Monday, January 27, 2020

ವ್ಯಾನಿಟಿ ಬ್ಯಾಗ್ ೫


"ರಾಣೆ, ನೀವು ಈ ವ್ಯಾನಿಟಿ ಬ್ಯಾಗ್ ತೆರೆದು ಚೆಕ್ ಮಾಡಿದ್ದೀರಾ"? ಎಂದು ಸಬ್  ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ರಾಣೆಗೆ  ಕೇಳಿದರು.

ಕಾನ್ಸ್ಟೇಬಲ್ ರಾಣೆ "ಇಲ್ಲ ಸಾರ್, ನಾನು ತೆರೆದು ನೋಡಲಿಲ್ಲ".

ಪಾಟೀಲ್ ಆ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರು, ಅದರಲ್ಲಿ ಏನು ವಿಶೇಷ ವಸ್ತು ಇರಲಿಲ್ಲ, ಕೆಲವು ರೂಪಾಯಿ, ಒಂದು ಕೀ  ಹಾಗು ಒಂದು ಡೆಬಿಟ್ ಕಾರ್ಡ್ ಇತ್ತು, ಡೆಬಿಟ್ ಕಾರ್ಡ್ ಮೇಲೆ "ಸೌಮ್ಯ ಗೌಡ" ಅಂತ ಹೆಸರಿತ್ತು. 

ಪಾಟೀಲ್ "ಸೌಮ್ಯ ಗೌಡ"? 

"ಒಂದು  ವೇಳೆ ಈ ಬ್ಯಾಗ್ ಕೊಲೆಯಾದ ಯುವತಿಯ ಆಗಿದ್ದರೆ, ಈ ಯುವತಿಯ ಹೆಸರು ಸೌಮ್ಯ ಗೌಡ ಎಂದಿರಬೇಕು" ಪಾಟೀಲ್ ರಾಣೆ ಹತ್ತಿರ ಹೇಳಿದರು.

ರಾಣೆ " ಹೌದು ಸಾರ್,  ಆದರೆ ಒಳಗೆ ಸಾಹೇಬರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಪರಿಶೀಲಿಸಿ ನೋಡಿದ ನಂತರವೇ ಇದು ಖಚಿತಪಡಬಹುದು".

ಪಾಟೀಲ್ "ಹ್ಮ್ಮ್...ರಾಣೆ, ನೀವು ಇಲ್ಲಿಯ ಕಾರ್ಯ ಪೂರ್ಣಗೊಳಿಸಿ, ನಾನು ಸಾಹೇಬರಿಗೆ ಸಿಕ್ಕಿ ಬರುತ್ತೇನೆ".

ರಾಣೆ " ಓಕೆ, ಸಾರ್".

ಪಾಟೀಲ್ ವ್ಯಾನಿಟಿ ಬ್ಯಾಗ್ ಹಿಡಿದು ಮುಖ್ಯ ಪೊಲೀಸ್ ಅಧಿಕಾರಿಯಲ್ಲಿಗೆ ಹೋದರು.

ತುಂಬಾ ಸಮಯ ಕಳೆದೋಯಿತು, ಒಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ, ನಾನು ಮತ್ತು ಇತರ ಜನರು ಸೋತು ಕಂಗಾಲಾಗಿದ್ದರು. 

ಆಗ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ಜೊತೆ ಒಂದು ಹೆಂಗಸು ಗಟ್ಟಿಧ್ವನಿಯಲ್ಲಿ ವಾದ ಮಾಡುವುದು ಕೇಳಿ ಬಂತು, ಅದನ್ನು ಕೇಳಿ ರಾಣೆ ಸೆಕ್ಯೂರಿಟಿಗೆ  "ಏನಲ್ಲಿ"?

ಸೆಕ್ಯೂರಿಟಿ " ಸಾರ್ , ಈ ಹೆಂಗಸು ನೋಡಿ, ಒಳಗೆ ಬಿಡಬೇಕೆಂದು ಹಠ ಮಾಡುತ್ತಿದ್ದಾರೆ".

ರಾಣೆ ಮುಖ್ಯ ದ್ವಾರಕ್ಕೆ ಹೋಗಿ ಕೆಲವು ನಿಮಿಷ ಆ ಹೆಂಗಸು ಜೊತೆ ವಿಮರ್ಶೆ ಮಾಡಿ ನಂತರ ಆ ಹೆಂಗಸನ್ನು ಜೊತೆಯಲ್ಲಿ ಕರೆದುಕೊಂಡು ಒಳಗೆ ನೇರ ಮುಖ್ಯ ಪೊಲೀಸ್ ಅಧಿಕಾರಿಯ ತನಿಖೆ ನಡೆಯುತ್ತಿದ್ದ ಕ್ಯಾಬಿನ್ ಗೆ ಹೋದರು. 

ಇನ್ನು ಕೆಲವು ನಿಮಿಷ ಕಳೆದೋಯಿತು, ಮುಖ್ಯ ದ್ವಾರದಲ್ಲಿ ಮಾಧ್ಯಮ ಪ್ರಸಾರ ಹಾಗು ವರದಿಗಾರರ ಗುಂಪು ಒಳಗೆ ಬರಲು ಯತ್ನಿಸುತ್ತಿದ್ದರು, ಸೆಕ್ಯೂರಿಟಿ ಅವರನ್ನು ಸ್ವಲ್ಪ ಹೊತ್ತು ತಡೆಯಲು ವಿನಂತಿಸುತ್ತಿದ್ದರು.

ನನ್ನ ಕುತೂಹಲ ಪರಾಕಾಷ್ಠೆಯಲ್ಲಿತ್ತು,  ಯಾರಿರಬಹುದು  ಈ ಹೆಂಗಸು? ಯಾಕೆ ಒಳಗೆ ಬರಲು ಯತ್ನಿಸುತ್ತಿದ್ದಳು ??  ರಾಣೆ ಅವಳನ್ನು ಯಾಕೆ ಒಳಗೆ ಕರೆದುಕೊಂಡು ಹೋದರು???

ರಹಸ್ಯ ಗಾಢವಾಗುತ್ತ ಹೋಗುತ್ತಿತ್ತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ,ಶಿರ್ವ
ಚಿತ್ರ ಕೃಪೆ : ಗೂಗಲ್

Sunday, January 26, 2020

ವ್ಯಾನಿಟಿ ಬ್ಯಾಗ್ ೪


ಸಬ್ ಇನ್ಸ್ಪೆಕ್ಟರ್ ಪಾಟೀಲ್ ಶವ ಪೋಸ್ಟ್ ಮಾರ್ಟಮ್ ಗೋಸ್ಕರ ಕಳಿಸುವ  ಸಿದ್ಧತೆಯಲ್ಲಿದ್ದಾಗ ಅಲ್ಲಿಗೊಬ್ಬ ಪೊಲೀಸ್ ಕಾನ್ಸ್ಟೇಬಲ್ ಬಂದು "ಸಾರ್, ಇದೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ". 

ಯಾಕೋ ಪುನಃ ಒಂದು ಸಲ ನನ್ನಲ್ಲಿ  ಭಯ ಆವರಿಸಿತು.  

ಅವರ ಸಂಭಾಷಣೆ ನಡೆಯುತ್ತಿದಂತಲೇ ಬ್ಯಾಂಕಿನ ಆ ಕಡೆಯಿಂದ ಏನೋ  ಗಲಾಟೆ ಕೇಳಿ ಬಂತು ಹಾಗು ಎಲ್ಲರ ದೃಷ್ಟಿ ಆ ಕಡೆ ಹೋಯಿತು. 

ಮೂರು ನಾಲ್ಕು ಕಾನ್ಸ್ಟೇಬಲ್ ನವರು ಒಂದು ವ್ಯಕ್ತಿಯನ್ನು ಹಿಡಿದು ಬರುತ್ತಿದ್ದರು, ಆತ ತನ್ನನ್ನು ಬಿಡಿಸಲು ಪ್ರಯತ್ನಿಸುತ್ತಿದ್ದ. 

ಈ ಗಲಾಟೆ ಕೇಳಿ ಕ್ಯಾಬಿನ್ ಒಳಗೆ ಇದ್ದ ಮುಖ್ಯ ಪೊಲೀಸ್  ಅಧಿಕಾರಿಯವರು ಸಹ ಹೊರಗೆ ಬಂದು "ಏನದು ಗಲಾಟೆ, ಗೈತೊಂಡೆ ಏನಾಯಿತು". 

ಆ ವ್ಯಕ್ತಿಯುನ್ನು ಹಿಡಿದ ಮೂವರಲ್ಲಿ ಕಾನ್ಸ್ಟೇಬಲ್ ಗೈತೊಂಡೆ "ಸಾರ್, ಈತ ಕಣ್ಣು ತಪ್ಪಿಸಿ ಬ್ಯಾಂಕಿನ ಕಿಟಕಿಯಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದ, ಇವನನ್ನು ಹಿಡಿದಾಗ ಇವನ ಹತ್ತಿರ ಈ ಗನ್ ಹಾಗು ಈ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದೆ" ಎಂದು ಕೈಯಲ್ಲಿದ್ದ ಗನ್ ಹಾಗು ವ್ಯಾನಿಟಿ ಬ್ಯಾಗ್ ಎತ್ತಿ ತೋರಿಸಿದ.  

ನಾನು ಇದನ್ನು ನೋಡಿ ಆಶ್ಚರ್ಯಪಟ್ಟೆ "ಅರೆ, ಇದೇನು ಗೊಂದಲ!!ಎರೆಡೆರಡು ವ್ಯಾನಿಟಿ ಬ್ಯಾಗ್!!". 

ಕಾನ್ಸ್ಟೇಬಲ್ ಗೈತೊಂಡೆನ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಓಕೆ, ಅವನನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಬನ್ನಿ" ಎಂದು ಹೇಳಿದರು

ಮೂವರು ಕಾನ್ಸ್ಟೇಬಲ್ ನವರು ಆ ವ್ಯಕ್ತಿಯನ್ನು ಕ್ಯಾಬಿನ್ ಒಳಗೆ ಕರೆದುಕೊಂಡು ಹೋದರು. 


ಅವರು ಕ್ಯಾಬಿನ್ ಒಳಗೆ ಹೋದ ನಂತರ ಇಲ್ಲಿ ಸಬ್ ಇನ್ಸ್ಪೆಕ್ಟರ್ ಪಾಟೀಲ್ ಕಾನ್ಸ್ಟೇಬಲ್ ಜೊತೆ  "ರಾಣೆ, ಇದು ನಿಮಗೆ ಎಲ್ಲಿ ಸಿಕ್ಕಿದ್ದು"?

ಕಾನ್ಸ್ಟೇಬಲ್ ರಾಣೆ ನಾನು ವ್ಯಾನಿಟಿ ಬ್ಯಾಗ್ ಬಿಸಾಕಿದ ಸ್ಥಾನ ತೋರಿಸಿ "ಸಾರ್, ನಾನು ಆ  ಕಡೆಯಿಂದ ಬರುವಾಗ ಅಲ್ಲಿ ಮೂಲೆಯಲ್ಲಿ ಬಿದ್ದಿತ್ತು, ನಾನು ಎತ್ತಿಕೊಂಡು ಸೆಕ್ಯೂರಿಟಿಗೆ ತೋರಿಸಿ ವಿಚಾರಿಸಿದಾಗ ಅವನು ಈ ಕೊಲೆಯಾದ ಯುವತಿ ಬ್ಯಾಂಕ್ ಪ್ರವೇಶ ಮಾಡುವಾಗ ಈ  ವ್ಯಾನಿಟಿ ಬ್ಯಾಗ್ ಅವಳ ಹತ್ತಿರ ಇತ್ತು ಎಂದು ಹೇಳಿದನು"

ಪಾಟೀಲ್ "ಆದರೆ ರಾಣೆ, ಗೈತೊಂಡೆ ತೋರಿಸಿದ ವ್ಯಾನಿಟಿ ಬ್ಯಾಗ್ ಸಹ ಇದೆ ತರಹ ಇತ್ತು, ಇದೇನು ವಿಷಯ"?

ರಾಣೆ " ಅದೇ ಸಾರ್, ನನಗೂ ಆಶ್ಚರ್ಯವಾಯಿತು,ವಿಚಿತ್ರ ಏನೆಂದರೆ ಸಾರ್ ನಾನು ಅವಾಗ ಆ ಕಡೆ ಹೋಗುವಾಗ ಈ ವ್ಯಾನಿಟಿ ಬ್ಯಾಗ್ ಅಲ್ಲಿ ಇರಲಿಲ್ಲ  ". 

ಇದನ್ನು ಕೇಳಿ ನನ್ನ ಉಸಿರು ನಿಲ್ಲಿದಂತಾಯಿತು, ಇನ್ನು ಇವರು ಇದರ ಬಗ್ಗೆ ತನಿಖೆ ಮಾಡಿದರೆ ನಾನು ಸಿಕ್ಕಿಬೀಳುವೆನೋ, ಯಾರಾದರೂ ನನ್ನನ್ನು ನೋಡಿರಬೇಕಾ?  ಎಂಬ ಹೆದರಿಕೆ ಶುರುವಾಯಿತು , ಅಯ್ಯೋ.   

ಆದರೆ ಇದೇನು ಪ್ರಕಾರ? ಒಂದೇ ರೀತಿ ಹೋಲುವ ಎರಡು ವ್ಯಾನಿಟಿ ಬ್ಯಾಗ್?? ಇದೇನು ರಹಸ್ಯ ???

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Saturday, January 25, 2020

ವ್ಯಾನಿಟಿ ಬ್ಯಾಗ್ ೩


"ಸರ್, ಒಂದು ಕೆಟ್ಟ ಸುದ್ದಿ, ಇಂದು ಬೆಳಿಗ್ಗೆಯಿಂದ ಈ ಏರಿಯದಲ್ಲಿ ವಿದ್ಯುತ್ ಪ್ರವಾಹ ಇಲ್ಲ, ಅದಕ್ಕೆ ಬ್ಯಾಂಕಲ್ಲಿ ಜನರೇಟರ್ ಮೂಲಕ ವಿದ್ಯುತ್ ನಡೆಯುತ್ತಿತ್ತು, ಇಲ್ಲಿ ಎರಡು ಜನರೇಟರ್ ಇದೆ ಸರ್, ಒಂದು ವಿದ್ಯುತ್ ಗೋಸ್ಕರ ಇನ್ನೊಂದು ಸಿಸಿಟಿವಿಗೋಸ್ಕರ,  ಸರ್ ಸಿಸಿಟಿವಿಗೆ ಜೋಡಿಸಿದ ಜನರೇಟರಿನ ಡೀಸೆಲ್ ಮುಗಿದ ಕಾರಣ ಅದು ಇಂದು ಕೆಲಸ ಮಾಡುತ್ತಿರಲಿಲ್ಲ, ಆಫ್ ಮೋಡಲ್ಲಿತ್ತು, ಅದರ ಕಾರಣ ಅದರಲ್ಲಿ ಇಂದಿನ ಯಾವುದೇ ಫೂಟೇಜ್ ರೆಕಾರ್ಡ್ ಆಗಲಿಲ್ಲ, ಬ್ಯಾಂಕ್ ಅಧಿಕಾರಿಗಳಿಗೆ ಸಹ ಈಗ ತಾನೇ ಡೀಸೆಲ್ ಮುಗಿದ ವಿಷಯ ತಿಳಿದದ್ದು". 

ಇದನ್ನು ಕೇಳುತ್ತಲೇ  ನನ್ನ ಜೀವದಲ್ಲಿ ಜೀವ ಬಂದಂತಾಯಿತು, ನಾನು ನೆಮ್ಮದಿಯ ಉಸಿರು ಬಿಟ್ಟೆ, ಆದರೆ ಈಗಲೂ ಪರಿಸ್ಥಿತಿ ಪೂರ್ಣವಾಗಿ ನನ್ನ ಪರವಾಗಿ  ಇರಲಿಲ್ಲ, ಒತ್ತಡ  ಈಗಲೂ ಇತ್ತು. 

ಪಾಟೀಲ್ ರವರ ಮಾತು ಕೇಳಿ ಮುಖ್ಯ ಪೊಲೀಸ್ ಅಧಿಕಾರಿಯವರು "ಒಹ್!! ಬ್ಯಾಂಕ್ ಅಧಿಕಾರಿಗಳಿಗೆ ಈ ಕಡೆ ಗಮನ ಇಡಬೇಕಿತ್ತು, ಸಿಸಿಟಿವಿಯ ಮಹತ್ವ ಅವರಿಗೆ ತಿಳಿದಿರಬೇಕು, ಇಂಥ ಘಟನೆ ನಡೆದಾಗಲೇ ಅದರ ಪ್ರಾಮುಖ್ಯತೆ ತಿಳಿಯುವುದು". 
ಎನಿವೇಸ್..... "ನಾನು ಇಲ್ಲಿದ್ದ ಜನರ ಹಾಗು ಬ್ಯಾಂಕ್ ಸಿಬ್ಬಂದಿಯರ ಒಟ್ಟಿಗೆ ವಿಚಾರಣೆ ಮಾಡುತ್ತೇನೆ,  ನೀವು ಯುವತಿಯ ಶವ ಪೋಸ್ಟ್ ಮಾರ್ಟಮ್ ಗೆ ಕಳಿಸಿ, ಶವದ ಬಳಿ ಯಾವುದೇ ವಸ್ತು ಹಾಗು ಪುರಾವೆ ಏನು ಸಿಗಲಿಲ್ಲ, ಇನ್ನು ಇಲ್ಲಿದ್ದ ಜನರ ಸ್ಕ್ಯಾನಿಂಗ್ ಆದ ನಂತರವೇ ಕೊಲೆಗಾರನ ಸುಳಿವು ಸಿಗಬಹುದು".  

ಪಾಟೀಲ್ " ಓಕೆ ಸರ್, ನಮ್ಮ ಟೀಮ್ ಸಹ ಇಡೀ ಬ್ಯಾಂಕ್ ಸ್ಕ್ಯಾನ್ ಮಾಡುತ್ತಿದ್ದಾರೆ, ಹೋಪ್ ಸಮ್ ಔಟ್ಕಮ್ ವಿಲ್ ಕಮ್".

ಮುಖ್ಯ ಪೊಲೀಸ್ ಅಧಿಕಾರಿಯವರು "ಡೆಫಿನೇಟೆಲಿ, ಲೆಟ್ಸ್ ಹೋಪ್ ಫಾರ್ ದ ಬೆಸ್ಟ್". 

ಸಿಸಿಟಿವಿ ಆಫ್ ಇದೆ ಎಂಬ ವಿಷಯ ತಿಳಿದ ನಂತರ ಈಗ ನನಗೆ ಹೇಗೆ ಸಹ ಬೇಗನೆ ಆ ವ್ಯಾನಿಟಿ ಬ್ಯಾಗ್ ನಿಂದ  ಮುಕ್ತಿ ಪಡೆಯಬೇಕು ಎಂಬ ವಿಚಾರ ಬಂತು, ನಾನು ಮೆಲ್ಲನೆ ಎಲ್ಲರ ಕಣ್ಣು ತಪ್ಪಿಸಿ ನನ್ನ ಬ್ಯಾಗಲ್ಲಿದ್ದ ವ್ಯಾನಿಟಿ ಬ್ಯಾಗ್ ತೆಗೆದು ಅಲ್ಲಿಯೇ ಒಂದು ಮೂಲೆಗೆ ಸಾಗಿಸಿದೆ.

ಒಮ್ಮೆ ಹೃದಯ ಜೋರಿಂದ ಬಡಿಯಲಾರಂಭಿಸಿತು, ಆದರೆ ನಂತರ ಏನೋ ಭಾರ ಇಳಿದಂತೆ ಬಾಸವಾಯಿತು, ನಾನು ಪುನಃ ಬಂದು ಜನರ ಸಾಲಿಗೆ ಸೇರಿದೆ. 

ಯಾಕೋ ಈಗ ನನಗೆ ನಾನು ತುಂಬಾ ಹಗುರ ಹಗುರವಾಗಿದ್ದೇನೆ ಎಂಬ ಅನುಭವ ಆಗುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್

Thursday, January 23, 2020

ವ್ಯಾನಿಟಿ ಬ್ಯಾಗ್ ೨



ಬ್ಯಾಂಕ್ ಮುಖ್ಯ ದ್ವಾರ  ಮೊದಲೇ ಬ್ಯಾಂಕ್ ಸೆಕ್ಯೂರಿಟಿ ಸೀಲ್ ಮಾಡಿದ್ದರು. ಪೊಲೀಸರು ಬಂದ ನಂತರ ಅವರು ಎಲ್ಲರಿಗೂ "ಯಾರು ಹೊರಗೆ ಹೋಗುವ ಹಾಗೆ ಇಲ್ಲ, ನಮ್ಮ ತನಿಖೆ ಮುಗಿದ ನಂತರವೇ ನಿಮ್ಮನ್ನು ಹೊರ ಬಿಡಲಾಗುವುದು" ಎಂದು ಎಚ್ಚರಿಕೆ ನೀಡಿದರು, ಜನರೆಲ್ಲ ಆತಂಕದಲ್ಲಿದ್ದರು, ಎಲ್ಲರ ಮನಸ್ಸಲ್ಲಿ ಒಂದೇ ಪ್ರಶ್ನೆ ಇದು ಹೇಗೆ ಆಯಿತೆಂದು?

ಪೊಲೀಸರ ತಂಡ ತನಿಖೆ ಮಾಡಲು ಅಲ್ಲಲ್ಲಿ ಹರಡಿದರು, ಪೊಲೀಸ್ ಮುಖ್ಯ ಅಧಿಕಾರಿ ತುಂಬಾ ಸೂಕ್ಷ್ಮ ರೀತಿಯಿಂದ ಯುವತಿಯ ಶವದ ಅಧ್ಯಯನ ಮಾಡುತ್ತಿದ್ದರು, ಅವರು ಸಬ್ ಇನ್ಸ್‌ಪೆಕ್ಟರ್ ಜೊತೆ " ಪಾಟೀಲ್, ಯಾರೋ ತುಂಬಾ ಸಮೀಪದಿಂದ ಸೈಲೆನ್ಸರ್ ಇದ್ದ ಗನ್ ನಿಂದ  ಈ ಯುವತಿಗೆ ಶೂಟ್ ಮಾಡಿರಬೇಕು ಹಾಗು ಆ ಶೂಟರ್ ಈಗಲೂ ಇಲ್ಲೇ ಬ್ಯಾಂಕಲ್ಲಿ ಇರಬೇಕು,ಯಾಕೆಂದರೆ ಬ್ಯಾಂಕ್ ಸೆಕ್ಯೂರಿಟಿ ಪ್ರಕಾರ ಈ ಪ್ರಕರಣ ಆದ  ಕೂಡಲೇ ಅವನು ಬ್ಯಾಂಕ್ ಮುಖ್ಯ ದ್ವಾರ  ಸೀಲ್ ಮಾಡಿದ್ದಾನೆ ".

ಪಾಟೀಲ್  "ಹೌದು ಸರ್, ನಾನು ಮ್ಯಾನೇಜರ್ ಹತ್ತಿರ ಸಿಸಿಟಿವಿ ಫೂಟೇಜ್ ತೋರಿಸಿಲಿಕ್ಕೆ ಹೇಳಿದ್ದೇನೆ, ಅದರಿಂದ ನಮಗೆ ಏನಾದರು ಕೊಲೆಗಾರನ ಸುಳಿವು ಸಿಗಬಹುದು ".

ಇದನ್ನು ಕೇಳಿ ನನಗೆ ಬೆವರು ಹರಿಯಲಾರಂಭಿಸಿತು, "ಏನು ಮಾಡಲಿ ಈಗ ಆ ವ್ಯಾನಿಟಿ ಬ್ಯಾಗನ್ನು ಮೆಲ್ಲನೆ ಎಲ್ಲಿಯಾದರೂ ಇಡಬೇಕೆಂದರೆ, ಅದು ಈಗ ಸಾಧ್ಯವಿಲ್ಲ, ಎಲ್ಲ ಕಡೆ ಪೊಲೀಸರು ಇದ್ದಾರೆ, ಅದರ ಮೇಲೆ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಇದೆ, ಅಯ್ಯೋ, ಎಲ್ಲಿ ಸಿಕ್ಕಿ ಬಿದ್ದೆ".   

ನನ್ನ ಮನಸ್ಸು ಪುನಃ ನನ್ನ ಮೇಲೆ ಕಿರುಚಿತು "ಹೇ  ಮೂರ್ಖ ,ನಿನ್ನ ಈ ಅವಸ್ಥೆ ನೋಡಿ ಯಾರು ಸಹ ನಿನ್ನ ಮೇಲೆ ಸಂಶಯ ಮಾಡಬಹುದು, ಸ್ವಲ ನಿನ್ನನ್ನು ಸಮಾಧಾನ ಮಾಡಿಸಿಕೊಳ್ಳು".

ನಾನು ಮುಖದಲ್ಲಿ ಮೂಡಿದ ಬೆವರನ್ನು ಒರೆಸಿ ಸ್ವಲ ತನ್ನನ್ನು ಸುಧಾರಿಸಿಕೊಂಡೆ ಹಾಗು  ಮೆಲ್ಲನೆ ಆ ವ್ಯಾನಿಟಿ ಬ್ಯಾಗ್ ನನ್ನ ಬ್ಯಾಗಿಗೆ ಸಾಗಿಸಿದೆ, "ನೋಡುವ ಏನಾಗುತ್ತದೆ, ಹೇಗೋ ತಪ್ಪು ಮಾಡಿ ಆಗಿದೆ, ಇನ್ನು ಅದನ್ನು ಎದುರಿಸಲೇ ಬೇಕು".

ಆಗ ಒಮ್ಮೆಲೇ ನನಗೆ ವಿಚಾರ ಬಂತು "ಯಾಕೆ ನಾನು ನೇರ ಹೋಗಿ ಆ ಬ್ಯಾಗನ್ನು  ಪೊಲೀಸರಿಗೆ ಕೊಡಬಾರದು? ಹೆಚ್ಚೆಚ್ಚು ಏನಾಗಬಹುದು? ಅವರು ಕೆಲವು ಪ್ರಶ್ನೆ ಕೇಳಬಹುದು ಅಷ್ಟೇ, ನಾನೇನು ಕೊಲೆಗಾರ ಅಲ್ಲ, ನನ್ನ ತಪ್ಪು ಕೇವಲ ಆ ಬ್ಯಾಗ್ ಎತ್ತು ತಂದದ್ದು, ಆದರೆ ಪುನಃ ಇನ್ನೊಂದು ವಿಚಾರ ಬಂತು "ಆ ಬ್ಯಾಗಲ್ಲಿ ಏನಿದೆ ಯಾರಿಗೆ ಗೊತ್ತು, ಏನಾದರು ಸಂಶಯಪ್ರದ ವಸ್ತು ಇದ್ದರೆ  ಪೊಲೀಸರು ನನ್ನನ್ನು ಬಿಡಲಿಕ್ಕಿಲ್ಲ, ನಂತರ ಸುಮ್ಮನೆ ಕೋರ್ಟ್ ಕಚೇರಿ ".

ಆಗ ಒಬ್ಬ ಪೊಲೀಸರು ಬ್ಯಾಂಕಲ್ಲಿ ಇದ್ದ ಎಲ್ಲ ಗ್ರಾಹಕರನ್ನು ಹಾಗು ಬ್ಯಾಂಕ್ ಸಿಬ್ಬಂದಿಯರನ್ನು ಸಾಲಾಗಿ ನಿಲ್ಲಬೇಕು ಹಾಗು ಪೊಲೀಸ್ ಮುಖ್ಯ ಅಧಿಕಾರಿಯವರು  ನಿಮ್ಮಿಂದ ಒಬ್ಬೊಬ್ಬರನ್ನು ಕರೆದು ತನಿಖೆ ಮಾಡುತ್ತಾರೆಂದು ಹೇಳಿದರು, ಇದನ್ನು ಕೇಳಿ ನನ್ನ ಶರೀರದಲ್ಲಿ ಪುನಃ ಗಾಬರಿಯ ಸಂಚಾರವಾಯಿತು.

ಆದರೆ ಆಗ ತಾನೇ ಸಬ್ ಇನ್ಸ್ಪೆಕ್ಟರ್ ಪಾಟೀಲ್ ನವರು  ಪೊಲೀಸ್ ಮುಖ್ಯ ಅಧಿಕಾರಿಗೆ ಹೇಳಿದ ಮಾತಿನಿಂದ ನನ್ನಲ್ಲಿ ಆಶ್ಚರ್ಯ ಹಾಗು ನೆಮ್ಮದಿ ಮೂಡಿತು.

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

Wednesday, January 22, 2020

ವ್ಯಾನಿಟಿ ಬ್ಯಾಗ್ ೧


ಸಂಜೆ ಬ್ಯಾಂಕ್ ಕ್ಲೋಸ್ ಆಗುವ ಸಮಯ, ಅಂದು ಬ್ಯಾಂಕಲ್ಲಿ ಸ್ವಲ್ಪ ಹೆಚ್ಚು ಜನರು, ಎಲ್ಲ ಕೌಂಟರಲ್ಲಿ  ಜನರ ಸಾಲು.  ನಾನು ಈ ಬ್ಯಾಂಕಲ್ಲಿ ಸೇಲ್ಸ್ ಲ್ಲಿ ಸ್ವಲ್ಪ ದಿನ ಮುಂಚೆ ಜಾಯಿನ್ ಆದದ್ದು, ನನ್ನ ಕಾರ್ಯ ಹೊರಗೆ ಹೋಗಿ ಹೊಸ ಅಕೌಂಟ್ ತರುವುದು, ಬ್ಯಾಂಕ್ ಒಳಗೆ ಗ್ರಾಹಕರೊಂದಿಗೆ ನನ್ನ ನೇರ ಸಂಪರ್ಕ ಇರಲಿಲ್ಲ. ನಾನು ಹೊರಗೆ ಹೋಗಿ ಆಗ ತಾನೇ ಬಂದಿದೆ ,ಅದಕ್ಕೆ ನಾನು ನನ್ನ ಡೆಸ್ಕ್ ಲ್ಲಿ ನನ್ನ ಉಳಿದ ಕಾರ್ಯ ಮಾಡುತ್ತಿದ್ದೆ. 

ಕಾರ್ಯ ಮಾಡುತ್ತಿದಂತೆ ನನ್ನ ಧ್ಯಾನ ಪದೇ ಪದೇ ಆ ಯುವತಿಯ ಮೇಲೆ ಹೋಗುತ್ತಿತ್ತು. ಅವಳ ಮನಸ್ಸಲೇನಿತ್ತು ಗೋತ್ತಿಲ್ಲ, ಆದರೆ ಅವಳ ನಡವಳಿಕೆ ಸ್ವಲ್ಪ ವಿಚಿತ್ರವಾಗಿತ್ತು. 

ನನಗೇನಾಗಬೇಕೆಂದು ತಿಳಿದು ನಾನು ನನ್ನ ಕೆಲಸದಲ್ಲಿ ಮಗ್ನನಾದೆ. 
ಆದರೆ ಯಾಕೋ ಅವಳಿಗೆ ಕೇಳಿಯೇ ಬಿಡೋಣ ಎಂದು ಎದ್ದು ಅವಳತ್ತ ಹೋದೆ . 

"ಮೇಡಂ, ಮೇ ಆಯ್ ಹೆಲ್ಪ್ ಯು?

ನನ್ನಿಂದ ಹಠಾತ್ತಾಗಿ ಬಂದ ಪ್ರಶ್ನೆಯಿಂದ ಅವಳು ಸ್ವಲ್ಪ ಭಯದಿಂದಲೇ 
"ನೋ, ಥ್ಯಾಂಕ್ಸ್ ". 

"ಏನು ಮೇಡಂ, ನೀವು ಸ್ವಲ್ಪ ಕಳವಳದಲ್ಲಿದ್ದಾಗೆ ಕಾಣುತ್ತದೆ ?"

ಅವಳು ಸ್ವಲ್ಪ ಕೋಪದಿಂದಲೇ "ಹೂ ಆರ್ ಯು ಟು ಆಸ್ಕ್ ಮಿ ಸಚ್ ಕ್ವೆಶ್ಚನ್ ,ನನ್ ಓಫ್ ಯುವರ್ ಬಿಸ್ನೆಸ್,  ಮೈಂಡ್ ಯುವರ್ ಓನ್ ಬಿಸ್ನೆಸ್". 

ಅವಳ ಮಾತು ಕೇಳಿ ನನ್ನ ಮನಸ್ಸೇ ನನಗೆ ಬೈಯಲು ಶುರುಮಾಡಿತು,
"ಹೋಗು, ಇನ್ನು ಹೋಗು ಬೇರೆಯವರ ಸಹಾಯ ಮಾಡಲು, ಸುಮ್ಮನೆ ತನ್ನ ಕೆಲಸ ಬಿಟ್ಟು ಬೇರೆಯವರ ಹಿಂದೆ ಓಡುವುದು ". 

ನಾನು ತೆಪ್ಪಗೆ ಪುನಃ ನನ್ನ ಡೆಸ್ಕ್ ಗೆ ಬಂದು ಕುಳಿತುಕೊಂಡೆ. 
"ಛೆ, ಎಂತಹ ಮನಷ್ಯರು, ಅಷ್ಟು ಸೌಮ್ಯವಾಗಿ ಸಹಾಯ ಮಾಡಬೇಕೇ ಎಂದು ಕೇಳಿದೆ, ಆದರೆ ಅವರದ್ದು ಬೇರೇನೇ". 

ಸ್ವಲ್ಪ ಸಮಯದ ನಂತರ  ಜೋರಾಗಿ ಕಿರುಚುವ ಧ್ವನಿ ಕೇಳಿತು, ನನಗ್ಯಾಕೋ ಇದು ಅವಳದ್ದೇ ಸ್ವರ ಎಂದು ಆ ಕಡೆ ನೋಡಿದೆ.  ಅಲ್ಲಿಯ ಧೃಶ್ಯ ನೋಡಿ ನನ್ನ ಕಣ್ಣು ಅಗಲವಾಯಿತು, ಅಲ್ಲಿ ಅವಳು ನೆಲದಲ್ಲಿ ಬಿದ್ದಿದಳು, ಅವಳ ತಲೆಯಿಂದ ರಕ್ತ ಸುರಿಯುತ್ತಿತ್ತು, ಯಾರೋ ಅವಳಿಗೆ ಶೂಟ್ ಮಾಡಿರಬೇಕು ಎಂದು ತಿಳಿದು ಬರುತ್ತಿತ್ತು, ನಾನು ಆ ಕಡೆ ಓಡಿ ಹೋದೆ. 

ಅವಳು ಸತ್ತು ಹೋಗಿದ್ದಳು, ಅವಳ ಶವದ ಸುತ್ತ ಮುತ್ತ ಜನರು ಒಟ್ಟಾಗಿದ್ದರು,  ಎಲ್ಲರು ಅವಳ ಬಗ್ಗೆ ವಿಧ ವಿಧವಾದ ಮಾತನ್ನು ಹೇಳು,ಕೇಳುತ್ತಿದ್ದರು. ಜನರ ಗಲಾಟೆಯ ಮಧ್ಯೆ ನನಗೆ ಒಂದು ಮೂಲೆಯಲ್ಲಿ ಅವಳ ಕೈಯಲ್ಲಿದ್ದ ಕೆಂಪು ವ್ಯಾನಿಟಿ ಬ್ಯಾಗ್ ಕಂಡು ಬಂತು, ಯಾರದ್ದು ಧ್ಯಾನ ಅದರ ಮೇಲೆ ಇರಲಿಲ್ಲ,  ಉತ್ಸುಕನಾಗಿ ನಾನು ಮೂಲೆಗೆ ಹೋಗಿ ಅವಳ ವ್ಯಾನಿಟಿ ಬ್ಯಾಗ್ ಎತ್ತುಕೊಂಡು ಮೆಲ್ಲನೆ ನನ್ನ ಡೆಸ್ಕ್ ಗೆ ಬಂದೆ. 

ನನ್ನ ಹೃದಯ ಡಬ ಡಬ ಅಂತ ಜೋರಾಗಿ ಬಡಿಯಲಾರಂಭಿಸಿತು. ಆಗ ಜನರ ಗಲಾಟೆಯಿಂದ ಪೊಲೀಸ್ ನವರು ಬಂದ  ಸುದ್ದಿ ತಿಳಿಯಿತು. ನಾನು ಗಾಬರಿಯಾದೆ "ಅರೆ ಇದು ನಾನು ಏನು ಮಾಡಿದೆ, ಯಾಕೆ ಅವಳ ಬ್ಯಾಗ್ ತಂದೆ, ಇನ್ನು ಪೊಲೀಸ್ ನವರು ಸಿಸಿಟಿವ್ ಚೆಕ್ ಮಾಡಿದರೆ  ನಾನು ಬ್ಯಾಗ್ ಎತ್ತು ತರುವುದು ಸಹ ಅವರು ನೋಡಬಹುದು". 

"ಏನು ಮಾಡಲಿ, ಹೋಗಿ ಅಲ್ಲಿಯೇ  ಇಡೋಣ, ಅಯ್ಯೋ ಅದು ಸಾಧ್ಯನೇ ಇಲ್ಲ...  ಸಿಸಿಟಿವಿಯಲ್ಲಿ ಎಲ್ಲ ರೆಕಾರ್ಡ್ ಆಗುತ್ತದೆ, "ಛೆ" ಏನು ಮಾಡಿ ಬಿಟ್ಟೆ, ಏನಿರಬೇಕು ಆ ವ್ಯಾನಿಟಿ ಬ್ಯಾಗ್ ಲ್ಲಿ" ,"ಅಯ್ಯೋ" ನನ್ನ ಮನಸ್ಸು ಪುನಃ ನನಗೆ ಬೈಯಲು ಶುರು ಮಾಡಿತು "ಯಾಕೆ ಬೇಡದ್ದು ಕೆಲಸ ಮಾಡುವೆಯೆಂದು ಅರ್ಥವಾಗುದಿಲ್ಲ, ನೀನೇನು ಮೂರ್ಖನ? ಇಷ್ಟೊಂದು ಅರ್ಥವಾಗುವುದಿಲ್ಲವೇ ? ಇನ್ನು ಜೈಲು ನಿನಗೆ ಗತಿ". 

ನಾನು ತಲೆ ಹಿಡಿದು ಕುಳಿತುಕೊಂಡೆ.

( ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 

Tuesday, January 21, 2020

ಅಮ್ಮ ಹಕ್ಕಿ



ಅಮ್ಮ ಹಕ್ಕಿ
ದಿನ ನಿತ್ಯ
ಆಹಾರ ಹುಡಕುತ
ಅಲ್ಲಿ ಇಲ್ಲಿ
ಹಾರುತ್ತಿತ್ತು

ಪರಿಸರದ
ಸೌಂದರ್ಯ ಮರೆತು
ಮರಿಗಳ ನೆನಪಿನಲಿ
ಕಳವಳದಲ್ಲಿರುತ್ತಿತ್ತು

ದೂರ ಹೋಗದೆ
ಹಣ್ಣು, ಧಾನ್ಯ,
ತಿನಸಿನ ಹುಡುಕಾಟದಲ್ಲಿ
ಸುತ್ತ ಮುತ್ತ
ಅಲೆಯುತ್ತಿತ್ತು

ಪದೇ ಪದೇ
ಮರಳಿ ಗೂಡಿಗೆ ಬಂದು
ಮರಿಗಳನ್ನು ನೋಡಿ ಕೊಳ್ಳಲು
ಬರುತ್ತಿತ್ತು

ಅಮ್ಮ ಹಕ್ಕಿಯನ್ನು 
ನೋಡಿ ಗೂಡಲಿ
ಮುದ್ದು ಪುಟ್ಟ ಮರಿಗಳು
ಹರ್ಷದಿಂದ ಚಿಲಿಪಿಲಿಯೆಂದು
ಕೂಗಲಾರಂಭಿಸುತ್ತಿತ್ತು

ಗೂಡಿಗೆ ಬಂದು
ಸಿಕ್ಕ ಆಹಾರ
ಮರಿಗಳಿಗೆ ತಿನಿಸಿ
ಪುನಃ  ಹುಡುಕಾಟಕ್ಕೆ ಹೊರಡುತ್ತಿತ್ತು

ಕೆಲವೊಮ್ಮೆ
ಅಮ್ಮ ಹಕ್ಕಿ
ಹಾರಿ ಹಾರಿ
ಸೋತು ಬಂದು
ಮರದ ಕೊಂಬೆಯಲಿ ಕುಳಿತುಕೊಳ್ಳುತ್ತಿತ್ತು

ಸಂಜೆ ಆದಂತೆ
ಸಿಕ್ಕಿದ ಆಹಾರ
ಕೊಕ್ಕಿನಲ್ಲಿ 
ಹಿಡಿದು ಪುನಃ ಗೂಡಿಗೆ
ಸೇರಿಕೊಳ್ಳುತ್ತಿತ್ತು

ಮರಿಗಳ ಮೈಮೇಲೆ
ರೆಕ್ಕೆ ಪುಕ್ಕಗಳು
ಮೂಡುತ್ತಿದ್ದಂತೆ
ಟೊಂಗೆಯಿಂದ ಟೊಂಗೆಗೆ
ಹಾರಲು ಅಮ್ಮ ಹಕ್ಕಿ
ಪಾಠ ಕಲಿಸುತ್ತಿತ್ತು

ಹಾರಲು ಸಿದ್ಧವಾಗಿ
ಎಲ್ಲ ಮರಿ ಹಕ್ಕಿಗಳು
ತನ್ನ ತನ್ನ
ಜೀವನೋಪಾಯ
ಸ್ವತಃ ಹುಡುಕುತ್ತಿತ್ತು

ಅಮ್ಮ ಎಂಬ ಜೀವಿಯ
ಈ ವಿಶೇಷ ತ್ಯಾಗ ಭಾವ
ಕಂಡು ದೇವರ
ಮುಖದಲ್ಲೂ
ಹರ್ಷ ಮೂಡುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

Monday, January 20, 2020

ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ


ಇಲ್ಲ ಅಂಥ  ಪವಿತ್ರ ನಯನ ಎಲ್ಲಿಯೂ
ಇಲ್ಲ ಅಂಥ ಪ್ರಕಾಶಮಯ ಚಹರೆ ಎಲ್ಲಿಯೂ
ಎಲ್ಲಿಯೂ ಅಂಥ ಹೃದಯದ ಮಾತಿಲ್ಲ
ಇಲ್ಲ ಅಂಥ ಉನ್ಮುಖ ಯೌವನ ಎಲ್ಲಿಯೂ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ.....

ಇಲ್ಲ ನಗು ಒಲುಮೆಯ ಎಲ್ಲಿಯೂ
ಇಲ್ಲ ಸುವಾಸನೆ ಮೋಹಕ ಎಲ್ಲಿಯೂ
ಅಂತಹ ವರ್ಣಮಯ ಲಕ್ಷಣ ನೋಡಿಲ್ಲ
ಇಲ್ಲ ಅಂಥ ಮುಗ್ಧ ಪ್ರೀತಿ ಎಲ್ಲಿಯೂ
ನೀನೆಗಿದ್ದಿಯೋ ಹಾಗೆಯೇ ಇರು ....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಮಳೆಗಾಲದ ನೆನೆದ ಹಸಿರು ಸೌಂದರ್ಯ ನೀನು
ಚಳಿಗಾಲದಲ್ಲಿ ಕೆನ್ನೆಯಲಿ ಬರುವ ಕೆಂಪಗೆ ನೀನು
ರಾತ್ರಿಯ ನೆಮ್ಮದಿ....
ರಾತ್ರಿಯ ನೆಮ್ಮದಿಯೂ , ಮುಂಜಾನೆಯ ಬೇಡಿಕೆಯೂ ನೀನು
ಅನುರಾಗದ ಬಂಧನದಲಿ ಕಾಪಾಡುವೆ ನಿನ್ನನ್ನು 

ಎಲ್ಲೋ ಬೆಂಕಿಯಂತೆ ಉರಿಯುವೆ
ಮಳೆಯ ನೀರಿನಂತಾಗುವೆ ಎಲ್ಲಿಯೋ
ಕೆಲವೊಮ್ಮೆ ಮನಸ್ಸಿನ ಅರಿಯುವೆ
ಕೆಲವೊಮ್ಮೆ ನಿನ್ನದೇ  ಗುಂಗಿನಲ್ಲಿರುವೆ ಎಲ್ಲಿಯೋ
ನೀನೆಗಿದ್ದಿಯೋ ಹಾಗೆಯೇ ಇರು....
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ನನ್ನ ಭಾಗ್ಯದಲಿ, ಬೆಂಬಲದ ಮಾತಿನಲಿ
ಸುಖ ದುಃಖದ ಎಲ್ಲ ಅನುಗ್ರಹದಲಿ
ಜೊತೆಯಲಿ ನಿನ್ನನ್ನೇ  ಇಡಲಿರುವೆ....
ಜೊತೆಯಲಿ ನಿನ್ನನ್ನೇ  ಇಡಲಿರುವೆ,
ನಿನಗೆ  ಜೊತೆಯಲ್ಲಿರಲಿದೆ
ನನ್ನ ಜಗದಲಿ, ನನ್ನ ಮನಸ್ಸಲಿ

ನಿನ್ನ ರೂಪ ಸಿಗುವುದು ಎಲ್ಲೋ
ಅದನ್ನು ತೋರಿಸಲಿದೆ ಎಲ್ಲರಿಗೂ 
ನಿನಗೆ ತಿಳಿದಿದೆ ಪ್ರಾಣ ಹೋದರೂ
ನನಗೆ ಬರುತ್ತದೆ ನಿಭಾಯಿಸಲು
ಅದೇ ಮಾಡುವೆ ಏನು ಹೇಳಿದ್ದೇನೋ
ಜಗ ಸುತ್ತಾಡಿದೆ ನಿನ್ನಂತ ಯಾರೂ ಇಲ್ಲ ...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ  : ಇರ್ಷಾದ್  ಕಾಮಿಲ್ 
ಹಾಡಿದವರು : ರಾಹತ್  ಫತೇಹ್  ಅಲಿ  ಖಾನ್ 
ಸಂಗೀತ : ವಿಶಾಲ್  ಶೇಖರ್,
ಚಿತ್ರ : ಸುಲ್ತಾನ್

ना वो अँखियाँ रूहानी कहीं
ना वो चेहरा नूरानी कहीं
कहीं दिल वाले बातें भी ना
ना वो सजरी जवानी कहीं
जग घूमेया थारे जैसा न कोई
जग घूमेया थारे जैसा न कोई
न तो हँसना रूमानी कहीं
न तो खुश्बू सुहानी कहीं
ना वो रंगली अदाएँ देखी
ना वो प्यारी सी नादानी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
जग घूमेया थारे जैसा न कोई
बारिशों के मौसमों की, भीगी हरियाली तू
सर्दियों में गालों पे जो, आती है वो लाली तू
रातों का सुकूँ
रातों का सुकूँ भी है, सुबह की अज़ान है
चाहतों की चादरों में, मैंने है संभाली तू
कहीं आग जैसी जलती है
बने बरखा का पाणी कहीं
कभी मन जाणा चुपके से
यूँ ही अपनी चलाणी कहीं
जैसी तू है वैसी रहना
जग घूमेया थारे जैसा न कोई
जग घूमेया थारे जैसा न कोई
अपने नसीबो में या, हौंसले की बातों में
सुखों और दुखों वाली, सारी सौगातों में
संग तुझे रखणा है, तूने संग रहणा
मेरी दुनिया में भी, मेरे जज़्बातों में
तेरी मिलती निशानी कहीं
जो है सबको दिखानी कहीं
तू तो जाणती है मर के भी
मुझे आती है निभाणी कहीं
वही करना जो है कहणा
जग घूमेया थारे...


ಚಿತ್ರ ಕೃಪೆ : ಗೂಗಲ್
ವಿಡಿಯೋ ಕೊಂಡಿ : ಯು ಟ್ಯೂಬ್


ಸಿದ್ಧಿದಾತ್ರಿ