Sunday, 30 June, 2013

ನಗುವ ಬಯಕೆ

!!ನಗುವ ಬಯಕೆ
ನನಗಿಷ್ಟು ನೋವು ತಂದಿದೆ
ಯಾರೂ ಸಂತೈಸುವವರಿಲ್ಲ
ಕಷ್ಟವೇ ನನ್ನ ನೆರಳಾಗಿದೆ!!

!!ಹೃದಯ ಸಿಲುಕಿಕೊಂಡಿತ್ತು
ಜೀವನದ ಜಂಜಾಟದಲ್ಲಿಯೇ
ಉಸಿರು ಉರಿಯುತ್ತದೆ
ಕೆಲವೊಮ್ಮೆ ರಾತ್ರಿಯ ಸಮಯದಲ್ಲಿಯೇ
ಯಾರದ್ದೋ ಧ್ವನಿ ಇದು
ಈ ನಗು ಯಾರದಾಗಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

!!ಕನಸು ನಡೆಯುತ್ತಲೇ ಇತ್ತು
ಪ್ರತಿ ದಿನ ಹೊಸ ಹಾದಿಯಿಂದ
ಯಾರೋ ಜಾರಿದ್ದಾರೆ
ಈಗಾಗಲೇ ಬಾಹುಗಳಿಂದ!!
ಯಾರದ್ದೋ ವೇದನೆಗೆ
ತಾರೆಗಳಿಗೆ ಪ್ರೀತಿ ಉಕ್ಕಿದೆ
ಯಾರೂ ಸಂತೈಸುವವರಿಲ್ಲ
ಕಷ್ಟ ನನ್ನ ನೆರಳಾಗಿದೆ!!

ಮೂಲ : ಕಪಿಲ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಕಾನು ರಾಯ್
ಚಿತ್ರ : ಅವಿಷ್ಕಾರ್

Hasne ki chah ne itna mujhe rulaya hai
Koyi hamdard nahi dard mera saya hai

 Dil toh uljha hi raha jindagi ki bato me
 Sanse jalti hain kabhi kabhi rato me
 Kisi ki aahate ye kaun muskuraya hai
 Koyi hamdard nahi, dard mera saya hai

 Sapne chalte hi rahe roj nayi raho se
 Koyi phisla hai abhi abhi baho se
 Kisi ki aah par taro ko pyar aaya hai
 Koyi hamdard nahi, dard mera saya hai
http://www.youtube.com/watch?v=uomu2WP5CAE

1 comment:

  1. ಈ ಚಿತ್ರ ನನಗೆ ನೆನಪಾಗುವುದು ನಂದೋ ಭಟ್ಟಾಚಾರ್ಯರ ಛಾಯಾಗ್ರಹಣದಿಂದ.

    ಈಗಲೂ ನನಗೆ ಇದೇ ಕಾಡುತ್ತದೆ ಸಾರ್,
    ಯಾರೂ ಸಂತೈಸುವವರಿಲ್ಲ, ಕಷ್ಟ ನನ್ನ ನೆರಳಾಗಿದೆ!!

    ReplyDelete