Tuesday, June 11, 2013

ವಿಸ್ಮಯ


                                                                ಫೋಟೋ ಕೃಪೆ :ಗೂಗಲ್
ಒಹ್ ಸಂಜೆ ಆಯಿತೆ ?
ಸೂರ್ಯನ ಸವಾರಿ ಹೊರಟಿತೆ?
ಮುಪ್ಪು ಬಂದದ್ದು ಗೊತ್ತೇ ಆಗಲಿಲ್ಲವಲ್ಲ?
ಸೂರ್ಯ ದಿನ ಉದಯವಾಗುವಂತೆ
ಯಾಕೆ ಪುನಃ ಯೌವನ ಬರಬಾರದು
ಛೆ ಬೇಡ,
ಪುನಃ ಯೌವನ ಪಡೆದು ಏನನ್ನು ಸಾಧಿಸುವುದು
ನಿಷ್ಠೆಯಿಂದ, ಭಕ್ತಿಯಿಂದ
ಯೌವನದಲ್ಲಿ ಕಷ್ಟ ಪಟ್ಟು
ಜೀವನವನ್ನು ಚಿತ್ರಿಸಿದೆ
ಆದರೆ ಈಗ ಆ ಚಿತ್ರದಲ್ಲಿ ಯಾವ ಬಣ್ಣವೂ ಇಲ್ಲ
ಎಲ್ಲ ಅಳಿಸಿ ಹೋಗಿದೆ
ಬಿಡಿ,
ಆದರೆ ಯಾಕೆ ಪುನಃ ಬಾಲ್ಯ ಬರಬಾರದು
ಮಜಾ ಅಲ್ಲವೇ
ಹ್ಮ್ಮ್ ಎಂಥ ಮಜಾ
ಬಾಲ್ಯದಲ್ಲಿ ಪಡೆದ  ಕಷ್ಟ ಮರೆತು ಹೋಯಿತೇ
ಬೇಡ ಪುನಃ ಆ ತೊಂದರೆ
ಸಾಕು
ಬಾಲ್ಯವೂ ಬೇಡ, ಯೌವನವೂ ಬೇಡ
ಜೀವನದ ಶರತ್ಕಾಲದಲಿ
ಇನ್ನೆಂಥ ಆಸೆ
ಮಕ್ಕಳು ಹೋದರು ಒಂದೊಂದಾಗಿ
ನನ್ನನ್ನು ಅಸಹಾಯ ಬಿಟ್ಟು
ಸ್ನೇಹಿತರು ದೂರವಾದರು
ಇನ್ನು ಈ ಭೂಮಿಯಲಿ ನಾಲ್ಕು ಅಡಿ ಜಾಗ ಸಿಕ್ಕಿದರೆ ಸಾಕು
ಹೇ ಆದರೆ ನನಗೆ ಜಾಗ ಯಾಕೋ ?
ನಾನು ಹಿಂದೂ ಅಲ್ಲವೇ
ಸತ್ತ ನಂತರ ಸುಟ್ಟು ಬೂದಿಯಾಗುವವನು
ಹೋಗಲಿ ಬಿಡಿ,
ಆ ಪರಮಾತ್ಮನ ಇಚ್ಛೆ
ಮಾಡುವ ಎಲ್ಲ ಧರ್ಮ ಕರ್ತವ್ಯ ಪ್ರಾಮಾಣಿಕತೆಯಿಂದ ಮಾಡಿ ಮುಗಿಸಿದೆ
ಆದರೆ ಫಲ ನೀಡುವ ಅವನ ಮನಸ್ಸಲಿ ಏನಿದೆಯೋ ?
ಇನ್ನು ಎಷ್ಟು ಜೀವನದ ಸತ್ಯ ತೋರಿಸುತ್ತಾನೋ ?
ಆಗಲಿ ನೋಡುವ
ಕಣ್ಣು ಯಾಕೋ ಈ ತನಕ ಚುರುಕಾಗಿದೆ
ನೋಡದನ್ನೂ ನೋಡಿ ಆಗಿದೆ
ಈಗ ಎಂಥ ಭಯ
ಕ್ಷಣ ಕ್ಷಣ ಜನರಲ್ಲಿ ಆಗುವ ಬದಲಾವಣೆ ಕಂಡು
ಈಗ ನನಗೆ ಎಲ್ಲವೂ ವಿಸ್ಮಯ
ಕೇವಲ ವಿಸ್ಮಯ....
by ಹರೀಶ್ ಶೆಟ್ಟಿ,ಶಿರ್ವ 

2 comments:

  1. "ಆದರೆ ಫಲ ನೀಡುವ ಅವನ ಮನಸ್ಸಲಿ ಏನಿದೆಯೋ ?
    ಇನ್ನು ಎಷ್ಟು ಜೀವನದ ಸತ್ಯ ತೋರಿಸುತ್ತಾನೋ ?"
    ಒಮ್ಮೊಮ್ಮೆ ನನಗೆ ಅಕಾಲ ವೃದ್ಧಾಪ್ಯ ಆವರಿಸಿಕೊಂಡು ಇಂತಹವೇ ಆಲೋಚನೆಗಳು ಸುಳಿಯುತ್ತಿರುತ್ತವೆ. ಶಾಪವೇ ಆಗಬಹುದಾದ ಇಳಿ ಸಂಜೆಯ ಬಗ್ಗೆ ಮನ ಮಿಡಿಯುವ ಕವನ.

    ReplyDelete
  2. ಧನ್ಯವಾದಗಳು ಬದರಿ ಸರ್, ಕಣ್ಣಾರೆ ಕಾಣುವ ವೃದ್ಧ ಜನರ ಅವಸ್ಥೆ ನೋಡಿ, ಇಳಿ ವಯಸ್ಸಿನಲ್ಲಿ ಈ ಅಸೀಮ ನೋವನ್ನು ಅನುಭವಿಸುವುದು ಹೇಗೆ ಎಂಬ ಭಯ ನಮ್ಮಲ್ಲಿ , ಜೀವನ ಈ ವಯಸ್ಸಿನಲ್ಲಿ ಎಷ್ಟು ಕಠಿಣ, ಹೃದಯಕ್ಕೆ ಆಗುವ ನೋವನ್ನು ಅವರು ಹೇಗೆ ಸಹಿಸುತ್ತಾರೋ , ಆ ಭಗವಂತನೆ ಬಲ್ಲ .

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...