Saturday, August 9, 2014

ಬಣ್ಣ ಬಣ್ಣದ ರಾಖಿ

ಬಣ್ಣ ಬಣ್ಣದ ರಾಖಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ

ಬೆಳ್ಳಿ ಬಂಗಾರದ ಹಾರ
ಕೇಳುವುದಿಲ್ಲ ನಾನು
ನನ್ನಣ್ಣನ ಸ್ವಲ್ಪ ಪ್ರೀತಿ
ಕೇಳುವೆ ನಾನು
ಸ್ವಲ್ಪ ಪ್ರೀತಿ ಕೇಳುವೆ ನಾನು
ಈ ರಾಖಿಯಲಿ ಪ್ರೀತಿ ತುಂಬಿಸಿ
ತಂದಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ನೀಲ ಆಕಾಶದಿಂದ
ತಾರೆ ತರಬೇಕೆ
ಅಥವಾ ಚಂದ್ರನ ಕಿರಣದ
ಹಾರ ತರಬೇಕೆ
ಕಿರಣದ ಹಾರ ತರಬೇಕೆ
ಪ್ರೀತಿಯ ಪಡೆದು
ನಲಿ ನಲಿಯುತ್ತಿದ್ದಾಳೆ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಎಂದಾದರೂ ಅಣ್ಣ
ಈ ಸೋದರಿ ಇರಲಿಕ್ಕಿಲ್ಲ ಬಳಿ
ಎಲ್ಲೊ ಪರದೇಶದಲಿ
ಕುಳಿತಿರುವಳು ಬೇಸರದಲಿ
ಸೋದರಿ ಕುಳಿತಿರುವಳು ಬೇಸರದಲಿ
ಯಾರಿಗೊತ್ತು ಯಾವಾಗ
ಅಗಲುವರು ಈ ಸೋದರ ಸೋದರಿ
ಓ ರಾಖಿ ಕಟ್ಟಿಸು
ನನ್ನ ಸೋದರ...

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್

Lata:
Rang-Birangi Raakhi Leke Aai Bahena
O Raakhi Bandhavaa Le Mere Veer \-2

Chorus: Rang-Birangi Raakhi Leke Aai Bahena
O Raakhi Bandhava Le Mere Veer

Lata:
Main Na Chaandi, Na Sone Ke Haar Maangun
Chorus: Main Na Chaandi, Na Bhaiya Sone Ke Haar Maagun

Lata:
Apane Bhaiya Ka Thoda Sa Pyaar Maangn
Thoda Sa Pyaar Maangun
Is Raakhi Men Pyaar Chhupa Le Ke Aai Bahena

Chorus: O Raakhi Bandhava Le Mere Veer

Lata:
Neele Ambar Se Taare Utaar Laaun

Chorus: Neele Ambar Se Bhaiya Taare Utaar Laaun

Lata:
Yaa Main Chanda Ki Kiranon Ke Haar Laaun
Kiranon Ke Haar Laaun
Pyaar Ke Badale Ban Le Laharaai Bahena

Chorus: Raakhi Bandhavaale Mere Veer

Lata:kabhi Bhaiya Ye Bahana Na Paas Hogi

Chorus: Kabhi Bhaiya Ye Teri Bahena Na Paas Hogi

Lata:kahin Pardes Baithi Udaas Hogi, Bahena Udaas Hogi

Chorus: Milane Ki Aas Hogi

Lata:jaane Kab Bichhad Jaayen Bhaai-Bahena

Chorus: Raakhi Bandhavaale Mere Veer
http://www.youtube.com/watch?v=JMrx3RLxunY

2 comments:

  1. "ಎಂದಾದರೂ ಅಣ್ಣ ಈ ಸೋದರಿ ಇರಲಿಕ್ಕಿಲ್ಲ ಬಳಿ
    ಎಲ್ಲೊ ಪರದೇಶದಲಿ ಕುಳಿತಿರುವಳು ಬೇಸರದಲಿ"
    ಹಲವು ಮನೆಗಳ ಅಂತರಂಗದ ಶೋಕವಿದೇ!

    ಅನ್ ಪಡ್ ಚಿತ್ರಕ್ಕೆ: ೆಂ. ರಾಮಚಂದ್ರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...