Friday, June 12, 2020

ಮೌನ ಮಾತಾದಾಗ

ಮೌನ ಮಾತಾದಾಗ ಅಶ್ರು ಹರಿಯಿತು ಹೃದಯ ಕರಗಿತು ಕೋಪ ಮಾಯವಾಯಿತು ಸಂಬಂಧ ಸದೃಡವಾಯಿತು

ಮೌನ ಮಾತಾದಾಗ ವಿಷಯ ಅರಿಯಿತು ಭಾವನೆ ಮೂಡಿತು ಮನಸ್ಸು ಅರಳಿತು ಹೊಸ ನಂಟು ಆರಂಭವಾಯಿತು

ಮೌನ ಮಾತಾದಾಗ ಮಧುರ ಸಂಗೀತ ದನಿಸಿತು ಕೋಗಿಲೆ ಹಾಡಿತು ಪರಿಸರ ನಲಿಯಿತು ರಾಗ ಅನುರಾಗವಾಯಿತು

ಮೌನ ಮಾತಾದಾಗ
ಅಹಂ ಮುರಿಯಿತು
ವೈರತ್ವ ಮುಗಿದೊಯೀತು
ವಿಶ್ವಾಸದ ದೀಪಕ ಬೆಳಗಿತು
ಬಾಂಧವ್ಯ ಬೆಳೆಯಿತು

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ