ಅಮ್ಮ ಅಪ್ಪ ಇಬ್ಬರಲ್ಲಿ
ನನಗೆ ಅಮ್ಮ ಅಂದರೆ ಜೀವ
ಎನ್ನುತ್ತಿದ್ದ ಆ ಹುಡುಗ
ತಂದೆ ಹಿಂದೆ ನಿಂತು ನಗುತ್ತಿದ್ದ
-----------
ಮಾಲಿ
ಗುಲಾಬಿ ಹೂವನ್ನು
ಕಿತ್ತು ಜೋಪಾನವಾಗಿ ಇಟ್ಟ
ಅದರ ಮುಳ್ಳನ್ನು ಕಿತ್ತು ಎಸೆದ
----------
ಮರವೊಂದು ಬಿತ್ತು
ಜನರೆಲ್ಲಾ "ಮರ ಬಿತ್ತು, ಮರ ಬಿತ್ತು"
ಎಂದು ಕೂಗಿದರು,
ಮಣ್ಣಲ್ಲಿ ತುಂಡಾದ ಬೇರು
ಅಳುವುದನ್ನು ಯಾರೂ ಕಂಡಿಲ್ಲ
----------
ಅಂಗಿಯ ಬಟನ್
ತುಂಡಾಗಿ ಬಿತ್ತು
ದಾರ ಅಂಗಿಯಲಿ
ನೇಲುತ್ತಿತ್ತು
---------
ಮಂದಿರದಲ್ಲಿ ತುಂಬಿದ
ದೇಣಿಗೆ ಡಬ್ಬಿಯಲ್ಲಿ
ಅವನು ಬಲಯುತವಾಗಿ
ನೋಟು ತೂರುತ್ತಿದ್ದ
ಹೊರಗೆ ಕುಳಿತ ಭಿಕ್ಷುಕನಿಗೆ
ಒಂದಾಣೆ ಸಹ ನೀಡಲಿಲ್ಲ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment