Friday, June 12, 2020

ಪಯಣ

ಪಯಣ
ಕಾಲ್ಪನಿಕವಲ್ಲ, ಸತ್ಯ
ನಮ್ಮೂರಿನತ್ತ
ಪುನಃ ಆ ಸುಂದರ ಸೊಬಗು ಕಾಣಲು
ಸ್ವಚ್ಛ ಪರಿಸರದಲ್ಲಿ ಉಸಿರಾಡಲು
ಕೋಗಿಲೆ ಗಾನ ಕೇಳಲು

ಸಾಗುತ್ತಿದೆ ಅದೆಷ್ಟೋ ಕನಸಿನೊಟ್ಟಿಗೆ
ಹಿಂದೆ ಬಿಟ್ಟು ಹೋಗಿದೆ
ಹಲವು ನೆನಪುಗಳು
ವಾಸ್ತವ
ಈ ಜೀವ ಮುಖ್ಯವಾಗಿದೆ
ಬದುಕು ಕಷ್ಟವಾಗಿದೆ
ಪ್ರಾಣಕ್ಕೇ ಅಪಾಯ ಒದಗಿದಾಗ

ಹುಟ್ಟಿದ ಊರೇ ಆಸರೆಯಾಗಿದೆ

ಪಯಣ ಜೀವನದ
ಮರಳಿ ನಿಜ ಬದುಕಿನತ್ತ

ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ