ಯಾಕೆ ಸುಮ್ಮನೆ ನೀನು ನಗುತ್ತಿರುವೆ,
ಅದೇಕೆ ಮನಸ್ಸಲ್ಲೇ ಕಣ್ಣೀರು ಕುಡಿಯುತ್ತಿರುವೆ,
ತಗ್ಗಿದ ತಲೆಯನ್ನು ಎತ್ತಿ ನೋಡು,
ಅದೇಕೆ ಇಷ್ಟು ಕಷ್ಟ ಪಡುತ್ತಿರುವೆ
ಅದೇಕೆ ಮನಸ್ಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...
ನಿನ್ನದೆಲ್ಲ ನನಗೆ ನೀಡಿರುವೆ,
ಪ್ರೀತಿಯನ್ನು ನನ್ನಿಂದಲೇ ಹಂಚಿರುವೆ,
ಏನನ್ನು ನನ್ನಿಂದ ಅಡಗಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...
ನಂಬಿಕೆ ಇಲ್ಲವೇ ನಿನಗೆ ನನ್ನಲ್ಲಿ,
ಭರವಸೆ ಇಲ್ಲವೇ ನಮ್ಮ ಒಲವಿನಲ್ಲಿ,
ಅದೇಕೆ ನನ್ನನ್ನು ಸುಮ್ಮನೆ ಹಂಬಲಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...
ಬೆಲೆ ಇಲ್ಲವೆ ನನ್ನ ಈ ಮಾತಿಗೆ,
ಹೇಳಿ ನೆಮ್ಮದಿ ನೀಡು ನನ್ನ ಮನಸ್ಸಿಗೆ,
ಅದೇಕೆ ನನ್ನನ್ನು ಪೀಡಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...
ನಿನ್ನ ಈ ಭಂಗಿ ನನ್ನನ್ನು ಕೊಲ್ಲುತ್ತಿದೆ
ನಿನ್ನ ವೇದನೆಗೆ ಹೃದಯ ಅಳುತ್ತಿದೆ
ಅದೇಕೆ ಮೌನದಿ ನನ್ನನ್ನು ಹಿಂಸಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...
by ಹರೀಶ್ ಶೆಟ್ಟಿ, ಶಿರ್ವ