Tuesday, August 19, 2014

ನಿನ್ನನ್ನು ನೆನಪು ಮಾಡಿ ಮಾಡಿ

ನಿನ್ನನ್ನು ನೆನೆದು ನೆನೆದು
ಸರಿದು ಹೋಗುತ್ತಿದೆ ಸಮಯ ವ್ಯರ್ಥದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ಮನಸ್ಸೋಗಿ ನೆಲೆಸಿದೆ
ಒಂದು ಅಪರಿಚಿತ ನಗರದಲಿ
ಏನೋ ಹುಡುಕುತ್ತಿದೆ ಮರುಳು
ಕಳೆದೋದ ರಸ್ತೆಯಲಿ
ಇಷ್ಟು ದೊಡ್ಡ ಮಹಲಲಿ
ನಾನಿದ್ದೇನೆ ಭಯದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ವಿರಹದ ಈ ಚಿತೆಯಿಂದ
ನೀನೆ ತೆಗೆ ನನ್ನನ್ನು
ನಿನಗೆ ಬರಲಾಗದಿದ್ದರೆ
ಕರೆ ನನ್ನನ್ನು ಸ್ವಪ್ನದಲಿ
ನನ್ನನ್ನು ಹೀಗೆ ಉರಿಸದಿರು
ನನ್ನ ಪ್ರೀತಿಯಿದೆ ಯೌವನದಲಿ
ನೀನು ಕೊಂಡೋಗಿರುವೆ
ನನ್ನ ನಿದ್ದೆ ಸಹ ನಿನ್ನ ಜೊತೆಯಲಿ

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅಮ್ರಪಾಲಿ

तुम्हें याद करते करते, जायेगी रैन सारी
तुम ले गये हो अपने संग नींद भी हमारी

मन हैं के जा बसा हैं, अन्जान एक नगर में
कुछ खोजता हैं पागल खोयी हुयी डगर में
इतने बड़े महल में, घबराऊ मैं बेचारी
तुम ले गये हो अपने संग नींद भी हमारी

बिरहा की इस चीता से, तुम ही मुझे निकालो
जो तुम ना आ सको तो, मुझे स्वप्न में बुला लो
मुझे ऐसे मत जलाओ, मेरी प्रीत हैं कुंवारी
तुम ले गये हो अपने संग नींद भी हमारी
http://www.youtube.com/watch?v=oMZ08gU9hfY

1 comment:

  1. ಅಮ್ರಪಾಲಿ ಮೈಲುಗಲ್ಲಿನಂತಹ ಚಿತ್ರ.
    ಶೈಲೇಂದ್ರರ ಉತ್ತಮ ರಚನೆಗೆ ನಿಮ್ಮ ಭಾವಾನುವಾದವು ಅರ್ಪಣೆಯಂತಿದೆ.

    ಚಿತ್ರಕ್ಕೆ ದ್ವಾರಕ ದಿವೇಚರ ಛಾಯಾಗ್ರಹಣವಿತ್ತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...