Saturday 31 May 2014

ಒಲವು

ಗೆಳತಿ 

ನೀ ನೀಡುವ ಪ್ರತಿ ನೋವನ್ನು 
ಸಹಿಸುವೆ 
ನೀ ಕೊಡುವ ಪ್ರತಿ ಬೈಗುಳ 
ಸ್ವೀಕರಿಸುವೆ 
ಒಂದು ವೇಳೆ 
ನನ್ನ ಅಗತ್ಯವಿದೆಯೆಂದು ಎನಿಸಿ 
ನೀನು ಕರೆದರೆ 
ಓಡೋಡಿ ಬರುವೆ 
---
ಗೆಳತಿ 

ನಿನ್ನ ನನ್ನ ನಡು 
ಯಾವ ರೀತಿಯ ಪ್ರತಿಸ್ಪರ್ಧೆ 
ನಾನು ನಿನ್ನ ಪ್ರತಿಸ್ಪರ್ಧಿ ಅಲ್ಲ 
ನಾನು ನಿನ್ನ ಹಿತೈಷಿ 
ನಮ್ಮಲ್ಲಿ ಬೇಡ ಸೋಲು ಗೆಲುವು 
ಇರಲಿ ಒಲವು 
---
ಗೆಳತಿ 

ಜೀವನವಿಲ್ಲದ 
ಅನೇಕ ಸಂಬಂಧಗಳನ್ನು ಇಟ್ಟು
ಏನು ಪ್ರಯೋಜನ, 
ಇದ್ದ ಸ್ವಲ್ಪವೇ ಸಂಬಂಧದಲ್ಲಿ 
ಜೀವನ ಇರುವುದು ಅತ್ಯಗತ್ಯ 
---
ಗೆಳತಿ 

ಆ ಮಲ್ಲಿಗೆಯ ತೋಟಕ್ಕೂ 
ನಿನ್ನ ಅಗತ್ಯವಿದೆ ಎನಿಸುತ್ತದೆ 
ಬಹುಶಃ ನಿನ್ನ ಆರೈಕೆಯ ಕೊರತೆ ಉಂಟಾಗಿದೆ 
ಈಗ ಅಲ್ಲಿ ಮೊದಲ 
ಉತ್ಸಾಹಭರಿತ ವಾತಾವರಣ 
ಕಂಡು ಬರುವುದಿಲ್ಲ 
by ಹರೀಶ್ ಶೆಟ್ಟಿ,ಶಿರ್ವ

2 comments:

  1. ಗೆಳತಿಯೊಡನೆ ಈ ಸಂವಾದ ಮನಮುಟ್ಟುವಂತಿದೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್

    ReplyDelete