಿಯಂತೆ

ರಾಮನ ಜೀವನ ವಾಸ್ತವಿಕವಂತೆ 
ಅವನು ಈಶ್ವರನಂತೆ
ರಾವಣನೂ ಈಶ್ವರ ಭಕ್ತನಂತೆ 
ಅವನು ಅಸುರನಂತೆ 

ರಾಮನ ಅಯೋಧ್ಯದ ಅರಮನೆ ಭವ್ಯವಂತೆ 
ಆದರೆ ರಾವಣನ ಲಂಕಾ ಅತಿ ಭವ್ಯವಂತೆ
ಅಯೋದ್ಯದ ಅರಮನೆ ಸತ್ಯ ಪ್ರತೀಕವಂತೆ  
ಸ್ವರ್ಣ ಲಂಕಾ ಒಂದು ಭ್ರಮೆ ಸತ್ಯ ಅಲ್ಲವಂತೆ

ರಾಮನ ಭಾವುಕ ಮನಸ್ಸಂತೆ 
ಕಾಡಲ್ಲಿ ಅಲೆದ ಸಾಧಾರಣ ಮನುಷ್ಯನಂತೆ 
ರಾವಣ ಅಹಂಕಾರಿಯಂತೆ 
ಐಶ್ವರ್ಯದಲ್ಲಿರುವ ದೊಡ್ಡ ಮನುಷ್ಯನಂತೆ 

ರಾವಣ ಮಾಡಿದ ಸೀತಾಹರಣ ಅಂತೆ
ರಾಮ ತುಂಬಾ ಅತ್ತನಂತೆ
ಆದರೆ ರಾಮ ಶುಭಕಾರಿಯಂತೆ
ರಾವಣ ದುರಹಂಕಾರಿಯಂತೆ

ಯುದ್ಧದಲಿ ರಾಮ ರಾವಣನನ್ನು ಸೋಲಿಸಿದನಂತೆ 
ರಾವಣನ ಅಲ್ಲಿಗೆ ಅಂತ್ಯವಾಯಿತಂತೆ
ಸುಳ್ಳು ಸತ್ಯಕ್ಕೆ ಶರಣಾಯಿತಂತೆ
ಸತ್ಯದ  ವಿಜಯವಾಯಿತಂತೆ  

ಸೀತೆಯ ಅಗಲಿಕೆ ರಾಮನ ರಾಜ ಪರೀಕ್ಷೆಯಂತೆ 
ಸೀತೆಯ ಅಗ್ನಿ ಪರೀಕ್ಷೆ ರಾಮನ ವಿರಹವಂತೆ
ರಾಮ ಮಾಡಿದ್ದು ತನ್ನ ಇಚ್ಛೆಯ ತ್ಯಾಗವಂತೆ 
ಮಾನವರಿಗೆ ಕೊಟ್ಟ ದಾಂಪತ್ಯ ಜೀವನದ ಇದೇ ಸಂದೇಶವಂತೆ
by ಹರೀಶ್ ಶೆಟ್ಟಿ, ಶಿರ್ವ
 

Wednesday, October 5, 2011

ನಾನು......ನಾನೇ

ನಾನು .....ನಾನೇ
ಎಲ್ಲ ನಾನೇ
ಎಲ್ಲ ನನ್ನದೇ
ನಾನೇ ಸರ್ವಸ್ವ
ನಾನಿಲ್ಲದೆ ಏನೂ ಇಲ್ಲ
ನನಗೆ ಯಾರ ಅಗತ್ಯವಿಲ್ಲ

ನಾನು......ನಾನೇ... ಎಂದು
ಹಿಟ್ಲರ್ ಹೋದ
ನೆಪೋಲಿಯನ್ ಹೋದ
ಆರಂಗ್ಜೇಬ್ ಹೋದ
ಸದ್ದಾಂ ಹುಸ್ಸನ್ ಇಲ್ಲ
ಒಸಮ ಇನ್ನಿಲ್ಲ
ನಾನು......ನಾನೇ... ಎಂಬ
ಅಹಂಕಾರ ಏಕೆ ?
ನಾನು ನನ್ನ ಎಂಬ ಅಧಿಕಾರ ಏಕೆ ?
ಬೇಡವಾದ ಜಂಬ ಏಕೆ ?
ನಶ್ವರ ಶರೀರದ ಆಸೆ ಏಕೆ? 
ಯಾರದೂ ಆಗದ ಸೊತ್ತು ನಿನಗ್ಯಾಕೆ ? 
 by ಹರೀಶ್ ಶೆಟ್ಟಿ, ಶಿರ್ವ

ಮೊದಲ ಪ್ರೀತಿ

ಏಕೆ ನಿನ್ನ ನೆನಪು ಯಾವಾಗಲು
ಏಕೆ ನಿನ್ನನ್ನು ಮರೆತು ಹೋಗುವುದಿಲ್ಲ

ಆ ದಿನಗಳು ಕಳೆದವು
ಪ್ರೀತಿಯ ಮರಳು ಮನೆ ತುಂಡಾಗಿದೆ
ಹೃದಯ ಮನೆಯಲಿ ನೀ ಹೇಗೆ ಉಳಿದು ಹೋದೆ
ಏಕೆ ನಿನ್ನ ಚಿತ್ರವ ನನ್ನ ಮನಸ್ಸಲಿ ಬಿಟ್ಟು ಹೋದೆ

ಈಗ ನಮ್ಮ ಹಾದಿ ಬೇರೆ ಬೇರೆ
ನಮ್ಮಿಬ್ಬರ ಸಂಸಾರ ಪ್ರತ್ಯೇಕ
ಸುಖ ಸಂತೋಷ ನೆಲೆಸಿದೆ ನಮ್ಮಿಬ್ಬರ ಮನೆಯಲಿ
ಆದರೆ ಏಕೆ ನಿನ್ನ ನೆನಪು ಸದಾ ನನ್ನ ಮನದಲಿ

ಮೊದಲ ಪ್ರೀತಿಯ ಈ ಶಿಕ್ಷೆ ಏಕೆ
ಆ ಕಷ್ಟದ ಅನುಭವ ಈಗಲೂ ಏಕೆ
ಈಗಲೂ ಕಣ್ಣಿರ ಧಾರೆ ಸುರಿಯುವುದು ಏಕೆ
ನಮ್ಮಿಬ್ಬರ ಹೃದಯ ಹೀಗೆಯೇ ಅಳುತಾ ಇರಬೇಕೆ?
by ಹರೀಶ್ ಶೆಟ್ಟಿ, ಶಿರ್ವ

Tuesday, October 4, 2011

ವಿಷ ಅಮೃತ

ಕಾಣದ ಕುರುಡರ
ಜಗ ಕತ್ತಲೆ
ಕಾಣುವ ಕುರುಡರ
ಮನಸ್ಸು ಬೆತ್ತಲೆ

ಮುದ್ದು ಮೂರ್ಖರ 
ದಯನೀಯ ಸ್ಥಿತಿ
ಮೂರ್ಖ ಜಾಣರ
ಗಂಭೀರ ಸ್ಥಿತಿ

ಶೀಘ್ರ  ಕೋಪಿಯ
ಕೋಪ ಕ್ಷಣ ಕಾಲ 
ಉಗ್ರ ಕೋಪಿಯ
ಕೋಪ ಕೆಟ್ಟ ಕಾಲ

ಸಜ್ಜನರು ಕೊಟ್ಟ ಭಾಷೆ
ಕೊನೆಯ ಉಸಿರು ತನಕ
ದುರ್ಜನರು ಕೊಟ್ಟ ಭಾಷೆ
ಮರಳಿ ಹೋಗುವ ತನಕ
by ಹರೀಶ್ ಶೆಟ್ಟಿ, ಶಿರ್ವ

ಪ್ರಯಾಣ

ಎಲ್ಲಿ ನಿಲ್ಲುವುದೋ ನಿನ್ನ ಪ್ರಯಾಣ
ಸಾಗುತ್ತಲೇ ಇದೆ ಗೊತ್ತಿಲ್ಲ ತಾಣ

ನಿನ್ನ ಬಯಕೆಗೆ ಇಲ್ಲಿಲ್ಲ ಸ್ಥಾನ ಮಾನ
ಎಲ್ಲಿ ಜೀವನ ಸಾಗುವುದೋ ಅಲ್ಲಿಯೇ ನಿನ್ನ ಆವಾಸ ಸ್ಥಾನ

ಎಲ್ಲಿ ನಿನ್ನನ್ನು ನೆಲೆಸುವುದೋ ಈ ಪಯಣ
ಯಾವ ಭೂಮಿಯ ಮಣ್ಣಿನಲ್ಲಿಯೋ ನಿನ್ನ ಅವಸಾನ

ಪ್ರಯಾಣ ಮಾಡುವುದೇ ಜೀವನದ ವಿಧಾನ
ಯಾರಿಗೆ ಗೊತ್ತು ಎಲ್ಲಿ ನಿನ್ನ ಗಮ್ಯಸ್ಥಾನ
by ಹರೀಶ್ ಶೆಟ್ಟಿ, ಶಿರ್ವ

ತೋಚುದಿಲ್ಲ

ತೋಚುದಿಲ್ಲ ಮನದಲಿ ಏನೂ
ಗೀಚುವುದು ಹೇಗೆ
ಪದಗಳು ಸುಮ್ಮನಿದ್ದವೇ
ಅದನ್ನು ಕಲಕುದು ಹೇಗೆ
ಭಾವನೆಗಳು ಮೌನವಾಗಿದೆ
ಹೊರ ತೆಗೆಯುವುದು ಹೇಗೆ
ಪೆನ್ನು ನಿದ್ದೆಯಲ್ಲಿ ಇದೆ
ಅದನ್ನು ಎಚ್ಚರಿಸುವುದು ಹೇಗೆ
byಹರೀಶ್ ಶೆಟ್ಟಿ, ಶಿರ್ವ

Monday, October 3, 2011

ಸಾಹಿತ್ಯದ ಮಹತ್ವ

ಕಟ್ಟಿದ ಕೈ
ಮುಕ್ತವಾಯಿತು
ಮನಸ್ಸಿನ ತಳಮಳ
ದೂರವಾಯಿತು

ಪುಸ್ತಕದ ಹಾಳೆಗಳು
ಕಾಯುತ್ತಿದ್ದವು
ಪುನಃ ಪುನಃ ನನ್ನನ್ನು
ಕರೆಯುತ್ತಿದ್ದವು
ಪೆನ್ನಿನ ಆಸೆ
ಈಡೇರಿತು

ಭಾವನೆಗಳ ಅಲೆಗಳು
ಏರು ತಗ್ಗುತ್ತಿದ್ದವು
ಕನಸುಗಳ ದೋಣಿ
ಮುಳುಗುತ್ತಿದ್ದವು
ಬರಹದ ಇಚ್ಛೆ
ತೀರಕ್ಕೆ ಸೇರಿತು

ಕವಿಯ ಹೃದಯ
ಅಳುತ್ತಿದ್ದವು
ಆತ್ಮಿಯ ಗೆಳೆತನ
ಕೊರಗುತ್ತಿದ್ದವು
ಸಾಹಿತ್ಯದ ಮಹತ್ವ
ಎಲ್ಲರಿಗೂ ತಿಳಿಯಿತು
by ಹರೀಶ್ ಶೆಟ್ಟಿ, ಶಿರ್ವ

Saturday, October 1, 2011

ಕ್ಷಣಿಕ ವ್ಯಾಮೋಹ

ಅರಳುವ ಮುನ್ನ
ಹೂವಿನ ಮೊಗ್ಗನ್ನು 
ಕೈಯಿಂದ ಉಜ್ಜಿ 
ಅದರ ಬಾಳನ್ನು ಮುಗಿಸಿ
ಕೈ ಸುಗಂಧಿಸುವವನೇ

ಅದರ ಸುಗಂಧ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಹಣಕಾಗಿ ಹೆಣವಾಗಿ
ದೂರ ಇದ್ದು ಬಾಳಿ
ಮಮತೆಯ ಕೊಂದು
ಮಗುವನ್ನು ದೂರ ಇಟ್ಟು
ನೊಂದುವ ತಾಯಿಯೇ

ಹಣದ ಈ ಮಾಯೆ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಆಡಿ ನಲಿದಾಡಿ
ಅಲ್ಲಿ ಇಲ್ಲಿ ಓಡುವ
ಕೋಳಿಯನ್ನು ಕೊಂದು
ಅದರ ಸಾರನ್ನು
ರುಚಿಸುವವನೇ

ಅದರ ಸವಿ ರುಚಿ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ತನ್ನ ಸ್ವಾರ್ಥಕ್ಕಾಗಿ
ಮಿತ್ರ ಎಂದು ಹೇಳಿ
ಮುಗ್ಧ ಜೀವಿಯನ್ನು
ಬಲು ಸುಲಭವಾಗಿ
ಮೂರ್ಖ ಮಾಡುವವನೇ

ನಿನ್ನ ಸ್ವಾರ್ಥದ ಲಾಭ
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ

ಮರವನ್ನು ಕಡಿದು
ನಿಸರ್ಗವನ್ನು ಬೆತ್ತಲೆ ಮಾಡಿ
ತನ್ನ ಮನೆಯನ್ನು
ಸುಂದರವಾಗಿ 
ಅಲಂಕರಿಸುವವನೇ

ಆ  ಪೀಠೋಪಕರಣಗಳು 
ಕೇವಲ ಅಲ್ಪ ಸಮಯ
ಉಳಿಯುವುದಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...