Sunday, February 16, 2014

ಕಾಣದ ಬೇಲಿಗಳು

ಆ ಮನೆಯಲ್ಲಿ ಬೇಲಿ ಇದೆ
ಮುಳ್ಳುಗಳ ಸರಳಿನ ಅಲ್ಲ
ಅವಿಶ್ವಾಸದ
ಸುಳ್ಳು ಪ್ರೀತಿಯ
ಬಲಹೀನ ಸಂಬಂಧದ

ದೈವ ಇಷ್ಟರು ಇದ್ದ ಮನೆ
ಎಳೆಯುತ್ತದೆ ಜೀವ ಅಲ್ಲಿಗೆ
ಹೋಗಲೇ ಬೇಕು ಅಲ್ಲಿಗೆ
ನಮ್ಮ ಮಣ್ಣು ಅದು
ಜನ್ಮದ ಹೊನ್ನು ಅದು

ಆದರೆ ಈಗ್ಯಾಕೋ ಬೇಸರ
ಮನೆ ಖಾಲಿ ಖಾಲಿ
ಇದ್ದವರಿಗೆ ಯಾವುದರ ಗೋಚರವಿಲ್ಲ
ಮುಳುಗಿದ್ದಾರೆ ತನ್ನದೆ ಲೋಕದಲಿ
ಬಂದಾಗಲೇ ಗುರುತು

ಈಗ ಸುತ್ತ ಮುತ್ತ ಹಸಿರಿಲ್ಲ
ಕೃಷಿ ಇಲ್ಲದೆ ಒಣಗಿದ ಗದ್ದೆಗಳು
ತೋಟದಲ್ಲಿ ಆ ಮೊದಲ ಅಂದವಿಲ್ಲ
ಹಕ್ಕಿಗಳ ಚಿಲಿಪಿಲಿಯ ಮಧ್ಯೆದಲ್ಲೂ ಒಂದು ಶಾಂತತೆ
ಮುಗಿಯದ ಏಕಾಂತತೆ

ಈಗ ಅಲ್ಲಿ ಅಕ್ಕಿಯ ಮುಡಿ ಇಲ್ಲ
ಸೌತೆ ಕಾಯಿಯ ಸಾಲಿಲ್ಲ
ಅದೆಲ್ಲ ಈಗ ಒಂದು ಸುಂದರ ಸ್ವಪ್ನ
ಎಲ್ಲವೂ ಪೇಟೆಗೆ ಹೋಗಿ ತರಬೇಕು
ಆಗಲೇ ಒಳ್ಳೆ ಊಟ ತಿಂಡಿ

ಕಾಣದ ಬೇಲಿಗಳು
ಕೊನೆ ಉಸಿರು ಎಳೆಯುತ್ತಿದ್ದ ಸಂಬಂಧಗಳು
ಗುರುತ್ತಿದ್ದು ಗುರುತಿಲ್ಲದಂತೆ ವ್ಯವಾರಿಸುವ ಮಿತ್ರರು
ಅಪರಿಚಿತರಾದ ನರೆಹೊರೆಯವರು
ಆದರೆ ಇದಕ್ಕೆಲ್ಲ ಕಾರಣ ಯಾರು
ನಾವು ಸ್ವತಃ ಅಲ್ಲದೆ ಬೇರೆ ಯಾರು

by ಹರೀಶ್ ಶೆಟ್ಟಿ, ಶಿರ್ವ 

1 comment:

  1. ಕಾಲನ ಹೊಡೆತಕೆ ಸಿಕ್ಕು ನಮ್ಮದೇ ಪರಿಸರ ನಮಗೇ ಅಪರಿಚಿತವಾಗುವ ದುರಂತವು ಇಲ್ಲಿ ಸದೃಶ್ಯವಾಗಿದೆ

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...