Saturday, February 8, 2014

ಸಾವಿಗೆ ಬಾರದ ನೆಂಟ

(ಶ್ರೀ.  ಬದರಿನಾಥ್ ಪಳವಲ್ಲಿ ಅವರ ಒಂದು ಕವಿತೆಯಿಂದ ಪ್ರೇರಿತ)

ಸಾವಿಗೆ ಬಾರದ ನೆಂಟ
ಉತ್ತರಕ್ರಿಯೆಯಂದು ಬಂದ
ಆ ದಿವಸ ನಾನು ತುಂಬಾ ಬ್ಯುಸಿ
ಬರಲಿಕ್ಕೆ ಆಗಲಿಲ್ಲ ಎಂದ
ಚಲೋ ಆಗಿದ್ದು ಆಗಿ ಹೋಯಿತು
ಆಗುವುದೆಲ್ಲ ಒಳ್ಳೆಯದಕ್ಕೆ ಎಂದ
ಪ್ರಥಮ ಸಾಲಲ್ಲಿ ಊಟಕ್ಕೆ ಕುಳಿತುಕೊಂಡ
ಹೊಟ್ಟೆ ತುಂಬಾ ಉಂಡ
ಕೊನೆಗೆ ಬಾಯಿ ಚಪ್ಪರಿಸುತ್ತ
ಎರಡು ಮೂರು ಗ್ಲಾಸ್ ಮಜ್ಜಿಗೆ ಕುಡಿದು
ಬದಿಯಲ್ಲಿ ಕುಳಿತ ಸಜ್ಜನರಿಂದ
ವಡೆ ತುಂಬಾ ಚಿಕ್ಕದಾಗಿತ್ತಲ್ಲ ಎಂದು ನೊಂದುಕೊಂಡ
ಹೋಗುವಾಗ ಅಡುಗೆ ಬಟ್ಟನಿಂದ ಕೇಳಿ ಹೋಳಿಗೆ ಕಟ್ಟಿಕೊಂಡ
ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೊರಟ ಆ ಬಂಡ
by ಹರೀಶ್ ಶೆಟ್ಟಿ,ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...