Wednesday, August 6, 2014

ನನ್ನ ತೇವಗೊಂಡ

ನನ್ನ ತೇವಗೊಂಡ
ಕಣ್ರೆಪ್ಪೆಯಲಿ ಉಳಿಯಿತು
ನನ್ನ ಕನಸೆಲ್ಲ ಚೂರುಪಾರಾಗಿ ಹೀಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ನಿನ್ನ ಪರಿಚಯವಿಲ್ಲದೆ
ನಿನ್ನ ಗುರುತಿಲ್ಲದೆ
ನಿನ್ನನ್ನು ನಾನು ಹೃದಯದಲ್ಲಿಟ್ಟೆ
ಆದರೆ ನನ್ನ ಪ್ರೀತಿಯ ಬದಲು
ನೀನು ನನಗೆ ಈ ದಿನ ತೋರಿಸಿದೆ
ವಿರಹದ ದಿನ ನಾನು ಕಳೆದಂತೆ ವ್ಯಥೆಯಲಿ
ದುಃಖ ವೇದನೆಯಲಿ ಹೇಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಬೆಂಕಿಯಿಂದ ನಂಟು
ನಾರಿ ಜೊತೆ ಸಂಬಂಧ
ಯಾಕೆ ಮನಸ್ಸಿಗೆ ತಿಳಿಯಲಾಗಲಿಲ್ಲ
ನನಗೇನಾಗಿತ್ತು
ಒಂದು ನಿಷ್ಠೆ ಇಲ್ಲದವಳ ಜೊತೆ
ನನಗ್ಯಾಕೆ ಪ್ರೀತಿ ಉಕ್ಕಿ ಬಂತು
ನಿನ್ನ ನಿಷ್ಠೆ ದ್ರೋಹಕ್ಕೆ ಜಗವೆಲ್ಲ ನಗುವರು
ಹೋದಾಗ ನೀನ್ಯಾವುದೇ ಗಲ್ಲಿ ಹಾದಿಗೆ
ಉರಿಯಲಿ ನಿನ್ನ ಮನಸ್ಸೂ
ಯಾರದ್ದೋ ಮಿಲನಕ್ಕೆ
ಅನಾಮಿಕೆ ಚಡಪಡಿಸುವೆ ನೀನೂ ಹಾಗೆ

ಮೂಲ : ಮಜ್ರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ :ಆರ್ . ಡಿ. ಬರ್ಮನ್
ಚಿತ್ರ : ಅನಾಮಿಕ

 Meri bheegi bheegi si palkon pe reh gaye
 Jaise mere sapne bikhar ke
 Jale man tera bhi kisike milanko
 Anamika tu bhi tarse

 Tujhe bin jaane bin pehchane
 Maine hrudayse lagaya
 Par mere pyar ke badle mein toone
 Mujhko yeh din dikhlaya
 Jaise birha ki rut maine kaati tadapke
 Aahen bhar bharke
 Jale man tera bhi...

 Aag se naata naari se rishta
 Kaahe man samajh na paaya
 Mujhe kya hua tha ek bewafaa pe
 Hai mujhe kyon pyaar aaya
 Teri bewafaai pe hanse jag saara
 Gali gali guzre jidharse
 Jale man tera bhi...
http://www.youtube.com/watch?v=K0THyu8oNlw

2 comments:

  1. ಕಾಕತಾಳೀಯವೆಂದರೆ ಇದೇನೇ, ಅದೇಕೋ ಗೊತ್ತಿಲ್ಲ ಬೆಳಗಿನಿಂದಲೂ ಇದೇ ಗೀತೆಯನ್ನು ಗುನುಗುನಿಸುತ್ತಲೇ ಇದ್ದೆ, ಇದೀಗ ತಾವು ಅತ್ಯುತ್ತಮವಾಗಿ ಭಾವಾರ್ಥವನ್ನು ಬರೆದುಕೊಟ್ಟಿದ್ದೀರಿ.

    ವಾವ್ ಮಜ್ರೂಹ್ ಜನಾಬ್.

    ಅನಾಮಿಕಾಗೆ ಛಾಯಾಗ್ರಹಣ ಮುನೀರ್ ಖಾನ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...