Saturday, November 9, 2013

ಬಾ ಇನ್ನೊಂದು ಸಲ

ಬಾ ಇನ್ನೊಂದು ಸಲ
ಅಪರಿಚಿತರಾಗೋಣ ನಾವಿಬ್ಬರು-೨

ನಾನಿನ್ನು ನಿನ್ನಿಂದ್ಯಾವುದೇ
ಇಡಲಾರೆ ಕರುಣೆಯ ಆಸೆಯನ್ನು
ನೀನೂ ನನ್ನ ಕಡೆ ಬೀರದಿರು
ವಂಚಿಸುವ ದೃಷ್ಟಿಯನ್ನು
ನನ್ನ ಹೃದಯ ಮಿಡಿತದ ಕಂಪನೆ
ಕಂಡುಬಾರದು ನನ್ನ ಮಾತಿನಲಿ
ನಿನ್ನ ಕಣ್ಣು ಸಹ
ನಿನ್ನ ಯಾತನೆಯನ್ನು
ಬಹಿರಂಗಪಡಿಸದಿರಲಿ
ಬಾ ಇನ್ನೊಂದು ಸಲ ....

ನಿನ್ನನ್ನೂ ಯಾವುದೇ ತೊಡಕು
ನಿಲ್ಲಿಸುತ್ತದೆ ಮುನ್ನಡೆಯಲು
ನನಗೂ ಜಗವೆಲ್ಲ ಹೇಳುತ್ತಾರೆ
ನಾನು ಮುಖವಾಡ ಧರಿಸಿದ್ದೇನೆಯೆಂದು
ನನ್ನ ಅಪಕೀರ್ತಯೇ
ನನ್ನ ಸಹ ಪ್ರವಾಸಿ ನನ್ನ ಗಮ್ಯದ
ನಿನ್ನೊಟ್ಟಿಗೆ ಸಹ
ನಿನ್ನ ಕಳೆದ ರಾತ್ರಿಯ ನೆರಳಿದೆ
ಬಾ ಇನ್ನೊಂದು ಸಲ ....

ಪರಿಚಯ ರೋಗವಾದರೆ
ಅದನ್ನು ಮರೆಯುವುದೇ ಉತ್ತಮ
ಸಂಬಂಧ ಭಾರವಾದರೆ
ಅದನ್ನು ಮುರಿಯುವುದೇ ಚೆನ್ನ
ಕಥೆಗೆ ಒಂದು ಅಂತಿಮ ರೂಪ
ನೀಡಲು ಅಸಾಧ್ಯವಾದರೆ
ಅದನ್ನು ಒಂದು ಸುಂದರ ತಿರುವಿನಲ್ಲಿ
ಬಿಟ್ಟು ಬಿಡುವುದೇ ಉತ್ತಮ
ಬಾ ಇನ್ನೊಂದು ಸಲ....

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ಗುಮರಾಹ

Chalo Ek Baar Phir Se, Ajnabi Ban Jaye Ham Dono -2

Na Main Tumse Koi Ummeed Rakhoon Dilnavaazi Ki
Na Tum Meri Taraf Dekho Galat Andaaz Nazaron Se
Na Mere Dil Ki Dhadkan Ladkhadaaye Meri Baaton Mein
Na Zaahir Ho Tumhaari Kashm-Kash Ka Raaz Nazaron Se
Chalo Ek Baar Phir Se..

Tumhen Bhi Koi Uljhan Rokti Hai Peshkadmi Se
Mujhe Bhi Log Kehte Hain, Ki Yeh Jalve Paraaye Hain
Mere Hamraah Bhi Rusvaaiyaan Hain Mere Maajhi Ki -2
Tumhaare Saath Bhi Guzri Hui Raaton Ke Saaye Hain
Chalo Ek Baar Phir Se..

Taarruf Rog Ho Jaaye To Usko Bhoolnaa Behtar
Taalluk Bojh Ban Jaaye To Usko Todnaa Achchha
Voh Afsaana Jise Anjaam Tak Laana Na Ho Mumkin -2
Use Ek Khoobsoorat Mod Dekar Chhodna Achchha
Chalo Ek Baar Phir Se..
www.youtube.com/watch?v=cE5q9kst-Zc

1 comment:

  1. "ನನ್ನ ಅಪಕೀರ್ತಯೇ ನನ್ನ ಸಹ ಪ್ರವಾಸಿ" ತುಂಬಾ ಮಾರ್ಮಿಕವಾದ ಸಾಲು ಸಾರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...