Tuesday, April 29, 2014

ವಸಂತಾಗಮನ

ಬೆತ್ತಲೆ ಮರದಲಿ
ಹಕ್ಕಿಯೊಂದು
ಬೇಸರದಿ ಹಾಡುತ್ತಿದೆ
ಶಿಶಿರದ
ದುಃಖ ತಾಪದ
ಕಷ್ಟ ನೋವಿನ
ಅನುಭವ ಗಾನ

ಜೀವನ
ಅಂದರೆ ಕೇವಲ
ಖುಷಿ ಸಂತೋಷವೇ ಅಲ್ಲ
ಋತು ಬದಲಾದಂತೆ
ನಿಸರ್ಗದ ಜೊತೆಯಲಿ
ಎಲ್ಲವೂ
ಬದಲಾಗುತ್ತದೆ

ಇನ್ನೇನು
ಸ್ವಲ್ಪವೇ ದಿನದ ನಂತರ
ವಸಂತಾಗಮನ
ಆಗುವುದು
ಪುನಃ
ಸುಖ ಸೌಂದರ್ಯ
ಸುಮನ ಅರಳುವುದು

ಈ ಎಲ್ಲಾ
ಮರಗಳಲ್ಲಿ
ಹೊಸ ಚಿಗುರು ಮೂಡಿ
ಹೂಗಳು ಅರಳುವುದು
ಮರವೆಲ್ಲ ಹಣ್ಣೆಲೆಯಿಂದ
ತುಂಬುವುದು
ಉಲ್ಲಾಸ ನೆಲೆಸುವುದು

by ಹರೀಶ್ ಶೆಟ್ಟಿ,ಶಿರ್ವ 

2 comments:

  1. ಋತು ಬದಲಾದಂತೆ ಬದಲಾವಣೆ ಅನಿವಾರ್ಯವೆಂಬುದು ಅದೆಷ್ಟು ಚೆನ್ನಾಗಿ ನಿರೂಪಿಸಿದ್ದೀರ ಸಾರ್.
    ಒಳ್ಳೆಯ ಕವನ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...