Saturday, February 15, 2014

ಕವಿತೆ

ಸಹಜವಾಗಿ
ಮೂಡಿ ಬರುವ
ಪದಗಳೆ
ಕವಿತೆ

--------

ಕೋಗಿಲೆಯ ಗಾನ
ಹಕ್ಕಿಗಳ ಚಿಲಿಪಿಲಿಗಳೆಲ್ಲ
ನಿಸರ್ಗದ
ನೈಸರ್ಗಿಕ
ಕವಿತೆ

---------
ಯಾರು ಜನ್ಮದಾತೆ ?
ಕವಿತೆ
ನಿರ್ಮಿಸಿದ
ಕವಿಯೇ
ಕವಿಯನ್ನು
ಸ್ಥಾಪಿಸಿದ
ಕವಿತೆಯೆ
--------

ಅವನು
ಜನ್ಮ ನೀಡಿದ್ದು
ಕವಿತೆ ಅಲ್ಲವಂತೆ
ಆ ಕವಿಗೆ
ಬಂಜೆ ಎಂದು ಅಪವಾದ
-------

ಕವಿಯಿಂದ
ಭಾವಗಳ ಬಸಿರು
ಹುಟ್ಟಿದ
ಕವಿತೆ
ಹಸಿರು ಹಸಿರು

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಕವಿತೆಯ ನಿಜಾಂತರಂಗ ಬಿಡಿ ಬಿಡಿ ಹನಿಗಳ ಮೂಲಕ ಸಮರ್ಥವಾಗಿ ಅರ್ಥೈಸಿದ್ದೀರಿ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...