Thursday, November 7, 2013

ನಿನಗೆ ನನ್ನ ಪರಿಚಯವಿಲ್ಲ

!!ನಿನಗೆ ನನ್ನ ಪರಿಚಯವಿಲ್ಲ
ನನಗೂ ನಿನ್ನ ಪರಿಚಯವಿಲ್ಲ
ಆದರೂ ಅನಿಸುತ್ತಿದೆ
ನನಗೆ ಹೀಗೆ 
ನನ್ನೊಲವು ಸಿಕ್ಕಿದಂತೆ!!

!!ಈ ನಿಸರ್ಗ
ಈ ರಾತ್ರಿ ಮೌನವಾಗಿದೆ
ಎರಡು ಅಧರಗಳ 
ಮಾತು ಮೌನವಾಗಿದೆ
ನೀರವತೆ ಹೇಳಲಾರಂಭಿಸಿದೆ ಕತೆಯೆಲ್ಲ-೨
ದೃಷ್ಟಿ ಆಗಿದೆ
ಹೃದಯದ ನುಡಿಗಳೆಲ್ಲ!!
ನಿನಗೆ ನನ್ನ....

!!ಪ್ರೀತಿಯ
ತಿರುವಿನಲ್ಲಿ ನಾವು
ಸಿಕ್ಕಿ ಬಿಟ್ಟು
ಎಲ್ಲರನ್ನು ಹಿಂದೆ ನಾವು
ಮಿಡಿಯುವ ಹೃದಯಗಳ ಈ ತಂಡಗಳೊಂದಿಗೆ-೨
ತಲುಪುವುದು
ನಾವಿಬ್ಬರು ಅದೆಲ್ಲಿಗೆ?!!
ನಿನಗೆ ನನ್ನ....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಹೇಮಂತ್ ಕುಮಾರ್, ಸುಮನ್ ಕಲ್ಯಾಣಪುರಿ
ಚಿತ್ರ : ಬಾತ್ ಎಕ್ ರಾತ್ ಕಿ

ना तुम हमे जानो, ना हम तुम्हे जाने
मगर लगता हैं, कुछ ऐसा मेरा हमदम मिल गया

ये मौसम ये रात चुप हैं
दो होठों की बात चुप हैं
खामोशी सुनाने लगी हैं दास्ताँ
नजर बन गयी हैं, दिल की जुबान

मोहब्बत के मोड़ पे हम
मिले सब को छोड़ के हम
धड़कते दिलों का लेके ये कारवां
के जायेंगे दोनों जाने कहा?
http://www.youtube.com/watch?v=hGOkuBTtBu0

2 comments:

  1. ತಲುಪುವುದು ನಾವಿಬ್ಬರು ಅದೆಲ್ಲಿಗೆ?!!
    ನಿನಗೆ ನನ್ನ....

    ಉತ್ತಮ ಭಾವಾನುವಾದ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...