ನನ್ನ ನೆಚ್ಚಿನ ಹಿಂದಿಯ ಮಹಾನ
ಲೇಖಕರಾದ ಪ್ರೇಮಚಂದ್ ಅವರ ಒಂದು ಸಣ್ಣ ಕಥೆ "ಪುತ್ರ ಪ್ರೇಮ್" ಕನ್ನಡದಲ್ಲಿ ಅನುವಾದಿಸಿದ್ದೇನೆ.
ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ.
ಮೂಲ ಕೃತಿ : ಪ್ರೇಮಚಂದ್
ಕನ್ನಡಾನುವಾದ : ಹರೀಶ್ ಶೆಟ್ಟಿ, ಶಿರ್ವ
ಪುತ್ರ-ಮೋಹ
1
ರಾಮಮೂರ್ತಿಯವರು ಅರ್ಥಶಾಸ್ತ್ರ
ಕಲಿತವರು, ಕೇವಲ ಕಲಿತ್ತದ್ದೆ ಅಲ್ಲ , ದಿನನಿತ್ಯದ ವ್ಯವಹಾರಗಳಲ್ಲಿ ಅದರ
ಯೋಗ್ಯ ಉಪಯೋಗ ಸಹ ಮಾಡುತ್ತಿದ್ದರು. ಅವರು ವಕೀಲರಾಗಿದ್ದರು, ಎರಡು ಮೂರು ಊರಲ್ಲಿ ಅವರ ಜಮೀನ್ದಾರಿಕೆ
ಸಹ ಇತ್ತು ಹಾಗು ಬ್ಯಾಂಕ್'ಲ್ಲಿ ಸಹ ಸ್ವಲ್ಪ ಹಣ ಸಂಪಾದಿಸಿ
ಇಟ್ಟಿದ್ದರು. ಇದೆಲ್ಲ ಆ ಅರ್ಥಶಾಸ್ತ್ರ ಜ್ಞಾನದ ಫಲವಾಗಿತ್ತು. ಯಾವುದೇ ಖರ್ಚು ಎದುರು ಬಂದಾಗ ಅವರ
ಮನಸ್ಸಲ್ಲಿ ತನ್ನಂತಾನೆ ಪ್ರಶ್ನೆ ಮೂಡುತ್ತಿತ್ತು "ಇದರಿಂದ ನನಗೆ ಲಾಭವೇ ಅಥವಾ ಇನ್ಯಾರಿಗೋ
ಲಾಭ ಇದೆಯಾ"? ಅದರಿಂದ ಯಾರಿಗೂ ಲಾಭ ಇಲ್ಲದಿದ್ದರೆ ಅವರು ತುಂಬಾ ಕ್ರೂರತೆಯಿಂದ
ಆ ಖರ್ಚಿನ ಕತ್ತು ಹಿಸುಕುತ್ತಿದ್ದರು. ವ್ಯರ್ಥವನ್ನು ಅವರು ವಿಷವೆಂದು ತಿಳಿಯುತ್ತಿದ್ದರು, ಅರ್ಥಶಾಸ್ತ್ರದ
ಸಿದ್ಧಾಂತ ಅವರ ಜೀವನದ ಆಧಾರಸ್ತಂಭವಾಗಿತ್ತು.
ರಾಮಮೂರ್ತಿಯವರಿಗೆ ಎರಡು ಪುತ್ರರಿದ್ದರು.
ದೊಡ್ಡವನ ಹೆಸರು ಪ್ರಭುದಾಸ, ಸಣ್ಣವನ ಶಿವದಾಸ. ಇಬ್ಬರೂ ಕಾಲೇಜ್
ಹೋಗುತ್ತಿದ್ದರು, ಅವರಲ್ಲಿ ಕೇವಲ ಒಂದು ವರ್ಗದ ಅಂತರವಿತ್ತು. ಇಬ್ಬರೂ ಚತುರ
ಹಾಗು ಪ್ರತಿಭಾವಂತರಾಗಿದ್ದರು. ಆದರೆ ಪ್ರಭುದಾಸನ
ಮೇಲೆ ತಂದೆಯ ಮೋಹ ಹೆಚ್ಚು. ಅವನಲ್ಲಿ ಸ್ವಲ್ಪ ಉತ್ಸಾಹ ಹೆಚ್ಚು ಹಾಗು ತಂದೆ ಅವನಿಂದ ದೊಡ್ಡ
ದೊಡ್ಡ ಆಸೆ ಇಟ್ಕೊಂಡಿದ್ದರು. ಅವರು ಅವನನ್ನು ಉನ್ನತ ಶಿಕ್ಷಣ ಗೋಸ್ಕರ ಇಂಗ್ಲೆಂಡ್ ಕಳಿಸಲು ಯೋಚಿಸುತ್ತಿದ್ದರು.
ಅವನನ್ನು ಬ್ಯಾರಿಸ್ಟರ್ ಮಾಡುವುದು ಅವರ ಜೀವನದ ಅತಿ ದೊಡ್ಡ ಬಯಕೆಯಾಗಿತ್ತು.
2
ಆದರೆ ಆಕಸ್ಮಿಕವಾಗಿ ಪ್ರಭುದಾಸನಿಗೆ
ಬಿ. ಏ ಪರೀಕ್ಷೆಯ ನಂತರ ಜ್ವರ ಬರಲು ಶುರುವಾಯಿತು. ಡಾಕ್ಟರನ್ನು ಕರೆಯಲಾಯಿತು, ಮದ್ದು ಶುರುವಾಯಿತು, ಒಂದು ತಿಂಗಳು ಸತತ ದಿನನಿತ್ಯ
ಡಾಕ್ಟರ ಬಂದರು,
ಆದರೆ ಜ್ವರ ಕಡಿಮೆಯಾಗಲಿಲ್ಲ. ಬೇರೆ ಡಾಕ್ಟರನ್ನು ಕರೆದು ತೋರಿಸಿದರು, ಅದರಿಂದಲೂ ಲಾಭವಾಗಲಿಲ್ಲ. ಪ್ರಭುದಾಸನ
ಶರೀರ ದಿನ ದಿನ ಕ್ಷೀಣವಾಗುತ್ತ ಹೋಯಿತು. ಎದ್ದೇಳುವ ಶಕ್ತಿಯೂ ಕುಸಿಯಿತು, ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ
ಉತ್ತಿರ್ಣವಾದ ಸುದ್ಧಿ ಕೇಳಿ ಸಹ ಅವನ ಮುಖದಲಿ ಹರ್ಷ ಕಂಡು ಬರಲಿಲ್ಲ. ಅವನು ಯಾವಗಲು ಚಿಂತೆಯಲ್ಲಿ
ಮುಳುಗಿರುತ್ತಿದ್ದ. ಅವನಿಗೆ ಅವನ ಜೀವನ ಒಂದು ಭಾರವಾದಂತಾಯಿತು. ಒಂದು ದಿವಸ ರಾಮಮೂರ್ತಿಯವರು ಡಾಕ್ಟರರವರಿಗೆ ಕೇಳಿದರು "ಏನಿದು ಎರಡು ತಿಂಗಳು ಕಳೆಯಿತು ಆದರೆ ಇನ್ನೂ
ಮದ್ದಿನಿಂದ ಏನು ಉಪಯೋಗವಾಗಲಿಲ್ಲ"?
ಡಾಕ್ಟರ ಸ್ವಲ್ಪ ಮೌನದ ನಂತರ
"ನೋಡಿ ನಾನು ನಿಮಗೆ ಕತ್ತಲಲ್ಲಿ ಇಡುವುದಿಲ್ಲ, ನನಗೆ ಅನುಮಾನ ಇವನಿಗೆ ಕ್ಷಯರೋಗ ಇದೆಯೆಂದು".
ರಾಮಮೂರ್ತಿಯವರು ವ್ಯಗ್ರವಾಗಿ
" ಕ್ಷಯ"?
ಡಾಕ್ಟರ "ಹೌದು, ಎಲ್ಲ ಲಕ್ಷಣ ಕಂಡು ಬರುತ್ತಿದೆ".
ರಾಮಮೂರ್ತಿಯವರು ಅವಿಶ್ವಾಸದಿಂದ
"ಕ್ಷಯರೋಗವೇ" ಎಂದು ನುಡಿದರು.
ಡಾಕ್ಟರ ತುಂಬಾ ವಿಷಾದದಿಂದ "ಈ ರೋಗ ತುಂಬಾ ಗುಪ್ತ ರೀತಿಯಿಂದ ಶರೀರದಲ್ಲಿ ಪ್ರವೇಶಿಸುತ್ತದೆ
".
ರಾಮಮೂರ್ತಿಯವರು "ಆದರೆ
ನನ್ನ ಕುಟುಂಬದಲ್ಲಿ ಯಾರಿಗೂ ಈ ರೋಗ ಇರಲಿಲ್ಲ".
ಡಾಕ್ಟರ "ಯಾರೋ ಮಿತ್ರರಿಂದ
ಈ ಜರ್ಮ್(ರೋಗಾಣು) ಸಿಕ್ಕಿರುವ ಸಾಧ್ಯತೆ ಇದೆ".
ರಾಮಮೂರ್ತಿಯವರು ತುಂಬಾ ಕ್ಷಣ
ಯೋಚಿಸಿದ ನಂತರ "ಈಗ ಏನು ಮಾಡಬೇಕು".
ಡಾಕ್ಟರ "ಔಷದಿ ಮಾಡುತ ಇರಿ, ಈಗಂತೂ ಶ್ವಾಸಕೋಶದಲ್ಲಿ ಪರಿಣಾಮವಾಗಲಿಲ್ಲ, ಸೌಖ್ಯವಾಗುವ ಆಶಯ ಇದೆ".
ರಾಮಮೂರ್ತಿಯವರು "ನಿಮ್ಮ
ವಿಚಾರದಲ್ಲಿ ಯಾವಾಗ ತನಕ ಔಷದಿಯ ಪ್ರಭಾವ ಬೀಳಬಹುದು".
ಡಾಕ್ಟರ "ನಿಶ್ಚಿತವಾಗಿ
ಹೇಳಲಾರೆ, ಆದರೆ ನಾಲ್ಕು ತಿಂಗಳಲ್ಲಿ ಇವರು ಆರೋಗ್ಯಕರವಾಗಬಹುದು, ಚಳಿಯಲ್ಲಿ ಈ ರೋಗದ ಏರಿಕೆ ಕಡಿಮೆಯಾಗುತ್ತದೆ".
ರಾಮಮೂರ್ತಿಯವರು "ಸೌಖ್ಯವಾದ
ನಂತರ ವಿಧ್ಯಾಭ್ಯಾಸದಲ್ಲಿ ಇವನು ಪರಿಶ್ರಮ ಮಾಡುವ ಸಾಧ್ಯತೆ ಇದೆಯಾ"?
ಡಾಕ್ಟರ " ಮಾನಸಿಕ ಪರಿಶ್ರಮದ
ಯೋಗ್ಯವಾಗುವ ಸಾಧ್ಯತೆ ಕಡಿಮೆ ಕಂಡು ಬರುತ್ತದೆ ".
ರಾಮಮೂರ್ತಿಯವರು "ಯಾವುದೇ
ಅರೋಗ್ಯಧಾಮಕ್ಕೆ ಕಳಿಸಿದ್ದಾರೆ ಹೇಗೆ"?
ಡಾಕ್ಟರ "ತುಂಬಾ ಉತ್ತಮ".
ರಾಮಮೂರ್ತಿಯವರು" ಅವಾಗ
ಇವನು ಪೂರ್ಣ ಆರೋಗ್ಯವಂತನಾಗುತ್ತಾನೆ ಎಂಬ ಧೈರ್ಯ ಇದೆಯಾ "?
ಡಾಕ್ಟರ " ಆಗಬಹುದು, ಆದರೆ ಈ ರೋಗವನ್ನು ಓಡಿಸಲು ಮಾನಸಿಕ
ಒತ್ತಡದಿಂದ ದೂರ ಇರುವುದೇ ಒಳ್ಳೆಯದು".
ರಾಮಮೂರ್ತಿಯವರು ನಿರಾಸೆಯಿಂದ
"ಹಾಗಾದರೆ ಇವನ ಜೀವನ ನಷ್ಟವಾಯಿತು".
ಬೇಸಿಗೆಯ ದಿನಗಳು ಮುಗಿದು, ಮಳೆಗಾಲದ ದಿನ ಶುರುವಾಯಿತು, ಪ್ರಭುದಾಸನ ದಶೆ ದಿನದಿಂದ ದಿನ
ಹಾಳಾಗುತ್ತ ಹೋಯಿತು. ಅವನು ಹಾಸಿಗೆಯಲ್ಲಿಯೆ ಮಲಗಿಕೊಂಡು ಕ್ಷಯ ರೋಗದ ಬಗ್ಗೆ ಇದ್ದ ಪುಸ್ತಕಗಳನ್ನೆಲ್ಲ
ಓದುತ್ತಿದ್ದ, ಅದರಿಂದ ತನ್ನ ತುಲನೆ ಮಾಡುತ್ತಿದ್ದ. ಮೊದಲ ಕೆಲವು ದಿನ ತನಕ
ಅವನು ಅಸ್ಥಿರವಾಗಿದ್ದ, ನಾಲ್ಕು ಐದು ದಿವಸ ಸಹ ಸ್ವಲ್ಪ ದಶೆ ಒಳ್ಳೆಯದಾಗಿರುವಾಗ ಪುಸ್ತಕ
ಓದಲಾರಂಭಿಸುತ್ತಿದ್ದ ಹಾಗು ಪ್ರದೇಶ ಯಾತ್ರೆಯ ಬಗ್ಗೆ ಚರ್ಚಿಸುತ್ತಿದ್ದ. ಜ್ವರದ ತೀವ್ರತೆ ಏರಿರುವಾಗ ಅವನಿಗೆ ನಿರಾಸೆ ಉಂಟಾಗುತ್ತಿತ್ತು. ಆದರೆ ತುಂಬಾ ತಿಂಗಳ ನಂತರ ಅವನಿಗೆ ವಿಶ್ವಾಸವಾಯಿತು ಈ ರೋಗದಿಂದ
ಮುಕ್ತವಾಗಲು ಕಠಿಣವೆಂದು, ಆ ನಂತರ ಅವನು ಜೀವನದ ಚಿಂತೆ ಬಿಟ್ಟು
ಬಿಟ್ಟ, ಪಥ್ಯೆ ಮಾಡುತ್ತಿರಲಿಲ್ಲ, ಮನೆಯವರ ಕಣ್ಣು ತಪ್ಪಿಸಿ ಔಷದಿಯನ್ನು
ಚೆಲ್ಲುತ್ತಿದ್ದ, ಮಿತ್ರರ ಸಂಗ ಕುಳಿತು ಮಾತಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದ.
ಯಾರಾದರು ಅವನ ರೋಗದ ಬಗ್ಗೆ ಕೇಳಿದರೆ ರೇಗಿಸಿ ಕೊಳ್ಳುತ್ತಿದ್ದ. ಅವನಲ್ಲಿ ಒಂದು ಶಾಂತಿಮಯ ಉದಾಸಿನತೆ
ಆವರಿಸಿತು ಹಾಗು ಮಾತಲ್ಲಿ ಫಿಲಾಸಫಿಕಲ್ ಕರುಣೆ ಕಂಡು ಬರುತ್ತಿತ್ತು. ಅವನು ಲೋಕದ ಸುಳ್ಳು ರೀತಿ, ಸಾಮಾಜಿಕ ಆಚರಣೆಯ ವಿರುದ್ಧ ನಿರ್ಭೀತನಾಗಿ
ಮಾತನಾಡುತ್ತಿದ್ದ. ರಾಮಮೂರ್ತಿಯವರ ಮನಸ್ಸಲ್ಲಿ ಪದೇ ಪದೇ ಈ ಅನುಮಾನ ಬರುತ್ತಿತ್ತು, ಎಂತೂ ಪರಿಣಾಮ ಇದೇ ಎಂದಾದರೆ ಈ
ಪ್ರಕಾರ ಹಣ ನಷ್ಟಗೊಳಿಸುವುದರಲ್ಲಿ ಏನು ಲಾಭ ಆದರೂ ಅವರು ಸ್ವಲ್ಪ ಪುತ್ರ ಮೋಹದಲ್ಲಿ, ಸ್ವಲ್ಪ ಲೋಕದ
ಹೆದರಿಕೆಯಿಂದ ಧೈರ್ಯ ಇಟ್ಟುಕೊಂಡಿದ್ದರು ಹಾಗು ಮಗನ ಔಷದಿ ಉಪಚಾರದಲ್ಲಿ ಯಾವುದೇ ಕೊರತೆ ಮಾಡಿಕೊಂಡಿರಲಿಲ್ಲ.
ಚಳಿಯ ಸಮಯವಾಗಿತ್ತು, ರಾಮಮೂರ್ತಿಯವರು ಮಗನ ಬಳಿ ಕುಳಿತು
ಡಾಕ್ಟರನ್ನು ಪ್ರಶ್ನಾತ್ಮಕ ದೃಷ್ಟಿಯಿಂದ ನೋಡುತ್ತಿದ್ದರು. ಡಾಕ್ಟರ ತಾಪಮಾನ ನೋಡಿ ಕುಳಿತಾಗ,
ರಾಮಮೂರ್ತಿಯವರು "ಈಗಂತೂ
ಚಳಿ ಶುರುವಾಗಿದೆ ನಿಮಗೆ ಏನಾದರೂ ವ್ಯತ್ಯಾಸ ಕಂಡು ಬರುತ್ತದೆಯೇ"?
ಡಾಕ್ಟರ ನಿರಾಸೆಯಿಂದ "
ಖಂಡಿತ ಇಲ್ಲ,
ಈಗಂತೂ ರೋಗ ಅತ್ಯಂತ ಕಷ್ಟಸಾಧ್ಯವಾದಂತಿದೆ".
ರಾಮಮೂರ್ತಿಯವರು "ಮತ್ತೆ
ನೀವು ಯಾಕೆ ನನಗೆ ಈ ಭ್ರಮೆಯಲ್ಲಿ ಇಟ್ಟಿದ್ದಿರಿ, ಚಳಿಯಲ್ಲಿ ಸೌಖ್ಯವಾಗುವನುಯೆಂದು? ಈ ಪ್ರಕಾರ ಯಾರ ಸರಳತೆಯನ್ನು ಉಪಯೋಗಿಸಿ
ತನ್ನ ಕಾರ್ಯ ಸಾಧಿಸುವುದು ಸಜ್ಜನತೆ ಅಲ್ಲ".
ಡಾಕ್ಟರ ನಮ್ರತೆಯಿಂದ "ಇಂಥ
ದಶೆಯಲ್ಲಿ ನಾವು ಕೇವಲ ಅಂದಾಜು ಮಾಡಬಹುದು ಅಷ್ಟೇ, ಅಂದಾಜು ಸದಾ ಸತ್ಯವಾಗಿರುವುದಿಲ್ಲ, ನಿಮಗೆ ತೊಂದರೆ ಅವಶ್ಯ ಆಯಿತು
ಆದರೆ ನನ್ನ ಆಶಯ ನಿಮ್ಮನ್ನು ಭ್ರಮೆಯಲ್ಲಿ ಇಡುವುದು ಖಂಡಿತವಾಗಿ ಇರಲಿಲ್ಲ ಎಂದು ವಿಶ್ವಾಸ ನೀಡುತ್ತೇನೆ".
ಶಿವದಾಸ ತುಂಬಾ ದಿವಸದ ನಂತರ ರಜೆಯಲ್ಲಿ
ಮನೆಗೆ ಬಂದಿದ್ದ,
ಅವನು ಕೋಣೆಗೆ ಬಂದು "ಡಾಕ್ಟರ ಸಾಹೇಬರೇ, ನಿಮಗೆ ತಂದೆಯವರ ಕಷ್ಟದ ಅಂದಾಜು ಇರಬಹುದು, ಅವರ ಮಾತಿನಿಂದ ನಿಮಗೆ ನೋವಾಗಿದ್ದರೆ, ಕ್ಸಮಿಸಿ".
ರಾಮಮೂರ್ತಿಯವರು ವಾತ್ಸಲ್ಯದಿಂದ
ಕಿರಿಯ ಮಗನನ್ನು ನೋಡಿ "ನಿನಗೆ ಇಲ್ಲಿ ಬರುವ ಏನು ಅಗತ್ಯ ಇತ್ತು? ನಿನಗೆ ಎಷ್ಟು ಸಲ ಹೇಳಿದೆ ಇಲ್ಲಿ
ಬರಬೇಡ ಎಂದು,
ಆದರೆ ನಿನಗೆ ತಾಳ್ಮೆ ಇಲ್ಲ".
ಶಿವದಾಸ ಲಜ್ಜಿತನಾಗಿ "
ನಾನು ಈಗಲೇ ಹೋಗುತ್ತೇನೆ, ನೀವು ಬೇಸರಿಸದಿರಿ, ನಾನು ಕೇವಲ ಡಾಕ್ಟರಿಗೆ ಅಣ್ಣನ ಬಗ್ಗೆ ವಿಚಾರಿಸಲು ಬಂದೆ ಅಷ್ಟೇ, ಈಗ ಅಣ್ಣನ ಉಪಚಾರಕ್ಕಾಗಿ ಮುಂದೆ
ಏನು ಮಾಡುವುದೆಂದು ಕೇಳಲು".
ಡಾಕ್ಟರ "ಈಗ ಒಂದೇ ಉಪಾಯ
ಇದೆ, ಇವರನ್ನು ಇಟಲಿಯ ಆರೋಗ್ಯಧಾಮಕ್ಕೆ
ಕಳಿಸಬೇಕು".
ರಾಮಮೂರ್ತಿಯವರು ಎಚ್ಚರಿಕೆಯಿಂದ
"ಎಷ್ಟು ಖರ್ಚು ಆಗಬಹುದು"?
ಡಾಕ್ಟರ "ಹೆಚ್ಚಿಂದ ಹೆಚ್ಚು
ಮೂರು ಸಾವಿರ ರೂಪಾಯಿ".
ರಾಮಮೂರ್ತಿಯವರು "ಒಂದು
ವರುಷ ಇರಬೇಕಾಗುತ್ತದೆ ಏನು? ಖಂಡಿತ ಸೌಖ್ಯವಾಗಿ ಬರುವನೇ"?
ಡಾಕ್ಟರ " ಹಾಗೇನು ಹೇಳಲಾಗುವುದಿಲ್ಲ
, ಇದಂತೂ ಭಯಂಕರ ರೋಗ, ಸಾಧಾರಣ ರೋಗದಲ್ಲೂ ಯಾವುದೇ ಮಾತು
ನಿಶ್ಚಿತ ಹೇಳಲಾಗುವುದಿಲ್ಲ".
ರಾಮಮೂರ್ತಿಯವರು "ಇಷ್ಟು
ಖರ್ಚು ಮಾಡಿ ಸಹ ಈ ಅವಸ್ಥೆಯಲ್ಲಿಯೆ ಹಿಂತಿರುಗಿ ಬಂದರೆ "?
ಡಾಕ್ಟರ " ನಂತರ ದೇವರ ಇಚ್ಛೆ, ನಿಮಗೆ ಈ ನೆಮ್ಮದಿ ಇರಬಹುದು ಇವರಿಗಾಗಿ ನೀವೇನು ಮಾಡಬೇಕಾದುದೆಲ್ಲ
ನೀವು ಮಾಡಿದ್ದಿರಿ ಎಂದು".
3
ಅರ್ಧ ರಾತ್ರಿ ತನಕ ಪ್ರಭುದಾಸನನ್ನು ಇಟಲಿ ಕಳಿಸುವ ಬಗ್ಗೆ ವಾದ ವಿವಾದ
ನಡೆಯಿತು. ರಾಮಮೂರ್ತಿಯವರ ಪ್ರಕಾರ ಒಂದು ಸಂದೇಹಾಸ್ಪದ
ಫಲದ ಚಿಕಿತ್ಸೆಕ್ಕಾಗಿ ಮೂರು ಸಾವಿರ ಖರ್ಚು ಮಾಡುವುದು ಬುದ್ಧಿವಂತಿಕೆಯ ವ್ಯತಿರಿಕ್ತ, ಮಗ ಶಿವದಾಸನ ಮತ ಸಹ ಹೀಗೆಯೇಯಾಗಿತ್ತು. ಆದರೆ ಅವನ ಅಮ್ಮ ಸುನಂದಾ ಇದರ
ವಿರುದ್ಧವಾಗಿದ್ದಳು, ಕೊನೆಗೆ ಅಮ್ಮನ ವಿರೋಧದ
ಪರಿಣಾಮ ಹೀಗಾಯಿತು ಅಂದರೆ ಮಗ ಶಿವದಾಸ ಲಜ್ಜಿತನಾಗಿ ಅಮ್ಮನ ಕಡೆ ಸೇರಿದ, ರಾಮಮೂರ್ತಿಯವರು ಏಕಾಂಗಿ ಉಳಿದರು. ಸುನಂದಾ ಗಂಡನ ಸೌಹಾರ್ದವನ್ನು ಪ್ರಜ್ವಲಿತ
ಮಾಡಲು ಪ್ರಯತ್ನಿಸಿದ್ದಳು, ಧನ ಸಂಪತ್ತು ಎಲ್ಲ
ನಶ್ವರ ಎಂದು ತರ್ಕ ನೀಡಿದಳು, ಲೋಕದವರು ಏನು ಹೇಳಬಹುದೆಂದು
ಹೆದರಿಸಿದಳು, ಆದರೆ ಎಲ್ಲದರಿಂದ
ಸೋತು ಕೊನೆಗೆ ಅಶ್ರು ವರ್ಷ ಮಾಡಲಾರಂಭಿಸಿದಳು. ರಾಮಮೂರ್ತಿಯವರು ಈ ಜಲ ಪ್ರವಾಹದ ಮುಂದೆ ಸೋತರು, ಕೊನೆಗೆ " ಇನ್ನು ಅಳ ಬೇಡ, ನೀನು ಹೇಗೆ ಹೇಳುವೆ , ಹಾಗೆಯೇ ಮಾಡುವೆ"
ಎಂದು ಭರವಸೆ ನೀಡಿದ್ದರು.
ಸುನಂದಾ "ಹಾಗಾದರೆ ಯಾವಾಗ"?
ರಾಮಮೂರ್ತಿಯವರು " ರೂಪಾಯಿ
ಕೈಯಲ್ಲಿ ಬರಲಿ " .
ಸುನಂದಾ " ಹಾಗಾದರೆ ನೇರ
ಯಾಕೆ ಹೇಳುವುದಿಲ್ಲ,
ಕಳಿಸಲಿಕ್ಕೆ ಇಲ್ಲವೆಂದು"?
ರಾಮಮೂರ್ತಿಯವರು "ಕಳಿಸಲಿಕ್ಕೆ
ಇದೆ, ಆದರೆ ಈಗ ಕೈ ಖಾಲಿ ಇದೆ, ನಿನಗೆ ಗೊತ್ತಿಲ್ಲವೇ "?
ಸುನಂದಾ "ಬ್ಯಾಂಕ್'ಲ್ಲಿ ಇದೆಯಲ್ಲ? ಸಂಪತ್ತು ಇದೆಯಲ್ಲ? ಎರಡು ಮೂರು ಸಾವಿರ ಒಟ್ಟು ಮಾಡಲು
ಅಷ್ಟೊಂದು ಏನು ಕಠಿಣ".
ರಾಮಮೂರ್ತಿಯವರು ಹೆಂಡತಿಯನ್ನು
ತಿಂದು ಬಿಡುವ ರೀತಿಯಲ್ಲಿ ನೋಡಿದ್ದರು ಮತ್ತೆ ಒಂದು ಕ್ಷಣದ ನಂತರ "ಮಕ್ಕಳ ಹಾಗೆ ಮಾತನಾಡಬೇಡ, ಇಟಲಿಯಲ್ಲಿ ಯಾವುದೇ ಸಂಜೀವನಿ
ಇಲ್ಲ , ಚಮತ್ಕಾರ ಆಗುವಂತ. ಅಲ್ಲಿಯೂ ಒಂದು
ಪ್ರಯತ್ನವೇ ಮಾಡುವುದು ಎಂದಾದರೆ ನಿಧಾನವಾಗಿ ಮಾಡುವ. ಪೂರ್ವಜರು ಬಿಟ್ಟು ಹೋದ ಸಂಪತನ್ನು ಮತ್ತು ಶ್ರಮದಿಂದ
ಗಳಿಸಿ ಜೋಡಿಸಿ ಇಟ್ಟಿದ ಹಣವನ್ನು ನಾನು ಒಂದು ಅನಿಶ್ಚಿತ ಹಿತದ ಆಸೆಯಲ್ಲಿ ಬಲಿದಾನ ಮಾಡಲಾರೆ".
ಸುನಂದಾ ಸ್ವಲ್ಪ ಭಯದಿಂದ
"ಅದರಲ್ಲಿ ಅರ್ಧ ಪಾಲು ಪ್ರಭುದಾಸನ ಸಹ ಇದೆ".
ರಾಮಮೂರ್ತಿಯವರು ತಿರಸ್ಕಾರದಿಂದ
"ಅರ್ಧ ಅಲ್ಲ,
ನಾನು ಅವನಿಗೆ ಸರ್ವಸ್ವ ನೀಡುತ್ತಿದ್ದೆ, ಒಂದು ವೇಳೆ ಅವನಿಂದ ಯಾವುದೇ ಆಶಯ ಇದ್ದಿದ್ದರೆ, ಕುಟುಂಬದ ಮಾನಕ್ಕಾಗಿ, ಏಳಿಗೆಗಾಗಿ ಅವನು ಇನ್ನೂ ಧನ ಸಂಪತ್ತು
,ಐಶ್ವರ್ಯ ಒಟ್ಟು ಗೂಡಿಸಲು ಸಕ್ಷಮನಾಗಿದ್ದರೆ, ಕೇವಲ ಭಾವುಕತೆಯಿಂದ ನಾನು ಈ ಧನ
ಸಂಪತ್ತನ್ನು ನಾಶ ಗೊಳಿಸಲಾರೆ".
ಗೆದ್ದು ಸಹ ಸುನಂದಾ ಸೋತಿದ್ದಳು,
ಭಾವೋದ್ವೇಗದಿಂದ ಮಾತೇ ಹೊರಡಲಿಲ್ಲ.
ಇದರ ಆರು ತಿಂಗಳ ನಂತರ ಶಿವದಾಸ
ಬಿ. ಏ ಪಾಸಾದ. ರಾಮಮೂರ್ತಿಯವರು ತನ್ನ ಜಮೀನ್ದಾರಿಕೆಯ ಎರಡು ಎಕರೆ ಜಮೀನನ್ನು ಅಡವು ಇಟ್ಟು ಅವನನ್ನು
ಉನ್ನತ ಶಿಕ್ಷಣ ಗೋಸ್ಕರ ಇಂಗ್ಲೆಂಡ್ ಕಳಿಸಿದ್ದರು. ಅವನನ್ನು ಬಂಬೈ ಕಳಿಸಲು ಅವರು ಸ್ವತಃ ಹೋದರು.
ಅಲ್ಲಿಂದ ಹಿಂತಿರುಗುವಾಗ ಅವರ ಮನಸ್ಸಲ್ಲಿ ತಾನು ಮಾಡಿದ ಈ ಕಾರ್ಯದಿಂದ ಲಾಭ ಒದಗುವುದು ಎಂಬ ಆಸೆ ಅಡಗಿತ್ತು.
ಅವರು ಬರುವ ಏಳು ದಿವಸ ನಂತರ ನಿರ್ಭಾಗ್ಯ ಪ್ರಭುದಾಸ ತನ್ನ ಎಲ್ಲ ಆಕಾಂಕ್ಷೆಗಳನ್ನು ಹೊತ್ತು ಸಾವನ್ನು
ಅಪ್ಪಿಕೊಂಡ.
4
ರಾಮಮೂರ್ತಿಯವರು ಮಣಿಕರ್ಣಿಕ ಸ್ಮಶಾನ
ಭೂಮಿಯಲ್ಲಿ ತನ್ನ ಸಂಬಂಧಿಕರ ಒಟ್ಟಿಗೆ ಚಿತೆ ಜ್ವಾಲೆಯನ್ನು ನೋಡುತ್ತಿದ್ದರು. ಅವರ ಕಣ್ಣಿಂದ ಕಣ್ಣೀರು
ಹರಿಯುತ್ತಿತ್ತು. ಪುತ್ರ ಮೋಹ ಅರ್ಥ-ಸಿದ್ಧಾಂತದ ಬಲಿಯಾಗಿ ಹೋಗಿತ್ತು. ಅವರ ವಿರಕ್ತ ಮನಸ್ಸಲ್ಲಿ ಈ
ಕಲ್ಪನೆಗಳೆಲ್ಲ ಬರಲಾರಂಭಿಸಿತು. ಒಂದು ವೇಳೆ ನಾನು ಪ್ರಭುದಾಸನನ್ನು ಇಟಲಿಗೆ ಕಳಿಸಿದ್ದುದಾದರೆ, ಅಲ್ಲಿ ಹೋಗಿ ಅವನ ರೋಗ ಗುಣವಾಗುತ್ತಿತ್ತು
ಏನೋ, ಆಯ್ಯೋ ನಾನು ಮೂರು ಸಾವಿರಗೋಸ್ಕರ
ಪುತ್ರ ರತ್ನ ಕಳೆದುಕೊಂಡೆ. ಈ ಕಲ್ಪನೆ ಕ್ಷಣ ಪ್ರತಿಕ್ಷಣ ಅವರ ಮನಸ್ಸಲ್ಲಿ ಮೂಡಲಾರಂಭಿಸಿತು ಹಾಗು
ತೀವ್ರ ಪಶ್ಛಾತ್ತಾಪ,
ಶೋಕದ ಬಾಣ ಅವರನ್ನು ಚುಚ್ಚಲಾರಂಭಿಸಿತು. ವೇದನೆಯ ಅಲೆಗಳು ಅವರ ಹೃದಯದಲ್ಲಿ ಏಳಲಾರಂಭಿಸಿತು, ಅವರ ಅಂತರಂಗದ ಜ್ವಾಲೆಯ ದಗೆ ಆ ಚಿತೆಯ ಜ್ವಾಲೆಕ್ಕಿಂತ ಕಡಿಮೆಯೇನು ಇರಲಿಲ್ಲ.
ಇದ್ದಕ್ಕಿದಂತೆ ಅವರಿಗೆ ಶಹನಾಯಿಯ ಧ್ವನಿ ಕೇಳಿ ಬಂತು, ತಲೆ ಎತ್ತಿ ನೋಡಿದಾಗ ಅವರಿಗೆ
ಮನುಷ್ಯರ ಒಂದು ಗುಂಪು ಒಂದು ಶವವನ್ನು ಎತ್ತಿಕೊಂಡು ಅಂತ್ಯಕ್ರಿಯೆಗೋಸ್ಕರ ಬರುವುದನ್ನು ಕಂಡರು. ಅವರೆಲ್ಲರೂ
ಡೋಲು ಬಡಿಯುತ್ತ ,
ಹಾಡುತ್ತ ,
ಪುಷ್ಪ ವರ್ಷ ಮಾಡುತ್ತಾ ಬರುತ್ತಿದ್ದರು. ಸ್ಮಶಾನ ಭೂಮಿಗೆ ಬಂದು ಅವರು ಶವ ಕೆಳಗಿಟ್ಟು ಚಿತೆ
ಸಿದ್ಧಗೊಳಿಸಲು ಶುರು ಮಾಡಿದ್ದರು. ಅವರಲ್ಲಿ ಒಬ್ಬ ಯುವಕ ರಾಮಮೂರ್ತಿಯವರ ಬದಿಗೆ ಬಂದು ನಿಂತ. ಉತ್ಸುಕವಶ
ರಾಮಮೂರ್ತಿಯವರು ಅವನಿಗೆ ಕೇಳಿದರು " ಎಲ್ಲಿ ನಿಮ್ಮ ಮನೆ "?
ಯುವಕ ಉತ್ತರಿಸಿದ "ನಮ್ಮ
ಮನೆ ದೂರ ಊರಲ್ಲಿ,
ನಿನ್ನೆ ಸಂಜೆ ಹೊರಟಿದ್ದೇವೆ, ಇವರು ನನ್ನ ತಂದೆಯವರು, ಶವಸಂಸ್ಕಾರ ಗೋಸ್ಕರ ನಾವು ಇಲ್ಲಿಗೆ ಬರುವುದು ಕಡಿಮೆ, ಆದರೆ ನನ್ನ ಅಪ್ಪನ ಅಂತಿಮ ಇಚ್ಛೆಯಾಗಿತ್ತು
ಇಲ್ಲಿಗೆ ತರಬೇಕೆಂದು”.
ರಾಮಮೂರ್ತಿಯವರು "ಇವರೆಲ್ಲ
ನಿನ್ನೊಟ್ಟಿಗೆ ಬಂದಿದ್ದಾರ"?
ಯುವಕ "ಹೌದು , ಇನ್ನೂ ನೂರಾರು ಜನ ಹಿಂದಿನಿಂದ
ಬರುತ್ತಿದ್ದಾರೆ,
ಇಲ್ಲಿಗೆ ಬರಲ್ಲಿಕ್ಕೆ ಸಾವಿರಾರು ರೂಪಾಯಿ ಖರ್ಚು ಆಯಿತು , ಆದರೆ ಮುದಿ ತಂದೆಯ ಮುಕ್ತಿ ಗೋಸ್ಕರ ಇದೇನು ಮಹಾ, ಹಣ ಮತ್ತೆ ಏತಕ್ಕೆ".
ರಾಮಮೂರ್ತಿಯವರು "ಅವರಿಗೆ
ಏನು ಕಾಯಿಲೆ ಇತ್ತು "?
ಯುವಕ ತುಂಬಾ ಸರಳತೆಯಿಂದ ಯಾವುದೇ
ಸಂಬಂಧಿಕರ ಒಟ್ಟಿಗೆ ಮಾತನಾಡುವ ಹಾಗೆ ಉತ್ತರಿಸಿದ "ಕಾಯಿಲೆ ಏನೆಂದು ಗೊತ್ತಾಗಲಿಲ್ಲ, ಆದರೆ ಯಾವಗಲು ಜ್ವರ ಬರುತ್ತಿತ್ತು
, ದೇಹ ಒಣಗಿ ಕೃಶವಾಗಿತ್ತು , ಕಾಶಿ , ಹರಿದ್ವಾರ , ಪ್ರಯಾಗ ಎಲ್ಲೆಲ್ಲೋ ಕರೆದುಕೊಂಡು
ಹೋದೆ, ವೈದ್ಯರು ಹೇಳಿದ ಮದ್ದನು ಮಾಡಿದೆ,ಆದರೆ....".
ಅಷ್ಟರಲ್ಲಿ ಅಲ್ಲಿಗೆ ಯುವಕನ ಒಬ್ಬ
ಮಿತ್ರ ಬಂದು "ಸಾಹೇಬರೇ ,ದೇವರು ಮಗ ನೀಡಿದ್ದರೆ, ಇವನಂತ ನೀಡಬೇಕು, ಏನೆಲ್ಲಾ ಮಾಡಲಿಲ್ಲ ಇವನು, ಹಣವನ್ನು ನೀರಿನಂತೆ ಖರ್ಚು ಮಾಡಿದ, ಮನೆಯ ಎಲ್ಲ ಠೇವಣಿ ಬಂಡವಾಳ ತಂದೆಯ
ಉಪಚಾರಕ್ಕಾಗಿ ಸ್ವಾಹ ಮಾಡಿದ, ಸ್ವಲ್ಪ ಜಮೀನು ಇತ್ತು , ಅದನ್ನೂ ಮಾರಿದ, ಆದರೆ ಕಾಲದ ಎದುರು ನಮ್ಮಂತ ಮನುಷ್ಯರ ಏನು ಅಂತಸ್ತು".
ಯುವಕ ಭಾವುಕನಾಗಿ ಹೇಳಿದ
" ಅಣ್ಣ ,ಹಣ ಏನು, ಬರುತ್ತದೆ ಹೋಗುತ್ತದೆ, ಆದರೆ ಮನುಷ್ಯ ಪುನಃ ಬರುದಿಲ್ಲವಲ್ಲ, ಜೀವನ ಇದ್ದರೆ ದುಡಿದು ತಿನ್ನುವೆ, ಕೈ ಕಾಲು ಇದೆಯಲ್ಲ, ಆದರೆ ಮನಸ್ಸಲ್ಲಿ ಕಡುಬಯಕೆ ಉಳಿಯಲಿಲ್ಲವಲ್ಲ, ಅಯ್ಯೋ ವೈದ್ಯರಲ್ಲಿಗೆ ಹೋಗಲಿಲ್ಲ, ಮದ್ದು ಮಾಡಲಿಲ್ಲ, ಹೋಗಿದ್ದಾರೆ ಉಳಿಯುತ್ತಿದ್ದರುರೇನು
ಎಂದು. ನಾನು ಹೇಳುವೆ ಯಾರಾದರು ನನ್ನ ಮನೆ ಸಂಪತ್ತು ಎಲ್ಲ ತನ್ನ ಹೆಸರಲ್ಲಿ ಬರೆಯಲಿ, ಆದರೆ ನನ್ನ ಅಪ್ಪನನ್ನು ಒಂದು
ಗಳಿಗೆ ಕರೆಯಲಿ. ಈ ಮೋಹ ಮಾಯೆಯ ಹೆಸರೇ ಜೀವನ, ಇಲ್ಲಾದರೆ ಇದರಲ್ಲಿ ಏನಿದೆ? ಹಣದಿಂದ ದೊಡ್ಡ ಜೀವ, ಜೀವದಿಂದ ದೊಡ್ಡ ನಮ್ಮ ನಿಷ್ಠೆ.
ಅಣ್ಣ ನಿಮಗೆ ಸತ್ಯ ಹೇಳುವೆ, ಒಂದು ವೇಳೆ ಅಪ್ಪನಿಗಾಗಿ ನಾನೇನಾದರೂ
ಕೊರತೆ ಮಾಡಿ ಕೊಂಡಿದ್ದರೆ, ಇಂದು ನನಗೆ ಅಳಲು ಸಹ ಸಾಧ್ಯವಾಗುತ್ತಿರಲಿಲ್ಲ, ನನ್ನದೇ ಮನಸ್ಸು ನನ್ನನ್ನು ತೆಗಳುತ್ತಿತ್ತು, ಆದರೆ ಈಗ ನನಗೆ ನಾನೊಂದು ದೊಡ್ಡ
ಋಣದಿಂದ ಮುಕ್ತನಾದೆ ಹಾಗು ಇದರಿಂದ ನನ್ನ ಉದ್ಧಾರವಾಯಿತೆಂದು ಭಾವಿಸುತ್ತೇನೆ. ಅಪ್ಪನ ಆತ್ಮ ಸುಖ ಶಾಂತಿಯಿಂದ
ಇದ್ದರೆ ನನಗೆ ಎಲ್ಲ ರೀತಿಯಿಂದ ಕ್ಷೇಮಾಭಿವೃದ್ಧಿ ಆಗುತ್ತದೆ.
ರಾಮಮೂರ್ತಿಯವರು ತಲೆ ತಗ್ಗಿಸಿ
ಈ ಮಾತನೆಲ್ಲ ಕೇಳುತ್ತಿದ್ದರು. ಒಂದು ಒಂದು ಮಾತು ಅವರ ಹೃದಯದಲ್ಲಿ ಶೂಲದ ಹಾಗೆ ಚುಚುತ್ತಿತ್ತು. ಈ
ಉದಾರತೆಯ ಪ್ರಕಾಶದಲ್ಲಿ ಅವರಿಗೆ ತನ್ನ ಹೃದಯ ಹೀನತೆ, ಅವಿಚಾರತೆ, ಅತ್ಮ ಶೂನ್ಯತೆ,ಭೌತಿಕತೆ ಅತ್ಯಂತ ಭಯಂಕರ ಕಂಡು
ಬರುತ್ತಿತ್ತು. ಅವರ ಮನಸ್ಸಲ್ಲಿ ಈ ಘಟನೆಯ ಈ ತರಹ ಪ್ರಭಾವ ಬಿತ್ತೆಂದರೆ ಪ್ರಭುದಾಸನ ಉತ್ತರಕ್ರಿಯೆಯಲ್ಲಿ
ಅವರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು, ಅವರ ನರಳುತ್ತಿರುವ ಹೃದಯದ ಶಾಂತಿ ಗೋಸ್ಕರ ಇದೊಂದೇ ಉಪಾಯ ಉಳಿದಿತ್ತು.
* ಮುಗಿಯಿತು*