ನಿನಗಿಂದು ಹೇಳಬೇಕಾಗುತ್ತದೆ
ನಿನ್ನ ಅಸಹಾಯಕತೆಯ ಕಾರಣ
ಜೀವನ ಪೂರ್ತಿ ಜೊತೆ ನೀಡಬೇಕಾಗಿತ್ತು
ಮಾಡಿದೆ ದೂರ ಇಡಿ ಜೀವಮಾನ
ಎಷ್ಟು ದೃಡವಾಗಿತ್ತು ನಿನ್ನ ತೀರ್ಮಾನ
ಸ್ವಲ್ಪ ಸ್ಮರಿಸು ನಿನ್ನ ನಿಷ್ಠೆಯ ವಚನ
ನೀನು ಹೇಳಿದ್ದೆ ಇಟ್ಟು ಆಣೆ
ಸದಾ ನಿಭಾಯಿಸುವೆ ಪ್ರೀತಿಯ ಆಚರಣೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ಪ್ರೀತಿಯ ಮೋಜು ನೀನು ಬಯಸಲಿಲ್ಲ
ನೀನು ಬಯಸಿದೆ ಬೆಳ್ಳಿ ಬಂಗಾರವೆಲ್ಲ
ನೀನು ಕಣ್ಣೀರು ಯಾರದ್ದು ಏಕೆ ವಹಿಸುವೆ
ನಿನಗೆ ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೋ....ನಿನಗೆ ಧರಿಸಲ್ಲಿಕ್ಕಿತ್ತು ಮುತ್ತಿನ ಮಾಲೆ
ಹೆಜ್ಜೆ ಹೆಜ್ಜೆಯಲಿ ವಿಶ್ವಾಸದ ಬದಲು
ವಂಚಿಸುವುದು ನಿನಗೆ ಶಂಕೆ
ಬೆಂಕಿಯ ಜ್ವಾಲೆಯಲಿ ಆವರಿಸಿದೆ
ನಿನ್ನ ಈ ಸ್ವರ್ಣದ ಲಂಕೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನಿನ್ನ ಈ ಸುಖದ ವಸ್ತುಗಳೆಲ್ಲ
ನನ್ನ ನೆನಪನ್ನು ಅಳಿಸಬಹುದ
ನನ್ನ ನೆನಪು ನಿನ್ನ ನಿದ್ರೆ ಅಪಹರಿಸಿದಾಗ
ಅದೇನು ನಿನಗೆ ನಿದ್ರಿಸಲು ಬಿಡಬಹುದ
ಹೋ....ನಿನಗೆ ನಿದ್ರಿಸಲು ಬಿಡಬಹುದ
ವಸ್ತುಗಳಲ್ಲಿ ಸುಖ ಇರುವುದಿಲ್ಲ
ಸುಖ ಜೀವದ ಒಂದು ಕೌಶಲ
ನನ್ನಿಂದಲೇ ನೀನು ಛಲ ಮಾಡಿದೆ
ನಿನ್ನನ್ನೇ ನೀನು ವಂಚಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನಿನಗಾಗಿ ಸದಾ ಬಯಸಿದೆ ವಸಂತ ನಾನು
ನಿನಗಾಗಿ ತೊರೆದೆ ಪ್ರಾಣದ ಹಂಗು ನಾನು
ಎರಡು ದಿನವೂ ನೀನು ಕಾಯಲಿಲ್ಲ ನನ್ನನ್ನು
ಬಿಟ್ಟು ಹೋದೆ ಏಕಾಂತದಲಿ ನನ್ನನ್ನು
ಹೋ....ಬಿಟ್ಟು ಹೋದೆ ಏಕಾಂತದಲಿ ನನ್ನನ್ನು
ನಿನ್ನ ಅಗಲಿಕೆ ನನ್ನ ಚಿತೆಯಾಗಿದೆ
ದುಃಖದ ಚಿತೆಯಲಿ ನಾನು ಜ್ವಲಿಸುತ್ತಿರುವೇನು
ಮನಸ್ಸು ನನ್ನ ಉರಿಯುತ್ತಿದೆ ದಹನಭೂಮಿಯಂತೆ
ಬೆಂಬೂದಿಯ ಮೇಲೆ ನಾನು ನಡೆಯುತ್ತಿದ್ದೇನೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ನೀನು ನನ್ನದಾಗಿದೆ ಜೀವದ ಗಂಟಾಗಿದೆ
ನಿನಗಾಗಿ ನಾನು ಜಗತ್ತು ಶೃಂಗಾರಿಸಿದೆ
ನೀನು ಇನ್ನೊಬ್ಬನನ್ನು ಏಕೆ ವರಿಸಿದೆ
ಮೂಲ : ಶೇವನ್ ರಿಜ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಓ ಪಿ ನೈಯ್ಯರ್
ಚಿತ್ರ : ಏಕ ಬಾರ್ ಮುಸ್ಕುರಾ ದೋ
Tujhko Aaj Batana Hoga
Kya Thi Woh Majboori
Saath Umra-Bhar Ka Dena Tha
Dedi Umra-Bhar Ki Doori
Kitne Atal The Tere Iraade
Yaad To Kar Tu Wafa Ke Vaade
Toone Kaha Tha Khaakar Kasmein
Sada Nibhaenge Pyar Ki Rasmein
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
Pyar Ki Masti Toone Na Chahi
Toone To Chaha Chandi Ka Pyaala
Aasoon Kisike Kya Tu Pehenti
Tujhko Pehen Thi Moti Ki Mala
Ho Tujhko Pehen Thi Moti Ki Mala
Pag Pag Par Vishwaas Ke Badle
Chhala Karegi Tujhko Shanka
Aag Ki Lapton Mein Lipti Hai
Yeh Teri Sone Ki Lanka
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
Kya Ye Tere Sukh Ke Saadan
Meri Yaad Ko Bhula Sakenge
Meri Yaad Jab Neend Udha Degi
Kya Ye Tujhko Sula Sakenge
Ho Kya Ye Tujhko Sula Sakenge
Saadan Mein Sukh Hota Nahin Hai
Sukh Jeevan Ki Ek Kala Hai
Mujhse Hi Chhal Kiya Na Toone
Apne Ko Toone Aap Chhala Hai
Tu Auron Ki Kyon Ho Gayi
Tu Hamari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
Tere Liye Mein Laya Baharein
Tere Liye Mein Jaan Pe Khela
Do Din Toone Bhi Raah Na Dekhi
Chhod Ke Chal Di Mujhe Akela
Ho Chhod Ke Chal Di Mujhe Akela
Teri Judaai Meri Chitaah Hai
Gham Ki Chitaah Mein Mein Jal Raha Hoon
Man Mera Deh-Ke Marghat Jaisa
Angaaron Pe Mein Chal Rahan Hoon
Tu Auron Ki Kyon Ho Gayi
Tu Hamaari Thi Jaan Se Pyaari Thi
Tere Liye Meine Duniya Savaari Thi
Tu Auron Ki Kyon Ho Gayi
http://www.youtube.com/watch?v=BOWJs00FHR0