Monday, August 18, 2014

ಅಲ್ಲಿ ಇಲ್ಲಿ ಎಲ್ಲ ಕಡೆ ಗದ್ದಲ

ಅಲ್ಲಿ ಇಲ್ಲಿ ಎಲ್ಲ ಕಡೆ ಗದ್ದಲ
ಇದೇ ಗದ್ದಲ
ಬಂದ ಗೋಕುಲದ ರಾಜ
ಬಿಡಿ ನೀವು ಹಾದಿಗಳ

ನೋಡಿ ನೋಡಿ
ಎಲ್ಲೋ ಹೀಗೆ ಆಗದಿರಲಿ
ಬೆಣ್ಣೆ ಕದ್ದವನು
ಹೃದಯ ಕದಿಯದಿರಲಿ

ಬೇಡ ಬೇಡ ಹೆಣ್ಣೆ
ನೀನಿಗೆ ಹೇಳದಿರು ಹೆಣ್ಣೆ
ಎಸೆಯುವನು ಅವನು ರಂಗು ನೀರು
ಮುಚ್ಚಿ ನೀವು ನಿಮ್ಮ ಕಣ್ಣುಗಳ
ಅಲ್ಲಿ ಇಲ್ಲಿ.....

ನೋಡಿ ನೋಡಿ
ಅಲ್ಲಿ ಎತ್ತರದಲ್ಲಿದೆ ಮೊಸರು ಮಡಿಕೆ
ನಮ್ಮನ್ನು ಪುಸಲಾಯಿಸಿ
ಮುರಿದೋಗುವನು ಅವನು ಮಡಿಕೆ

ಬರಲಿ ಬರಲಿ ಅವನು
ಮುರಿಯಲಿ ಮಡಿಕೆಯನ್ನು
ತೋರಿಸದಿರಿ ನಿಮ್ಮ
ಹುಸಿ ಕೋಪಗಳ
ಅಲ್ಲಿ ಇಲ್ಲಿ.....

by ಹರೀಶ್ ಶೆಟ್ಟಿ, ಶಿರ್ವ 

3 comments:

ಸಿದ್ಧಿದಾತ್ರಿ