Wednesday 7 May 2014

ಅವನ ವ್ಯಥೆ

ಅವನು ಹಾಕಿದ ಧಾನ್ಯಗಳನ್ನು 
ಹೆಕ್ಕಿ ತಿನ್ನಲು ಬರುವುದಿಲ್ಲ ಈಗ ಆ ಹಕ್ಕಿಗಳು,
ಅವನ ವ್ಯಥೆಯ ಅರಿವಿದೆ ಆ ಹಕ್ಕಿಗಳಿಗೆ 
ಅವಳಿಲ್ಲದೆ 
ಆ ಮನೆಯಲ್ಲಿ ಅಕ್ಕಿ ಬೇಯುವುದಿಲ್ಲವೆಂದು 
ತಿಳಿದಿದೆ ಅವುಗಳಿಗೆ 

by ಹರೀಶ್ ಶೆಟ್ಟಿ,ಶಿರ್ವ

2 comments:

  1. 'ಆಕೆ'ಯ ಅನುಪಸ್ಥಿತಿಯು ಮನೆಯಂಗಳವನೂ ಮೀರಿದ ವ್ಯಥೆ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete