Sunday, August 10, 2014

ಸನಿಹ ಇಲ್ಲ ಯಾರೂ

ಸನಿಹ ಇಲ್ಲ ಯಾರೂ
ಒಡಹುಟ್ಟಿದವರು
ಏಕಾಂತ
ಆದರೆ ಬಳಿ ಇದೆ
ಸ್ಮೃತಿ ಸಾಗರ
ನೆನಪ ಅಲೆಗಳು ತೇಲುತ್ತಿವೆ

ಬಾಲ್ಯ ಯೌವನ
ಪ್ರತ್ಯೇಕ ಸಂಸಾರ
ನಂತರ ಜಗಳ
ಕೆಲವಕ್ಕೆ ಕಾರಣ
ಕೆಲವು ವಿನಃ ಕಾರಣ

ಕೋಪ ದ್ವೇಷ
ಅಹಂ ಜನಿತ
ಸಂಬಂಧ ಕಹಿ
ಮಾತುಕತೆ ಅಂತ್ಯ
ಅಂತರ ವ್ಯಾಪಕ

ಅಗಲಿದ ಜನನಿ
ಸೀಮಿತ ಸಮಯದ
ಪುನರ್ಮಿಲನ
ಕೆಲವು ದಿನದ ಶಾಂತತೆ
ಅದರ ನಂತರ
ಪುನಃ ಉದ್ಭವಿಸಿದ ಗರ್ವ

ವಿಧಿಯ ಆಟ
ಪುನಃ ಅದೇ ಅಂತರ
ಅಲ್ಲೂ ಸುಖ
ಇಲ್ಲೂ ಆರಾಮ
ಆದರೆ ಹೃದಯದಲಿ ವೇದನೆ
ಅಲ್ಲೂ ಇಲ್ಲೂ

by ಹರೀಶ್ ಶೆಟ್ಟಿ, ಶಿರ್ವ

2 comments:

  1. "ಪುನಃ ಉದ್ಭವಿಸಿದ ಗರ್ವ"ವೇ ಅರ್ಧ ನಮ್ಮನ್ನು ಗೆಡವುವುದು ಕೂಪದೊಳಗೆ!
    ಒಳ್ಳೆಯ ಸ್ವತಂತ್ರ ಗೀತೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...