Monday, June 30, 2014

ಏನೋ ಹೃದಯ ನುಡಿಯಿತು

ಏನೋ ಹೃದಯ ನುಡಿಯಿತು
ಏನೂ ಇಲ್ಲ
ಏನೋ ಹೃದಯ ಕೇಳಿತು
ಏನೂ ಇಲ್ಲ
ಕೆಲವೊಮ್ಮೆ ಹೀಗೆಯೂ ಮಾತಾಗುತ್ತದೆ

ಮಿಡಿಯುತ್ತಿರುತ್ತದೆ
ಹೃದಯ ಹೀಗೆ
ಯಾರಾದರೂ ಹೇಳಲಿ
ಈ ಹೃದಯಕ್ಕೆ
ಕಣ್ಣು ತೆರೆಯದಿರಲಿ ಈ ಬಯಕೆ
ಕೋಪಿಸದಿರಲಿ ಇದರಿಂದ್ಯಾರೋ
ಕಣ್ರೆಪ್ಪೆಗಳ ಸುಗಮ ಮಡಿಲಲಿ
ಕನಸಿನ ಅಪ್ಸರೆ ನಿದ್ರಿಸಿಕೊಂಡಿರುತ್ತದೆ
ಕೆಲವೊಮ್ಮೆ ಹೀಗೆಯೂ ಮಾತಾಗುತ್ತದೆ ...

ಹೃದಯದ
ಸಮಧಾನಗೋಸ್ಕರ
ಸುಳ್ಳು ಹೊಳಪು
ಸುಳ್ಳು ಹೊಳೆತ
ಜೀವನ ಹೀಗೆಯೇ ಖಾಲಿ ಉಳಿಯಿತು
ಎಲ್ಲರು ತಿಳಿದರು ಬಂತು ವಸಂತ
ಕುಸುಮದಿಂದ ಯಾರೋ ಕೇಳುವರು
ನಗುತ್ತದೆ ಅದು ಅಥವಾ ಅಳುತ್ತದೆ
ಕೆಲವೊಮ್ಮೆ ಹೀಗೆಯೂ ಮಾತಾಗುತ್ತದೆ ...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಅನುಪಮ

कुछ दिल ने कहा, कुछ भी नहीं
ऐसी भी बाते होती हैं
कुछ दिल ने सूना, कुछ भी नहीं
ऐसी भी बाते होती हैं

लेता हैं दिल अंगडाईया, इस दिल को समझाये कोई
अरमां न आँखे खोल दे, रुसवा न हो जाये कोई
पलकों की ठंडी सेज पर, सपनों की परियाँ सोती हैं
ऐसी भी बाते होती हैं.. ..

दिल की तसल्ली के लिए, झूठी चमक झूठा निखार
जीवन तो सूना ही रहा, सब समझे आयी हैं बहार
कलियों से कोई पूछता ,हँसती हैं वोह या रोती हैं
ऐसी भी बाते होती हैं.. ..
http://www.youtube.com/watch?v=69dnqIFfrnE&feature=kp

Sunday, June 29, 2014

ಈ ರಂಗು ಬದಲಾಯಿಸುವ

ಈ ರಂಗು ಬದಲಾಯಿಸುವ 
ಜಗದಲಿ 
ಮನುಜನ ಇರಾದೆ 
ಸರಿ ಇಲ್ಲ

ಅಂದ ಶೃಂಗಾರ ಮಾಡಿ 
ನೀನು 
ಹೊರಗೆ ಹೋಗದಿರು 
ನಿಷ್ಠೆಯ ಇರಾದೆ 
ಸರಿ ಇಲ್ಲ

ಈ ಹೃದಯ ತುಂಬಾನೇ ಹುಚ್ಚು
ಚೇಷ್ಟೆ ಮಾಡದಿರು ಈ ಮರುಳನ
ನಿನ್ನಿಂದ ಕೀಟಲೆ ಮಾಡಬಹುದು
ತುಂಟನ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ಭುಜದಿಂದ ಶಿರವನ್ನು ತೆಗೆ ನಿನ್ನ
ಈ ಪ್ರೀತಿ ಪ್ರೇಮ ಇರಲಿ ಬಿಡು
ದೋಣಿಯನ್ನು ನಿಯಂತ್ರಿಸು ತರಂಗದಿಂದ
ಬಿರುಗಾಳಿಯ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ನಾನೇಗೆ ವಿದಾಯ ಹೇಳಲಿ
ನನಗಂತೂ ಯಾರದ್ದು ನಂಬಿಕೆ ಇಲ್ಲ
ಅಡಗಿಕೊಳ್ಳು ನನ್ನ ಕಂಗಳಲಿ
ದೇವರ ಇರಾದೆ
ಸರಿ ಇಲ್ಲ
ಈ ರಂಗು ಬದಲಾಯಿಸುವ.....

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ರಾಜ್ ಕುಮಾರ್

इस रंग बदलती दुनिया में
इंसान की नीयत ठीक नहीं
निकला न करो तुम सज-धजकर
ईमान की नीयत ठीक नहीं

ये दिल है बड़ा ही दीवाना
छेड़ा न करो इस पागल को
तुमसे न शरारत कर बैठे
नादान की नीयत ठीक नहीं
इस रंग बदलती...

काँधे से हटा लो सर अपना
ये प्यार मुहब्बत रहने दो
कश्ती को सम्भालो मौजों से
तूफ़ान की नीयत ठीक नहीं
इस रंग बदलती...

मैं कैसे खुदा हाफ़िज़ कह दूँ
मुझको तो किसी का यकीन नहीं
छुप जाओ हमारी आँखों में
भगवान की नीयत ठीक नहीं,
इस रंग बदलती...

http://www.youtube.com/watch?v=TMbHY5S7WUs

Saturday, June 28, 2014

ಕಣ್ಣೀರು ಸುರಿಯುತ್ತಿದೆ

!!ಕಣ್ಣೀರು ಸುರಿಯುತ್ತಿದೆ
ಹನಿ ಹನಿ, ಹನಿ ಹನಿ
ಇನಿಯ ನಿನ್ನ ಆಗಮನದ ಆಸೆಯಲಿ!!
ಕಣ್ಣೀರು ಸುರಿಯುತ್ತಿದೆ ....

!!ಆ ದಿನಗಳು ನನ್ನ ನಯನದಲಿ
ಆ ನೆನಪು ನನ್ನ ನೋವಿನಲಿ
ಈ ಹೃದಯ ಈ ತನಕ ಅಲೆಯುತ್ತಿದೆ
ನಿನ್ನ ಒಲವಿನ ದಾರಿಯಲಿ
ಖಾಲಿ ಖಾಲಿ ಹಾದಿಗಳು
ಭಯ ಭಯದಲಿ ಬಾಹುಗಳು
ವರ್ಷಗಟ್ಟಲೆಯ ದಾಹ ಕಂಗಳಲಿ!!
ಕಣ್ಣೀರು ಸುರಿಯುತ್ತಿದೆ ....

!!ದೃಷ್ಟಿ ನೀನಿಲ್ಲದೆ ವ್ಯಾಕುಲವಾಗಿದೆ
ಪ್ರೀತಿ ಹತಾಶೆಯಲ್ಲಿದೆ
ಬೇಗನೆ ಬಂದು ಬಿಡು ನನ್ನೊಲವ ಪತಂಗೆ
ನಿಷ್ಠೆಯ ದೀಪ ಉರಿಯುತ್ತಿದೆ
ಓ ನನ್ನ ಜೀವನ ಸಂಗಾತಿಯೇ
ಅಲೆಯುತ್ತಿದ್ದೇನೆ ಆತಂಕದಲಿ
ಎಲ್ಲಿಯೂ ಇದ್ದರು ಬಾ ನನ್ನ ಬಳಿಗೆ!!
ಕಣ್ಣೀರು ಸುರಿಯುತ್ತಿದೆ ....

!!ಅಪೂರ್ಣ ಕತೆಯೊಂದು ನಾನು
ನೆನಪಾದರೆ ಬಂದೆ ಬಿಡು ನೀನು
ನೀನಿಲ್ಲದೆ ನನ್ನ ಅವಸ್ಥೆ ಏನಾಗಿದೆಯೆಂದು
ಬಂದು ನೋಡಿ ಹೋಗು ನೀನು
ಕಣ್ರೆಪ್ಪೆಗಳು ತೇವಗೊಂಡಿದೆ
ಹನಿ ಹನಿ ಕಣ್ಣೀರು ಹರಿಯುತ್ತಿದೆ
ಸೋತು ಹೋದ ಕಂಗಳು ಬೇಸರದಲಿ!!
ಕಣ್ಣೀರು ಸುರಿಯುತ್ತಿದೆ ....

!!ಈ ಅಗಣಿತ ದುಃಖ ಈ ಏಕಾಂತ
ಪ್ರೀತಿಯ ಈ ಕಷ್ಟದಾಯಕ ಹೊಡೆತ
ಕಳೆದೋಯಿತು ಎಷ್ಟೋ ರಾತ್ರಿ
ಬರಲಿಲ್ಲ ನೀನು ಬರಲಿಲ್ಲ ಮರಣ
ಈ ಹಣೆಯ ಕುಂಕುಮ
ಆಗಿದೆ ಬೆಂಬೂದಿ ಸಮ
ಮೆಹಂದಿ ನನ್ನ ಕೈಯ ಬೇಸರದಲಿ!!
ಕಣ್ಣೀರು ಸುರಿಯುತ್ತಿದೆ ....

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ವೊಹ್ ಕೌನ್ ತಿ

Ho O, A A Aa A
a A A Aa Aa Aa
naina Barse, Rim Jhim Rim Jhim

naina Barse, Rim Jhim Rim Jhim
piya Tore Aawan Ki Aas
naina Barse, Rim Jhim Rim Jhim
naina Barse, Barse, Barse

woh Din Meri Nigaahon Mein
woh Yaadein Meri Aahon Mein
o O O, Woh Din Meri Nigaahon Mein
woh Yaadein Meri Aahon Mein
yeh Dil Ab Tak Bhathakta Hai
teri Ulfat Ki Raahon Mein
sooni Sooni Raahein, Sehmi Sehmi Baahein
aankhon Mein Hain Barson Ki Pyaas
naina Barse, Rim Jhim Rim Jhim
naina Barse, Barse, Barse

nazar Tujh Bin Machalti Hai
mohabbat Haath Malti Hai
o O O, Nazar Tujh Bin Machalti Hai
mohabbat Haath Malti Hai
chala Aa Mere Parwane
wafa Ki Shama Jalti Hai
o Mere Hamraahi, Phirti Hoon Ghabrayi
jahan Bhi Hai Aa Jaa Mere Paas
naina Barse, Rim Jhim Rim Jhim
naina Barse, Barse, Barse

adhoora Hoon Main Afsana
jo Yaad Aaoon Chale Aana
mera Jo Haal Hai Tujh Bin
woh Aakar Dekhte Jaana
bheegi Bheegi Palkein, Chham Chham Aansoo Chhalkein
khoyi Khoyi Aankhen Hain Udaas
naina Barse, Rim Jhim Rim Jhim
naina Barse, Barse, Barse

(Yeh Laakhon Gham Yeh Tanhaayi
mohabbat Ki Yeh Ruswaayi) -2
kati Aisi Kai Raatein
na Tum Aaye Na Maut Aayi
yeh Bindiya Ka Taara, Jaise Ho Angaara
mehndi Mere Haathon Ki Udaas
naina Barse, Rim Jhim Rim Jhim
piya Tore Aawan Ki Aas
naina Barse, Rim Jhim Rim Jhim
naina Barse, Barse, Barse
http://www.youtube.com/watch?v=9w5iETwBs2o

ಜೀವನ ಪಂದ್ಯ

ಹಾರಿತು ಮರಿ ಪಕ್ಷಿ
ಪ್ರಥಮ ಸಲ,
ಹಿಂದೆ ಹಿಂದೆ
ವ್ಯಾಕುಲ ಹಾಗು ಸಂತಸದಿಂದ
ಹಾರುತ್ತಿದೆ
ತಾಯಿ ಪಕ್ಷಿ

-----

ಬಯಲಾದ
ಅವನ ಗುಟ್ಟಿನ
ಒಟ್ಟಿಗೆ
ಅವನ ಪ್ರೀತಿಯ ಗೆಳೆಯನ
ಗೆಳೆತನ
ಬಯಲಾಯಿತು

----

ಹುತಾತ್ಮನಾದ
ಸೈನಿಕನ ಕೈಯಲ್ಲಿ
ಅವಳು ಕೊಟ್ಟ
ತಾಳಿ

----

ಹುಲಿಯಿಂದ
ಹೆದರಿ
ಜಿಂಕೆ ಮರಿ
ಓಡೋಡಿ
ಬಂದು ತನ್ನ
ತಾಯಿಯ ಮಡಿಲಿಗೆ ಸೇರಿತು,
ಅದನ್ನು ನೋಡಿದ
ಹುಲಿಯ ಹಸಿವೆ ಏರಿತು

----

ಅವನು
ಪದೇ ಪದೇ
ಶತ್ರುವಿನ ಶಿಬಿರಕ್ಕೆ
ಹೋಗಿ
ಅವನ ಚಟುವಟಿಕೆ
ಗಮನಿಸುತ್ತ
ಇದ್ದ

by ಹರೀಶ್ ಶೆಟ್ಟಿ,ಶಿರ್ವ 

Thursday, June 26, 2014

ಹಿಜಡಾ-೭ (ಅಂತಿಮ)

ಹಿಜಡಾ- (ಅಂತಿಮ)
-----------

ತನ್ನ ಲಂಚ್ ಮುಗಿಸಿ ಹಿಂತಿರುಗಿ ಬಂದ ಮೋಹನ ಸ್ವಲ್ಪ ಹರಟೆ ಹೊಡೆಯಲೆಂದು ನೇರ ರಜನಿಯ ಕ್ಯಾಬಿನಿಗೆ ಹೋದ, ಅಲ್ಲಿ ರಜನಿಯನ್ನು ಸ್ತಬ್ಧ ಅವಸ್ಥೆಯಲ್ಲಿ ಕುಳಿತ್ತಿದ್ದನ್ನು ನೋಡಿ ಅವನಿಗೆ ಸ್ವಲ್ಪ ಆಶ್ಚರ್ಯವಾದರೂ ತಮಾಷೆಗೆ "ಏನು ಮೇಡಂ, ತುಂಬಾ ಯೋಚನೆಯಲ್ಲಿದ್ದಂತೆ ಕಾಣುತ್ತದೆ?"

ಮೋಹನನ ಸ್ವರ ಕೇಳಿ ಗಂಭೀರ ಆಲೋಚನೆಯಲ್ಲಿದ್ದ ರಜನಿ ಜಾಗೃತವಾದಳು.

ಮೋಹನ ಪುನಃ ತಮಾಷೆಗೆ "ಏನು ಮೇಡಂ ಊಟ ಆಯ್ತಾ?"

ಮೋಹನನ ತಮಾಷೆ ಇಂದು ರಜನಿಗೆ ಯಾವುದೇ ಹಿತ ನೀಡಲಿಲ್ಲ, ಅವನನ್ನು ನೋಡಿದ ಕೂಡಲೇ ಅವಳ ಮುಖ ಕೆಂಪೇರಿತು ಹಾಗು ಅವಳು ಅವನಿಗೆ ನೇರ ಪ್ರಶ್ನೆ ಕೇಳಿದಳು "ಸಂಗಮ್ಮ ಯಾರೆಂದು ಅರಿವಿದೆಯೇ?"

ಮೋಹನ ಬೆರಗಾದ, ಇಕ್ಕಟ್ಟಿಗೆ ಸಿಲುಕಿ ಅವನು "ಸಂಗಮ್ಮ, ಯಾರು ಸಂಗಮ್ಮ?"

ರಜನಿ ಕೋಪದಿಂದ ಘರ್ಜಿಸಿದ್ದಳು " ಒಹ್ ಹೌದೆ, ತಿಳಿದಿಲ್ಲವೇ, ನಿಲ್ಲಿಸು ನಿನ್ನ ಕಳ್ಲಾಟವನ್ನು, ನನಗೆ ಎಲ್ಲ ಗೊತ್ತಾಗಿದೆ. ಏನಂಥ  ಹೇಳಿದ್ದೆ ನನಗೆ, ನಿನ್ನ ಪರಿವಾರದಲ್ಲಿ ಯಾರಿಲ್ಲ ಅಲ್ಲವೇ , ನೀನು ಬಾಲ್ಯದಿಂದ ಅನಾಥ ಅಲ್ಲವೇನಿನ್ನ ಎಲ್ಲ ಸುಳ್ಳು ಇಂದು ಬಯಲಾಗಿದೆ, ಕಸದ ಬುಟ್ಟಿಯಲ್ಲಿ ಸಿಕ್ಕಿದ ನಿನ್ನನ್ನು ಸಾಕಿದ ದೇವರಂಥ ಸಂಗಮ್ಮನ ಮೇಲೆ ನಿನಗೆ ಸ್ವಲ್ಪ ಸಹ ಕರುಣೆ ಬರಲಿಲ್ಲವೇ, ಅವರಿಂದ  ನಾನು ನಿನ್ನ ಮುಂದೆ ಷರತ್ತು ಇಟ್ಟಿದ್ದೇನೆ ಎಂಬ ಸುಳ್ಳು ಹೇಳಿ ಅವರನ್ನು ಹಾಗು ಜೊತೆಗೆ ನನ್ನನ್ನು ವಂಚಿಸುವ ಅಗತ್ಯವಾದರೂ ಏನಿತ್ತು, ಛೆ,  ನಾನು ನಿನ್ನಂತಹ ನೀಚನನ್ನು ಪ್ರೀತಿಸಿದೆ ಎಂದು ಹೇಳಲು ನನಗಿಂದು ನಾಚಿಗೆಯಾಗುತ್ತಿದೆ".

ಮೋಹನನಿಗೆ ತನ್ನ ಗುಟ್ಟು ಬಯಲಾದುದನ್ನು ನೋಡಿ " ರಜನಿ, ಪ್ಲೀಸ್ ನನ್ನ ಕೇಳು...."

ರಜನಿ ಮುಖ ಕೋಪದಿಂದ ಉರಿಯುತ್ತಿತ್ತು "ಮುಚ್ಚು ಬಾಯಿ, ಒಂದು ಶಬ್ದ ಸಹ ನಿನ್ನ ಹಾಳು ಬಾಯಿಂದ ಹೊರಟರೆ ನಿನ್ನನ್ನು ಇಲ್ಲೇ ಕೊಂದು ಬಿಡುವೆ, ನೀಚಭಡವ, ಬಹುಶಃ ನಿನ್ನ ತಾಯಿಗೆ ನಿನ್ನನು ಹೆತ್ತಾಗಲೇ 'ನಾನೊಂದು ಸರ್ಪನನ್ನು ಹೆಡೆದಿದ್ದೇನೆ" ಎಂದು ತಿಳಿದಿತ್ತು ಕಾಣುತ್ತದೆ, ಅದಕ್ಕೆ ಅವಳು ಹೆತ್ತ ಮಗುವನ್ನು ಕಸಕ್ಕೆ ಸೇರಿಸಿ ಬಂದಿದ್ದಳು, ಆದರೆ ಮಹಾನ ಜೀವಿ ಸಂಗಮ್ಮನಿಗೆ ನೀನು ಸಿಕ್ಕಿದು ಅವರ ದುರ್ಭಾಗ್ಯ, ಆದರೆ  ಸಮಯ ಅವಳಿಗೆ ಏನು ತಿಳಿದಿತ್ತು ನಾನು ಸಾಕುವ ಮಗು ಮನುಷ್ಯ ಅಲ್ಲ ಒಂದು ಸರ್ಪ ಎಂದು, ಛೀ , ಆಯ್ಯೋ ದೇವ ನಾನೆಂತಹ ಮನುಷ್ಯನನ್ನು ಪ್ರೀತಿಸಿದೆ."

ಮೋಹನ " ರಜನಿ ಆಯ್ ಲವ್ ಯು, ನಿನ್ನೊಟ್ಟಿಗೆ ಮದುವೆ ಆಗಲು ನಾನು ಎಲ್ಲ ಸುಳ್ಳು ಹೇಳಿದ್ದು, ಸತ್ಯ ಹೇಳಿದರೆ ನೀನು ನನ್ನನ್ನು ಬಿಟ್ಟು ಬಿಡುವೆ ಎಂಬ ಭಯದಿಂದ ."

ರಜನಿ "ಶಟ್ ಅಪ್ ಯು ಬಾಸ್ಟರ್ಡ್, ನಾಚಿಕೆಗೇಡಿ ಮನುಷ್ಯ,ನಿರ್ಲಜ್ಜ, ನಿನ್ನೊಟ್ಟಿಗೆ ಮದುವೆಯ ನಿನ್ನಂತಹ ಮನುಷ್ಯನನ್ನುಮದುವೆಯಾಗುವುದಕ್ಕಿಂತ ಬಾವಿಗೆ ಬಿದ್ದು ಸಾಯುವುದು ಒಳ್ಳೆಯದು, ಸ್ವತ ಸಾಕಿದವರೊಂದಿಗೆ  ದ್ರೋಹ ಮಾಡಿದವನು, ನನ್ನೊಟ್ಟಿಗೆ ದ್ರೋಹ ಮಾಡುವುದಿಲ್ಲ ಎಂಬ ಏನು ಗ್ಯಾರಂಟಿ? ಸತ್ಯ ಹೇಳಬೇಕೆಂದರೆ  ನಿನ್ನನ್ನು ಸಾಕಿದ ಸಂಗಮ್ಮ ಹಾಗು ಅವರ ಜತೆಗಾರರು ಹಿಜಡಾ ಅಲ್ಲ, ಹಿಜಡಾ ನೀನು............ ಹೌದು ನೀನು ಹಿಜಡಾ." ಎಂದು ಹೇಳಿ ರಜನಿ ತನ್ನ ಮೇಜಿನಲ್ಲಿದ್ದ ಗಂಟನ್ನು ಹಿಡಿದು ತನ್ನ ಕ್ಯಾಬಿನಿನಿಂದ ಹೊರ ನಡೆದಳು, ಬಾಗಿಲಲ್ಲಿ ನಿಂತು " ಫಾರ್ ಯುವರ್ ಕೈಂಡ್ ಇನ್ಫರ್ಮೇಷನ್ ಸಂಗಮ್ಮ ಆಸ್ಪತ್ರೆಯಲ್ಲಿ ಕೊನೆ ಉಸಿರೆಳುಯುತ್ತಿದ್ದಾಳೆ" ಎಂದು ಹೇಳಿ ಹೊರ ಬಂದಳು.

---

ಜೋನಮ್ಮ ಹಾಗು ಬಾನಮ್ಮನ್ನ ಬಗ್ಗೆ ಹೇಗೋ ಪತ್ತೆ ಹಚ್ಚಿ ಹಚ್ಚಿ ರಜನಿ ತನ್ನ ಕಾರಿನಿಂದ ಸಿಟಿ ಆಸ್ಪತ್ರೆಗೆ ಬಂದಳು, ಆಸ್ಪತ್ರೆಯಲ್ಲಿ ಸಂಗಮ್ಮನ ಬಗ್ಗೆ ವಿಚಾರಿಸಿದಾಗ ಅವಳು ಇಹಲೋಕ ತ್ಯಜಿಸಿ ಆಗಿದೆ ಎಂದು ತಿಳಿದು ಬಂತು. ರಜನಿಯ ಕೈಯಲ್ಲಿದ್ದ ಒಡವೆಯ ಗಂಟು ಕೆಳಗೆ ಬಿತ್ತು, ಅವಳು ಅಲ್ಲೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಆಗ ತಾನೇ ಆಸ್ಪತ್ರೆ ಮುಟ್ಟಿದ ಮೋಹನನ ಕಣ್ಣಲ್ಲಿ ಅಂಧಕಾರ ಹಬ್ಬಿತು.

(ಮುಗಿಯಿತು)


by ಹರೀಶ್ ಶೆಟ್ಟಿ, ಶಿರ್ವ

ಜೀವನ ಅಲೆಮಾರಿ

ಅಲ್ಲಿಂದ ಇಲ್ಲಿ
ಇಲ್ಲಿಂದ ಅಲ್ಲಿ
ಜೀವನ ಅಲೆಮಾರಿ
ನಿತ್ಯ ಹೊಸ ಹುಡುಕಾಟ
ಎಲ್ಲಿಯೋ ಭವಿಷ್ಯದ ದಾರಿ

ಬದುಕ ಬಂಡಿ
ಮೆಲ್ಲನೆ ನಡೆಯುತ್ತಿದೆ
ಸಮಯದ ಚಕ್ರ ತಿರುಗುತ್ತಿದೆ
ಇಂದಿನ ಆಟ ಮುಗಿಯಿತು
ನಾಳೆ ಪುನಃ ಹೊಸ ಅಧ್ಯಾಯದ ಬಾರಿ

ಹಳೆಯ ಶೋಕ
ಇನ್ನು ಹೊಸ ಲೋಕ
ನವೀನ ಜಾಗ
ಬಡತನದಲಿ ದಿನನಿತ್ಯ ಯಾಗ
ಬದುಕು ಆಗಿದೆ ದುಬಾರಿ

ಜೀವನದಲ್ಲಿಲ್ಲ  ಸ್ಥಿರತೆ
ಪ್ರತಿದಿನ ಏನಾದರೊಂದು ಕೊರತೆ
ಶಾಶ್ವತ ನೆಲೆ ಇಲ್ಲ
ದೇಹದಲಿ ಕೇವಲ ಚರ್ಮ ಉಳಿದಿದೆ
ರಕ್ತ ಹೋಗಿದೆ ಸೋರಿ

by ಹರೀಶ್ ಶೆಟ್ಟಿ ,ಶಿರ್ವ

Wednesday, June 25, 2014

ಹಿಜಡಾ-೬

ಹಿಜಡಾ-೬
-----------

ಜೋನಮ್ಮ ಮತ್ತು ಬಾನಮ್ಮ ಹೋದ ನಂತರ ರಜನಿ ತುಸು ಗಳಿಗೆ ಅವರು ಕೊಟ್ಟ ಪತ್ರ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿ ಅವಸ್ಥೆಯಲ್ಲಿ ಹಾಗೆಯೇ ನಿಂತಿದ್ದಳು.

ಸ್ವಲ್ಪ ಕ್ಷಣದ ನಂತರ ಅವಳು ಕಂಪಿತ ಕೈಯಿಂದ ಜೋನಮ್ಮ ಕೊಟ್ಟು ಹೋದ ಸಂಗಮ್ಮ ಬರೆದ ಪತ್ರ ತೆರೆದು ಓದಲಾರಂಭಿಸಿದಳು.

ಪ್ರೀತಿಯ ಮಗಳೇ,

ನಾನು ಸಂಗಮ್ಮ, ಮೋಹನನನ್ನು ಸಾಕಿ ಬೆಳೆಸಿದ ದುರ್ದೈವಿ, ನಾನು ಹಿಜಡಾ ಸಮುದಾಯಕ್ಕೆ ಸೇರಿದವಳು, ಹುಟ್ಟಿದ ನಂತರ ಕೆಲವೇ ವರ್ಷದ ನಂತರ ಮನೆ, ಸಮಾಜದಿಂದ ತ್ಯಜಿಸಲಾದವಳು, ಸಂಬಂಧಿಕರಿಂದ ದೂರವಾದ ನನಗೆ ಈ ಹಿಜಡಾ ಸಮುದಾಯದ ಜತೆಗಾರರಲ್ಲದೆ ಬೇರೆ ಯಾರೂ ನನ್ನವರೆಂದು ಇರಲಿಲ್ಲ, ಹೇಗೋ ಪಡೆದ ಜೀವನವನ್ನು ದೇವರ ಇಚ್ಚೆಯೆಂದು ತಿಳಿದು ಸಾಗಿಸುತ್ತಿದ್ದೆ, ಆದರೆ ೨೫ ವರ್ಷದ ಹಿಂದೆ ಒಂದು ಕಸದ ಬುಟ್ಟಿಯಲ್ಲಿ ಸಿಕ್ಕಿದ ಮಗುವಿನಿಂದ ನನ್ನ ಜೀವನ ಬದಲಾಯಿತು, ನಾನು ನನ್ನ ಜೀವನದ ಸರ್ವಸ್ವವನ್ನು ಆ ಮಗುಗೋಸ್ಕರ ನೀಡಿದೆ, ನಿನ್ನನ್ನು ಪ್ರೇಮಿಸುವ ಆ ಹುಡುಗ ಮೋಹನನೇ ಆ ಮಗು, ಮೋಹನ ತಿಳಿಸಿದ ಪ್ರಕಾರ ನೀನು ಅವನ ಜೊತೆ ಮದುವೆಯಾಗಲು ಕೇವಲ ಒಂದೇ ಸ್ಥಿತಿಯಲ್ಲಿ ನಿನ್ನ ಒಪ್ಪಿಗೆ ನೀಡಿದೆ ಎಂದು, ನಿಮ್ಮ ಮದುವೆಗೆ ನಾವು ಬರಬಾರದೆಂದು ಹಾಗು ಮದುವೆ ಆದ ನಂತರ ಎಂದೂ ಅವನು ನಮ್ಮನ್ನು ಭೇಟಿ ಮಾಡಬಾರದೆಂದು, ನಮ್ಮಿಂದ ದೂರ ಇರಬೇಕೆಂದು, ಆಯಿತು ಮಗಳೇ, ಈ ತಾಯಿಗೆ ಒಪ್ಪಿಗೆ ನಿನ್ನ ಈ ಮಾತು, ನೀನು ಹೇಳಿದ ಪ್ರಕಾರವೇ ಆಗಲಿ, ನಾವು ಎಂದೂ ಮೋಹನನ ನಿಕಟ ಬರಲಾರೆವು, ಅವನಿಂದ ದೂರ ದೂರ ಇರುವೆವು, ಇದು ಕಷ್ಟ ಎಂದು ನನಗೆ ಗೊತ್ತು, ಹೇಗೋ ಮೊನ್ನೆ ಮೋಹನ ಈ ಬಗ್ಗೆ ತಿಳಿಸಿದ ನಂತರ ನಾನು ಹುಷಾರಿಲ್ಲದೆ ಆಸ್ಪತ್ರೆ ಸೇರಿದ್ದೇನೆ, ಡಾಕ್ಟರನವರು ಸಹ ನಾನಿನ್ನು ಹೆಚ್ಚು ಸಮಯ ಬದುಕಲಾರೆಯೆಂದು ಉತ್ತರ ನೀಡಿ ಆಗಿದೆ, ಇಂದು ನನ್ನ ಹಾಗು ಮೋಹನನನ್ನು ಸಾಕಿದ ನನ್ನ ಎಲ್ಲ ಜೊತೆಗಾರರ ಹೃದಯ ರೋಧಿಸುತ್ತಿದೆ, ಆದರೆ ನನ್ನ ಮೋಹನ ಹಾಗು ನೀನು ಸುಖದಿಂದ ಇರಬೇಕೆಂದು ನಮ್ಮ ಬಯಕೆ.

ನಾನು ಮದುವೆಗೆ ನೀನಿಟ್ಟ ಈ ಷರತ್ತು ತಪ್ಪೆಂದು ಹೇಳಲಾರೆ, ನಾವು ಮೋಹನನ ಯಾರೇ ಆದರೂ ಕೊನೆಗೆ ನಾವು ಹಿಜಡಾನವರು, ನಿನ್ನ ಪರಿವಾರದವರಿಗೆ ಹಾಗು ನೀನು ಕಷ್ಟ ಪಟ್ಟು ಸಂಪಾದಿಸಿದ ನಿನ್ನ ಈ ಅಂತಸ್ತಿಗೆ ಇದು ದೊಡ್ಡ ಧಕ್ಕೆ ಉಂಟಾಗುವುದೆಂದು ಅರಿವಿದೆ ನನಗೆ, ನಮಗೆ ನಿನ್ನ ಎಲ್ಲಾ ಷರತ್ತು ಒಪ್ಪಿಗೆ ಇದೆ ಮಗಳೇ, ಆದರೆ ಈ ದುರ್ದೈವಿ ತಾಯಿಯ ಕೇವಲ ಒಂದೇ ಒಂದು ವಿನಂತಿ, ನಾನು ಕಳಿಸಿದ ಈ ಚಿನ್ನದ ಒಡವೆಗಳನ್ನೆಲ್ಲಾ ನೀನು ಸ್ವೀಕರಿಸಬೇಕೆಂದು, ನೀನು ಇದನ್ನು ಸ್ವೀಕರಿಸಿದರೆ ನನಗೆ ಅಷ್ಟೇ ತೃಪ್ತಿ ಸಾಕು. ಈ ಸಾಯುವ ತಾಯಿಯ ಮೇಲೆ ಇಷ್ಟೊಂದು ಉಪಕಾರ ಮಾಡು, ದಯಮಾಡಿ ಈ ಎಲ್ಲ ಒಡವೆಗಳನ್ನು ಸ್ವೀಕರಿಸು, ಒಟ್ಟಿಗೆ ಮೋಹನನ ಹೆಸರಲ್ಲಿ ಜಮಾ ಮಾಡಿದ ಬ್ಯಾಂಕಿನ ಪಾಸು ಬುಕ್ ಸಹ ಕಳಿಸುತ್ತಿದ್ದೇನೆ, ನೀವಿಬ್ಬರು ಸುಖದಿಂದ ಜೀವನ ಸಾಗಿಸಿ, ಆರಾಮದಿಂದಿರಿ, ಇಷ್ಟೇ ಬಯಸುವೆ, ನನ್ನ ಆಶಿರ್ವಾದ ನಿಮಗೆ.

ದುರ್ದೈವಿ,

ಸಂಗಮ್ಮ

ಪತ್ರ ಓದಿದ ನಂತರ ರಜನಿಯ ಕಣ್ಣಿಂದ ಧಾರಾಳವಾಗಿ ಕಣ್ಣೀರು ಹರಿಯಲಾರಂಭಿಸಿತು. ಅವಳು ದಿಗ್ಭ್ರಾಂತ  ಅವಸ್ಥೆಯಲ್ಲಿ ಅಲ್ಲಿದ್ದ ಕುರ್ಚಿಯಲ್ಲಿ ಕುಸಿದು ಬಿದ್ದಳು.

(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

Tuesday, June 24, 2014

ಹಿಜಡಾ-೫

ಹಿಜಡಾ-೫

ರಿಸೆಪ್ಶನಿಸ್ಟ್ ಹೊರಗೆ ಬಂದು "ನೇರ ಆ ಕ್ಯಾಬಿನ್'ಗೆ  ಹೋಗಿ, ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ."

ಜೋನಮ್ಮ ಹಾಗು ಬಾನಮ್ಮ "ಹುಂ" ಎಂದು ಅವಳಿಗೆ ಚುಡಾಯಿಸಿ ರಜನಿಯ ರೂಮಿನತ್ತ ಹೋದರು.

ಒಳಗೆ ಬಂದ ಜೋನಮ್ಮ ಮತ್ತು ಬಾನಮ್ಮನನ್ನು ರಜನಿ ಸ್ವಲ್ಪ ಶಂಕಿತ ದೃಷ್ಟಿಯಿಂದ ನೋಡಿ "ಹೇಳಿ, ಏನಾಗಬೇಕಿತ್ತು?"

"ಆಗುವುದೇನು ಮಗಳೇ, ನಮ್ಮಿಂದ ಏನು ಸಾಧ್ಯ, ಎಲ್ಲ ನಿನ್ನ ಮಾಯೆ."

"ಸಾರೀ, ನನಗೇನು ಅರ್ಥವಾಗಲಿಲ್ಲ, ಯಾರು ನೀವು? ಏನು ವಿಷಯ?"

"ನಾವು ಇಲ್ಲಿ ಸಂಗಮ್ಮ ಹೇಳಿದಕ್ಕೆ ಬಂದಿದ್ದೇವೆ, ನಿನಗೆ ಇದು ಕೊಡಲಿಕ್ಕೆ" ಎಂದು ಹೇಳಿ ಜೋನಮ್ಮ ತನ್ನ ಕೈಯಲ್ಲಿದ್ದ ಚೀಲದಿಂದ ಒಂದು ಗಂಟು ತೆಗೆದು ರಜನಿಯ ಮೇಜಿನ ಮೇಲೆ ಇಟ್ಟಳು ಹಾಗು ತನ್ನ ರವಕಿಯಿಂದ ಒಂದು ಪತ್ರ ತೆಗೆದು ಅವಳ ಕೈಯಲ್ಲಿ ಕೊಟ್ಟಳು.

ರಜನಿ ಆಶ್ಚರ್ಯ ಪಟ್ಟು "ಏನಿದು ಎಲ್ಲ, ನೀವ್ಯಾರು"?

ಜೋನಮ್ಮ "ನಾವು ಯಾರೆಂದು ಒಳ್ಳೆ ರೀತಿಯಲ್ಲಿ ತೋರಿಸುತ್ತಿದೆ ನಿನಗೆ, ಆದರೆ ಸಂಗಮ್ಮನ ಆದೇಶ ಇದೆ ನಮಗೆ, ಇಲ್ಲಾದರೆ.......... ಹೋಗಲಿ ಬಿಡು, ಈ ಗಂಟಿನಲ್ಲಿ ಸಂಗಮ್ಮ ಮೋಹನನ ವಧುಗೋಸ್ಕರ ಅಂದರೆ ನಿನಗೋಸ್ಕರ ಮಾಡಿದ ಅದೆಷ್ಟೋ ಚಿನ್ನದ ಒಡವೆಗಳಿವೆ ಹಾಗು ಅವನ ಹೆಸರಲ್ಲಿ ಜಮ ಮಾಡಿ ಇಟ್ಟ  ಬ್ಯಾಂಕಿನ ಪಾಸ್ ಬುಕ್ ಇದೆ ಒಟ್ಟಿಗೆ ಈ ಪತ್ರ ಸಹ ನಿನಗೆ ಕೊಡಲಿಕ್ಕೆ ಹೇಳಿದ್ದಾಳೆ."

ರಜನಿ " ಆದರೆ ಯಾರು ಸಂಗಮ್ಮ, ಏನಿದೆಲ್ಲ?"

ಈ ತನಕ ಮೌನ ಇದ್ದ ಬಾನಮ್ಮ " ಹೇ ಹುಡುಗಿ , ಬಿಡು ನಿನ್ನ ಈ  ಎಲ್ಲ ನಾಟಕ, ನಮ್ಮನ್ನು ನಮ್ಮ ಮೋಹನನಿಂದ ದೂರ ಮಾಡಿದ ನಿನಗೆ....."

ಜೋನಮ್ಮ "ಬೇಡ ಬಾನಮ್ಮ ಬೇಡ, ಶಾಪ ಕೊಡ ಬೇಡ, ದಯಮಾಡಿ ಶಾಪ ಕೊಡ ಬೇಡ, ಇದರಿಂದ ನಮ್ಮ ಮೋಹನನ ಜೀವನವೇ ಹಾಳಾಗಬಹುದು." ಎಂದು ಹೇಳಿ ಜೋರಾಗಿ ಅತ್ತಳು.

ತನ್ನನ್ನು ಸ್ವಲ್ಪ ಸುಧಾರಿಸಿ ಜೋನಮ್ಮ "ನೋಡು ಹುಡುಗಿ, ನಾವು ತುಂಬಾ ದುರದೃಷ್ಟವಂತರು, ನಮ್ಮ ಮೇಲೆ ಸ್ವಲ್ಪ ದಯಾ ಮಾಡು, ಸಂಗಮ್ಮ ಕಳಿಸಿದ ಈ ಎಲ್ಲ ವಸ್ತುಗಳನ್ನು ಸ್ವೀಕರಿಸು, ಅವಳು ಆಸ್ಪತ್ರೆಯಲ್ಲಿ ಕೊನೆ ಉಸಿರೆಳುಯುತ್ತಿದ್ದಾಳೆನೀನು ಹಾಗು ಮೋಹನ ಮದುವೆಯಾಗಿ ಸುಖದಿಂದ ಇರಿ, ನಾವು ಎಂದೂ ನಿಮ್ಮ ಸುಖ ಜೀವನದ ಅಡ್ಡ ಬರಲಾರೆವು, ಆದರೆ ಇಷ್ಟೊಂದು ಉಪಕಾರ ಮಾಡು, ಮೋಹನನನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ಆ ಮುದ್ದು ಸಂಗಮ್ಮನ ಈ ಕೊನೆ ಇಚ್ಚೆಯಂತೆ ಈ ವಸ್ತುಗಳನ್ನೆಲ್ಲ ಸ್ವೀಕರಿಸು, ನಾವಿನ್ನು ಬರುತ್ತೇವೆ" ಎಂದು ಹೇಳಿ ಇಬ್ಬರೂ ಹೊರಗೆ ನಡೆದೇ ಬಿಟ್ಟರು.

ರಜನಿ ಮೇಜಿನ ಮೇಲೆ ಅವರು ಇಟ್ಟು ಹೋದ ಸಾಮಾನು ಹಾಗು ಕೈಯಲ್ಲಿ ಕೊಟ್ಟು ಹೋದ ಪತ್ರವನ್ನು ಚಕಿತ ದೃಷ್ಟಿಯಿಂದ ನೋಡುತ್ತಿದ್ದಳು.


(ಮುಂದುವರಿಯುವುದು)


by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...