Monday, November 25, 2013

ನಾನೆಲ್ಲಿದ್ದೇನೆ?

ನಾನೆಲ್ಲಿದ್ದೇನೆ?
ಹುಡುಕುತಿರುವೆ ನಾನು
ಸ್ವತಃ ನನ್ನನ್ನೇ
ಈ ಜಗದ ಜನಸಂದಣಿಯಲ್ಲಿ
ಆದರೆ ನಾನೆಲ್ಲಿದ್ದೇನೆ?

ಆಹಾ ನೋಡಿ
ತಾಯಿಯ ಮಡಿಲಲ್ಲಿ
ಮುದ್ದು ಮಗು
ತುಟಿಯಲಿ ಮೋಹಕ ನಗು
ಸುಖ ನಿದ್ರೆಯಲ್ಲಿ ಮಲಗಿದೆ
ತಾಯಿಯ ಮುಖದಲ್ಲೂ
ತೃಪ್ತ ಭಾವ
ಆದರೆ ನಾನಿರಲಿಲ್ಲ ಅಲ್ಲಿ
ನನ್ನಲ್ಲಿ ಆ ನಗು ಉಳಿಯಲಿಲ್ಲ
ನನಗೆ ಸುಖ ನೀಡಿದ ತಾಯಿಗೆ
ನನ್ನಿಂದ ಸುಖ ನೀಡಲಾಗಲಿಲ್ಲ
ಹಾಗಾದರೆ ನಾನೆಲ್ಲಿದ್ದೇನೆ?

ಅಲ್ಲಿ ನೋಡಿ
ಆ ಹುಡುಗ ಶಾಲೆಯ
ಗಣವೇಶ ಧರಿಸಿ
ನಾಯಿಯ ಹಿಂದೆ ಓಡುತ್ತಿದ್ದಾನೆ
ಅದರ ಬಾಲ ಹಿಡಿಯಲು
ಪ್ರಯತ್ನಿಸುತ್ತಿದ್ದಾನೆ
ಹುಡುಕುತ್ತಿದ್ದೇನೆ ನನ್ನನ್ನು ನಾನು
ಈ ಬಾಲ್ಯದ  ಆಟದಲಿ
ಆದರೆ ನನ್ನ ಉಪಸ್ಥಿತಿ ಇಲ್ಲ
ಜೂಜಾಡುತ್ತಿದ್ದೇನೆ ಸಂಸಾರದ ಆಟದಲಿ
ಹಾಗಾದರೆ ನಾನೆಲ್ಲಿದ್ದೇನೆ?

ನೋಡಿ ಇಲ್ಲಿ
ಎಷ್ಟೊಂದು ಉಲ್ಲಾಸ
ಎಷ್ಟೊಂದು ಉತ್ಸಾಹ ಅವನಲ್ಲಿ
ಒಹ್ ಇವನಲ್ಲಿ
ಖಂಡಿತ ನನ್ನನ್ನು ಹುಡುಕುವೆ
ನಾನಿರುವೆ ಬಹುಶ ಇಲ್ಲಿ
ಆದರೆ ದೇಹ ಕುಗ್ಗಿದೆ
ನಿರುತ್ಸಾಹ ತುಂಬಿದೆ
ನಾನಿರಲಿಲ್ಲ ಅಲ್ಲಿ
ಹಾಗಾದರೆ ನಾನೆಲ್ಲಿದ್ದೇನೆ?

ನಾನೆಲ್ಲಿದ್ದೇನೆ?
ಹುಡುಕುತಿರುವೆ ನಾನು
ಸ್ವತಃ ನನ್ನನ್ನೇ ......
by ಹರೀಶ್ ಶೆಟ್ಟಿ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...