Monday, February 17, 2014

ನಿನ್ನ ಕಂಗಳ ಹೊರತು

ನಿನ್ನ ಕಂಗಳ ಹೊರತು
ಜಗದಲಿ ಇನ್ನೇನಿದೆ,
ಇದು ತೆರೆದಂತೆ ಬೆಳಕ ಪ್ರಭಾವಳಿ,
ಇದು ತಗ್ಗಿದಂತೆ ಸಂಜೆಯ ಗೋಧೂಳಿ, 
ನನ್ನ ಜೀವನ,
ನನ್ನ ಮರಣ,
ಇದೇ ಕಣ್ರೆಪ್ಪೆಯ ಅಡಿಯಲಿ,
ನಿನ್ನ ಕಂಗಳ ಹೊರತು......

ಕಣ್ರೆಪ್ಪೆಗಳ ಗಲ್ಲಿಯಲಿ,
ಮೊಗ ವಸಂತದ ನಗುತ್ತಿದೆ,
ನನ್ನ ಕನಸಿನ ಅದೆಷ್ಟೋ ನಗರ
ಇದರಲ್ಲಿ ನೆಲೆಸುತ್ತಿದೆ,
ಇದು ತೆರೆದಂತೆ.....

ಇದರಲ್ಲಿ ನನ್ನ ಬರುವ
ಸಮಯದ ಚಿತ್ರವಿದೆ,
ಪ್ರೀತಿಯ ಕಾಡಿಗೆಯಿಂದ ಬರೆದ
ನನ್ನ ಭಾಗ್ಯವಿದೆ, 
ಇದು ತೆರೆದಂತೆ.....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಚಿರಾಗ್

तेरी आँखों के सिवा दुनिया में रखा क्या है
ये उठे सुबह चले, ये झुके शाम ढले
मेरा जीना, मेरा मरना
इन्हीं पलकों के तले

पलकों की गलियों में चेहरे बहारों के हंसते हुए
है मेरे ख़्वाबों के क्या-क्या नगर इनमें बसते हुए
ये उठे सुबह...

इनमें मेरे आने वाले ज़माने की तस्वीर है
चाहत के काजल से लिखी हुई मेरी तकदीर है
ये उठे सुबह...
http://www.youtube.com/watch?v=ZcS-Cx_yIwc

2 comments:

  1. ಇನ್ನೊಂದು ಅಮೋಘ ಗೀತೆಯನ್ನು ಭಾವಾನುವಾದ ಮಾಡಿದ್ದೀರಾ ಅಭಿನಂದನೆಗಳು.
    ಚಿರಾಗ್ ತುಂಬಾ ಒಳ್ಳೆಯ ಚಿತ್ರ .

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.”

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...